SOCIAL MEDIA

Newsletter

PARTNER SITES
Select Language Select State

ದರ್ಶನ್‌ಗೆ ಡಬಲ್‌ ಜಯ..! ಧನ್ವೀರ್ ಗೌಡ - ಪ್ರದೋಷ್ ಪ್ರತ್ಯೇಕ ಪ್ರಕರಣದಲ್ಲಿ ಕೋರ್ಟ್‌ ಮಹತ್ವದ ಆದೇಶ

ನಟ ಧನ್ವೀರ್ ಮತ್ತು ವಿಜಯಲಕ್ಷ್ಮಿ ದರ್ಶನ್‌ ಜಟಾಪಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ದರ್ಶನ್ ಮತ್ತು ಕುಟುಂಬದ ವಿರುದ್ಧ ಮಾತನಾಡದಂತೆ ನ್ಯಾಯಾಲಯ ಧನ್ವೀರ್‌ ಗೌಡಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ, ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ಪ್ರದೋಷ್ ಮಧ್ಯಂತರ ಜಾಮೀನು ಅರ್ಜಿ ವಜಾಗೊಂಡಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 30, 2026, 05:10 PM IST | Updated: Oct 30, 2026, 05:13 PM IST
Image Credit: actor darshan
Join

ಬೆಂಗಳೂರು : ಕಳೆದ ಕೆಲವು ದಿನಗಳಿಂದ ವಿಜಯಲಕ್ಷ್ಮಿ ದರ್ಶನ್‌ ಹಾಗೂ ಧನ್ವೀರ್‌ ಗೌಡ ನಡುವಿನ ಮನಸ್ತಾಪ ಭುಗಿಲೆದ್ದಿದೆ. ಇದರ ನಡುವೆ ಇಬ್ಬರೂ ಪರಸ್ಪರ ದೂರು ದಾಖಲಿಸಿದ್ದಾರೆ. ಅಲ್ಲದೆ ಹಲವಾರು ವಿಡಿಯೋಗಳು ಮತ್ತು ಆಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದವು..

ಅಷ್ಟೇ ಅಲ್ಲದೆ, ಧನ್ವೀರ್‌ ಗೌಡ ಅವರು ವಿಜಯಲಕ್ಷ್ಮಿ ದರ್ಶನ್‌ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎನ್ನಲಾದ ಚಾಟ್‌ ಮತ್ತು ವಿಡಿಯೋ, ಆಡಿಯೋಗಳು ಸಹ ನೆಟ್ಟಿಗರ ಗಮನಸೆಳೆದಿದ್ದವು. ಜೊತೆಗೆ ದರ್ಶನ್‌ ಅವರು ಜೈಲಿನಿಂದ ಬರೋದು ವಿಜಯಲಕ್ಷಿಯವರಿಗೆ ಇಷ್ಟವಿಲ್ಲ ಎಂಬ ಮಾತು ಸೇರಿದಂತೆ ಹಲವಾರು ಆರೋಪಗಳನ್ನು ಧನ್ವೀರ್‌ ಮಾಡಿದ್ದರು..

ಈ ಎಲ್ಲಾ ಬೆಳವಣಿಗೆಯ ನಡುವೆ ಮುಂದೆ, ಈ ಬಗ್ಗೆ ಯಾವುದೇ ಆರೋಪಗಳು, ಹೇಳಿಕೆಗಳನ್ನು ವಿಜಯಲಕ್ಷಿ ದರ್ಶನ್‌ ಮತ್ತು ಮಗ ವಿನೀಶ್‌ ಸೇರಿದಂತೆ ಕುಟುಂಬದ ವಿರುದ್ಧ ನೀಡದಂತೆ ಧನ್ವೀರ್‌ ಬಾಯಿ ಮುಚ್ಚಿಸಲು ದರ್ಶನ್‌ ಇಂಜೆಕ್ಷನ್‌ಗಾಗಿ ಕೋರ್ಟ್‌ ಮೊರೆ ಹೋಗಿದ್ದರು, ಪ್ರಸ್ತುತ ಅರ್ಜಿಯನ್ನು ಪರಿಶೀಲಿಸಿದ CCH 12 ಕೋರ್ಟ್‌ ತಡೆಯಾಜ್ಞೆ ಆದೇಶ ಹೊರಡಿಸಿದೆ.

ಪ್ರದೋಷ್ ಮಧ್ಯಂತರ ಜಾಮೀನು ಅರ್ಜಿ ವಜಾ
ಇದೇ ವೇಳೆ ಮತ್ತೊಂದು ಪ್ರಮುಖ ಪ್ರಕರಣದಲ್ಲಿ, ತಂದೆಯ ವರ್ಷದ ತಿಥಿ ಕಾರ್ಯದಲ್ಲಿ ಭಾಗವಹಿಸಲು ಮೂರು ವಾರಗಳ ಮಧ್ಯಂತರ ಜಾಮೀನು ಕೋರಿ ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ. ಪ್ರದೋಷ್ ಪರ ವಕೀಲರು ಕನಿಷ್ಠ ಮೂರು ವಾರಗಳ ಕಾಲಾವಕಾಶ ನೀಡುವಂತೆ ಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಿದ್ದರು.

ಆದರೆ, ಈ ಅರ್ಜಿಯನ್ನು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ತೀವ್ರವಾಗಿ ವಿರೋಧಿಸಿದರು. ಮಾಫಿ ಸಾಕ್ಷಿಯಾಗಿರುವ ವ್ಯಕ್ತಿಗೆ ಈ ರೀತಿಯಲ್ಲಿ ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಸಾಕ್ಷ್ಯಗಳ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್ ಸಂಪೂರ್ಣವಾಗಿ ಮುಗಿಯುವವರೆಗೆ ಅವರು ಜೈಲಿನಲ್ಲಿಯೇ ಇರಬೇಕು. ಕೋರ್ಟ್ ವಿಶೇಷ ಷರತ್ತುಗಳನ್ನು ವಿಧಿಸಿಯೇ ಆತನನ್ನು ಮಾಫಿ ಸಾಕ್ಷಿಯಾಗಿ ಒಪ್ಪಿಕೊಂಡಿದೆ. ಒಂದು ವೇಳೆ ಈಗ ಹೊರಗೆ ಬಿಟ್ಟರೆ, ಕೋರ್ಟ್ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳು ನಿಷ್ಪಲವಾಗುತ್ತವೆ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಪ್ರದೋಷ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಅಧಿಕೃತವಾಗಿ ತಳ್ಳಿಹಾಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES