SOCIAL MEDIA

Newsletter

PARTNER SITES
Select Language Select State

BBK 13: ತಾಂಡವ್‌ನ ಎಲಿಮಿನೇಟ್‌ ಮಾಡಿಸಿ ʻಲೈಫ್‌ಟೈಮ್ ರಿಗ್ರೆಟ್‌ ಇದುʼ ಎಂದು ಕಣ್ಣೀರು ಇಟ್ಟ ಧನುಷ್!

Thandav ram evicted dhanush regrets: ಬಿಗ್‌ಬಾಸ್‌ ಮನೆಯಿಂದ ಮಿಡ್‌ ನೈಟ್‌ ಮನೆಯಿಂದ ಹೊರಬಂದಿರುವ ತಾಂಡವ್‌ ರಾಮ್‌ ಬಗ್ಗೆ ನೆನೆದು ಕಾಮನ್‌ಮ್ಯಾನ್‌ ಸ್ಪರ್ಧಿ ಧನುಷ್‌ ಕಣ್ಣೀರು ಇಟ್ಟಿದ್ದಾರೆ.

Written By Ramya. R. Gowda
Published: Sep 25, 2026, 02:05 PM IST | Updated: Sep 25, 2026, 02:20 PM IST
Join

Thandav ram evicted dhanush regrets: ಬಿಗ್ ಬಾಸ್ ಕನ್ನಡ ಸೀಸನ್ 13ರ ಮೂರನೇ ವಾರದ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. ಆಟದಲ್ಲಿ ಗೆದ್ದು ವಿಶೇಷ ಅಡ್ವಾಂಟೇಜ್ ಪಡೆದ ನಾಲ್ವರು ಸ್ಪರ್ಧಿಗಳು ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ನಡೆಸಿದ ಲೆಕ್ಕಾಚಾರವೇ, ಕೊನೆಗೆ ತಾಂಡವ್ ರಾಮ್ ಅವರ ಎಲಿಮಿನೇಷನ್‌ಗೆ ಕಾರಣವಾಗಿದೆ. ಅದರಲ್ಲೂ ತಾಂಡವ್‌ಗೆ ವೋಟ್ ನೀಡಿದ ಧನುಷ್‌ಗೆ ಇದೀಗ ತಾನು ಮಾಡಿದ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಕಾಡುತ್ತಿದೆ. ತಾಂಡವ್ ಹೊರಹೋಗುವ ವೇಳೆ ಧನುಷ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಏನಿದು ವೋಟ್ ಲೆಕ್ಕಾಚಾರ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.


ಬಿಗ್ ಬಾಸ್ ಮನೆ ಕೇವಲ ಆಟ ಅಲ್ಲ ಇಲ್ಲಿ ಪ್ರತಿಯೊಂದು ಟಾಸ್ಕ್‌, ಪ್ರತಿಯೊಂದು ನಿರ್ಧಾರವೂ ಸ್ಪರ್ಧಿಗಳ ಆಟದ ಮೇಲೆ ಪರಿಣಾಮ ಬೀರುತ್ತೆ. ಅದರಲ್ಲೂ ಕೆಲವೊಂದು ನಿರ್ಧಾರಗಳು ಗೆಲುವಿನ ಹಾದಿ ತೋರಿಸಿದ್ರೆ, ಇನ್ನು ಕೆಲವು ನಿರ್ಧಾರಗಳು ಜೀವನಪೂರ್ತಿ ಮರೆಯಲಾಗದ ರಿಗ್ರೆಟ್ ಆಗಿ ಉಳಿದುಬಿಡುತ್ತವೆ. ಅಂತಹದ್ದೇ ಒಂದು ಘಟನೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ನಡೆದಿದೆ. ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದ ಆಸಿಯಾ, ಧನುಷ್, ಕಿರಣ್ ಶಾಸ್ತ್ರಿ ಹಾಗೂ ಕಾವ್ಯ ಅವರಿಗೆ ಬಿಗ್ ಬಾಸ್ ವಿಶೇಷ ಅಡ್ವಾಂಟೇಜ್ ನೀಡಿದ್ದರು.

ನಾಮಿನೇಷನ್‌ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಮನೆಯಲ್ಲಿರುವ ಸ್ಪರ್ಧಿಗಳಿಂದ ತಲಾ 50 ಪರ್ಸೆಂಟ್ ವೋಟ್ ಪಡೆಯುವ ಅವಕಾಶ ಈ ನಾಲ್ವರಿಗೆ ಸಿಕ್ಕಿತ್ತು. ಆದರೆ ಯಾರಿಂದ ವೋಟ್ ಪಡೆಯಬೇಕು ಅನ್ನೋ ಲೆಕ್ಕಾಚಾರದಲ್ಲಿ ಒಂದು ಸಣ್ಣ ತಪ್ಪಾದರೂ ಮತ್ತೊಬ್ಬ ಸ್ಪರ್ಧಿಯ ಎಲಿಮಿನೇಷನ್‌ಗೆ ಕಾರಣವಾಗಬಹುದಿತ್ತು. 

ಇದೇ ವೇಳೆ ಕಾವ್ಯ ಅವರು ಜಗ್ಗ ಮಮ್ಮಿಗೆ ಹೆಚ್ಚು ವೋಟ್ ಸಿಗುವ ಸಾಧ್ಯತೆ ಇದೆ ಎಂದು ಲೆಕ್ಕ ಹಾಕಿದ್ರು. ಇತ್ತ ಲಿಖಿತ್ ಅವರನ್ನು ಹೊರ ಕಳುಹಿಸುವ ಲೆಕ್ಕಾಚಾರದಲ್ಲಿ ಆಸಿಯಾ ತಮ್ಮದೇ ತಂತ್ರ ಹೆಣೆದರು. ಸೌಂದರ್ಯ ಅವರಿಂದ ಕಿರಣ್ ಶಾಸ್ತ್ರಿ 50 ಪರ್ಸೆಂಟ್ ವೋಟ್ ಪಡೆದುಕೊಂಡರು.


ಆದ್ರೆ ಇಲ್ಲಿ ಧನುಷ್ ಮಾಡಿದ ಒಂದು ಲೆಕ್ಕಾಚಾರವೇ ಇಡೀ ಆಟವನ್ನೇ ಬದಲಿಸಿತು. ತಾಂಡವ್ ರಾಮ್ ಅವರಿಗೆ ಹೆಚ್ಚು ವೋಟ್ ಬಂದಿರಬಹುದು ಎಂದು ಅಂದಾಜಿಸಿದ ಧನುಷ್, ತಾಂಡವ್ ಅವರಿಂದಲೇ 50 ಪರ್ಸೆಂಟ್ ವೋಟ್ ಪಡೆದುಕೊಂಡರು.  ಆದರೆ ಧನುಷ್ ತಮ್ಮನ್ನು ಸೇಫ್ ಮಾಡಿಕೊಳ್ಳಲು ತೆಗೆದುಕೊಂಡ ಈ ನಿರ್ಧಾರವೇ ತಾಂಡವ್ ರಾಮ್ ಅವರ ಎಲಿಮಿನೇಷನ್‌ಗೆ ಪ್ರಮುಖ ಕಾರಣವಾಯ್ತು ಕೊನೆಗೆ ತಾಂಡವ್ ಬಿಗ್ ಬಾಸ್ ಮನೆಯಿಂದ ಹೊರನಡೆಯಬೇಕಾದ ಪರಿಸ್ಥಿತಿ ಎದುರಾಯ್ತು.


ತಾಂಡವ್ ಹೊರಹೋಗುವ ಕ್ಷಣ ನೋಡಿದ ಧನುಷ್‌ ಅವರಿಗೆ ತಮ್ಮ ನಿರ್ಧಾರದ ಗಿಲ್ಟ್ ಕಾಡಿದೆ. ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತ ಧನುಷ್, “ನನ್ನ ಲೈಫ್‌ನಲ್ಲೇ ಮರೆಯೋಕಾಗದೇ ಇರುವಂತಹ ರಿಗ್ರೆಟ್ ಇದು” ಎಂದು ಕಣ್ಣೀರಿಟ್ಟಿದ್ದಾರೆ.


ಆದರೆ  ಇದೇ ಸಂದರ್ಭದಲ್ಲಿ ತಾಂಡವ್ ತೋರಿದ ಕ್ರೀಡಾಸ್ಫೂರ್ತಿ ಎಲ್ಲರ ಗಮನ ಸೆಳೆಯಿತು. ತಮಗೆ ಅನ್ಯಾಯವಾಗಿದೆ ಎಂದು ಬೇಸರಿಸದೆ, ಧನುಷ್‌ಗೆ ಸಮಾಧಾನ ಹೇಳಿದ ತಾಂಡವ್, “ಏನೂ ಬೇಜಾರಿಲ್ಲ ಧನುಷ್, ಖುಷಿಯಾಗಿ ಮುಂದಿನ ಆಟವನ್ನ ಆಡು” ಎಂದು ಹೇಳಿ ಬಿಗ್‌ಬಾಸ್‌ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಒಬ್ಬರನ್ನ ಸೇಫ್ ಮಾಡಿಕೊಳ್ಳುವ ಲೆಕ್ಕಾಚಾರ.. ಮತ್ತೊಬ್ಬರ ಎಲಿಮಿನೇಷನ್‌ಗೆ ಕಾರಣವಾಯ್ತು. ಧನುಷ್‌ಗೆ ಸಿಕ್ಕಿದ್ದು ಮಾತ್ರ ಮರೆಯಲಾಗದ ರಿಗ್ರೆಟ್. ಸದ್ಯ ತಾಂಡವ್ ಮತ್ತು ಧನುಷ್ ನಡುವಿನ ಈ ಭಾವನಾತ್ಮಕ ಕ್ಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ  ವೈರಲ್ ಆಗ್ತಿದೆ.


ಇತ್ತ ಜೀವದ ಗೆಳೆಯ ಗಗನ್‌ ಚಿನ್ನಪ್ಪ ತಾಂಡವ್‌ ರಾಮ್‌ ಮನೆಯಿಂದ ಎಕ್ಸಿಟ್‌ ಆಗುವುದು ಊಹಿಸಿಕೊಳ್ಳುವುದಕ್ಕೆ ಆಗದೇ ಚಿಕ್ಕ ಮಗುವಿನ ರೀತಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ..ತಾಂಡವ್‌ ರಾಮ್‌ ಅವರನ್ನು ಗಟ್ಟಿಯಾಗಿ ಬಿಗಿದಪ್ಪಿ ಅತ್ತಿದ್ದಾರೆ ಬಳಿಕ ಅಳುತ್ತಲೇ ತಾಂಡವ್‌ ರಾಮ್‌ ವ್ಯಕ್ತಿತ್ವ ಹೇಗೆ ಅನ್ನೋದನ್ನು ಮನೆಮಂದಿಗೆ ವಿವರಿಸಿದ್ದಾರೆ. ಇತ್ತ ತಾಂಡವ್‌ರಾಮ್‌ ಕೂಡ ತನ್ನ ಸ್ನೇಹಿತ ಗಗನ್‌ ತುಂಬಾ ಸಾಫ್ಟ್‌ ಇದ್ದಾನೆ ಆತನನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಿ ಎಂದು ಮನೆಮಂದಿಯಲ್ಲಿ ರಿಕ್ವೆಸ್ಟ್‌ ಮಾಡಿರೋದು ಇವರ ಇಬ್ಬರ ನಡುವಿನ ಸ್ನೇಹ ಎಂಥಹದ್ದು, ಅನ್ನೋದಕ್ಕೆ ಸಾಕ್ಷಿಯಾಗಿದೆ.


ಒಟ್ಟಾರೆಯಾಗಿ ಬಿಗ್‌ಬಾಸ್‌ ಮನೆಯಿಂದ ತಾಂಡವ್‌ ರಾಮ್‌ ಎಲಿಮಿನೇಟ್‌ ಅಗಿದ್ದು, ಪ್ರೇಕ್ಷಕರು ಹಾಗೂ ಫ್ಯಾನ್ಸ್‌ ಇದು ತಾಂಡವ್‌ ರಾಮ್‌ಗೆ ಮಾಡಿದ್ದ ಅನ್ಯಾಯವೆಂದು ಬಿಗ್‌ಬಾಸ್‌ ಮೇಲೆ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES