ಬಿಗ್ ಬಾಸ್ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಬಿಗ್ ಟ್ವಿಸ್ಟ್... ಮೂವರು ಸ್ಪರ್ಧಿಗಳು ಔಟ್, ಮೂವರು ಇನ್!!
Bigg Boss Kannada emergency exit : ಬಿಗ್ ಬಾಸ್ ಮೂವರು ಸ್ಪರ್ಧಿಗಳನ್ನು ಮನೆಯಿಂದ ರಾತ್ರೋ ರಾತ್ರಿ ಹೊರಕ್ಕೆ ಕಳಿಸಲಾಗಿದೆ ಎನ್ನಲಾಗುತ್ತಿದೆ. ಮೂವರ ಎಲಿಮಿನೇಷನ್ ಬಳಿಕ ಇನ್ನೂ ಮೂವರನ್ನು ಒಳಕ್ಕೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.
Bigg Boss Kannada mid week elimination : ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರ ಸಖತ್ ಟ್ವಿಸ್ ಎದುರಾಗಿದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಬಿಗ್ ಶಾಕ್ ಒಂದನ್ನು ನೀಡಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರತಿ ವಾರ ಎಲಿಮಿನೇಷನ್ ನಡೆಯೋದು ಕಾಮನ್. ಆದರೆ ಈ ವಾರ ಎಮರ್ಜೆನ್ಸಿ ಎಕ್ಸಿಟ್ ಎಂದು ಮಾಸ್ ಎಲಿಮಿನೇಷನ್‌ನ್ನು ಮಾಡಲಾಗಿದೆ. ಈ ಬಗ್ಗೆ ಕಳೆದ ರವಿವಾರದ ಎಪಿಸೋಡ್ ಬಳಿಕವೇ ಸುದೀಪ್ ಸುಳಿವು ನೀಡಿದ್ದರು. ಈ ವಾರ ಎಮರ್ಜೆನ್ಸಿ ಎಕ್ಸಿಟ್ ಇರಲಿದ್ದು, ಮನೆಯ ಕ್ಯಾಪ್ಟನ್ ಸಂಗೀತಾ ಹೊರತು ಪಡಿಸಿ ಉಳಿದವರೆಲ್ಲರನ್ನೂ ನೇರವಾಗಿ ನಾಮಿನೇಟ್ ಮಾಡುತ್ತಿದ್ದೇವೆ ಎಂದಿದ್ದರು. ಅಲ್ಲದೇ ಈ ವಾರ ಇಡೀ ಮನೆಗೆ ಮನೆಯೇ ಖಾಲಿ ಆಗಲೂ ಬಹುದು ಎಂದು ತಿಳಿಸಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ನಡೆದೇ ಹೋಗಿದೆ ಎನ್ನಲಾಗುತ್ತಿದೆ.
ಈ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂದು ಹೊಸ ಪ್ರಯೋಗ ಮಾಡಲಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. ಕೇವಲ ಮೂರೇ ವಾರಕ್ಕೆ ಫಿನಾಲೆ ಮಾಡುವ ಮೂಲಕ ಕೆಲವರನ್ನು ಕಳುಹಿಸಿ, ಕೆಲವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕರೆತಂದಿದ್ದರು. ಇದೇ ಸಂಗತಿಯನ್ನು ಈಗ ಬಿಗ್ ಬಾಸ್ ಮತ್ತೆ ರಿಪೀಟ್ ಮಾಡುತ್ತಿದ್ದಾರೆ ಎನಿಸುತ್ತದೆ. ಈಗ ಬಿಗ್ ಬಾಸ್ ಮೂವರು ಸ್ಪರ್ಧಿಗಳನ್ನು ಮನೆಯಿಂದ ರಾತ್ರೋ ರಾತ್ರಿ ಹೊರಕ್ಕೆ ಕಳಿಸಲಾಗಿದೆ ಎನ್ನಲಾಗುತ್ತಿದೆ. ಮೂವರ ಎಲಿಮಿನೇಷನ್ ಬಳಿಕ ಇನ್ನೂ ಮೂವರನ್ನು ಒಳಕ್ಕೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಇಂದು ಮಧ್ಯರಾತ್ರಿ 12.30ಕ್ಕೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗುತ್ತದೆ. ಬಿಗ್ ಬಾಸ್ ಮನೆಯಿಂದ ಹೊರ ಹೋದವರು ಯಾರೆಂಬ ಮಾಹಿತಿ ಲೀಕ್ ಆಗಿಲ್ಲ. ಎಮರ್ಜೆನ್ಸಿ ಎಕ್ಸಟ್ ನಲ್ಲಿ ಮೂವರು ಹೊರ ಹೋದರು ಎಂಬ ಮಾಹಿತಿ ಲಭ್ಯವಾಗಿದೆ. ಮೂವರು ಹೋದರೆ ಸ್ಪರ್ಧಿಗಳ ಸಂಖ್ಯೆ 11 ಆಗಲಿದೆ. ಕೇವಲ ಮೂರನೇ ವಾರಕ್ಕೆ ಸ್ಪರ್ಧಿಗಳ ಸಂಖ್ಯೆ ಇಷ್ಟು ಕಡಿಮೆಯಾದರೆ ಮುಂದೆ ಕಷ್ಟವಾಗಲಿದೆ. ಹೀಗಾಗಿ ಎಕ್ಸಿಟ್ ಜೊತೆ ಜೊತೆಗೇ ಎಂಟ್ರಿ ಕೂಡ ಇರಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಎಮರ್ಜೆನ್ಸಿ ಎಕ್ಸಿಟ್ ಜೊತೆ, ಎಮರ್ಜೆನ್ಸಿ ಎಂಟ್ರಿ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ವೈಲ್ಡ್ ಕಾರ್ಡ್ ಗಳಾಗಿ ಬರುವ ಸ್ಪರ್ಧೀಗಳು ಯಾರು ಎಂಬ ಮಾಹಿತಿ ಕೂಡ ರಿವೀಲ್ ಆಗಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಇಂದು ಮನೆಯಿಂದ ಎಲಿಮಿನೇಟ್ ಆದವರಲ್ಲಿ ಇಬ್ಬರೂ ಸೆಲೆಬ್ರಿಗಳೇ ಎನ್ನಲಾಗಿದೆ. ಒಬ್ಬರು ಮಾತ್ರ ಕಾಮನ್ ಮ್ಯಾನ್ ಔಟ್ ಆಗಿದ್ದಾರಂತೆ. ಈ ಸಂದರ್ಭದಲ್ಲಿ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆದರೆ ಆಟದ ರೋಚಕತೆ ಮತ್ತಷ್ಟು ಹೆಚ್ಚಾಗಲಿದೆ.
ಬಿಗ್ ಬಾಸ್ ಕನ್ನಡ ಶೋ ನಲ್ಲಿ ಇದೀಗ ಬಿಗ್ ಶಾಕ್ ಎದುರಾಗಿದ್ದು, ಮನೆಮಂದಿಗೆ ಎಮರ್ಜೆನ್ಸಿ ಎಕ್ಸಿಟ್ ಶಾಕ್ ನೀಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರದ ಮಧ್ಯದಲ್ಲೇ ಮೂವರ ಎಲಿಮಿನೇಷನ್ ನಡೆದಿದೆ. ಯಾರು ಮನೆಯಿಂದ ಹೊರ ಹೋಗಿದ್ದಾರೆ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ. ಬಿಗ್ ಬಾಸ್‌ನಲ್ಲಿ ನಡೆದಿರುವ ಈ ಹಠಾತ್ ಎಮರ್ಜೆನ್ಸಿ ಎಕ್ಸಿಟ್ ನಿರ್ಧಾರದಿಂದಾಗಿ ಆಟದ ದಿಕ್ಕೇ ಸಂಪೂರ್ಣ ಬದಲಾಗಿದೆ.