SOCIAL MEDIA

Newsletter

PARTNER SITES
Select Language Select State

BBK 13 : ತಾಂಡವ್‌ ಎಮರ್ಜೆನ್ಸಿ ಎಕ್ಸಿಟ್‌ ಬೆನ್ನಲ್ಲೇ ಬಿಗ್‌ ಬಾಸ್‌ ಮನೆಗೆ 5 ಹೊಸ ಸ್ಪರ್ಧಿಗಳ ಎಂಟ್ರಿ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಕಳೆದ ದಿನ ಸ್ಟ್ರಾಂಗ್‌ ಸ್ಪರ್ಧಿ ತಾಂಡವ್‌ ಹೊರ ಬಂದ ನಂತರ ಪ್ರೇಕ್ಷಕರು ದೊಡ್ಮನೆಯಲ್ಲಿ ಏನಾಗುತ್ತಿದೆ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ವಾರಾಂತ್ಯ ಇನ್ನು 2 ಕಂಟೆಸ್ಟಂಟ್‌ ಮನೆಯಿಂದ ಹೊರ ಹೋಗಲಿದ್ದಾರೆ. ಇದರ ನಡುವೆ 5 ಜನ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಹೌಸ್‌ ಪ್ರವೇಶ ಮಾಡಲಿದ್ದಾರೆ. ಹಾಗಿದ್ರೆ ಯಾರು ಆ ಸ್ಪರ್ಧಿಗಳು..? ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

Reported By Krishna NK Written By Krishna NK
Published: Sep 25, 2026, 06:08 PM IST | Updated: Sep 25, 2026, 06:12 PM IST
Image Credit: BBK Season 13
Join

Bigg Boss Kannada season 13 : ಅನಿರೀಕ್ಷಿತ ಟ್ವಿಸ್ಟ್‌ಗಳು, ಸ್ಪರ್ಧಿಗಳ ಜಗಳ, ವಾದ ವಿವಾದದ ನಡುವೆ ನಿನ್ನೆ ತಾಂಡವ್‌ ಮಧ್ಯರಾತ್ರಿ "ಎಮರ್ಜೆನ್ಸಿ ಎಕ್ಸಿಟ್‌" ಆಗಿದ್ದಾರೆ. ಈ ವಿಚಾರ ಸ್ಪರ್ಧಿಗಳಿಗೆ ಆಘಾತ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ. ತಾಂಡವ್‌ ಇತ್ತೀಚಿಗಷ್ಟೇ ಆಟ ಶುರು ಮಾಡಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರು, ಅಷ್ಟೇ ಅಲ್ಲದೆ, ಇದು ಸರಿಯಲ್ಲ ಅಂತ ಅವರ ಅಭಿಮಾನಿಗಳೂ ಸಹ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ..

ಇದರ ನಡುವೆ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಹೆಸರುಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿವೆ. ಪ್ರಮುಖವಾಗಿ 5 ಜನರ ಹೆಚ್ಚು ಕೇಳಿ ಬರುತ್ತಿವೆ. ಅದರಲ್ಲೂ 3 ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು ಮತ್ತು ಖ್ಯಾತ ನಟಿ ಮತ್ತು ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ಸ್, ಹಾಸ್ಯ ಕಲಾವಿದರೊಬ್ಬರ ಹೆಸರು ಮುನ್ನೆಲೆಗೆ ಬಂದಿದೆ..

ಯಸ್‌.. ಪ್ರಶಾಂತ್‌ ಗೌಡ, ನಟಿ ವಿಜಯಲಕ್ಷ್ಮಿ, ಕಿಶನ್ ಬಿಳಗಲಿ, ಆದಿ ಲೋಕೇಶ್‌, ತೇಜಸ್ವಿನಿ ಪ್ರಕಾಶ್‌ ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಪ್ರವೇಶ ಮಾಡೋಕೆ ಬಹುತೇಕ ಖಚಿತ ಅಂತ ಹೇಳಲಾಗುತ್ತಿದೆ. ಇದಕ್ಕೆ ಒಂದು ದೊಡ್ಡ ಕಾರಣವೂ ಇದೆ. ಈ 5 ಜನರಲ್ಲಿ 3 ಮಾಜಿ ಬಿಗ್‌ ಬಾಸ್‌ ಸ್ಪರ್ಧಿಗಳು, ಇವರು ಬಹುತೇಕ ಕಳೆದ ಸೀಸನ್‌ನಂತೆ ಅತಿಥಿಗಳಾಗಿ ಶೋ ಪ್ರವೇಶ ಮಾಡಬಹುದು. ಉಳಿದ ಇಬ್ಬರು ಸ್ಪರ್ಧಿಗಳಾಗಿ ಮುಂದುವರೆಯುವ ಸಾಧ್ಯತೆ ಇದೆ..

ಆದಿ ಲೋಕೇಶ್‌, ಸೀಸನ್‌ 2 - 2014 ರಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 2 ರಲ್ಲಿ ಭಾಗವಹಿಸಿದರು. 9ನೇ ವಾರದಲ್ಲಿ ಎಲಿಮಿನೇಟ್‌ ಆಗಿ ಮನೆಯಿಂದ ಹೊರಬಂದಿದ್ದರು. ತೇಜಸ್ವಿನಿ ಪ್ರಕಾಶ್‌ ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿಯಾಗಿದ್ದರು. ಇನ್ನು ಡ್ಯಾನ್ಸರ್‌ ಕಿಶನ್ ಬಿಳಗಲಿ ಸೀಸನ್ 7ರ ಸ್ಪರ್ಧಿಸಿದ್ದರು. ಈ ಮೂವರು ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಹೌಸ್‌ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ, ಇತ್ತೀಚಿಗೆ ಗಿಚ್ಚ ಗಿಲಿಗಿಲಿ, ಕ್ವಾಟ್ಲೆ ಕಿಚನ್‌ ಸೇರಿದಂತೆ ಹಲವಾರು ಕಾಮಿಡಿ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ, ಪ್ರಶಾಂತ್‌ ಗೌಡ್‌ ಹಾಗೂ ನಾಗಮಂಡಲ, ಸೂರ್ಯವಂಶ ಸೇರಿದಂತೆ ಹಲವಾರು ಸಿನಿಮಾಗಳಲ್ಲಿನ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ವಿಜಯಲಕ್ಷ್ಮಿ ಅವರು ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ಈ 5 ಸ್ಪರ್ಧಿಗಳ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ಅತೀ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೆ, ಶೋನಲ್ಲಿ ಭಾಗವಹಿಸುವುದು ಫಿಕ್ಸ್‌ ಎನ್ನಲಾಗಿದೆ. ಇನ್ನು ಮೂರು ದಿನಗಳಲ್ಲಿ 3 ಸ್ಪರ್ಧಿಗಳು ಎಲಿಮಿನೇಟ್‌ ಆಗುತ್ತಿದ್ದರೆ, ಈ ಐದು ಜನರ ಪ್ರವೇಶ ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.. ಆದರೆ ಇದು ಅಧಿಕೃತವಲ್ಲ, ಮುಂದಿನ ದಿನ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES