SOCIAL MEDIA

Newsletter

PARTNER SITES
Select Language Select State

ಈ ಬಾರಿ ಬಿಗ್‌ ಬಾಸ್‌ನಲ್ಲಿ ಮೊದಲ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಯಾರಿಗೆ?

ಪ್ರತಿ ವಾರ ಉತ್ತಮವಾಗಿ ಆಡಿದ ಸ್ಪರ್ಧಿಗೆ ನೀಡಲಾಗುವ ‘ಕಿಚ್ಚನ ಚಪ್ಪಾಳೆ’ಯನ್ನು ಈ ಬಾರಿ ಯಾರಿಗೆ ನೀಡಿದ್ದಾರೆ ಇಲ್ಲಿ ತಿಳಿಯಿರಿ...

Reported By Chetana Devarmani Written By Chetana Devarmani
Published: Sep 20, 2026, 03:42 PM IST | Updated: Sep 20, 2026, 03:44 PM IST
Join

Bigg Boss Kannada Season 13 Sudeep Kichchana Chappale: ಬಿಗ್ ಬಾಸ್ ಕನ್ನಡ ಸೀಸನ್ 13ರ ಎರಡನೇ ವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆ ಭರ್ಜರಿಯಾಗಿ ಮುಕ್ತಾಯಗೊಂಡಿದೆ. ವಾರವಿಡೀ ಮನೆಯೊಳಗೆ ನಡೆದ ಘಟನೆಗಳು, ಸ್ಪರ್ಧಿಗಳ ನಡುವಿನ ಗಲಾಟೆ, ಮಾತಿನ ಚಕಮಕಿ ಹಾಗೂ ನಿಯಮ ಉಲ್ಲಂಘನೆಗಳ ಬಗ್ಗೆ ಕಿಚ್ಚ ಸುದೀಪ್ ಅವರು ಪಂಚಾಯ್ತಿಯಲ್ಲಿ ಚರ್ಚಿಸಿದ್ದಾರೆ. ಆದರೆ ಈ ವಾರದ ಕೊನೆಯಲ್ಲಿ ನಡೆದ ಒಂದು ಸಂಗತಿ ಮಾತ್ರ ಎಲ್ಲರ ಗಮನ ಸೆಳೆದಿದೆ. ಪ್ರತಿ ವಾರ ಉತ್ತಮವಾಗಿ ಆಡಿದ ಸ್ಪರ್ಧಿಗೆ ನೀಡಲಾಗುವ ‘ಕಿಚ್ಚನ ಚಪ್ಪಾಳೆ’ಯನ್ನು ಈ ಬಾರಿ ಯಾವುದೇ ಸ್ಪರ್ಧಿಗೂ ನೀಡಲಾಗಿಲ್ಲ. ಬದಲಿಗೆ ಕಿಚ್ಚ ಸುದೀಪ್ ಅವರು ಕರ್ನಾಟಕದ ಜನತೆ ಹಾಗೂ ಬಿಗ್ ಬಾಸ್ ವೀಕ್ಷಕರಿಗೆ ಚಪ್ಪಾಳೆ ಸಲ್ಲಿಸಿದ್ದಾರೆ. ಈ ಮೂಲಕ ಸೀಸನ್ 13ರ ಮೊದಲ ‘ಕಿಚ್ಚನ ಚಪ್ಪಾಳೆ’ಯೇ ವಿಶೇಷವಾಗಿತ್ತು.

ಎರಡನೇ ವಾರದಲ್ಲಿ ಬಿಗ್ ಬಾಸ್ ಮನೆಯೊಳಗಿನ ವಾತಾವರಣದ ಬಗ್ಗೆ ಸುದೀಪ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾರಪೂರ್ತಿ ಹಲವು ಸ್ಪರ್ಧಿಗಳ ಮಾತು ಮತ್ತು ವರ್ತನೆಗಳು ಚರ್ಚೆಗೆ ಕಾರಣವಾಗಿದ್ದವು. ಕಿರಣ್ ಶಾಸ್ತ್ರಿ ಅವರ ಮಾತಿನ ಶೈಲಿ, ಮಾಡ್ರನ್ ಮಹಾಕವಿ ಮಂಜ ಅವರ ಕೆಲವು ವರ್ತನೆಗಳು ಹಾಗೂ ಇತರ ಸ್ಪರ್ಧಿಗಳ ನಡುವಿನ ಸಂಘರ್ಷಗಳು ವೀಕೆಂಡ್ ಪಂಚಾಯ್ತಿಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾದವು. ಲಿಖಿತ್ ಅವರ ಊಟದ ವಿಚಾರ, ಧನುಷ್ ಅವರ ಜಗಳ ಸೇರಿದಂತೆ ಮನೆಯೊಳಗಿನ ಹಲವು ಘಟನೆಗಳ ಬಗ್ಗೆಯೂ ಸುದೀಪ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಶೋ ಅನ್ನು ವೀಕ್ಷಿಸುತ್ತಿರುವ ಪ್ರೇಕ್ಷಕರು ಇಂತಹ ಪರಿಸ್ಥಿತಿಗಳನ್ನು ಸಹಿಸಿಕೊಂಡು ಕಾರ್ಯಕ್ರಮ ನೋಡುತ್ತಿರುವುದಕ್ಕೆ ಸುದೀಪ್ ಅವರು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂಚಾಯ್ತಿಯಲ್ಲಿ ಮಾಡ್ರನ್ ಮಹಾಕವಿ ಮಂಜ ಅವರ ವಯಸ್ಸಿನ ವಿಚಾರವೂ ಪ್ರಸ್ತಾಪವಾಯಿತು. ಮಂಜ ಅವರಿಗೆ 26 ವರ್ಷ ಎಂದು ತಿಳಿಸಿದಾಗ, ಸುದೀಪ್ ಅವರು ತಮ್ಮ ಸಿನಿಮಾ ‘ಸ್ಪರ್ಶ’ ಬಿಡುಗಡೆಯಾದ ವರ್ಷದಲ್ಲೇ ಮಂಜ ಹುಟ್ಟಿರುವುದಾಗಿ ಹೇಳುವ ಮೂಲಕ ಅವರ ಮಾತು-ವರ್ತನೆ ಕುರಿತು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಅದೇ ರೀತಿ ಕಿರಣ್ ಶಾಸ್ತ್ರಿ ಅವರ ವಯಸ್ಸನ್ನು ಕೇಳಿದಾಗ ಅವರು 23 ವರ್ಷ ಎಂದು ಉತ್ತರಿಸಿದ್ದಾರೆ. ಇದಕ್ಕೆ ಸುದೀಪ್ ಅವರು, ಅವರು ಹುಟ್ಟುವ ವೇಳೆಗೆ ತಾವು ಈಗಾಗಲೇ ಬೇರೆ ಭಾಷೆಗಳಲ್ಲೂ ನಟಿಸುತ್ತಿದ್ದುದಾಗಿ ಹೇಳಿ, ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳುವ ಸಂದೇಶ ನೀಡಿದ್ದಾರೆ.

ವಾರದ ಅಂತ್ಯದಲ್ಲಿ ಸುದೀಪ್ ಅವರು ಕರ್ನಾಟಕದ ಜನತೆಗೆ ಹಾಗೂ ಬಿಗ್ ಬಾಸ್ ವೀಕ್ಷಕರಿಗೆ ಚಪ್ಪಾಳೆ ಸಲ್ಲಿಸಿದ್ದಾರೆ. ಮನೆಯೊಳಗಿನ ಕೆಲವು ಘಟನೆಗಳ ಬಗ್ಗೆ ಮಾತನಾಡುತ್ತಾ, “ಕೆಲವು ನಾವು ಆಗೋಕೆ ಬಿಡಲ್ಲ” ಎಂಬ ಮಾತನ್ನೂ ಹೇಳಿದ್ದಾರೆ. ಸುದೀಪ್ ಅವರ ಈ ಮಾತು ಇದೀಗ ಬಿಗ್ ಬಾಸ್ ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಸ್ಪರ್ಧಿಯೊಬ್ಬರ ಆಟ ಅಥವಾ ವರ್ತನೆಯನ್ನು ಮೆಚ್ಚಿ ನೀಡಲಾಗುವ ‘ಕಿಚ್ಚನ ಚಪ್ಪಾಳೆ’ ಈ ಬಾರಿ ವೀಕ್ಷಕರಿಗೆ ಸಿಕ್ಕಿರುವುದು ಸೀಸನ್ 13ರ ಎರಡನೇ ವಾರದ ವಿಶೇಷ ಸಂಗತಿಯಾಗಿ ಪರಿಣಮಿಸಿದೆ. ಎರಡನೇ ವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಅವರು ಮನೆಯೊಳಗಿನ ಹಲವು ಬೆಳವಣಿಗೆಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದು, ಕೊನೆಯಲ್ಲಿ ಯಾವುದೇ ಸ್ಪರ್ಧಿಗೆ ಚಪ್ಪಾಳೆ ನೀಡದೆ ಕರ್ನಾಟಕದ ಜನತೆ ಮತ್ತು ಬಿಗ್ ಬಾಸ್ ವೀಕ್ಷಕರಿಗೆ ಗೌರವ ಸಲ್ಲಿಸಿರುವುದು ಈ ವಾರದ ಪ್ರಮುಖ ಹೈಲೈಟ್ ಆಗಿದೆ.

 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES