• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್‌ ಬಾಸ್‌ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಬಿಗ್‌ ಟ್ವಿಸ್ಟ್‌... ಮೂವರು ಸ್ಪರ್ಧಿಗಳು ಔಟ್, ಮೂವರು ಇನ್‌!!

ಬಿಗ್‌ ಬಾಸ್‌ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಬಿಗ್‌ ಟ್ವಿಸ್ಟ್‌... ಮೂವರು ಸ್ಪರ್ಧಿಗಳು ಔಟ್, ಮೂವರು ಇನ್‌!!

Bigg Boss Kannada emergency exit : ಬಿಗ್‌ ಬಾಸ್‌ ಮೂವರು ಸ್ಪರ್ಧಿಗಳನ್ನು ಮನೆಯಿಂದ ರಾತ್ರೋ ರಾತ್ರಿ ಹೊರಕ್ಕೆ ಕಳಿಸಲಾಗಿದೆ ಎನ್ನಲಾಗುತ್ತಿದೆ. ಮೂವರ ಎಲಿಮಿನೇಷನ್‌ ಬಳಿಕ ಇನ್ನೂ ಮೂವರನ್ನು ಒಳಕ್ಕೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.

Reported ByChetana DevarmaniEdited ByChetana Devarmani
Published: Sep 24, 2026, 10:26 AM IST|Updated: Sep 24, 2026, 10:36 AM IST
joinshare
ಬಿಗ್‌ ಬಾಸ್‌ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಬಿಗ್‌ ಟ್ವಿಸ್ಟ್‌... ಮೂವರು ಸ್ಪರ್ಧಿಗಳು ಔಟ್, ಮೂವರು ಇನ್‌!!

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss Kannada mid week elimination : ಬಿಗ್‌ ಬಾಸ್‌ ಕನ್ನಡ ಮನೆಯಲ್ಲಿ ಈ ವಾರ ಸಖತ್‌ ಟ್ವಿಸ್‌ ಎದುರಾಗಿದೆ. ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ ಬಿಗ್‌ ಶಾಕ್‌ ಒಂದನ್ನು ನೀಡಿದ್ದಾರೆ. ಬಿಗ್‌ ಬಾಸ್‌ನಲ್ಲಿ ಪ್ರತಿ ವಾರ ಎಲಿಮಿನೇಷನ್‌ ನಡೆಯೋದು ಕಾಮನ್‌. ಆದರೆ ಈ ವಾರ ಎಮರ್ಜೆನ್ಸಿ ಎಕ್ಸಿಟ್‌ ಎಂದು ಮಾಸ್‌ ಎಲಿಮಿನೇಷನ್‌ನ್ನು ಮಾಡಲಾಗಿದೆ. ಈ ಬಗ್ಗೆ ಕಳೆದ ರವಿವಾರದ ಎಪಿಸೋಡ್‌ ಬಳಿಕವೇ ಸುದೀಪ್‌ ಸುಳಿವು ನೀಡಿದ್ದರು. ಈ ವಾರ ಎಮರ್ಜೆನ್ಸಿ ಎಕ್ಸಿಟ್‌ ಇರಲಿದ್ದು, ಮನೆಯ ಕ್ಯಾಪ್ಟನ್‌ ಸಂಗೀತಾ ಹೊರತು ಪಡಿಸಿ ಉಳಿದವರೆಲ್ಲರನ್ನೂ ನೇರವಾಗಿ ನಾಮಿನೇಟ್‌ ಮಾಡುತ್ತಿದ್ದೇವೆ ಎಂದಿದ್ದರು. ಅಲ್ಲದೇ ಈ ವಾರ ಇಡೀ ಮನೆಗೆ ಮನೆಯೇ ಖಾಲಿ ಆಗಲೂ ಬಹುದು ಎಂದು ತಿಳಿಸಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಎಮರ್ಜೆನ್ಸಿ ಎಕ್ಸಿಟ್‌ ನಡೆದೇ ಹೋಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂದು ಹೊಸ ಪ್ರಯೋಗ ಮಾಡಲಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. ಕೇವಲ ಮೂರೇ ವಾರಕ್ಕೆ ಫಿನಾಲೆ ಮಾಡುವ ಮೂಲಕ ಕೆಲವರನ್ನು ಕಳುಹಿಸಿ, ಕೆಲವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕರೆತಂದಿದ್ದರು. ಇದೇ ಸಂಗತಿಯನ್ನು ಈಗ ಬಿಗ್ ಬಾಸ್ ಮತ್ತೆ ರಿಪೀಟ್‌ ಮಾಡುತ್ತಿದ್ದಾರೆ ಎನಿಸುತ್ತದೆ. ಈಗ ಬಿಗ್‌ ಬಾಸ್‌ ಮೂವರು ಸ್ಪರ್ಧಿಗಳನ್ನು ಮನೆಯಿಂದ ರಾತ್ರೋ ರಾತ್ರಿ ಹೊರಕ್ಕೆ ಕಳಿಸಲಾಗಿದೆ ಎನ್ನಲಾಗುತ್ತಿದೆ. ಮೂವರ ಎಲಿಮಿನೇಷನ್‌ ಬಳಿಕ ಇನ್ನೂ ಮೂವರನ್ನು ಒಳಕ್ಕೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಇಂದು ಮಧ್ಯರಾತ್ರಿ 12.30ಕ್ಕೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗುತ್ತದೆ. ಬಿಗ್‌ ಬಾಸ್‌ ಮನೆಯಿಂದ ಹೊರ ಹೋದವರು ಯಾರೆಂಬ ಮಾಹಿತಿ ಲೀಕ್‌ ಆಗಿಲ್ಲ. ಎಮರ್ಜೆನ್ಸಿ ಎಕ್ಸಟ್‌ ನಲ್ಲಿ ಮೂವರು ಹೊರ ಹೋದರು ಎಂಬ ಮಾಹಿತಿ ಲಭ್ಯವಾಗಿದೆ. ಮೂವರು ಹೋದರೆ ಸ್ಪರ್ಧಿಗಳ ಸಂಖ್ಯೆ 11 ಆಗಲಿದೆ. ಕೇವಲ ಮೂರನೇ ವಾರಕ್ಕೆ ಸ್ಪರ್ಧಿಗಳ ಸಂಖ್ಯೆ ಇಷ್ಟು  ಕಡಿಮೆಯಾದರೆ ಮುಂದೆ ಕಷ್ಟವಾಗಲಿದೆ. ಹೀಗಾಗಿ ಎಕ್ಸಿಟ್‌ ಜೊತೆ ಜೊತೆಗೇ ಎಂಟ್ರಿ ಕೂಡ ಇರಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಎಮರ್ಜೆನ್ಸಿ ಎಕ್ಸಿಟ್ ಜೊತೆ, ಎಮರ್ಜೆನ್ಸಿ ಎಂಟ್ರಿ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ವೈಲ್ಡ್ ಕಾರ್ಡ್ ಗಳಾಗಿ ಬರುವ ಸ್ಪರ್ಧೀಗಳು ಯಾರು ಎಂಬ ಮಾಹಿತಿ ಕೂಡ ರಿವೀಲ್‌ ಆಗಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಇಂದು ಮನೆಯಿಂದ ಎಲಿಮಿನೇಟ್‌ ಆದವರಲ್ಲಿ ಇಬ್ಬರೂ ಸೆಲೆಬ್ರಿಗಳೇ ಎನ್ನಲಾಗಿದೆ. ಒಬ್ಬರು ಮಾತ್ರ ಕಾಮನ್‌ ಮ್ಯಾನ್‌ ಔಟ್‌ ಆಗಿದ್ದಾರಂತೆ. ಈ ಸಂದರ್ಭದಲ್ಲಿ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆದರೆ ಆಟದ ರೋಚಕತೆ ಮತ್ತಷ್ಟು ಹೆಚ್ಚಾಗಲಿದೆ. 

ಬಿಗ್ ಬಾಸ್ ಕನ್ನಡ ಶೋ ನಲ್ಲಿ ಇದೀಗ ಬಿಗ್‌ ಶಾಕ್‌ ಎದುರಾಗಿದ್ದು, ಮನೆಮಂದಿಗೆ ಎಮರ್ಜೆನ್ಸಿ ಎಕ್ಸಿಟ್ ಶಾಕ್ ನೀಡಲಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಮೂರನೇ ವಾರದ ಮಧ್ಯದಲ್ಲೇ ಮೂವರ ಎಲಿಮಿನೇಷನ್ ನಡೆದಿದೆ. ಯಾರು ಮನೆಯಿಂದ ಹೊರ ಹೋಗಿದ್ದಾರೆ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ. ಬಿಗ್‌ ಬಾಸ್‌ನಲ್ಲಿ ನಡೆದಿರುವ ಈ ಹಠಾತ್ ಎಮರ್ಜೆನ್ಸಿ ಎಕ್ಸಿಟ್ ನಿರ್ಧಾರದಿಂದಾಗಿ ಆಟದ ದಿಕ್ಕೇ ಸಂಪೂರ್ಣ ಬದಲಾಗಿದೆ.

Add Zee News as a Preferred Source
TAGS:
Bigg Boss Kannada Season 13