• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಸಿಂಗಲ್ ಸ್ಲೀವ್ ಬಟ್ಟೆ ಧರಿಸಿದ್ದಕ್ಕೆ ಪಬ್ಲಿಕ್‌ನಲ್ಲೇ ಹೊಡೆದಿದ್ದ ಮಾಜಿ ಪ್ರೇಮಿ! ಕರಾಳ ಅನುಭವ ಬಿಚ್ಚಿಟ್ಟ ಬಿಗ್‌ ಬಾಸ್‌ ಸ್ಪರ್ಧಿ

ಸಿಂಗಲ್ ಸ್ಲೀವ್ ಬಟ್ಟೆ ಧರಿಸಿದ್ದಕ್ಕೆ ಪಬ್ಲಿಕ್‌ನಲ್ಲೇ ಹೊಡೆದಿದ್ದ ಮಾಜಿ ಪ್ರೇಮಿ! ಕರಾಳ ಅನುಭವ ಬಿಚ್ಚಿಟ್ಟ ಬಿಗ್‌ ಬಾಸ್‌ ಸ್ಪರ್ಧಿ

Bigg Boss Contestant Love Story: ಮಾಜಿ ಪ್ರಿಯಕರ ತಮ್ಮ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದ. ಯಾವುದೇ ಮುನ್ಸೂಚನೆ ನೀಡದೆ ಕಾಲೇಜಿನ ತರಗತಿಗೆ ಬಂದು ಕಿರುಕುಳ ನೀಡುತ್ತಿದ್ದ ಎಂದು ಬಿಗ್‌ ಬಾಸ್‌ ಸ್ಪರ್ಧಿ ಹೇಳಿದ್ದಾರೆ.

Written ByChetana Devarmani
Published: Nov 01, 2026, 11:40 AM IST|Updated: Nov 01, 2026, 11:42 AM IST
joinshare
ಸಿಂಗಲ್ ಸ್ಲೀವ್ ಬಟ್ಟೆ ಧರಿಸಿದ್ದಕ್ಕೆ ಪಬ್ಲಿಕ್‌ನಲ್ಲೇ ಹೊಡೆದಿದ್ದ ಮಾಜಿ ಪ್ರೇಮಿ! ಕರಾಳ ಅನುಭವ ಬಿಚ್ಚಿಟ್ಟ ಬಿಗ್‌ ಬಾಸ್‌ ಸ್ಪರ್ಧಿ

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಸಲ್ಮಾನ್ ಖಾನ್‌ ಫುಲ್ ಗರಂ! ನಿನ್ನಷ್ಟು ನೀಚ ಯಾರೂ ಇಲ್ಲ ಎಂದು ಕಿಡಿಕಾರಿದ್ದೇಕೆ? ಯಾರ ವಿರುದ್ಧ ಭಾಯ್‌ಜಾನ್ ಆಕ್ರೋಶ?

ಸಲ್ಮಾನ್ ಖಾನ್‌ ಫುಲ್ ಗರಂ! ನಿನ್ನಷ್ಟು ನೀಚ ಯಾರೂ ಇಲ್ಲ ಎಂದು ಕಿಡಿಕಾರಿದ್ದೇಕೆ? ಯಾರ ವಿರುದ್ಧ ಭಾಯ್‌ಜಾನ್ ಆಕ್ರೋಶ?

2

9ನೇ ತಿಂಗಳ ಗರ್ಭಾವಸ್ಥೆಯಲ್ಲೂ ವರ್ಕೌಟ್! ಸಮಂತಾ ರುತ್ ಪ್ರಭು ವಿಡಿಯೋಗೆ ಅಭಿಮಾನಿಗಳು ಫಿದಾ

3

ಕರ್ನಾಟಕ ಗಡಿಯಲ್ಲಿ ಶಿವಸೇನೆ ಪುಂಡಾಟ; ಬೆಳಗಾವಿ ಎಂಇಎಸ್ ಕರಾಳ ದಿನ

4

ಹಾಲು, ಅಕ್ಕಿ ಬಳಿಕ.. ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

5

ಕಳ್ಳತನಕ್ಕೂ ಒಂದು ಮಿತಿ ಇಲ್ವಾ..? ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ಜೀವ ಉಳಿಸುವ ಕನ್ನಡಿಗಳೇ ಮಾಯ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿ ಕನಿಕಾ ಮಾನ್ ತಮ್ಮ ಹಿಂದಿನ ಪ್ರೇಮ ಸಂಬಂಧದ ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಪ್ರಿಯಕರನಿಂದ ಅನುಭವಿಸಿದ ಹಿಂಸೆ, ಬೆದರಿಕೆ ಹಾಗೂ ಕಿರುಕುಳದ ಘಟನೆಗಳನ್ನು ವಿವರಿಸಿದ್ದು, ಅವರ ಮಾತುಗಳು ಮನೆಯ ಇತರ ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿವೆ. ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್ 20’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಕನಿಕಾ ಮಾನ್, ಹಿಂದಿನ ಸಂಬಂಧದಲ್ಲಿ ತಾವು ಎದುರಿಸಿದ ಮಾನಸಿಕ ಮತ್ತು ದೈಹಿಕ ಹಿಂಸೆಯ ಬಗ್ಗೆ ವಿವರಿಸಿದ್ದಾರೆ.

ಕಾಲೇಜಿನ ಮೊದಲ ವರ್ಷದಲ್ಲಿ ಕನಿಕಾ ತಮ್ಮ ಮೊದಲ ಪ್ರಿಯಕರನನ್ನು ಭೇಟಿಯಾಗಿದ್ದರು. ಕುಟುಂಬದ ಕಟ್ಟುನಿಟ್ಟಿನ ವಾತಾವರಣದಿಂದ ಬೆಳೆದಿದ್ದ ಅವರಿಗೆ ಕಾಲೇಜು ಜೀವನದಲ್ಲಿ ಇತರ ವಿದ್ಯಾರ್ಥಿನಿಯರ ಸ್ವಾತಂತ್ರ್ಯ ಕಂಡು ತಮಗೂ ಒಬ್ಬ ಸಂಗಾತಿ ಇರಬೇಕೆಂಬ ಆಸೆ ಮೂಡಿತ್ತಂತೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ಖಾತೆ ತೆರೆದ ಅವರು, ಅಲ್ಲಿ ಪರಿಚಯವಾದ ಯುವಕನೊಂದಿಗೆ ಸ್ನೇಹ ಬೆಳೆಸಿಕೊಂಡರು. ಆದರೆ ಆರಂಭದಲ್ಲಿ ಚೆನ್ನಾಗಿದ್ದ ಈ ಪರಿಚಯ ಕ್ರಮೇಣ ಸಮಸ್ಯಾತ್ಮಕ ಸಂಬಂಧವಾಗಿ ಬದಲಾಯಿತು ಎಂದು ಕನಿಕಾ ತಿಳಿಸಿದ್ದಾರೆ.

ಉಡುಪಿನ ವಿಚಾರಕ್ಕೆ ಸಾರ್ವಜನಿಕವಾಗಿ ಹಲ್ಲೆ

ಮಾಜಿ ಪ್ರಿಯಕರ ತಮ್ಮ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದ. ಯಾವುದೇ ಮುನ್ಸೂಚನೆ ನೀಡದೆ ಕಾಲೇಜಿನ ತರಗತಿಗೆ ಬಂದು ಕಿರುಕುಳ ನೀಡುತ್ತಿದ್ದ ಎಂದು ಅವರು ಹೇಳಿದ್ದಾರೆ. ಒಮ್ಮೆ ಸಿಂಗಲ್ ಸ್ಟ್ರಾಪ್ ಉಡುಪು ಧರಿಸಿದ್ದಕ್ಕೆ ಎಲ್ಲರ ಎದುರೇ ಕಪಾಳಮೋಕ್ಷ ಮಾಡಿದ್ದನಂತೆ. ಇದರಿಂದ ಕಿವಿಗೆ ಗಾಯವಾಗಿ ರಕ್ತಸ್ರಾವವಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಸುತ್ತಮುತ್ತಲಿದ್ದವರು ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಕನಿಕಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಸಣ್ಣಪುಟ್ಟ ವಿಚಾರಗಳಿಗೂ ತಂದೆಗೆ ಕರೆ ಮಾಡಿ ದೂರು ನೀಡುವುದಾಗಿ ಆತ ಬೆದರಿಸುತ್ತಿದ್ದ ಎಂದು ತಿಳಿಸಿದ್ದಾರೆ.

ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ

ಈ ಸಂಬಂಧದಿಂದ ಹೊರಬರಲು ಕನಿಕಾ ಕಾನೂನು ಅಧ್ಯಯನ ಆರಂಭಿಸಿದ್ದು, ಇದರಿಂದ ತಮ್ಮ ಹಕ್ಕುಗಳು ಮತ್ತು ಕಾನೂನು ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ. ಒಂದು ದಿನ ಕಾಲೇಜಿನ ವಿಭಾಗದ ಬಳಿ ಮಾಜಿ ಪ್ರಿಯಕರ ಅವರನ್ನು ತಡೆದು ಕೈ ಹಿಡಿದು ಎಳೆದಿದ್ದ. ಬಳಿಕ ತನ್ನ ಬಳಿ ಇದ್ದ ಚಾಕುವನ್ನು ಹೊರತೆಗೆದು ಬೆದರಿಕೆ ಹಾಕಿದ್ದ. ಈ ಘಟನೆಯ ವೇಳೆ ಆತ ತನ್ನ ಕೈಗೆ ಗಾಯ ಮಾಡಿಕೊಂಡು, ಆ ರಕ್ತದಿಂದಲೇ ಕನಿಕಾ ಅವರ ಹಣೆಗೆ ಸಿಂಧೂರ ಇಡುವುದಾಗಿ ಹೇಳಿದ್ದ ಎಂದು ಅವರು ವಿವರಿಸಿದ್ದಾರೆ.  ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಕನಿಕಾ ತಕ್ಷಣ ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ವಶಕ್ಕೆ ಪಡೆದಿದ್ದರು. ಆತ ಕೆಲವು ದಿನಗಳ ಕಾಲ ಜೈಲಿನಲ್ಲಿದ್ದ ಎಂದು ಕನಿಕಾ ತಿಳಿಸಿದ್ದಾರೆ.

ಕುಟುಂಬದ ಬೆಂಬಲದಿಂದ ಹೊರಬಂದ ಕನಿಕಾ

ಈ ಘಟನೆಗಳ ಬಗ್ಗೆ ಆರಂಭದಲ್ಲಿ ಕುಟುಂಬದವರಿಗೆ ಹೇಳಲು ಕನಿಕಾ ಭಯಪಟ್ಟಿದ್ದರು. ಆದರೆ ಕೊನೆಗೆ ಎಲ್ಲವನ್ನೂ ತಿಳಿಸಿದಾಗ ಕುಟುಂಬದವರು ಅವರಿಗೆ ಸಂಪೂರ್ಣ ಬೆಂಬಲ ನೀಡಿದರು ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕನಿಕಾ ಹಂಚಿಕೊಂಡ ಈ ಅನುಭವವು ಪ್ರೇಕ್ಷಕರ ಗಮನ ಸೆಳೆದಿದೆ. ಸಂಬಂಧಗಳಲ್ಲಿ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸುರಕ್ಷತೆಯ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
 

Add Zee News as a Preferred Source
TAGS:
Bigg Boss Kannada