• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಕಿಚ್ಚನ ಪಂಚಾಯ್ತಿಗೆ ಸಿಕ್ಕಾಪಟ್ಟೆ ವಿಷಯ! ಟಾಸ್ಕ್ ರದ್ದು, ಒಗ್ಗಟ್ಟಿನ ಕೊರತೆ.. ಸ್ಪರ್ಧಿಗಳಿಗೆ ಸುದೀಪ್‌ ಪ್ರಶ್ನೆಗಳ ಸುರಿಮಳೆ‌

ಕಿಚ್ಚನ ಪಂಚಾಯ್ತಿಗೆ ಸಿಕ್ಕಾಪಟ್ಟೆ ವಿಷಯ! ಟಾಸ್ಕ್ ರದ್ದು, ಒಗ್ಗಟ್ಟಿನ ಕೊರತೆ.. ಸ್ಪರ್ಧಿಗಳಿಗೆ ಸುದೀಪ್‌ ಪ್ರಶ್ನೆಗಳ ಸುರಿಮಳೆ‌

BBK13 Kicchana panchayath ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಈ ವಾರ ನಡೆದ ಎಡವಟ್ಟುಗಳಿಗೆಲ್ಲಾ ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಲೆಕ್ಕ ಕೊಡೋ ಸಮಯ ಬಂದಿದೆ.ತಾಂಡವ್ ರಾಮ್ ರೀ-ಎಂಟ್ರಿಯಿಂದ ಹಿಡಿದು ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗುವವರೆಗೂ.. ಗಾನವಿ ಅವರ ಕೂಗಾಟ, ಕಳಪೆ ಪಟ್ಟದ ಚರ್ಚೆ ಹಾಗೂ ಯಶಸ್ ಅವರ ಗೇಮ್‌ವರೆಗೂ ಹಲವು ವಿಚಾರಗಳು ಈ ವಾರ ಕಿಚ್ಚನ ಮುಂದೆ ಬರಲಿವೆ.

Written ByRamya. R. Gowda
Published: Oct 03, 2026, 11:52 AM IST|Updated: Oct 03, 2026, 12:05 PM IST
joinshare
ಕಿಚ್ಚನ ಪಂಚಾಯ್ತಿಗೆ ಸಿಕ್ಕಾಪಟ್ಟೆ ವಿಷಯ! ಟಾಸ್ಕ್ ರದ್ದು, ಒಗ್ಗಟ್ಟಿನ ಕೊರತೆ.. ಸ್ಪರ್ಧಿಗಳಿಗೆ ಸುದೀಪ್‌ ಪ್ರಶ್ನೆಗಳ ಸುರಿಮಳೆ‌

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಗಾಜಿನಂತೆ ಹೊಳೆಯುವ ಚರ್ಮ ಬೇಕಾ? ನೀವು ಪ್ರತಿದಿನ ಕುಡಿಯಬೇಕಾದ 5 ಶಕ್ತಿಶಾಲಿ ಪಾನೀಯಗಳು ಇಲ್ಲಿವೆ!

ಗಾಜಿನಂತೆ ಹೊಳೆಯುವ ಚರ್ಮ ಬೇಕಾ? ನೀವು ಪ್ರತಿದಿನ ಕುಡಿಯಬೇಕಾದ 5 ಶಕ್ತಿಶಾಲಿ ಪಾನೀಯಗಳು ಇಲ್ಲಿವೆ!

2

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್ ಹೆಡ್‌ಲೈಟ್ ಇಲ್ಲದೆ 60 ಕಿ.ಮೀ ಪ್ರಯಾಣಿಸಿದೆ ಎಂಬ ವರದಿಗೆ ಅಧಿಕಾರಿಗಳು ಯೂಟರ್ನ್‌

3

ಪಾಕ್‌ ವಿರುದ್ಧ ದಾಖಲೆಗಳನ್ನ ಬರೆದ ಬಿಗ್‌ ಹಿಟ್ಟರ್‌ ಅಭಿಷೇಕ್‌ ಶರ್ಮಾ.. ಗುರುವಿನ ರೆಕಾರ್ಡ್‌ ಸರಿಗಟ್ಟಿದ ಓಪನರ್!

4

ಮಣಿಪಾಲ: QR ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ, ಆರು ಜನರ ವಿರುದ್ಧ ಪ್ರಕರಣ ದಾಖಲು

5

ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಈಗ ಎಷ್ಟು ವರ್ಷ ಗೊತ್ತಾ? ‘ಅರಸಿ’ಯಿಂದ ‘ಬುಲ್‌ಬುಲ್’ವರೆಗೆ ರೋಚಕ ಜರ್ನಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.


ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಈ ವಾರ ನಡೆದ ಎಡವಟ್ಟುಗಳಿಗೆಲ್ಲಾ ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಲೆಕ್ಕ ಕೊಡೋ ಸಮಯ ಬಂದಿದೆ.ತಾಂಡವ್ ರಾಮ್ ರೀ-ಎಂಟ್ರಿಯಿಂದ ಹಿಡಿದು ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗುವವರೆಗೂ.. ಗಾನವಿ ಅವರ ಕೂಗಾಟ, ಕಳಪೆ ಪಟ್ಟದ ಚರ್ಚೆ ಹಾಗೂ ಯಶಸ್ ಅವರ ಗೇಮ್‌ವರೆಗೂ ಹಲವು ವಿಚಾರಗಳು ಈ ವಾರ ಕಿಚ್ಚನ ಮುಂದೆ ಬರಲಿವೆ. ಹಾಗಾದ್ರೆ ಈ ವಾರ ಯಾರಿಗೆ ಕಿಚ್ಚನ ಕ್ಲಾಸ್? ಯಾರಿಗೆ ಮೆಚ್ಚುಗೆ? ಏನಿದು ವೀಕೆಂಡ್ ಪಂಚಾಯ್ತಿ?


ಬಿಗ್‌ಬಾಸ್ ಕನ್ನಡದಲ್ಲಿ ವೀಕೆಂಡ್ ಬಂತೆಂದರೆ ಸಾಕು.. ಮನೆಯ ಸದಸ್ಯರಿಗೆ ಒಂದೆಡೆ ಖುಷಿ.. ಇನ್ನೊಂದೆಡೆ ಟೆನ್ಷನ್! ವಾರಪೂರ್ತಿ ನಡೆದ ಆಟ, ಮಾತು, ತಂತ್ರ-ಪ್ರತಿತಂತ್ರ, ಎಡವಟ್ಟುಗಳನ್ನೆಲ್ಲಾ ಕಿಚ್ಚ ಸುದೀಪ್ ಮುಂದೆ ಇಟ್ಟು ಸರಿ-ತಪ್ಪಿನ ಲೆಕ್ಕಾಚಾರ ನಡೆಯಲಿದೆ.


ತಾಂಡವ್ ರಾಮ್ ರೀ-ಎಂಟ್ರಿ

ಈ ವಾರದ ದೊಡ್ಡ ಟ್ವಿಸ್ಟ್ ಅಂದ್ರೆ ಅದು ತಾಂಡವ್ ರಾಮ್ ಅವರ ರೀ-ಎಂಟ್ರಿ. ಫೇಕ್ ಎಲಿಮಿನೇಷನ್ ಮೂಲಕ ಸೀಕ್ರೆಟ್ ರೂಮ್‌ಗೆ ಹೋಗಿದ್ದ ತಾಂಡವ್ ಇದೀಗ ಮತ್ತೆ ಬಿಗ್‌ಬಾಸ್ ಮನೆಗೆ ವಾಪಸ್ ಬಂದಿದ್ದಾರೆ. ತಾಂಡವ್ ವಾಪಸಾತಿ ಮನೆಯೊಳಗಿನ ಗೇಮ್ ಲೆಕ್ಕಾಚಾರವನ್ನೇ ಬದಲಿಸಿದೆಯಾ? ಅವರ ರೀ-ಎಂಟ್ರಿ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯವೇನು? ಅನ್ನೋದನ್ನ ಕಿಚ್ಚ ಸುದೀಪ್ ಪ್ರಶ್ನಿಸುವ ಸಾಧ್ಯತೆ ಇದೆ.

ಉಸ್ತುವಾರಿಗಳ ಎಡವಟ್ಟು.. ಕ್ಯಾಪ್ಟನ್ಸಿ ಟಾಸ್ಕ್ ರದ್ದು!
ಇನ್ನು ಕ್ಯಾಪ್ಟನ್ಸಿ ಟಾಸ್ಕ್ ವಿಚಾರವೂ ಈ ವಾರದ ಪಂಚಾಯ್ತಿಯಲ್ಲಿ ಪ್ರಮುಖವಾಗಲಿದೆ. ಟಾಸ್ಕ್‌ನ ಉಸ್ತುವಾರಿ ಹೊತ್ತಿದ್ದ ಮಂಜು ಮತ್ತು ಲಿಖಿತ್ ಅವರ ನಿರ್ಧಾರ, ಲೆಕ್ಕಾಚಾರ ಹಾಗೂ ಗೊಂದಲದಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿತ್ತು.ಕಷ್ಟಪಟ್ಟು ಟಾಸ್ಕ್ ಆಡಿದ ಸ್ಪರ್ಧಿಗಳ ಶ್ರಮ ವ್ಯರ್ಥವಾಗಿದ್ದು ಯಾಕೆ? ಉಸ್ತುವಾರಿಗಳಾಗಿ ಜವಾಬ್ದಾರಿ ನಿಭಾಯಿಸುವಲ್ಲಿ ಎಲ್ಲಿ ಎಡವಟ್ಟಾಯ್ತು? ಈ ಪ್ರಶ್ನೆಗಳಿಗೆ ಕಿಚ್ಚನ ಮುಂದೆ ಉತ್ತರ ಕೊಡಬೇಕಾಗಲಿದೆ.

ಒಗ್ಗಟ್ಟಿಲ್ಲದ ಗಾನವಿ ತಂಡ!

ಇನ್ನು ಗ್ರೂಪ್ ಟಾಸ್ಕ್‌ನಲ್ಲಿ ಗಾನವಿ ತಂಡದೊಳಗಿನ ಒಗ್ಗಟ್ಟಿನ ಕೊರತೆಯೂ ಚರ್ಚೆಗೆ ಬರಲಿದೆ. ತಂಡವನ್ನು ಗೆಲ್ಲಿಸಲು ಗಾನವಿ ಪ್ರಯತ್ನಿಸಿದರೂ.. ಕೊನೆಗೆ ಅವರೇ ಕಳಪೆ ಪಟ್ಟಕ್ಕೆ ಸಿಲುಕಬೇಕಾಯ್ತು.
ತಂಡದೊಳಗಿನ ಒಗ್ಗಟ್ಟು ಎಲ್ಲಿ ಹೋಯ್ತು? ಗಾನವಿ ಅವರ ಆಟದ ವೈಖರಿ ಸರಿಯಾಗಿತ್ತಾ? ಈ ಪ್ರಶ್ನೆಗಳ ಸುತ್ತ ಕಿಚ್ಚನ ಪಂಚಾಯ್ತಿ ನಡೆಯುವ ಸಾಧ್ಯತೆ ಇದೆ.

ಗಾನವಿ ಕೂಗಾಟಕ್ಕೆ ಕಿಚ್ಚನ ಕ್ಲಾಸ್?
ಇದೇ ವೇಳೆ.. ವಾರವಿಡೀ ಸಣ್ಣಪುಟ್ಟ ವಿಚಾರಗಳಿಗೂ ಧ್ವನಿ ಏರಿಸಿ ಗಲಾಟೆ ಮಾಡುತ್ತಿದ್ದ ಗಾನವಿ ಅವರ ವರ್ತನೆಯೂ ಕಿಚ್ಚನ ಗಮನ ಸೆಳೆಯುವ ಸಾಧ್ಯತೆ ಇದೆ. ಆಟದ ಉತ್ಸಾಹಕ್ಕೂ.. ಅನಗತ್ಯ ಕೂಗಾಟಕ್ಕೂ ಇರುವ ವ್ಯತ್ಯಾಸ ಏನು?ತಮ್ಮ ಮಾತು ಮತ್ತು ವರ್ತನೆಯ ಬಗ್ಗೆ ಗಾನವಿ ಅವರಿಗೆ ಕಿಚ್ಚ ಸುದೀಪ್ ಏನು ಹೇಳಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ಯಶಸ್‌ಗೆ ಗೇಮ್ ಬದಲಿಸುವ ಎಚ್ಚರಿಕೆ?
ಇನ್ನು ಯಶಸ್ ಅವರ ಗೇಮ್ ಕೂಡ ಈ ವಾರ ಚರ್ಚೆಯಾಗಲಿದೆ. ಆಟದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುವುದಕ್ಕಿಂತ ಮನೆಯ ಹೆಣ್ಣುಮಕ್ಕಳ ಗುಂಪಿನ ಜೊತೆಗೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬ ಚರ್ಚೆ ಮನೆಯೊಳಗೆ ಕೇಳಿಬಂದಿದೆ. ಹಾಗಾದ್ರೆ ಯಶಸ್ ನಿಜವಾಗಿಯೂ ಗೇಮ್ ಆಡುತ್ತಿದ್ದಾರಾ? ಅಥವಾ ಕೆಲವೇ ಸ್ಪರ್ಧಿಗಳ ಬಳಗಕ್ಕೆ ಸೀಮಿತವಾಗಿದ್ದಾರಾ? ಸ್ಪರ್ಧಿಯಾಗಿ ತಮ್ಮದೇ ಆಟವನ್ನು ತೋರಿಸುವಂತೆ ಕಿಚ್ಚ ಸುದೀಪ್ ಎಚ್ಚರಿಕೆ ನೀಡಲಿದ್ದಾರಾ ಅನ್ನೋ ಕುತೂಹಲ ಇದೀಗ ವೀಕ್ಷಕರಲ್ಲಿದೆ.

ಯಾರಿಗೆ ಕ್ಲಾಸ್.. ಯಾರಿಗೆ ಚಪ್ಪಾಳೆ?
ಒಟ್ನಲ್ಲಿ ಈ ವಾರದ ಕಿಚ್ಚನ ಪಂಚಾಯ್ತಿ ಸಾಕಷ್ಟು ವಿಚಾರಗಳಿಂದ ಕೂಡಿದೆ. ತಾಂಡವ್ ರೀ-ಎಂಟ್ರಿ.. ಕ್ಯಾಪ್ಟನ್ಸಿ ಟಾಸ್ಕ್ ರದ್ದು.. ಗಾನವಿ ಅವರ ಆಟ ಮತ್ತು ಕೂಗಾಟ.. ಯಶಸ್ ಅವರ ಗೇಮ್.. ಎಲ್ಲದರ ಬಗ್ಗೆಯೂ ಕಿಚ್ಚನ ಮಾತು ಏನು ಅನ್ನೋದು ಕುತೂಹಲ ಮೂಡಿಸಿದೆ.
 

Add Zee News as a Preferred Source
TAGS:
Bigg Boss Kannada Season 13