SOCIAL MEDIA

Newsletter

PARTNER SITES
Select Language Select State

ಧನ್ವೀರ್‌-ನಾಗರಾಜ್‌ ವಾಟ್ಸ್‌ಆ್ಯಪ್ ಚಾಟ್ ಬಹಿರಂಗ..! ದರ್ಶನ್‌ ಪತ್ನಿಗೂ ಕೆಟ್ಟ ಪದ ಬಳಕೆ.. ಪ್ರತಿದೂರು ದಾಖಲು

ವಿಜಯಲಕ್ಷ್ಮಿ ದರ್ಶನ್‌ ಮತ್ತು ನಟ ಧನ್ವೀರ್ ಗೌಡ, ಮ್ಯಾನೇಜರ್‌ ನಾಗರಾಜ್‌ ನಡುವಿನ ವಿವಾದ ಹೊಸ ತಿರುವು ಪಡೆಯುತ್ತಿದೆ. ಈ ಜಗಳ, ಈಗ ಪರಸ್ಪರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಷ್ಟೇ ಅಲ್ಲದೆ, ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ..

Written By Krishna NK
Published: Oct 23, 2026, 09:02 PM IST | Updated: Oct 23, 2026, 09:06 PM IST
Image Credit: Vijayalakshmi Darshan dhanveer gowda
Join

Dhanveer Vijayalakshmi Darshan controversy : ಸ್ಯಾಂಡ್‌ವುಡ್‌ನಲ್ಲಿ ಈಗ ನಟ ಧನ್ವೀರ್ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಮ್ಯಾನೇಜರ್ ನಾಗರಾಜ್ ನಡುವಿನ ವಿವಾದ ಹಲವಾರು ಹೊಸ ತಿರುವು ಪಡೆಯುತ್ತಿದೆ. ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ಗಲಾಟೆ ಈಗ ಇಡೀ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಧನ್ವೀರ್ ವಿರುದ್ಧ ಒಂದೆಡೆ ಗಂಭೀರ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಧನ್ವೀರ್ ಕುಟುಂಬದಿಂದಲೂ ಪ್ರತಿದೂರು ದಾಖಲಾಗಿದ್ದು, ಪ್ರಕರಣ ರೋಚಕ ಹಂತ ತಲುಪುತ್ತಿದೆ..

ವಾಟ್ಸ್‌ಆ್ಯಪ್ ಚಾಟ್ ಹಾಗೂ ಆಡಿಯೋ ವೈರಲ್: ಮುಂದುವರಿದ ತನಿಖೆ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್‌ಗೆ ನಟ ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಧನ್ವೀರ್ ಮತ್ತು ನಾಗರಾಜ್ ನಡುವಿನ ವಾಟ್ಸ್‌ಆ್ಯಪ್ ಚಾಟಿಂಗ್‌ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚಾಟಿಂಗ್‌ನಲ್ಲಿ ದರ್ಶನ್ ಪತ್ನಿ ಹಾಗೂ ನಾಗರಾಜ್ ವಿರುದ್ಧ ಅತ್ಯಂತ ಕೆಟ್ಟ ಪದಗಳನ್ನು ಬಳಸಲಾಗಿದೆ ಎನ್ನಲಾಗಿದ್ದು, "ನಾನು ಇಲ್ಲದ ಸಮಯದಲ್ಲಿ ಮನೆಗೆ ಬರ್ತೀರೇನೋ" ಎಂದು ಧನ್ವೀರ್ ಆಕ್ರೋಶ ವ್ಯಕ್ತಪಡಿಸಿರುವ ಸಂದೇಶಗಳು ಹರಿದಾಡುತ್ತಿವೆ. ಸದ್ಯ ಆರ್.ಆರ್. ನಗರ ಪೊಲೀಸರು ಈ ಆಡಿಯೋ ಹಾಗೂ ವಾಟ್ಸ್‌ಆ್ಯಪ್ ಚಾಟ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎನ್‌ಸಿಆರ್ ದಾಖಲು
ಆಡಿಯೋ ವಿವಾದದ ಬೆನ್ನಲ್ಲೇ ನಟ ಧನ್ವೀರ್‌ಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಗೌರವ್ ಎಂಬುವವರು ಧನ್ವೀರ್ ಹಾಗೂ ಮತ್ತೊಬ್ಬ ವ್ಯಕ್ತಿ ಶಶಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿಸಿ, ಆ ಹಣವನ್ನು ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಹಣ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಹಾಗೂ ತಮ್ಮ ಒಡೆತನದ ವೋಕ್ಸ್‌ವ್ಯಾಗನ್ (Volkswagen) ಕಾರನ್ನು ಪಡೆದು ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಧನ್ವೀರ್ ತಂದೆಯಿಂದ ಪ್ರತಿದೂರು
ಮತ್ತೊಂದೆಡೆ, ವಿಜಯಲಕ್ಷ್ಮಿ ಹಾಗೂ ನಾಗರಾಜ್ ವಿರುದ್ಧ ನಟ ಧನ್ವೀರ್ ತಂದೆ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗ ಮನೆಯಲ್ಲಿಲ್ಲದ ಸಮಯದಲ್ಲಿ ವಿಜಯಲಕ್ಷ್ಮಿ ಹಾಗೂ ನಾಗರಾಜ್ ಮನೆಗೆ ಬಂದು, ಗೌರವ್ ಶೆಟ್ಟಿ ಎಂಬಾತನ ಮೂಲಕ ರೌಡಿಗಳನ್ನು ಕರೆಸಿ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಹಿಂದೆ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಗೌರವ್ ಶೆಟ್ಟಿ ವಿರುದ್ಧ ಹೆಸ್ರು ಕೇಳಿಬಂದಿತ್ತು.  

ಒಟ್ಟಿನಲ್ಲಿ, ನಟ ದರ್ಶನ್‌ ಕೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದು, ಇತ್ತ ಇಷ್ಟು ದಿನ ಆಪ್ತರಂತಿದ್ದ ವಿಜಯಲಕ್ಷ್ಮಿ ಮತ್ತು ಧನ್ವೀರ್‌ ಜಗಳ ಮುನ್ನೆಲೆಗೆ ಬಂದಿದ್ದು ಅಚ್ಚರಿ ಮೂಡಿಸುತ್ತಿದೆ. ಒಟ್ಟಿನಲ್ಲಿ ಇಬ್ಬರ ಕಡೆಯಿಂದಲೂ ದೂರು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರ ತನಿಖೆಯಿಂದ ಯಾವೆಲ್ಲಾ ಸತ್ಯ ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES