ಬಿಗ್ ಬಾಸ್ ಕನ್ನಡ 13: ಈ ವಾರದ ಟಾಸ್ಕ್‌ಗಳಲ್ಲಿ ಕೆಲ ನಿರ್ಣಯಗಳು ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿವೆ. ಕಣ್ತಪ್ಪಿನಿಂದಲೋ, ಬೈ ಮಿಸ್ ಆಗಿಯೋ ಕೆಲವು ಸ್ಪರ್ಧಿಗಳಿಗೆ ಅನ್ಯಾಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಚರ್ಚೆ ಇದೀಗ ಕ್ಯಾಪ್ಟನ್ಸಿ ಟಾಸ್ಕ್‌ಗೂ ತಲುಪಿದೆ.
ಎರಡನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸಂಗೀತಾ ಭಟ್ ಪೈಲಟ್ ಆಗಿದ್ದರೆ, ಆಸಿಯಾ ಫಿರ್ದೋಸ್ ಕೋ-ಪೈಲಟ್ ಆಗಿದ್ದರು. ಕೊನೆಗೆ ಇಬ್ಬರೂ ಕ್ಯಾಪ್ಟನ್ ರೇಸ್‌ನಲ್ಲಿ ಮುಖಾಮುಖಿಯಾಗಿದ್ದರು. ಆದರೆ ಟಾಸ್ಕ್ ಮುಗಿದ ಬಳಿಕ ಸಂಗೀತಾ ಭಟ್‌ಗೆ ಅನ್ಯಾಯವಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
ಏನಾಗಿತ್ತು ಕ್ಯಾಪ್ಟನ್ಸಿ ಟಾಸ್ಕ್?
ಬಿಗ್ ಬಾಸ್ ನೀಡಿದ್ದ ಟಾಸ್ಕ್‌ನಲ್ಲಿ ಅಭ್ಯರ್ಥಿಯ ಸಹಾಯಕರು ಏಣಿಗೆ ಕಟ್ಟಿರುವ ಹಗ್ಗಗಳನ್ನು ಎಳೆದಿಟ್ಟುಕೊಂಡು ಏಣಿಯನ್ನು ನೇರವಾಗಿ ನಿಲ್ಲಿಸಬೇಕಿತ್ತು. ಅಭ್ಯರ್ಥಿ ಏಣಿ ಏರಿದ ಬಳಿಕ, ಸಮತೋಲನ ಕಾಯ್ದುಕೊಂಡು ಏಣಿಯನ್ನು ಅಂತಿಮ ಸ್ಥಾನದತ್ತ ಕೊಂಡೊಯ್ಯಬೇಕಿತ್ತು. ಅಲ್ಲಿಂದ ಬಿಲ್ಲೆಗಳ ಚೀಲಗಳನ್ನು ತೆಗೆದುಕೊಂಡು ಮರಳಿ ಬಂದು, ಟ್ರ್ಯಾಕ್‌ನಲ್ಲಿ ಬಿಲ್ಲೆಗಳನ್ನು ಜೋಡಿಸಿ ಪ್ರತಿಸ್ಪರ್ಧಿಯ ಭಾವಚಿತ್ರ ಸ್ವಿಮ್ಮಿಂಗ್ ಪೂಲ್‌ಗೆ ಬೀಳುವಂತೆ ಉರುಳಿಸಬೇಕಿತ್ತು. ಈ ವೇಳೆ ಅಭ್ಯರ್ಥಿಯ ಸಹಾಯಕರು ಏಣಿಯನ್ನು ಮುಟ್ಟಬಾರದು ಎಂಬುದು ಪ್ರಮುಖ ನಿಯಮವಾಗಿತ್ತು.
ಯಾರ್ಯಾರು ಯಾವ ತಂಡದಲ್ಲಿದ್ದರು?
ಆಸಿಯಾ ಫಿರ್ದೋಸ್ ತಂಡದಲ್ಲಿ ಗಗನ್, ಯಶಸ್, ಜಗದೀಶ್ ಹಾಗೂ ಧನುಷ್ ಇದ್ದರು. ಸಂಗೀತಾ ಭಟ್ ತಂಡದಲ್ಲಿ ತಾಂಡವ್, ಕಾವ್ಯ, ಅವಿನಾಶ್ ಹಾಗೂ ಕಿರಣ್ ಶಾಸ್ತ್ರಿ ಆಡಿದರು. ಲಿಖಿತ್ ಟಾಸ್ಕ್‌ನ ಉಸ್ತುವಾರಿ ವಹಿಸಿದ್ದರು.
ಎರಡು ತಂಡಕ್ಕೂ ರೀಸ್ಟಾರ್ಟ್!
ಟಾಸ್ಕ್ ನಡೆಯುತ್ತಿದ್ದ ವೇಳೆ ಸಂಗೀತಾ ತಂಡದವರು ಏಣಿಯನ್ನು ಮುಟ್ಟಿದ ಹಿನ್ನೆಲೆಯಲ್ಲಿ ಲಿಖಿತ್ ಟಾಸ್ಕ್ ಅನ್ನು ಮೊದಲಿನಿಂದ ಆರಂಭಿಸಲು ಸೂಚಿಸಿದ್ದರು. ಮತ್ತೊಂದೆಡೆ ಆಸಿಯಾ ತಂಡದಲ್ಲೂ ಏಣಿ ಬೀಳುವ ಸಂದರ್ಭದಲ್ಲಿ ಧನುಷ್ ಅದನ್ನು ಹಿಡಿದಿದ್ದಕ್ಕೆ ಮತ್ತೆ ಮೊದಲಿನಿಂದ ಶುರು ಮಾಡಿಸಲಾಗಿತ್ತು.
ಆಸಿಯಾ ಲೈನ್ ಕ್ರಾಸ್ ಮಾಡಿದ್ದಾರಾ?
ಇಲ್ಲೇ ಇದೀಗ ಅಸಲಿ ಚರ್ಚೆ ಶುರುವಾಗಿದೆ. ಆಸಿಯಾ ಏಣಿಯನ್ನು ತೆಗೆದುಕೊಂಡು ಮುಂದೆ ಸಾಗುತ್ತಿದ್ದ ವೇಳೆ, ಲೈನ್ ಕ್ರಾಸ್ ಮಾಡುವ ಹಂತಕ್ಕೂ ಮುನ್ನವೇ ಅವರ ಬ್ಯಾಲೆನ್ಸ್ ತಪ್ಪಿದೆ. ಈ ವೇಳೆ ಗಗನ್ ಏಣಿಯನ್ನು ಹಿಡಿದಿದ್ದಾರೆ. ಆದರೆ ಆ ಕ್ಷಣದಲ್ಲಿ ಲೈನ್ ಇನ್ನೂ ಕ್ರಾಸ್ ಆಗಿರಲಿಲ್ಲ ಎಂಬುದು ಕೆಲ ನೆಟ್ಟಿಗರ ವಾದ. ಹೀಗಿದ್ದರೂ ಈ ವಿಚಾರವನ್ನು ಉಸ್ತುವಾರಿ ಲಿಖಿತ್ ಪ್ರಶ್ನಿಸದಿರುವುದು ಯಾಕೆ? ಎಂಬ ಪ್ರಶ್ನೆಯನ್ನೂ ವೀಕ್ಷಕರು ಎತ್ತುತ್ತಿದ್ದಾರೆ.
ಸಂಗೀತಾ ಭಟ್ ವಿಚಾರದಲ್ಲೂ ಪ್ರಶ್ನೆ
ಇನ್ನೊಂದೆಡೆ ಸಂಗೀತಾ ಭಟ್ ಬಿಲ್ಲೆಗಳನ್ನು ಬೀಳಿಸುವ ಸಂದರ್ಭದಲ್ಲಿ ಜೋರಾಗಿ ತಳ್ಳಿದ್ದು, ಕೆಲವು ಬಿಲ್ಲೆಗಳು ನೆಲದ ಮೇಲೆ ಬಿದ್ದಿರುವುದನ್ನು ಕೆಲ ವೀಕ್ಷಕರು ಗಮನಿಸಿದ್ದಾರೆ. ನಿಯಮದ ಪ್ರಕಾರ ಬಿಲ್ಲೆಗಳು ಹೇಗೆ ಬೀಳಬೇಕಿತ್ತೋ ಹಾಗೆ ಬೀಳಿಸಿಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ.
ಹೀಗಾಗಿ ಈ ಟಾಸ್ಕ್‌ನಲ್ಲಿ ಸಂಗೀತಾಗೆ ಅನ್ಯಾಯವಾಯಿತಾ? ಆಸಿಯಾ ತಂಡದ ತಪ್ಪು ನಿರ್ಲಕ್ಷ್ಯವಾಯಿತಾ? ಅಥವಾ ಟಾಸ್ಕ್‌ನ ನಿಯಮಗಳನ್ನೇ ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆಯಾ? ಎಂಬ ಪ್ರಶ್ನೆಗಳು ಇದೀಗ ಬಿಗ್ ಬಾಸ್ ವೀಕ್ಷಕರ ನಡುವೆ ಚರ್ಚೆಯಾಗುತ್ತಿವೆ. ಟಾಸ್ಕ್‌ನ ಸಂಪೂರ್ಣ ದೃಶ್ಯಗಳನ್ನು ಮತ್ತೊಮ್ಮೆ ಗಮನಿಸಿದರೆ ಮಾತ್ರ ಈ ಗೊಂದಲಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.
ಟಾಸ್ಕ್ ನಡೆಯುತ್ತಿದ್ದ ವೇಳೆ ಸಂಗೀತಾ ತಂಡದವರು ಏಣಿಯನ್ನು ಮುಟ್ಟಿದ ಹಿನ್ನೆಲೆಯಲ್ಲಿ ಲಿಖಿತ್ ಟಾಸ್ಕ್ ಅನ್ನು ಮೊದಲಿನಿಂದ ಆರಂಭಿಸಲು ಸೂಚಿಸಿದ್ದರು. ಮತ್ತೊಂದೆಡೆ ಆಸಿಯಾ ತಂಡದಲ್ಲೂ ಏಣಿ ಬೀಳುವ ಸಂದರ್ಭದಲ್ಲಿ ಧನುಷ್ ಅದನ್ನು ಹಿಡಿದಿದ್ದಕ್ಕೆ ಮತ್ತೆ ಮೊದಲಿನಿಂದ ಶುರು ಮಾಡಿಸಲಾಗಿತ್ತು.
ಬಿಗ್‌ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6, 2026ರಂದು ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಆರಂಭವಾಗಿದೆ. ಈ ಬಾರಿ ಒಟ್ಟು 16 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದು, ಸಿನಿಮಾ, ಕಿರುತೆರೆ, ಸೋಶಿಯಲ್ ಮೀಡಿಯಾ ಹಾಗೂ ‘ಬಿಗ್‌ಬಾಸ್ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾದ ಸ್ಪರ್ಧಿಗಳು ಇದ್ದಾರೆ.
ಇದೀಗ ಸೀಸನ್ 13ರಲ್ಲಿ ಸಂಗೀತಾ ಭಟ್ ಮೊದಲ ಕ್ಯಾಪ್ಟನ್/ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಮೊದಲ ಎಲಿಮಿನೇಷನ್ ಕೂಡ ನಡೆದಿದ್ದು, ಪ್ರಥಮಾ ಪ್ರಸಾದ್ ಮನೆಯಿಂದ ಹೊರಬಂದಿದ್ದಾರೆ.
ಸದ್ಯ ಬಿಗ್‌ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಭಾರೀ ಕುತೂಹಲ ಹೆಚ್ಚಾಗಿದೆ.