SOCIAL MEDIA

Newsletter

PARTNER SITES
Select Language Select State

BBK 13 : ವೈಷ್ಣವಿ ಯಡವಟ್ಟು ಉಸ್ತುವಾರಿಗೆ ವೀಕ್ಷಕರ ತೀವ್ರ ಆಕ್ರೋಶ, ಕಿರಣ್ ಶಾಸ್ತ್ರಿ ಮೇಲೆ ಆಸಿಯಾ ಗರಂ..!

BBK 13 Updates : ಬಜರ್ ಟಾಸ್ಕ್‌ನಲ್ಲಿ ವೈಷ್ಣವಿ ನೀಡಿದ ತಪ್ಪು ತೀರ್ಪುಗಳಿಂದ ಗಗನ್ ಮತ್ತು ತಾಂಡವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರೇಕ್ಷಕರು ವೈಷ್ಣವಿ ಅವರ ಗೊಂದಲದ ಉಸ್ತುವಾರಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದರ ನಡುವೆ ಟಾಸ್ಕ್ ವಿಚಾರವಾಗಿ ಉದ್ದೇಶಪೂರ್ವಕವಾಗಿ ಪ್ರಚೋದಿಸಲು ಯತ್ನಿಸಿದ ಕಿರಣ್ ಶಾಸ್ತ್ರಿಗೆ ಆಸಿಯಾ ಫಿರ್ದೋಸ್ “ಬಾಯಿ ಮುಚ್ಚು” ಎಂದು ಗರಂ ಆಗಿ ಕೂಗಾಡಿದರು.. ಅಸಲಿಗೆ ದೊಡ್ಮನೆಯಲ್ಲಿ ಆಗಿದ್ದೇನು..? ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..

Reported By Krishna NK Written By Krishna NK
Published: Sep 18, 2026, 08:19 PM IST | Updated: Sep 18, 2026, 08:30 PM IST
Image Credit: Bigg Boss Kannada 13
Join

Bigg Boss Kannada Season 13 updates : ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಅಂಗಳದಲ್ಲಿ ಸ್ಪರ್ಧಿಗಳ ನಡುವಿನ ಗೊಂದಲ, ಜಗಳ ಹಾಗೂ ಟಾಸ್ಕ್‌ಗಳ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದು ಟಾಸ್ಕ್ ಕೂಡ ಪ್ರತಿಯೊಬ್ಬ ಸ್ಪರ್ಧಿಗೆ ಅತ್ಯಂತ ಇಂಪಾರ್ಟೆಂಟ್. ಅದರಲ್ಲೂ ಆಟವನ್ನು ನಿಷ್ಪಕ್ಷಪಾತವಾಗಿ ಮುನ್ನಡೆಸುವ ‘ಉಸ್ತುವಾರಿ’ ವಹಿಸುವವರು ಮಾಡುವ ಸಣ್ಣ ತಪ್ಪು ಕೂಡ ಇಡೀ ಮನೆಯ ವಾತಾವರಣವನ್ನೇ ಬದಲಾಯಿಸಿಬಿಡುತ್ತದೆ. ಇದೀಗ, ವೈಷ್ಣವಿ ವಹಿಸಿದ ಉಸ್ತುವಾರಿ ಬಿಗ್ ಬಾಸ್ ಅಂಗಳದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಉಸ್ತುವಾರಿಯೇ ಸಾಲು ಸಾಲು ಯಡವಟ್ಟುಗಳನ್ನು ಮಾಡಿ, ಮನೆಯ ಸ್ಪರ್ಧಿಗಳ ಜೊತೆಗೆ ವೀಕ್ಷಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಉಸ್ತುವಾರಿ ನಿರ್ಧಾರದಲ್ಲಿ ಗೊಂದಲ ಸೃಷ್ಟಿಸಿದ ವೈಷ್ಣವಿ
ʻಬಿಗ್‌ ಬಾಸ್‌ʼನಲ್ಲಿ ಟಾಸ್ಕ್ ನಿರ್ವಹಣೆ ಎಷ್ಟು ಮುಖ್ಯವೋ, ಅದನ್ನ ಯಾವುದೇ ತಾರತಮ್ಯವಿಲ್ಲದೆ ನಡೆಸಿಕೊಡುವ ಉಸ್ತುವಾರಿ ಪಾತ್ರವೂ ಅಷ್ಟೇ ಪ್ರಮುಖವಾಗಿರುತ್ತದೆ. ಆದರೆ, ಇತ್ತೀಚೆಗೆ ನಡೆದ ಟಾಸ್ಕ್‌ನಲ್ಲಿ ವೈಷ್ಣವಿ ವಹಿಸಿದ ಉಸ್ತುವಾರಿ ಪ್ರೇಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ವೈಷ್ಣವಿ ವಿರುದ್ಧ ಪ್ರೇಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ಹಿಗ್ಗಾಮಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೌಂದರ್ಯ, ಗಗನ್‌, ಜಗ್ಗ ಮಮ್ಮಿ ಹಾಗೂ ತಾಂಡವ್‌ ನಡುವೆ ನಡೆದ ಬಜರ್ ಟಾಸ್ಕ್‌ನಲ್ಲಿ, ಮೊದಲು ಬಜರ್ ಒತ್ತುವ ಸ್ಪರ್ಧಿಯ ಹೆಸರನ್ನು ವೈಷ್ಣವಿ ಸರಿಯಾಗಿ ಸೂಚಿಸಬೇಕಿತ್ತು. ಮೊದಲ ಸುತ್ತಿನಲ್ಲಿ ಗಗನ್ ಮೊದಲು ಬಜರ್‌ ಪ್ರೆಸ್ ಮಾಡಿದ್ದರೂ, ಅದನ್ನು ಸರಿಯಾಗಿ ಗಮನಿಸದ ವೈಷ್ಣವಿ ಜಗ್ಗ ಮಮ್ಮಿ ಮೊದಲು ಬಜರ್ ಒತ್ತಿದ್ದಾರೆ ಎಂದು ಘೋಷಿಸಿದರು. ಇದರಿಂದ ತೀವ್ರ ಕೋಪಗೊಂಡ ಗಗನ್, ತಮ್ಮ ಆಕ್ಷೇಪವನ್ನು ನೇರವಾಗಿಯೇ ಹೊರಹಾಕಿದರು. ಸ್ವತಃ ಜಗ್ಗ ಮಮ್ಮಿ ಅವರೇ ಗಗನ್ ಮೊದಲು ಬಜರ್ ಒತ್ತಿದ್ದು ಎಂದು ಸತ್ಯ ಒಪ್ಪಿಕೊಂಡ ಮೇಲೆಯೂ ವೈಷ್ಣವಿ ತಮ್ಮ ತಪ್ಪಾದ ನಿರ್ಧಾರವನ್ನೇ ಸಮರ್ಥಿಸಿಕೊಳ್ಳಲು ಯತ್ನಿಸಿದ್ದು ಮನೆಯಲ್ಲಿ ದೊಡ್ಡ ಮಟ್ಟದ ಗೊಂದಲಕ್ಕೆ ದಾರಿಯಾಯಿತು.

ತಾಂಡವ್ ಆಕ್ರೋಶ ಮತ್ತು ವೈಷ್ಣವಿ ಟ್ರೋಲ್
ಎರಡನೇ ಸುತ್ತಿನಲ್ಲೂ ಉಸ್ತುವಾರಿ ನಿರ್ವಹಣೆಯಲ್ಲಿ ವೈಷ್ಣವಿ ಮತ್ತೆ ಎಡವಿದರು. ಈ ಬಾರಿ ತಾಂಡವ್ ಅತ್ಯಂತ ಸ್ಪಷ್ಟವಾಗಿ ಮೊದಲು ಬಜರ್ ಒತ್ತಿದ್ದರು. ಆದರೆ, ವೈಷ್ಣವಿ ಮಾತ್ರ ಮೊದಲು ಬಜರ್ ಒತ್ತಿದ್ದು ಗಗನ್ ಎಂದು ಮತ್ತೆ ಉಲ್ಟಾ ನಿರ್ಧಾರ ನೀಡಿದರು. ಜೊತೆಯಲ್ಲಿದ್ದ ಇತರ ಸ್ಪರ್ಧಿಗಳೆಲ್ಲರೂ ಮೊದಲು ಬಜರ್‌ ಒತ್ತಿದ್ದು ತಾಂಡವ್ ಎಂದು ಕೂಗಿ ಹೇಳಿದರೂ ವೈಷ್ಣವಿ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ರೊಚ್ಚಿಗೆದ್ದ ತಾಂಡವ್, ತಾವು ಯಾವುದನ್ನೂ ಫ್ರೀಯಾಗಿ ತೆಗೆದುಕೊಳ್ಳುವುದಿಲ್ಲ ಎಂದು ಖಾರವಾಗಿಯೇ ಎಚ್ಚರಿಸಿದರು. ವೈಷ್ಣವಿ ಅವರ ಈ ಗೊಂದಲದ ಉಸ್ತುವಾರಿಯನ್ನು ನೋಡಿದ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ವೈಷ್ಣವಿ ನ್ಯಾಯಯುತವಾಗಿ ಆಟ ನಡೆಸುತ್ತಿಲ್ಲ, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಪಕ್ಷಪಾತದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ವೀಕ್ಷಕರು ತೀವ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಕಣ್ಣು ಮುಂದೆಯೇ ಸತ್ಯ ಕಾಣಿಸುತ್ತಿದ್ದರೂ ಅದನ್ನು ಒಪ್ಪಿಕೊಳ್ಳದ ವೈಷ್ಣವಿ ಅವರಿಗೆ ಗೇಮ್ ಆಡಲೂ ಬರುವುದಿಲ್ಲ, ಉಸ್ತುವಾರಿ ವಹಿಸಲೂ ಬರುವುದಿಲ್ಲ ಎಂದು ಪ್ರೇಕ್ಷಕರು ಕಿಡಿಕಾರಿದ್ದಾರೆ.

ಆಸಿಯಾ ಫಿರ್ದೋಸ್ ಮತ್ತು ಕಿರಣ್ ಶಾಸ್ತ್ರಿ ನಡುವೆ ಕಟು ಮಾತುಗಳು
ಟಾಸ್ಕ್ ಗೊಂದಲ ಒಂದೆಡೆಯಾದರೆ, ಇತ್ತ ಕಿರಣ್ ಶಾಸ್ತ್ರಿ ಹಾಗೂ ಆಸಿಯಾ ನಡುವೆ ದೊಡ್ಡ ಮಟ್ಟದ ಕಿರಿಕ್ ನಡೆದಿದೆ. ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ, ಬಿಗ್ ಬಾಸ್ ನೀಡಿದ ಗೇಮ್ ಟಾಸ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಕೋ ಪೈಲಟ್ ಆಗಿದ್ದ ಆಸಿಯಾ ಅವರನ್ನು ಮನವೊಲಿಸುವ ಅಗತ್ಯವಿತ್ತು. ಮನೆಯ ಇತರೆ ಸದಸ್ಯರೆಲ್ಲರೂ ಆಸಿಯಾ ಅವರ ಮನವೊಲಿಸಲು ಸೌಮ್ಯವಾಗಿ ಪ್ರಯತ್ನಿಸುತ್ತಿದ್ದರೆ, ಕಿರಣ್ ಶಾಸ್ತ್ರಿ ಮಾತ್ರ ಬೇರೆಯದ್ದೇ ಹಾದಿ ಹಿಡಿದರು. ಆಸಿಯಾ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು, ಅವರನ್ನು ಸತತವಾಗಿ ಟ್ರಿಗರ್ ಮಾಡುವಂತಹ ಮಾತುಗಳನ್ನಾಡ ತೊಡಗಿದರು. ಮಾತಿನ ಮಧ್ಯೆ ಕಿರಣ್ ಶಾಸ್ತ್ರಿ, ತಮ್ಮ ಮೈಂಡ್ ಗೇಮ್ ಅನ್ನು ಯಾರಿಂದಲೂ ಸೋಲಿಸಲು ಸಾಧ್ಯವೇ ಇಲ್ಲ ಎಂದು ಪದೇ ಪದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಶಾಸ್ತ್ರಿಯ ಈ ಸವಾಲು ಮತ್ತು ಪ್ರಚೋದನಾತ್ಮಕ ನಡೆ ಆಸಿಯಾ ಅವರ ತಾಳ್ಮೆ ಕೆಡಿಸಿತು. ಶಾಸ್ತ್ರಿ ಪದೇ ಪದೇ ಕಿರಿಕ್ ಮಾಡುವ ನಡವಳಿಕೆಯಿಂದ ತೀವ್ರವಾಗಿ ಕೆರಳಿದ ಆಸಿಯಾ, ತಾವು ಅವರ ಬಳಿ ಮಾತನಾಡುತ್ತಿಲ್ಲವೆಂದು ಸ್ಪಷ್ಟಪಡಿಸಿ, ಬಾಯಿ ಮುಚ್ಚಿಕೊಂಡು ಸುಮ್ಮನಿರಲು ಜೋರಾಗಿ ಕೂಗಾಡಿ ಆವಾಜ್ ಹಾಕಿದರು.

ವಿಧಿವಿಲ್ಲದೆ ಕಠಿಣ ನಿರ್ಧಾರ ಕೈಗೊಂಡ ಬಿಗ್ ಬಾಸ್
ಕಿರಣ್ ಶಾಸ್ತ್ರಿ ಅವರ ಈ ರೀತಿಯ ನಡವಳಿಕೆ ಹಾಗೂ ಇತರರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಶೈಲಿಗೆ ಬಿಗ್ ಬಾಸ್ ವೀಕ್ಷಕರಿಂದಲೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮತ್ತೊಂದೆಡೆ, ಮನೆಯ ನಿಯಮಗಳನ್ನು ಮೀರಿ ಸ್ಪರ್ಧಿಗಳು ಪದೇ ಪದೇ ಹಗಲು ವೇಳೆಯಲ್ಲಿ ನಿದ್ರೆ ಮಾಡುತ್ತಿದ್ದುದು ಬಿಗ್ ಬಾಸ್ ಗಮನಕ್ಕೆ ಬಂದಿತ್ತು. ಬಿಗ್ ಬಾಸ್ ಮನೆಯ ಮುಖ್ಯ ನಿಯಮಗಳಲ್ಲಿ ಒಂದಾದ ನಿದ್ರೆ ಮಾಡದಿರುವ ನಿಯಮವನ್ನು ಸ್ಪರ್ಧಿಗಳು ಗಾಳಿಗೆ ತೂರಿದ್ದರು.

ಈ ವಿಚಾರವಾಗಿ ಚರ್ಚಿಸಿ ಇಬ್ಬರು ಮುಖ್ಯ ತಪ್ಪಿತಸ್ಥರನ್ನು ಹೆಸರಿಸಲು ಬಿಗ್ ಬಾಸ್ ಸೂಚಿಸಿದಾಗ, ಮನೆಯವರೆಲ್ಲರೂ ಸುದೀರ್ಘವಾಗಿ ಚರ್ಚಿಸಿ ಕಿರಣ್ ಮತ್ತು ಲಿಖಿತ್ ಅವರ ಹೆಸರುಗಳನ್ನು ಅಂತಿಮಗೊಳಿಸಿದರು. ನಿಯಮವನ್ನು ಪದೇ ಪದೇ ಬ್ರೇಕ್ ಮಾಡಿದ್ದಕ್ಕಾಗಿ ಬಿಗ್ ಬಾಸ್ ಈ ಇಬ್ಬರಿಗೂ ಕಠಿಣ ಶಿಕ್ಷೆ ವಿಧಿಸಿದ್ದು, ಅವರ ಹಾಸಿಗೆ, ದಿಂಬು ಹಾಗೂ ಹೊದಿಕೆಗಳನ್ನು ತಕ್ಷಣವೇ ಹಿಂಪಡೆದುಕೊಂಡಿದ್ದಾರೆ. ಬಿಗ್ ಬಾಸ್ ನೀಡಿದ ಈ ಶಿಕ್ಷೆಯಿಂದಾಗಿ ಕಿರಣ್ ಮತ್ತು ಲಿಖಿತ್ ಮುಂದಿನ ಆದೇಶದವರೆಗೆ ಕನಿಷ್ಠ ಸೌಲಭ್ಯಗಳಿಲ್ಲದೆ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಆಟದ ಕಾವೇರುತ್ತಿದ್ದು, ಪ್ರತಿಯೊಂದು ಹಂತದಲ್ಲೂ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ ಹೊರಬರುತ್ತಿದೆ. ಉಸ್ತುವಾರಿಯಾಗಿ ವೈಷ್ಣವಿ ಮಾಡಿದ ಗೊಂದಲದ ನಿರ್ಧಾರಗಳು ಮತ್ತು ಕಿರಣ್ ಶಾಸ್ತ್ರಿ ಅವರ ಪ್ರಚೋದನಾತ್ಮಕ ನಡವಳಿಕೆಗಳು, ಆಟದಲ್ಲಿ 'ತಾಳ್ಮೆ' ಹಾಗೂ 'ನಿಷ್ಪಕ್ಷಪಾತ ಧೋರಣೆ' ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಿವೆ. ಬಿಗ್ ಬಾಸ್ ನೀಡಿದ ಕಠಿಣ ಶಿಕ್ಷೆಯು ಮನೆಯ ನಿಯಮಗಳನ್ನು ಪಾಲಿಸುವುದು ಎಷ್ಟು ಕಡ್ಡಾಯ ಎಂಬುದನ್ನು ಸ್ಪರ್ಧಿಗಳಿಗೆ ಸ್ಪಷ್ಟವಾಗಿ ನೆನಪಿಸಿದ್ದು, ಮುಂಬರುವ ದಿನಗಳಲ್ಲಿ ಆಟ ಇನ್ನು ಎಷ್ಟು ರೋಚಕ ಹಾಗೂ ಕಟ್ಟುನಿಟ್ಟಾಗಿರಲಿದೆ ಎಂಬುದಕ್ಕೆ ಮುನ್ಸೂಚನೆ ನೀಡಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES