• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /Bigg Boss ಮನೆಯೊಳಗೆ ನಟಿ ವೈಷ್ಣವಿ ಕೌಂಡಿನ್ಯ ಮದುವೆ ಮಾತುಕತೆ: ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತು

Bigg Boss ಮನೆಯೊಳಗೆ ನಟಿ ವೈಷ್ಣವಿ ಕೌಂಡಿನ್ಯ ಮದುವೆ ಮಾತುಕತೆ: ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತು

Bigg Boss ಮನೆಯೊಳಗೆ ನಟಿ ವೈಷ್ಣವಿ ಕೌಂಡಿನ್ಯ ಮದುವೆ ಮಾತುಕತೆ ನಡೆದಿದೆ. ತಮ್ಮ ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Written ByRamya. R. Gowda
Published: Sep 17, 2026, 02:40 PM IST|Updated: Sep 17, 2026, 03:07 PM IST
joinshare
Bigg Boss ಮನೆಯೊಳಗೆ ನಟಿ ವೈಷ್ಣವಿ ಕೌಂಡಿನ್ಯ ಮದುವೆ ಮಾತುಕತೆ: ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತು

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಿಗ್‌ಬಾಸ್ ಮನೆಯೊಳಗೆ ಈಗ ಮದುವೆ ಮಾತುಕತೆ ಜೋರಾಗಿದೆ. ನಟಿ ವೈಷ್ಣವಿ ಕೌಂಡಿನ್ಯ ತಮ್ಮ ಮದುವೆ ಹಾಗೂ ಕನಸಿನ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹಾಗಾದ್ರೆ ವೈಷ್ಣವಿ ಮನಸ್ಸಿನಲ್ಲಿರುವ ಆ ಹುಡುಗ ಹೇಗಿರಬೇಕು? ಅವರ ಮಾತಿನಲ್ಲಿ ಮದುವೆ ಬಗ್ಗೆ ಏನೆಲ್ಲಾ ಆಸೆಗಳಿವೆ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ.


ಬಿಗ್‌ಬಾಸ್ ಮನೆ ಅಂದ್ಮೇಲೆ ಟಾಸ್ಕ್, ಜಗಳ, ಸ್ನೇಹ, ಎಮೋಷನ್‌ಗಳೇ ಹೆಚ್ಚು. ಆದರೆ ಇದೀಗ ಮನೆಯೊಳಗೆ ಮದುವೆ ವಿಚಾರವೂ ಸದ್ದು ಮಾಡಿದೆ. ನಟಿ ವೈಷ್ಣವಿ ಕೌಂಡಿನ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಹ ಸ್ಪರ್ಧಿಗಳೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆ ವಿಚಾರ ಬಂದಾಗ ವೈಷ್ಣವಿ, ತಮ್ಮ ಕನಸಿನ ಹುಡುಗ ಹೇಗಿರಬೇಕು ಎಂಬುದನ್ನೂ ಹಂಚಿಕೊಂಡಿದ್ದಾರೆ. ಕೇವಲ ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿತ್ವ, ಅರ್ಥಮಾಡಿಕೊಳ್ಳುವ ಗುಣ ಮತ್ತು ಪರಸ್ಪರ ಗೌರವ ಮುಖ್ಯ ಎಂಬ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಜೀವನ ಸಂಗಾತಿಯೊಂದಿಗೆ ಸ್ನೇಹದ ಬಾಂಧವ್ಯ ಇರಬೇಕು. ಯಾವುದೇ ವಿಚಾರವನ್ನು ಮುಕ್ತವಾಗಿ ಮಾತನಾಡಿಕೊಳ್ಳುವಂತಿರಬೇಕು. ಜೊತೆಗೆ ತಮ್ಮ ವೃತ್ತಿ ಹಾಗೂ ಕನಸುಗಳಿಗೆ ಬೆಂಬಲ ನೀಡುವ ವ್ಯಕ್ತಿಯಾಗಿರಬೇಕು ಎಂಬುದು ವೈಷ್ಣವಿ ಅವರ ನಿರೀಕ್ಷೆ ಆಗಿದೆ. ಬಿಗ್‌ಬಾಸ್ ಮನೆಯೊಳಗಿನ ಈ ಮದುವೆ ಮಾತುಕತೆ ಸಹಜವಾಗಿಯೇ ಕುತೂಹಲ ಮೂಡಿಸಿದೆ. ವೈಷ್ಣವಿ ಮನಸ್ಸಿನಲ್ಲಿರುವ ಕನಸಿನ ಹುಡುಗನ ಗುಣಗಳ ಬಗ್ಗೆ ಅವರು ಹೇಳಿಕೊಂಡ ಮಾತುಗಳು ಇದೀಗ ಚರ್ಚೆಗೆ ಕಾರಣವಾಗಿವೆ.


“ಮದುವೆ ಬಗ್ಗೆ ವೈಷ್ಣವಿ ಕೌಂಡಿನ್ಯ ಅವರ ಮನಸ್ಸಿನಲ್ಲಿರೋ ಮಾತುಗಳೇನು? ಅವರ ಕನಸಿನ ಹುಡುಗ ಹೇಗಿರಬೇಕು? ಬಿಗ್‌ಬಾಸ್ ಮನೆಯೊಳಗೆ ನಡೆದ ಈ ಇಂಟರೆಸ್ಟಿಂಗ್ ಮಾತುಕತೆಯ ಸಂಪೂರ್ಣ ವಿವರ ಇಲ್ಲಿದೆ.”
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯೊಳಗೆ ನಡೆದ ಈ ಮಾತುಕತೆ ವೈಷ್ಣವಿ ಅವರ ವೈಯಕ್ತಿಕ ಜೀವನದ ಬಗ್ಗೆ ಹೊಸ ಕುತೂಹಲ ಹುಟ್ಟಿಸಿದೆ.


ಹಾಗಾದ್ರೆ ಅವರ ಕನಸಿನ ಹುಡುಗನಿಗೆ ಇರಬೇಕಾದ ಆ ಗುಣಗಳೇನು?
* ಮಹಾರಾಣಿ ತರ ನೋಡಿಕೊಳ್ಳಬೇಕು 
ನನಗೆ ಮದುವೆಯಾಗಲು ಹುಡುಗ ಸಿಕ್ಕರೆ ಮದುವೆಯಾಗುತ್ತೇನೆ ಎಂದು ವೈಷ್ಣವಿ ಹೇಳಿದ್ದಾರೆ. ತಮಗೆ ಹುಡುಗ ಬೇಕು ಎನ್ನೋದನ್ನು ಹೇಳಿದ್ದಾರೆ ನನನ್ನು ಮಹಾರಾಣಿ ಥರ ನೋಡಿಕೊಳ್ಳಬೇಕು. ಹೃದಯದಲ್ಲಿ ಶ್ರೀಮಂತ ಆಗಿರಬೇಕು. ಗಂಡಸು ಎನ್ನುವ ಅಹಂಕಾರ ಮೊದಲೇ ಇರಬಾರದು ಎಂದಿದ್ದಾರೆ.

*ಮತ್ತೊಂದು ಗುಣ ಪಾತ್ರೆ ತೊಳೆಯಬೇಕು
ನಾವು ಮದುವೆ ಆದ ಮೇಲೆ ಇಬ್ಬರೂ ದುಡಿದು ಇಬ್ಬರೂ ಸಂಸಾರ ನಡೆಸಿಕೊಂಡು ಹೋಗಬೇಕು. ನಾನು ಅಡುಗೆ ಮಾಡಿದ್ರೆ ಅವನು ಪಾತ್ರೆ ತೊಳೆಯಬೇಕು. ಒಂದು ವೇಳೆ ಅವನು ಅಡುಗೆ ಮಾಡಿದ್ರೆ ನಾನು ಪಾತ್ರೆ ತೊಳೆಯುತ್ತೇನೆ ಎಂದು ವೈಷ್ಣವಿಯವರು ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.

ಯಾರೂ ಈ ವೈಷ್ಣವಿ 
ಅಂದ್ಹಾಗೆ ನಟಿ ವೈಷ್ಣವಿ  (Vaishnavi Koundilya) ಅವರ ಕುರಿತು ಹೇಳುವುದಾದರೆ,‘ಮಿಥನ ರಾಶಿ’ ಪ್ರೇಮ ಕಾವ್ಯ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಬಾಲ್ಯದಲ್ಲೇ ತಂದೆಯಿಂದ ದೂರವಾಗಿ, ತಾಯಿ-ಅಜ್ಜಿಯ ಜೊತೆ ಬೆಳೆದ ವೈಷ್ಣವಿ, ಕೇವಲ 16ನೇ ವಯಸ್ಸಿಗೆ ನಾಯಕಿಯಾಗಿ, ಕನ್ನಡದ ಜೊತೆಗೆ ತಮಿಳು-ಮಲಯಾಳಂ ಕಿರುತೆರೆಯಲ್ಲೂ ಗುರುತಿಸಿಕೊಂಡವರು.

ಬಿಗ್‌ಬಾಸ್ ಮನೆ ಅಂದ್ರೆ ಕೇವಲ ಟಾಸ್ಕ್, ಜಗಳ, ಮನರಂಜನೆ ಮಾತ್ರವಲ್ಲ.. ಸ್ಪರ್ಧಿಗಳ ವೈಯಕ್ತಿಕ ಜೀವನದ ಮಾತುಗಳಿಗೂ ವೇದಿಕೆಯಾಗುತ್ತೆ. ಇದೀಗ ಇದೇ ಮನೆಯಲ್ಲಿ ನಟಿ ವೈಷ್ಣವಿ ಕೌಂಡಿನ್ಯ ತಮ್ಮ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.

 ಸಹ ಸ್ಪರ್ಧಿಗಳ ಜೊತೆಗಿನ ಮಾತುಕತೆಯಲ್ಲಿ ವೈಷ್ಣವಿ, ತಮ್ಮ ಮದುವೆ ಬಗ್ಗೆ ಇರುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ತಮ್ಮ ಕನಸಿನ ಹುಡುಗ ಹೇಗಿರಬೇಕು ಅನ್ನೋದನ್ನೂ ಓಪನ್ ಆಗಿ ಹೇಳಿದ್ದಾರೆ.


ತಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಬೇಕು.. ಗೌರವ ಕೊಡುವ ಮನಸ್ಸಿರಬೇಕು.. ಕಷ್ಟ-ಸುಖದಲ್ಲಿ ಜೊತೆಯಾಗಿರಬೇಕು ಅನ್ನೋ ರೀತಿಯಲ್ಲಿ ವೈಷ್ಣವಿ ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಅನ್ನೋದು ಕೇವಲ ಸಂಬಂಧವಲ್ಲ, ಪರಸ್ಪರ ಅರ್ಥ ಮಾಡಿಕೊಂಡು ಜೀವನ ಸಾಗಿಸುವ ಬಂಧ ಅನ್ನೋ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. 

ಇನ್ನು ಬಿಗ್‌ಬಾಸ್ ಮನೆಯೊಳಗೆ ವೈಷ್ಣವಿ ಈ ಮಾತು ಹೇಳುತ್ತಿದ್ದಂತೆ, ಜೊತೆಗಿದ್ದ ಸ್ಪರ್ಧಿಗಳಿಂದಲೂ ಕುತೂಹಲದ ಪ್ರಶ್ನೆಗಳು ಕೇಳಿಬಂದಿವೆ.

 ಮದುವೆ ಯಾವಾಗ? ನಿಮಗೆ ಬೇಕಾಗಿರುವ ಹುಡುಗ ಹೇಗಿರಬೇಕು? ಅನ್ನೋ ಪ್ರಶ್ನೆಗಳಿಗೆ ವೈಷ್ಣವಿ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಸದ್ಯ ವೈಷ್ಣವಿ ಕೌಂಡಿನ್ಯ ಅವರ ಈ ಮದುವೆ ಮಾತುಕತೆ ಬಿಗ್‌ಬಾಸ್ ವೀಕ್ಷಕರ ಗಮನ ಸೆಳೆದಿದೆ. ಅವರ ಕನಸಿನ ಹುಡುಗನ ಬಗ್ಗೆ ಹೇಳಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಯಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯೊಳಗೆ ಟಾಸ್ಕ್‌ಗಳ ನಡುವೆ ವೈಷ್ಣವಿ ಕೌಂಡಿನ್ಯ ಅವರ ಮದುವೆ ಮಾತು ಈಗ ಹೊಸ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ ವೈಷ್ಣವಿ ಮನಸ್ಸು ಗೆಲ್ಲೋ ಆ ಕನಸಿನ ಹುಡುಗ ಯಾರು? ಅನ್ನೋದು ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಟರೆಸ್ಟಿಂಗ್ ಆಗಲಿದೆ.

 

ಬಿಗ್‌ಬಾಸ್‌ ಬಗ್ಗೆ ಪ್ರಥಮಾ ಪ್ರಸಾದ್ ಮಾತು
ಕನ್ನಡ ನಟಿ ಮತ್ತು ಬಿಗ್ ಬಾಸ್ ಕನ್ನಡ 13 ರ ಸ್ಪರ್ಧಿ ಪ್ರಥಮಾ ಪ್ರಸಾದ್ ಅವರು ರಿಯಾಲಿಟಿ ಶೋನಿಂದ ಅನಿರೀಕ್ಷಿತವಾಗಿ ಹೊರಹಾಕಲ್ಪಟ್ಟ ಬಗ್ಗೆ, ಬಿಗ್ ಬಾಸ್ ಮನೆಯೊಳಗಿನ ಅನುಭವಗಳ ಬಗ್ಗೆ ಮತ್ತು ಕಾರ್ಯಕ್ರಮದಲ್ಲಿನ ಅಲ್ಪಾವಧಿಯ ಅವಧಿಯಲ್ಲಿ ಅವರ ನಡವಳಿಕೆಯ ಸುತ್ತಲಿನ ತಪ್ಪು ವ್ಯಾಖ್ಯಾನಗಳ ಬಗ್ಗೆ ಮಾತನಾಡಿದ್ದಾರೆ. 

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ನಟಿ ತಮ್ಮ ನಿರ್ಗಮನದ ನಕಾರಾತ್ಮಕ ಅಂಶಗಳ ಬಗ್ಗೆ ಹೆಚ್ಚು ಗಮನಹರಿಸಲು ಬಯಸುವುದಿಲ್ಲ ಎಂದು ಸಮರ್ಥಿಸಿಕೊಂಡರು ಮತ್ತು ಅವರ ಬಿಗ್ ಬಾಸ್ ಪ್ರಯಾಣವನ್ನು "ಮಾಂತ್ರಿಕ, ಶ್ರೀಮಂತ ಅನುಭವ " ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ತನ್ನ ನಿರ್ಧಾರದ ಬಗ್ಗೆ ಮಾತನಾಡಿದ ಪ್ರಥಮಾ, ಉದ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ ತಾನು ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. 

"ನಾನು ಮೊದಲು ಬಿಗ್ ಬಾಸ್ ಕನ್ನಡ 13 ರಲ್ಲಿ ಭಾಗವಹಿಸಲು ಯೋಚಿಸಿದಾಗ, ನಾನು ಒಂದು ವರ್ಷದ ವೃತ್ತಿಜೀವನದ ವಿರಾಮದಿಂದ ಹೊರಬರುತ್ತಿದ್ದೆ.ವಿರಾಮ ತೆಗೆದುಕೊಳ್ಳುವ ಬಗ್ಗೆ ಉದ್ದೇಶಪೂರ್ವಕ ನಿರ್ಧಾರವಾಗಿರಲಿಲ್ಲ, ಆದರೆ ಅದು ಸಂಭವಿಸಿತು. ಇದು ನನಗೆ ಸ್ವಲ್ಪ ಬೇಸರ ತರಿಸುತ್ತಿತ್ತು. ನಾನು 17 ನೇ ವಯಸ್ಸಿನಿಂದಲೂ ಕೆಲಸ ಮಾಡುತ್ತಿದ್ದೇನೆ ಮತ್ತು ಇಷ್ಟು ದೀರ್ಘ ವಿರಾಮ ತೆಗೆದುಕೊಳ್ಳುವುದು ನಾನು ಎಂದಿಗೂ ಯೋಜಿಸಿರಲಿಲ್ಲ ಅಥವಾ ಬಯಸಿರಲಿಲ್ಲ.

ಪ್ರತಿದಿನ, ನಾನು ಏನಾದರೂ ದೊಡ್ಡದನ್ನು ಪ್ರದರ್ಶಿಸುತ್ತಿದ್ದೆ,ಮತ್ತು ಆಗ ಬಿಗ್ ಬಾಸ್ ನನ್ನ ದಾರಿಗೆ ಬಂದಿತು." ಈ ಕಾರ್ಯಕ್ರಮಕ್ಕಾಗಿ ತಮ್ಮನ್ನು ಸಂಪರ್ಕಿಸಿದ್ದು ಇದೇ ಮೊದಲಲ್ಲ ಎಂದು ನಟಿ ಬಹಿರಂಗಪಡಿಸಿದರು. ಆದಾಗ್ಯೂ, ವೃತ್ತಿಪರ ಬದ್ಧತೆಗಳು ಮತ್ತು ಅವರ ಮಗುವಿನ ಚಿಕ್ಕ ವಯಸ್ಸು ಈ ಪ್ರಸ್ತಾಪವನ್ನು ಮೊದಲೇ ಸ್ವೀಕರಿಸಲು ಅವರಿಗೆ ಅಡ್ಡಿಯಾಗಿತ್ತು.

 

 

 

 



 

Add Zee News as a Preferred Source
TAGS:
Bigg Boss Kannada Season 13