ಕೇವಲ 5 ವಾರಗಳಲ್ಲಿ 550 ಮಿಲಿಯನ್ ವಾಚ್ ಅವರ್ಸ್ : ಹೊಸ ದಾಖಲೆ ಬರೆದ ಬಿಗ್ ಬಾಸ್ ಶೋ
ಅಗ್ನಿ ಪರೀಕ್ಷೆ ಎಂಬ ಹೊಸ ಕಾನ್ಸೆಪ್ಟ್ ಮೂಲಕ ಜನರ ಮುಂದೆ ಬಂದು ಪ್ರಸ್ತುತ ಉತ್ತಮ ಪ್ರದರ್ಶನ ಕಾಣುತ್ತಿರುವ ಬಿಗ್ ಬಾಸ್ ಶೋ ಹೊಸ ದಾಖಲೆ ಬರೆದಿದೆ. ಒಟ್ಟಾಗಿ ಒಂದೇ ಸಮಯಕ್ಕೆ ಪ್ರಾರಂಭವಾದ ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ಬಿಗ್ ಶೋಗಳು ಸೇರಿ ಈ ಐತಿಹಾಸಿಕ ರೆಕಾರ್ಡ್ ಕ್ರಿಯೇಟ್ ಮಾಡಿವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Bigg Boss South watch hours record : ದಕ್ಷಿಣ ಭಾರತದ ಬಿಗ್ ಬಾಸ್ ಸೀಸನ್ ಹೊಸ ದಾಖಲೆಯೊಂದನ್ನು ಬರೆದಿದೆ. ಅಗ್ನಿ ಪರೀಕ್ಷೆ ಎಂಬ ಹೊಸ ಕಾನ್ಸೆಪ್ಟ್ ಮೂಲಕ ಜನರ ಮಂದೆ ಬಂದ ಈ ಬಿಗ್ ಶೋ ಪ್ರಸ್ತುತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದರ ನಡುವೆ ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ನಾಲ್ಕೂ ಭಾಷೆಗಳ ಬಿಗ್ ಬಾಸ್ ಶೋ ಕೇವಲ ಐದೇ ವಾರದಲ್ಲಿ ಬರೋಬ್ಬರಿ 550 ಮಿಲಿಯನ್ ವಾಚ್ ಅವರ್ಸ್ ದಾಟಿ ದೊಡ್ಡ ಇತಿಹಾಸ ಸೃಷ್ಟಿಸಿದೆ. ಈ ವಿಚಾರವನ್ನು ಸ್ವತಃ ಜಿಯೋಸ್ಟಾರ್ (JioStar) ಕಂಪನಿಯವರೇ ಅಧಿಕೃತವಾಗಿ ತಿಳಿಸಿದ್ದಾರೆ.
4 ಭಾಷೆಗಳು.. ಒಂದೇ ದಿನ ಲಾಂಚ್
ನಾಲ್ಕೂ ಭಾಷೆಗಳ ಬಿಗ್ ಬಾಸ್ ಒಂದೇ ದಿನ ಪ್ರೀಮಿಯರ್ ಆಗಿದ್ದು ವಿಶೇಷವಾಗಿತ್ತು. ಇದರಿಂದಾಗಿ ಇಡೀ ದಕ್ಷಿಣ ಭಾರತವೇ ಒಂದೇ ಕಡೆ ಸೇರಿ ಹಬ್ಬ ಮಾಡಿದಂತ ಅನುಭವ ಗ್ರ್ಯಾಂಡ್ ಪ್ರಿಮಿಯರ್ ದಿನ ಪ್ರೇಕ್ಷಕರಿಗೆ ಸಿಕ್ಕಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಒಟ್ಟಾರೆ ವಾಚ್ ಅವರ್ಸ್ ಬರೋಬ್ಬರಿ 20% ಜಾಸ್ತಿ ಆಗಿದೆ.
24 ಗಂಟೆಯೂ ಲೈವ್ ಫೀಡ್
ಟಿವಿಯಲ್ಲಿ ಬರೋ ಎಪಿಸೋಡ್ ಬಿಡಿ, ಜಿಯೋಹಾಟ್ಸ್ಟಾರ್ನಲ್ಲಿ (JioHotstar) ಸಿಗೋ 24x7 ಲೈವ್ ಫೀಡ್ ಗಂತೂ ಫುಲ್ ಡಿಮ್ಯಾಂಡ್ ಇದೆ. ಹತ್ತು ಜನರಲ್ಲಿ ಆರು ಮಂದಿ ವೀಕ್ಷಕರು ಈ ಲೈವ್ ಫೀಡ್ ನೋಡ್ತಿದ್ದಾರಂತೆ. ಅಂದ್ರೆ ಬಿಗ್ ಬಾಸ್ ಈಗ ಕೇವಲ ಅರ್ಧ ಗಂಟೆಯ ಶೋ ಆಗಿ ಉಳಿದಿಲ್ಲ, ದಿನವಿಡೀ ಮನೆಯವರ ಜಗಳ, ಮಾತುಕತೆಗಳ ಜೊತೆ ಕನೆಕ್ಟ್ ಆಗಿರೋ ಒಂದು ಹ್ಯಾಬಿಟ್ ತರ ಆಗೋಗಿದೆ. ಜಿಯೋಸ್ಟಾರ್ ಸೌತ್ ಕ್ಲಸ್ಟರ್ ಮುಖ್ಯಸ್ಥರಾದ ಕೃಷ್ಣನ್ ಕುಟ್ಟಿ ಅವರು ಕೂಡ ಪ್ರೇಕ್ಷಕರ ಈ ಅಭಿಮಾನದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.
ಬ್ರಾಂಡ್ಗಳ ಸಾಲು ಸಾಲು ಸ್ಪಾನ್ಸರ್ಶಿಪ್
ವಾಚ್ ಟೈಮ್ನಲ್ಲಿ ಅಷ್ಟೇ ಅಲ್ಲ, ಈ ಸಲ ಬಿಗ್ ಬಾಸ್ ಜೊತೆ ಒಟ್ಟು 75ಕ್ಕೂ ಹೆಚ್ಚು ಬ್ರ್ಯಾಂಡ್ಗಳು ಕೈಜೋಡಿಸಿದ್ದು, 120ಕ್ಕೂ ಹೆಚ್ಚು ಸ್ಪಾನ್ಸರ್ಶಿಪ್ ಸಿಕ್ಕಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬ್ರ್ಯಾಂಡ್ಗಳು ಮೊದಲ ಬಾರಿಗೆ ಬಿಗ್ ಬಾಸ್ ಜೊತೆ ಬಂದಿರೋದು ವಿಶೇಷ. ವೈಟ್ಗೋಲ್ಡ್ (WhiteGold), ಮಾರುತಿ ಸುಜುಕಿ (Maruti Suzuki), ಏಷ್ಯನ್ ಪೇಂಟ್ಸ್ (Asian Paints), ಅಮೆಜಾನ್ (Amazon), ಉಬರ್ (Uber) ತರಹದ ದೊಡ್ಡ ದೊಡ್ಡ ರಾಷ್ಟ್ರೀಯ ಹಾಗೂ ಸ್ಥಳೀಯ ಬ್ರ್ಯಾಂಡ್ಗಳು ಜಾಹೀರಾತು ನೀಡಿವೆ. ಒಟ್ಟು ಜಾಹೀರಾತು ವೆಚ್ಚದಲ್ಲಿ ಸ್ಥಳೀಯ ಬ್ರ್ಯಾಂಡ್ಗಳದ್ದೇ ಸುಮಾರು 30% ಪಾಲು ಇದೆ ಅನ್ನೋದು ಗಮನಾರ್ಹ.
ಅಗ್ನಿಪರೀಕ್ಷೆ ಡಿಜಿಟಲ್ ಪ್ರಿ-ಶೋ ಮ್ಯಾಜಿಕ್
ಮನೆಗೆ ಬರೋಕಿಂತ ಮುಂಚೆನೇ 'ಅಗ್ನಿಪರೀಕ್ಷೆ' (Agnipariksha) ಅಂತ ಒಂದು ಡಿಜಿಟಲ್ ಪ್ರಿ-ಶೋ ಮಾಡಿ ಆಯೋಜಕರು ಜನರಲ್ಲಿ ಕುತೂಹಲ ಹುಟ್ಟಿಸಿದ್ದರು. ತೆಲುಗು, ಕನ್ನಡ, ಮಲಯಾಳಂನಲ್ಲಿ 'ಅಗ್ನಿಪರೀಕ್ಷೆ' ಮತ್ತು ತಮಿಳಿನಲ್ಲಿ 'The Common Man' ಹೆಸರಿನಲ್ಲಿ ಬಂದ ಈ ಶೋ, ಸಾಮಾನ್ಯ ಜನರಿಗೆ ಮನೆಯೊಳಗೆ ಹೋಗೋಕೆ ದಾರಿ ಸಹ ಮಾಡಿಕೊಟ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು.
ಅಂದಹಾಗೆ, ಕಿಚ್ಚ ಸುದೀಪ್ (ಕಲರ್ಸ್ ಕನ್ನಡ), ತಮಿಳು ವಿಜಯ್ ಸೇತುಪತಿ (ಸ್ಟಾರ್ ವಿಜಯ್) ತೆಲುಗು ನಾಗಾರ್ಜುನ (ಸ್ಟಾರ್ ಮಾ) ಮಲಯಾಳಂ ಮೋಹನ್ಲಾಲ್ (ಏಷ್ಯಾನೆಟ್) ಅವರು ನಿರೂಪಕರಾಗಿ ಶೋ ಹಾಸ್ಟ್ ಮಾಡುತ್ತಿದ್ದಾರೆ.. ಪ್ರಸ್ತುತ ಎಪಿಸೋಡ್ ಮತ್ತು 24x7 ಲೈವ್ ಫೀಡ್ ಅನ್ನು ನೀವು ಮಿಸ್ ಮಾಡದೆ JioHotstar ನಲ್ಲಿ ಎಂಜಾಯ್ ಮಾಡಬಹುದು..