SOCIAL MEDIA

Newsletter

PARTNER SITES
Select Language Select State

ಮಂಜ-ಸೌಂದರ್ಯ ಶೆಟ್ಟಿ ಮದುವೆ..! ಆ ವಿಚಾರ ಹೇಳುತ್ತಲೇ "ಛೀ.. ಬೇಡ" ಎಂದು ನಾಚಿದ ಕರಾವಳಿ ಕುವರಿ

BBK 13 Updates : ಇಷ್ಟು ದಿನ ಶತ್ರುಗಳಂತೆ ವರ್ತಿಸುತ್ತಿದ್ದ ಮಾಡ್ರನ್ ಮಹಾಕವಿ ಮಂಜ ಹಾಗೂ ಸೌಂದರ್ಯ ಶೆಟ್ಟಿ ಇದೀಗ ಆತ್ಮೀಯರಾಗಿದ್ದಾರೆ. ಅಷ್ಟೇ ಅಲ್ಲದೆ, ಮದುವೆ, ಮಗು ಮಾಡಿಕೊಳ್ಳುವ ಬಗ್ಗೆಯೂ ಮಾತನಾಡಿದ್ದಾರೆ. ಈ ಕುರಿತ ಇಂಟ್ರೆಸ್ಟಿಂಗ್‌ ವಿಚಾರ ಇಲ್ಲಿದೆ..

Reported By Krishna NK Written By Krishna NK
Published: Sep 24, 2026, 06:50 PM IST | Updated: Sep 24, 2026, 06:55 PM IST
Image Credit: Bigg Boss Kannada Season 13
Join

Bigg Boss Kannada Season 13 : ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ ಕನ್ನಡ ಸೀಸನ್ 13'ರ ಮನೆಯಲ್ಲಿ ದಿನಕ್ಕೊಂದು ವಿಚಿತ್ರ ತಿರುವುಗಳು ಸಿಗುತ್ತಿವೆ. ಎಲಿಮಿನೇಷನ್ ಭೀತಿ, ಸ್ಪರ್ಧಿಗಳ ನಡುವಿನ ಕಚ್ಚಾಟ, ತೀವ್ರ ಪೈಪೋಟಿಗಳ ನಡುವೆಯೂ ಆಗಾಗ್ಗೆ ನಡೆಯುವ ಹಾಸ್ಯದ ಸನ್ನಿವೇಶಗಳು ವೀಕ್ಷಕರಿಗೆ ಉತ್ತಮ ರಂಜನೆ ನೀಡುತ್ತಿವೆ. ಇತ್ತೀಚೆಗಷ್ಟೇ ತೀವ್ರ ಸ್ವರೂಪದ ವಾಗ್ವಿವಾದ ನಡೆಸಿ ಬಿಗ್‌ಬಾಸ್ ಜೈಲು ಶಿಕ್ಷೆಗೆ ಗುರಿಯಾಗಿದ್ದ 'ಮಾಡ್ರನ್ ಮಹಾಕವಿ' ಮಂಜ ಹಾಗೂ ಸೌಂದರ್ಯ ಶೆಟ್ಟಿ, ಈಗ ಹಳೆಯ ವೈಮನಸ್ಯ ಹಾಗೂ ಕೋಪವನ್ನು ಮರೆತು ಒಂದಾಗಿದ್ದಾರೆ. ಇವರಿಬ್ಬರ ರಾಜಿಯಾದ ಬಳಿಕ ಸಹ-ಸ್ಪರ್ಧಿ ಅವಿನಾಶ್ ಮಾಡಿದ ತಮಾಷೆಯ ಮಾತುಗಳು ಈಗ ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿವೆ.

ಜೈಲು ಸೇರಲು ಕಾರಣವಾಗಿತ್ತು ಆ ಜಗಳ
ಕೆಲವು ದಿನಗಳ ಹಿಂದೆ ನಡೆದ ಕಠಿಣ ಟಾಸ್ಕ್ ಒಂದರ ವೇಳೆಯಲ್ಲಿ ಸೌಂದರ್ಯ ಶೆಟ್ಟಿ ಮತ್ತು ಮಂಜ ಅವರ ನಡುವೆ ಸಣ್ಣ ವಿಷಯಕ್ಕೆ ತೀವ್ರ ವಾಗ್ವಿವಾದ ಶುರುವಾಗಿತ್ತು. ಮಾತು ಬೆಳೆದು ಇಬ್ಬರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೂ ಗಲಾಟೆ ತಲುಪಿತ್ತು. ಈ ಹಂತದಲ್ಲಿ ಮಂಜ ಅವರು ಅತ್ಯಂತ ಕೋಪದಿಂದ ಸೌಂದರ್ಯ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರು. ಬಿಗ್‌ಬಾಸ್ ಮನೆಯ ನಿಯಮಗಳನ್ನು ಮೀರಿ ವರ್ತಿಸಿದ್ದಕ್ಕಾಗಿ ಮತ್ತು ಗಲಾಟೆಯ ತೀವ್ರತೆಯನ್ನು ಪರಿಗಣಿಸಿ 'ಬಿಗ್ ಬಾಸ್' ಸೌಂದರ್ಯ ಹಾಗೂ ಮಂಜ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದ್ದರು. ಜೈಲಿನಲ್ಲಿಯೂ ಇಬ್ಬರ ನಡುವೆ ಒಂದಷ್ಟು ಕಾಲ ಮೌನ ಆವರಿಸಿತ್ತು.

ಕಣ್ಣೀರಿಟ್ಟು ಕ್ಷಮೆ ಕೇಳಿದ್ದ 'ಮಾಡ್ರನ್ ಮಹಾಕವಿ'
ಆದರೆ ಜೈಲುವಾಸದ ಅವಧಿ ಮುಗಿಯುತ್ತಿದ್ದಂತೆ ಮಂಜ ತಮ್ಮ ತಪ್ಪಿನ ಅರಿವಾಗಿ ಭಾವುಕರಾದರು. ಸೌಂದರ್ಯ ಅವರ ಬಳಿ ತೆರಳಿ, "ನನಗೂ ಮನೆಯಲ್ಲಿ ಅಕ್ಕ-ತಂಗಿಯರಿದ್ದಾರೆ. ಕೋಪದ ಕೈಗೆ ಬುದ್ಧಿ ಕೊಟ್ಟು ಆ ರೀತಿ ಕೆಟ್ಟದಾಗಿ ಮಾತನಾಡಿದ್ದು ನಿಜಕ್ಕೂ ತಪ್ಪಾಯಿತು, ನನ್ನನ್ನು ಕ್ಷಮಿಸಿಬಿಡಿ" ಎಂದು ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸಿದರು. ಮಂಜ ಅವರ ಪ್ರಾಮಾಣಿಕ ಪಶ್ಚಾತ್ತಾಪವನ್ನು ಕಂಡು ಮನಸ್ಸು ಸಡಿಲಗೊಳಿಸಿದ ಸೌಂದರ್ಯ ಶೆಟ್ಟಿ, "ಸರಿ ಬಿಡಿ, ನಡೆದದ್ದು ಹೋಯ್ತು" ಎಂದು ಹೇಳಿ ಕ್ಷಮಿಸುವ ಮೂಲಕ ದೊಡ್ಡತನ ಮೆರೆದರು. ಅಲ್ಲಿಗೆ ಇಬ್ಬರ ನಡುವಿದ್ದ ದ್ವೇಷದ ವಾತಾವರಣ ತಿಳಿಯಾಯಿತು.

 

ಮದುವೆ-ಮಗುವಿನ ವಿಚಾರ ಎತ್ತಿ ಕಾಲೆಳೆದ ಅವಿನಾಶ್
ಇಬ್ಬರೂ ಜಗಳ ಮರೆತು ಒಟ್ಟಿಗೆ ಕುಳಿತು ಮಾತನಾಡಲು ಶುರುಮಾಡಿದ ತಕ್ಷಣವೇ, ಪಕ್ಕದಲ್ಲೇ ಇದ್ದ ಸಹ-ಸ್ಪರ್ಧಿ ಅವಿನಾಶ್ ಇಬ್ಬರ ಕಾಲೆಳೆಯಲು ಒಳ್ಳೆಯ ಅವಕಾಶ ಕಂಡುಕೊಂಡರು. "ನೀವಿಬ್ಬರೂ ಹೀಗೆ ಜಗಳವಾಡಿ ಆಮೇಲೆ ಒಂದಾಗುವುದನ್ನು ನೋಡಿದರೆ, ನೀವಿಬ್ಬರೂ ಮದುವೆಯಾದರೆ ಚೆನ್ನಾಗಿರುತ್ತೆ ಎನಿಸುತ್ತಿದೆ. ನನ್ನ ಪ್ರಕಾರ ನೀವಿಬ್ಬರೂ ಮದುವೆಯಾಗಿ, ಸಂತೋಷವಾಗಿ ಇರಿ ಅಂತ ಹಾರೈಸುತ್ತೇನೆ" ಎಂದು ಹಾಸ್ಯ ಮಾಡಿದರು.

ಅಷ್ಟಕ್ಕೇ ಆಗದೆ, "ನಿಮ್ಮಿಬ್ಬರ ಮದುವೆಗಿಂತ ಹೆಚ್ಚಾಗಿ, ನಿಮ್ಮಿಬ್ಬರಿಗೂ ಹುಟ್ಟುವ ಮಗು ಹೇಗಿರುತ್ತೆ ಅಂತ ನೋಡೋ ಕುತೂಹಲ ನನಗಿದೆ!" ಎಂದು ಚೇಷ್ಟೆ ಮಾಡಿದರು. ಅವಿನಾಶ್ ಅವರ ಈ ಅನಿರೀಕ್ಷಿತ ತಮಾಷೆಯ ಮಾತುಗಳನ್ನು ಕೇಳಿ ಸೌಂದರ್ಯ ಶೆಟ್ಟಿ ಹಾಗೂ ಮಂಜ ಇಬ್ಬರೂ ಕ್ಷಣಕಾಲ ಸ್ಟನ್ ಆದರು. ಸೌಂದರ್ಯ ನಾಚಿಕೆಯಿಂದ "ಛೀ.. ಅರೇ ಬೇಡ" ಎಂದು ಮುಖ ಮುಚ್ಚಿಕೊಂಡರೆ, ಮಂಜ ಕೂಡ ಏನು ಹೇಳಬೇಕೆಂದು ತಿಳಿಯದೇ ನಾಚಿಕೆಯಿಂದ ನಕ್ಕರು.

ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯು ಈ ತಮಾಷೆಯ ಹಾಗೂ ರಂಜನೀಯ ಕ್ಷಣಗಳ ಪ್ರೊಮೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಬಿಗ್‌ಬಾಸ್ ಪ್ರೇಕ್ಷಕರಿಂದ ಹಾಗೂ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಮತ್ತು ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES