ಧ್ರುವ ಸರ್ಜಾ ಕೊಟ್ಟ ಸರ್ಪ್ರೈಸ್‌ನಿಂದ ಫ್ಯಾನ್ಸ್ ಫುಲ್ ಫಿದಾ.. ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇ ಸಂಭ್ರಮ ಹೇಗಿತ್ತು?
ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ ಡೇ ವಿಶೇಷವಾಗಿ ಧ್ರುವ ಸರ್ಜಾ ಅಭಿಮಾನಿಗಳಿಗೆ ಅದ್ಧೂರಿ ಗಿಫ್ಟ್ ನೀಡಿದ್ದಾರೆ.
Dhruva Sarja birthday announce new movies: ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ ಡೇ ವಿಶೇಷವಾಗಿ ಧ್ರುವ ಸರ್ಜಾ ಅಭಿಮಾನಿಗಳಿಗೆ ಅದ್ಧೂರಿ ಗಿಫ್ಟ್ ನೀಡಿದ್ದಾರೆ. ಧ್ರುವ ಕೊಟ್ಟ ಸರ್ಪ್ರೈಸ್ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಧ್ರುವ ಸರ್ಜಾ ಮನೆ ಮುಂದೆ ಹೇಗಿತ್ತು ಗೊತ್ತಾ ಸಂಭ್ರಮ..? ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬದ ಆಚರಣೆ ಮುಗಿಲು ಮುಟ್ಟಿತ್ತು. ಧ್ರುವ ಸರ್ಜಾ ಅವರನುನ ಕಂಡು ಫ್ಯಾನ್ಸ್ ಅಂತೂ ಸಖತ್ ಖುಷಿಯಲ್ಲಿ ತೇಲಿದರು. ಅಷ್ಟೇ ಖುಷಿಯಿಂದ ಧ್ರುವ ಸರ್ಜಾ ಕೂಡ ಅಭಿಮಾನಿಗಳಿಗೆ ಸೆಲ್ಫಿ, ಫೋಟೋ, ಮಕ್ಕಳನ್ನು ಎತ್ತಿಕೊಂಡು ಫೋಟೋಗಳಿಗೆ ಪೋಸ್ ಕೊಟ್ಟರು. ಅಲ್ಲದೇ ಅಭಿಮಾನಿಗಳ ನಡುವೆ ಹೋಗಿ ಎಲ್ಲರಿಗೂ ಸರ್ಪ್ರೈಸ್ ಕೊಟ್ಟರು.
ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ ಡೇ ವಿಶೇಷವಾಗಿ ಧ್ರುವ ಸರ್ಜಾ ಅಭಿಮಾನಿಗಳಿಗೆ ಅದ್ಧೂರಿ ಗಿಫ್ಟ್ ನೀಡಿದ್ದಾರೆ. ಧ್ರುವ ಸರ್ಜಾ ಕೊಟ್ಟ ಸರ್ಪ್ರೈಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು, ಧ್ರುವ ಸರ್ಜಾ ಬರ್ತ್ ಡೇ ವಿಶೇಷವಾಗಿ ಅಭಿಮಾನಿಗಳಿಂದ ತರಹೇವಾರಿ ಉಡುಗೊರೆಗಳು ಸಿಕ್ಕಿವೆ. ಹಾಗೆಯೇ ಧ್ರುವ ಸರ್ಜಾ ಕಡೆಯಿಂದಲೂ ಅಭಿಮಾನಿಗಳಿಗೆ ಮಸ್ತ್ ಮಸ್ತ್ ಗಿಫ್ಟ್ ಸಿಕ್ಕಿವೆ.
ಧ್ರುವ ಸರ್ಜಾ ಅವರ ಗೋಕಾಕ್ ಅಭಿಮಾನಿಗಳು ಆಗಮಿಸಿ, ಕಂಬಳಿ ಹೊದಿಸಿ, ಟಗರು ಗಿಫ್ಟ್ ನೀಡಿದ್ದಾರೆ. ಇನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ವಿಶೇಷವಾಗಿ ಹೊಸ ಸಿನಿಮಾಗಳನ್ನ ಘೋಷಣೆ ಮಾಡಿದ್ದಾರೆ. ನಂದಕಿಶೋರ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಈಗಾಗಲೇ ಪೊಗರು ಸಿನಿಮಾ ಕಿಕ್ ಕೊಟ್ಟಿದೆ. ಅದೇ ಜೋಡಿ ಈಗ ಮತ್ತೆ ಒಂದಾಗ್ತಿದೆ. ಇವರಿಬ್ಬರ ಕಾಂಬಿನೇಷನ್ ಅಲ್ಲಿ ‘ವಸುದೈವ ಕುಟುಂಬಕಂ’ ಸಿನಿಮಾ ಘೋಷಣೆಯಾಗಿದೆ. ನಂದಕಿಶೋರ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ಗೆ ಅಭಿಮಾನಿಗಳು ಜೈಹೋ ಎನ್ನುವುದು ಗ್ಯಾರಂಟಿ.
ಇನ್ನು ತೆಲುಗಿನ ಪ್ರಾಜೆಕ್ಟ್ ಕೂಡಾ ಈ ಸಂದರ್ಭದಲ್ಲಿ ಲಾಂಚ್ ಆಗಿರುವುದು ವಿಶೇಷವಾಗಿದೆ. ಈ ಸಿನಿಮಾದಲ್ಲಿ ನಮ್ಮ ಕನ್ನಡದ ನಟಿ ನಭಾ ನಟೇಶ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಕೆಮಿಸ್ಟ್ರಿ ಎನ್ನುವ ಟೈಟಲ್‌ನಲ್ಲಿ ಈ ಸಿನಿಮಾ ಅನೌನ್ಸ್ ಆಗಿದ್ದು, ಮುಂದಿನ ತಿಂಗಳಿನಿಂದ ಶೂಟಿಂಗ್ ಕೂಡಾ ಆರಂಭವಾಗಲಿದೆ. ಸದ್ಯ ಧ್ರುವ ಸರ್ಜಾ ಲವ್ ಸ್ಟೋರಿ ಸಿನಿಮಾದತ್ತ ಮುಖ ಮಾಡಿದ್ದಾರೆ. ಈಗಾಗಲೇ ಧ್ರುವ ಸರ್ಜಾ ಮಾಡಿರುವ ಲವ್ ಸ್ಟೋರಿ ಸಿನಿಮಾಗಳೆಲ್ಲ ಫುಲ್ ಹಿಟ್ ಆಗಿದ್ದು ಈ ಕೆಮಿಸ್ಟ್ರಿ ಸಿನಿಮಾ ಕೂಡ ವರ್ಕೌಟ್ ಆಗೋದರಲ್ಲಿ ಯಾವುದೇ ಅನುಮಾನ ಬೇಡ ಎನ್ನುತ್ತಿದ್ದಾರೆ ಫ್ಯಾನ್ಸ್.
ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಮನೆ ಮುಂದೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬವನ್ನ ತುಂಬಾ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಧ್ರುವ ಸರ್ಜಾ ಅಭಿಮಾನಿಗಳು ಪುಸ್ತಕ ಗಿಫ್ಟ್ ನೀಡಿದ್ದಾರೆ. ಇನ್ನು ಇದೇ ವೇಳೆ ದೂರದ ಊರಿನಿಂದ ಬಂದ ಅಭಿಮಾನಿಗಳಿಗೆ ಅನ್ನದಾನ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ರಕ್ತದಾನ ಶಿಬಿರದಲ್ಲೂ ಧ್ರುವ ಸರ್ಜಾ ಅಭಿಮಾನಿಗಳು ಭಾಗಿಯಾಗಿದ್ದಾರೆ. ಧ್ರುವ ಸರ್ಜಾ ಬರ್ತ್‌ಡೇ ಅರ್ಥಪೂರ್ಣವಾಗಿ ನಡೆದಿದೆ.
ಇನ್ನು ಧ್ರುವ ಸರ್ಜಾ ಅವರು ಅಭಿನಯ ಮಾಡಿರುವ ಲವ್ ಸಿನಿಮಾಗಳು ಎಲ್ಲ ಫುಲ್ ಹಿಟ್ ಕಂಡಿವೆ. ಭರ್ಜರಿ, ಅದ್ಧೂರಿ, ಬಹುದ್ದೂರು ಇವು ಎಲ್ಲ ಹಿಟ್ ಸಿನಿಮಾಗಳು ಆಗಿದ್ದು ಯಶಸ್ವಿ ಸಿನಿಮಾಗಳು ಆಗಿವೆ. ಈ ಸಿನಿಮಾಗಳಲ್ಲಿರುವಂತಹ ಡೈಲಾಗ್‌ಗಳು ಇಂದಿಗೂ ಕೂಡ ಯುವಕರ ಬಾಯಲ್ಲಿ ಬರುತ್ತಲೇ ಇರುತ್ತವೆ. ಲವ್ ಸ್ಟೋರಿ ಸಿನಿಮಾಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಧ್ರುವ ಸರ್ಜಾ ಅವರು ಅತ್ಯಂತ ಹೆಚ್ಚು ಖ್ಯಾತಿ ಗಳಿಸಿದ್ದು. ಅದೇ ಇಂದಿಗೂ ಮುಂದುವರೆಯುತ್ತದೆ. ಈಗ ಮತ್ತೆ ಲವ್ ಜಾನರ್‌ಗೆ ಧ್ರುವ ಸರ್ಜಾ ಅವರು ಹೋಗುತ್ತಿದ್ದರಿಂದ ಮತ್ತೊಂದು ಬಿಗ್ ಸಕ್ಸಸ್ ಅವರ ಬೆನ್ನಿಗೆ ಇದೆ ಎಂದು
ಈ ಸಂದರ್ಭದಲ್ಲಿ ಹೇಳಬಹುದು.