2.5 ಲಕ್ಷ ರೂ. ಚೆಕ್ ಹರಿದು ಹಾಕಿದ ಪ್ರಶಾಂತ್ ಗೌಡ.! ಮನೆ ಮಂದಿ ಶಾಕ್.. ಅಸಲಿಗೆ ಆಗಿದ್ದೇನು?
ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ ಒಂದರಲ್ಲಿ ಸ್ಪರ್ಧಿಗಳಾದ ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ತೆಗೆದುಕೊಂಡ ನಿರ್ಧಾರಿಂದ ವಿನ್ನರ್ ಪ್ರೈಜ್ ಹಣದಿಂದ ಬರೋಬ್ಬರಿ 2.5 ಲಕ್ಷ ರೂಪಾಯಿ ಕಡಿತಗೊಂಡಿದ್ದು, ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅಂದ್ರೆ ಅಲ್ಲಿ ಮನರಂಜನೆಯ ಜೊತೆಗೆ ಅನಿರೀಕ್ಷಿತ ಟ್ವಿಸ್ಟ್‌ಗಳು, ಕಣ್ಣೀರು ಮತ್ತು ಭಾವನಾತ್ಮಕ ಕ್ಷಣಗಳಿಗೆ ಎಂದಿಗೂ ಕೊರತೆಯಿರುವುದಿಲ್ಲ. ಸದ್ಯ ಬಿಗ್ ಬಾಸ್ ಮನೆಯಲ್ಲಿ ನಡೆದ ಅಂತಹದ್ದೇ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ವಾರ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡಿದ ಕಠಿಣ ಹಾಗೂ ಭಾವುಕ ಟಾಸ್ಕ್ ಒಂದರಿಂದಾಗಿ ಶೋನ ವಿಜೇತರಿಗೆ ಸಿಗಬೇಕಿದ್ದ ಒಟ್ಟು ಬಹುಮಾನದ ಮೊತ್ತದಲ್ಲಿ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ಕಡಿತಗೊಂಡಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ವಿಜೇತರಿಗೆ ಪ್ರತಿ ವರ್ಷ ₹50 ಲಕ್ಷ ರೂಪಾಯಿ ಬಹುಮಾನದ ಹಣವನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಈ ಮೊತ್ತದಲ್ಲಿ ಬದಲಾವಣೆಯಾಗಿದ್ದು, ವಿನ್ನರ್‌ಗೆ ಈಗ ₹47.50 ಲಕ್ಷ ರೂಪಾಯಿ ಮಾತ್ರ ಸಿಗಲಿದೆ. ಇದಕ್ಕೆ ಕಾರಣವಾಗಿದ್ದು ಮನೆಯ ಸ್ಪರ್ಧಿಗಳಾದ ಪ್ರಶಾಂತ್ ಮತ್ತು ಕಿರಣ್ ಶಾಸ್ತ್ರಿ ತೆಗೆದುಕೊಂಡ ಒಂದು ದಿಟ್ಟ ಹಾಗೂ ಭಾವುಕ ತೀರ್ಮಾನ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು?
ಈ ವಾರದ ವಿಶೇಷ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಮನೆಯವರ ಪ್ರೀತಿಯ ಪತ್ರವನ್ನು ಪಡೆದುಕೊಳ್ಳುವ ಅತ್ಯಂತ ಭಾವನಾತ್ಮಕ ಟಾಸ್ಕ್ ನೀಡಲಾಗಿತ್ತು. ವಾರಗಳ ಕಾಲ ಮನೆಯಿಂದ ದೂರವಿದ್ದು, ತಮ್ಮವರ ಮುಖವನ್ನೂ ನೋಡದೆ ಕಷ್ಟಪಡುತ್ತಿರುವ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರ ಕಾಗದ ಸಿಕ್ಕರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಇರಲು ಸಾಧ್ಯವಿಲ್ಲ. ಹೀಗಾಗಿ ಈ ಟಾಸ್ಕ್ ಎಲ್ಲರ ಪಾಲಿಗೆ ತುಂಬಾ ಮುಖ್ಯವಾಗಿತ್ತು.
ಈ ವಿಶೇಷ ಟಾಸ್ಕ್ ಗಾಗಿ ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ಅವರನ್ನು ಕನ್ಫೆಷನ್ ರೂಂ ಮತ್ತು ಆ್ಯಕ್ಟಿವಿಟಿ ರೂಂಗೆ ಕಳುಹಿಸಲಾಗಿತ್ತು. ಇಬ್ಬರ ಎದುರು ₹2.5 ಲಕ್ಷ ರೂಪಾಯಿ ಮೌಲ್ಯದ ಚೆಕ್ ಹಾಗೂ ಅವರವರ ಮನೆಯವರ ಪತ್ರವನ್ನು ಇಡಲಾಗಿತ್ತು. ಬಿಗ್ ಬಾಸ್ ನಿಯಮಗಳ ಪ್ರಕಾರ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಇತ್ತು. ಇಬ್ಬರೂ ಸ್ಪರ್ಧಿಗಳು ಪತ್ರ ಬೇಕು ಎಂದು ಹಠ ಹಿಡಿದು ಎತ್ತಿಕೊಂಡರೆ, ಒಟ್ಟು ವಿನ್ನರ್ ಪ್ರೈಜ್ ಮನಿಯಿಂದ ಬರೋಬ್ಬರಿ ₹5 ಲಕ್ಷ ರೂಪಾಯಿ ಕಡಿತವಾಗುತ್ತಿತ್ತು. ಒಂದು ವೇಳೆ ಇಬ್ಬರೂ ಪತ್ರದ ಮೇಲಿನ ಮೋಹ ಬಿಟ್ಟು ಚೆಕ್ ಆಯ್ಕೆ ಮಾಡಿಕೊಂಡರೆ ಹಣ ಉಳಿಯುತ್ತಿತ್ತು. ಆದರೆ, ನಿಯಮದಂತೆ ಇಬ್ಬರ ಆಯ್ಕೆ ವಿಭಿನ್ನವಾಗಿದ್ದರೆ ಮಾತ್ರ ಪತ್ರ ಸಿಗುವ ಅವಕಾಶವಿತ್ತು.
ಚೆಕ್ ಹರಿದು ಪತ್ರ ಪಡೆದ ಸ್ಪರ್ಧಿಗಳು
ಮನೆಯವರ ಮೇಲಿನ ಪ್ರೀತಿ ಮತ್ತು ಕೇವಲ ಒಂದು ಪತ್ರಕ್ಕಾಗಿ ಸ್ಪರ್ಧಿಗಳು ಅಷ್ಟು ದೊಡ್ಡ ಹಣವನ್ನು ಪಣಕ್ಕಿಡಲು ಹಿಂದೆಮುಂದೆ ನೋಡಲಿಲ್ಲ. ಕೊನೆಗೆ ಪ್ರಶಾಂತ್ ಅವರು ತಮ್ಮ ಎದುರಿನಲ್ಲಿದ್ದ ಚೆಕ್ ಅನ್ನು ಸ್ವತಃ ತಮ್ಮ ಕೈಯಿಂದಲೇ ಹರಿದುಹಾಕಿ ಮನೆಯವರ ಪತ್ರವನ್ನು ಪಡೆದುಕೊಂಡರು. ಮತ್ತೊಂದೆಡೆ, ಕಿರಣ್ ಶಾಸ್ತ್ರಿ ಕೂಡ ಪತ್ರವನ್ನು ಪಡೆಯುವ ನಿರ್ಧಾರಕ್ಕೆ ಬಂದರು.
ಇಬ್ಬರ ಆಯ್ಕೆಗಳು ಬೇರೆ ಬೇರೆಯಾಗಿದ್ದರಿಂದ ಬಿಗ್ ಬಾಸ್ ನಿಯಮದ ಪ್ರಕಾರ ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ಇಬ್ಬರಿಗೂ ತಮ್ಮ ತಮ್ಮ ಮನೆಯವರ ಪ್ರೀತಿಯ ಪತ್ರಗಳು ಸಿಕ್ಕವು. ತಿಂಗಳುಗಳ ಬಳಿಕ ಕುಟುಂಬದವರ ಕೈಬರಹದ ಪತ್ರವನ್ನು ಕೈಗೆತ್ತಿಕೊಂಡ ಸ್ಪರ್ಧಿಗಳು ಭಾವುಕರಾಗಿ ಕಣ್ಣೀರಿಟ್ಟರು. ಆ ಕ್ಷಣದಲ್ಲಿ ಅವರಿಗೆ ಹಣಕ್ಕಿಂತ ಮನೆಯವರ ನೆನಪುಗಳೇ ಮುಖ್ಯವಾಗಿದ್ದವು.
ಆದರೆ, ಈ ಆಟದ ಫಲವಾಗಿ ಇಡೀ ಮನೆಯ ವಿನ್ನರ್ ಪ್ರೈಜ್ ಮನಿ ಮಾತ್ರ ಇಳಿಕೆಯಾಯಿತು. ಇವರ ಈ ನಿರ್ಧಾರದಿಂದಾಗಿ ಒಟ್ಟು ಬಹುಮಾನದ ಮೊತ್ತದಿಂದ ₹2.5 ಲಕ್ಷ ರೂಪಾಯಿ ಕಟ್ ಆಯಿತು. ಇದರಿಂದಾಗಿ ಇದುವರೆಗೆ ₹50 ಲಕ್ಷ ಇದ್ದ ವಿನ್ನರ್ ಅಮೌಂಟ್ ಈಗ ₹47.50 ಲಕ್ಷಕ್ಕೆ ಬಂದು ನಿಂತಿದೆ.
ಮನೆಯವರ ಒಂದು ಪತ್ರಕ್ಕಾಗಿ ಸ್ಪರ್ಧಿಗಳು ಲಕ್ಷಾಂತರ ರೂಪಾಯಿ ಹಣವನ್ನು ಬಿಟ್ಟುಕೊಟ್ಟಿರುವುದು ಸದ್ಯ ಬಿಗ್ ಬಾಸ್ ಮನೆಮಂದಿಯಲ್ಲಷ್ಟೇ ಅಲ್ಲದೆ, ಹೊರಗಿನ ವೀಕ್ಷಕರ ವಲಯದಲ್ಲೂ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸ್ಪರ್ಧಿಗಳ ಭಾವನೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಆಟದ ಮೊತ್ತ ಕಡಿಮೆ ಮಾಡಿಕೊಂಡಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಬಿಗ್ ಬಾಸ್ ಇತಿಹಾಸದಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ಆಲೋಚನೆಗೆ ಹಚ್ಚುವಂತೆ ಮಾಡಿದೆ.