ಬೃಂದಾವಿಹಾರಿ ಬಾಕ್ಸ್ ಆಫೀಸ್‌ನಲ್ಲಿ ಗೋಲ್ಡನ್ ಮ್ಯಾಜಿಕ್.. ಗಣೇಶ್ ಕರಿಯರ್‌ನಲ್ಲೇ ಬಿಗ್ಗೆಸ್ಟ್ ಓಪನಿಂಗ್! ಗಳಿಕೆ ಎಷ್ಟು
Brindavihari Box Office Collection Day 5: ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೃಂದಾವಿಹಾರಿ ಸಿನಿಮಾ ಸದ್ಯ ಭರ್ಜರಿ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿರುವ ಈ ಸಿನಿಮಾ ಗಣೇಶ್ ಅವರ ಸಿನಿಮಾ ಕರಿಯರ್‌ನಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದುಕೊಂಡಿದೆ ? ಪ್ರೇಕ್ಷಕರು ಕೊಟ್ಟ ಮಾರ್ಕ್ಸ್ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್ ಎಷ್ಟಾಗಿದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
Brindavihari Box Office Collection: ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೃಂದಾವಿಹಾರಿ ಸಿನಿಮಾ ಸದ್ಯ ಭರ್ಜರಿ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿರುವ ಈ ಸಿನಿಮಾ ಗಣೇಶ್ ಅವರ ಸಿನಿಮಾ ಕರಿಯರ್‌ನಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದುಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಗೋಲ್ಡನ್ ಮ್ಯಾಜಿಕ್ ಶುರುವಾಗಿದ್ದು, ಫ್ಯಾನ್ಸ್ ಹಾಗೂ ಫ್ಯಾಮಿಲಿ ಆಡಿಯನ್ಸ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದೊಂದು ಮಾಮೂಲಿ ಲವ್ ಸ್ಟೋರಿ ಎಂದುಕೊಂಡು ಥಿಯೇಟರ್‌ಗೆ ಹೋದವರಿಗೆ ಇಂಟರ್‌ವಲ್‌ನಲ್ಲಿ ಕಾದಿರುವುದು ದೊಡ್ಡ ಶಾಕ್. ಹಾಗಾದರೆ ಹೇಗಿದೆ ಬೃಂದಾವಿಹಾರಿ? ಪ್ರೇಕ್ಷಕರು ಕೊಟ್ಟ ಮಾರ್ಕ್ಸ್ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್ ಎಷ್ಟಾಗಿದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
ಕಳೆದ ವರ್ಷ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೂಲಕ ಬ್ಲಾಕ್‌ಬಸ್ಟರ್ ಗೆಲುವು ಕಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಜೋಡಿ ಮತ್ತೊಮ್ಮೆ ಒಂದಾಗಿದೆ. ಈ ಜೋಡಿಯ ಬೃಂದಾವಿಹಾರಿ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಗಣೇಶ್ ಅವರ ಎನರ್ಜಿಟಿಕ್ ಅಭಿನಯ, ಕಾಮಿಡಿ ಪಂಚ್‌ಗಳು ಮತ್ತು ಮನರಂಜನೆಯ ಅಂಶಗಳು ಅಭಿಮಾನಿಗಳಿಗೆ ಇಷ್ಟವಾಗಿವೆ.
ಮುಂಗಾರು ಮಳೆ ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಗಣೇಶ್, ಬೃಂದಾವಿಹಾರಿ ಮೂಲಕ ಮತ್ತೊಮ್ಮೆ ತಮ್ಮ ಸ್ಟಾರ್‌ಡಮ್ ಸಾಬೀತುಪಡಿಸಿದ್ದಾರೆ. ಯುವಕರು, ಕುಟುಂಬದ ಪ್ರೇಕ್ಷಕರು ಹಾಗೂ ಮಾಸ್ ಆಡಿಯನ್ಸ್‌ರನ್ನು ಸೆಳೆಯುವಲ್ಲಿ ಸಿನಿಮಾ ಯಶಸ್ವಿಯಾಗಿದೆ.
ಇನ್ನು ಚಿತ್ರದ ಮೊದಲಾರ್ಧ ಪಕ್ಕಾ ಕಲರ್‌ಫುಲ್ ಆಗಿ ಮೂಡಿಬಂದಿದೆ. ಕಣ್ಣಿಗೆ ಹಬ್ಬ ನೀಡುವ ಗ್ರೀನರಿ, ಶ್ರೀಮಂತ ದೃಶ್ಯಗಳು ಹಾಗೂ ಪ್ರೀತಿ-ಪ್ರೇಮದ ತುಂಟಾಟಗಳು ಸಿನಿಮಾದ ವಿಶೇಷ ಆಕರ್ಷಣೆ. ಮಾಧವನ ಪಾತ್ರದಲ್ಲಿ ಗಣೇಶ್ ಮಿಂಚಿದ್ದರೆ, ರಾಧಾ ಮತ್ತು ಮೀರಾ ಪಾತ್ರಗಳಲ್ಲಿ ಮಾಳವಿಕ ಶರ್ಮಾ ಹಾಗೂ ದೇವಿಕಾ ಗಮನ ಸೆಳೆಯುತ್ತಾರೆ. ಮೊದಲಾರ್ಧದಲ್ಲಿ ಕಾಮಿಡಿ ಮತ್ತು ರೊಮ್ಯಾಂಟಿಕ್ ಸನ್ನಿವೇಶಗಳು ಪ್ರೇಕ್ಷಕರನ್ನು ನಗಿಸುತ್ತವೆ. ಆದರೆ, ಇಂಟರ್‌ವಲ್ ವೇಳೆಗೆ ಕಥೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಇದೇ ಚಿತ್ರದ ಪ್ರಮುಖ ಸರ್ಪ್ರೈಸ್ ಎನ್ನಲಾಗುತ್ತಿದೆ.
ಇನ್ನು ಬಾಕ್ಸ್ ಆಫೀಸ್ ವಿಚಾರಕ್ಕೆ ಬರುವುದಾದರೆ, ಬಿಡುಗಡೆಯ ನಾಲ್ಕನೇ ದಿನವಾದ ಭಾನುವಾರ 432 ಪ್ರದರ್ಶನಗಳ ಮೂಲಕ ಚಿತ್ರ ₹30 ಲಕ್ಷ ನಿವ್ವಳ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟು ಕಲೆಕ್ಷನ್ ₹2.75 ಕೋಟಿ ತಲುಪಿದೆ.
ಒಟ್ಟಿನಲ್ಲಿ, ಲವ್, ಕಾಮಿಡಿ ಮತ್ತು ಅನಿರೀಕ್ಷಿತ ತಿರುವುಗಳ ಮೂಲಕ ಬೃಂದಾವಿಹಾರಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಗಣೇಶ್ ಅವರ ವೃತ್ತಿಜೀವನದ ಬಿಗ್ಗೆಸ್ಟ್ ಓಪನಿಂಗ್ ಎಂಬ ಹೆಗ್ಗಳಿಕೆಯೂ ಸಿನಿಮಾದ ನಿರೀಕ್ಷೆಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಗೋಲ್ಡನ್ ಸ್ಟಾರ್ ಇನ್ನೆಷ್ಟು ಮ್ಯಾಜಿಕ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.