SOCIAL MEDIA

Newsletter

PARTNER SITES
Select Language Select State

ಗಾನವಿ ಗೌಡ ಕಣ್ಣೀರಿನ ಅಸಲಿ ಕಥೆ ಬಯಲು.. ವಿಡಿಯೋ ನೋಡಿ ಮನೆಮಂದಿ ಶಾಕ್!

BBK kiccha sudeep Revel Ganavi gowda secret: ಬಿಗ್‌ಬಾಸ್ ಮನೆಯಲ್ಲಿ ಗಾನವಿ ಗೌಡ ಕಣ್ಣೀರು ಹಾಕಿದ ಪ್ರಸಂಗ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಮ್ಮನ ಪತ್ರ ಬೇಕು ಅಂತ ಕಣ್ಣೀರು ಹಾಕಿದ್ದ ಗಾನವಿ ಮಾತಿಗೆ ಸ್ಪರ್ಧಿಗಳು ಮರುಗಿದ್ದರು. ಆದ್ರೆ, ಗಾನವಿ ಹೇಳಿದ ಮಾತಿನ ಹಿಂದಿನ ಅಸಲಿ ಕಥೆಯನ್ನೇ ಕಿಚ್ಚ ಸುದೀಪ್ ಬಯಲು ಮಾಡಿದ್ದಾರೆ. ಹಳೆಯ ವಿಡಿಯೋ ಸಮೇತ ಗಾನವಿ ಆಟದ ಮತ್ತೊಂದು ಮುಖವನ್ನ ತೋರಿಸಿದ್ದಾರೆ. ಇದನ್ನ ನೋಡಿ ಗಾನವಿ ನಕ್ಕಿದ್ದರೆ, ಇತ್ತ ತಾಂಡವ್ ರಾಮ್ ಸೇರಿದಂತೆ ಮನೆಯ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಹಾಗಾದ್ರೆ ಕಿಚ್ಚ ಬಿಚ್ಚಿಟ್ಟ ಸತ್ಯವೇನು?

Written By Ramya. R. Gowda
Published: Nov 08, 2026, 10:05 IST | Updated: Nov 08, 2026, 10:16 IST
Join

ಬಿಗ್‌ಬಾಸ್ ಮನೆಯಲ್ಲಿ ಗಾನವಿ ಗೌಡ ಕಣ್ಣೀರು ಹಾಕಿದ ಪ್ರಸಂಗ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಮ್ಮನ ಪತ್ರ ಬೇಕು ಅಂತ ಕಣ್ಣೀರು ಹಾಕಿದ್ದ ಗಾನವಿ ಮಾತಿಗೆ ಸ್ಪರ್ಧಿಗಳು ಮರುಗಿದ್ದರು. ಆದ್ರೆ, ಗಾನವಿ ಹೇಳಿದ ಮಾತಿನ ಹಿಂದಿನ ಅಸಲಿ ಕಥೆಯನ್ನೇ ಕಿಚ್ಚ ಸುದೀಪ್ ಬಯಲು ಮಾಡಿದ್ದಾರೆ. ಹಳೆಯ ವಿಡಿಯೋ ಸಮೇತ ಗಾನವಿ ಆಟದ ಮತ್ತೊಂದು ಮುಖವನ್ನ ತೋರಿಸಿದ್ದಾರೆ. ಇದನ್ನ ನೋಡಿ ಗಾನವಿ ನಕ್ಕಿದ್ದರೆ, ಇತ್ತ ತಾಂಡವ್ ರಾಮ್ ಸೇರಿದಂತೆ ಮನೆಯ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಹಾಗಾದ್ರೆ ಕಿಚ್ಚ ಬಿಚ್ಚಿಟ್ಟ ಸತ್ಯವೇನು?

ಬಿಗ್‌ಬಾಸ್ ಮನೆಯಲ್ಲಿ ಗಾನವಿ ಗೌಡ ಆಟ ಜೋರಾಗಿದೆ. ಟಾಸ್ಕ್ ಇರಲಿ, ಭಾವನೆಗಳ ವಿಚಾರ ಇರಲಿ, ಗಾನವಿ ತಮ್ಮದೇ ಸ್ಟೈಲ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಪತ್ರ ಪಡೆಯುವ ಟಾಸ್ಕ್‌ನಲ್ಲಿ ಗಾನವಿ ಹಾಕಿದ ಕಣ್ಣೀರು ಎಲ್ಲರ ಗಮನ ಸೆಳೆದಿತ್ತು.ನನಗೆ ಅಮ್ಮ ಒಬ್ಬರೇ ಇರೋದು.. ಅವರನ್ನ ಬಿಟ್ಟು ಬೇರೆ ಯಾರೂ ಇಲ್ಲ. ಅಮ್ಮ ಬರೆಯುವ ಪತ್ರ ನನಗೆ ತುಂಬಾ ಮುಖ್ಯ. ಆ ಪತ್ರ ಬೇಕೇ ಬೇಕು ಅಂತ ಗಾನವಿ ಕಣ್ಣೀರು ಹಾಕಿದ್ದರು. ಗಾನವಿ ಮಾತು ಕೇಳಿ ಮನೆಯ ಸ್ಪರ್ಧಿಗಳು ಕೂಡ ಭಾವುಕರಾಗಿದ್ದರು. ಅದರಲ್ಲೂ ತಾಂಡವ್ ರಾಮ್ ಗಾನವಿ ನೋವಿಗೆ ಮರುಗಿದ್ದರು.

ಆದ್ರೆ, ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಈ ಕಣ್ಣೀರಿನ ಹಿಂದಿನ ಕಥೆಯನ್ನೇ ಬಿಚ್ಚಿಟ್ಟಿದ್ದಾರೆ. ಗಾನವಿ ಅವರ ಹಳೆಯ ವಿಡಿಯೋವೊಂದನ್ನ ಮನೆಯವರ ಮುಂದೆ ಪ್ರದರ್ಶಿಸಿದ್ದಾರೆ. ಆ ವಿಡಿಯೋದಲ್ಲಿ ಗಾನವಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮನೆಯಲ್ಲಿ ಬರೋಬ್ಬರಿ 18 ಜನ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ.ಇದನ್ನೇ ಪತ್ರದ ಟಾಸ್ಕ್‌ನಲ್ಲಿ ಗಾನವಿ ಹೇಳಿದ ಮಾತುಗಳ ಜೊತೆ ಹೋಲಿಸಿ ಕಿಚ್ಚ ಸುದೀಪ್ ತೋರಿಸಿದ್ದಾರೆ. ವಿಡಿಯೋ ನೋಡಿದ ಗಾನವಿ ಜೋರಾಗಿ ನಕ್ಕಿದ್ದಾರೆ. ಆದ್ರೆ, ಇತರ ಸ್ಪರ್ಧಿಗಳಿಗೆ ಮಾತ್ರ ಅಚ್ಚರಿಯಾಗಿದೆ. ಅದರಲ್ಲೂ ಗಾನವಿ ಕಣ್ಣೀರಿಗೆ ಮರುಗಿದ್ದ ತಾಂಡವ್ ರಾಮ್ ಮುಖದಲ್ಲಿ ಶಾಕ್ ಎದ್ದು ಕಾಣುತ್ತಿತ್ತು.

ಇನ್ನು ತಾಂಡವ್ ರಾಮ್ ಶಾಕ್ ಆದ ರೀತಿಯನ್ನೇ ಕಿಚ್ಚ ಸುದೀಪ್ ಅನುಕರಣೆ ಮಾಡಿ ತೋರಿಸಿದ್ದಾರೆ. ಇದನ್ನ ಕಂಡು ಮನೆಯವರೆಲ್ಲ ನಕ್ಕಿದ್ದಾರೆ. ಒಟ್ಟಿನಲ್ಲಿ ಗಾನವಿ ಗೌಡ ಅವರ ಹಳೆಯ ವಿಡಿಯೋ ಮತ್ತು ಈಗಿನ ಕಣ್ಣೀರಿನ ಪ್ರಸಂಗವನ್ನ ಒಟ್ಟಿಗೆ ಇಟ್ಟು ಕಿಚ್ಚ ಸುದೀಪ್ ಮಾಡಿದ ಪಂಚಾಯ್ತಿ ಸಖತ್ ಮನರಂಜನೆ ನೀಡಿದೆ.


ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಗಾನವಿ ಗೌಡ ಆಟದ ಜೊತೆಗೆ ಅವರ ಮಾತುಗಳೂ ಈಗ ಚರ್ಚೆಯಾಗುತ್ತಿವೆ. ಕಿಚ್ಚನ ಪಂಚಾಯ್ತಿಯಲ್ಲಿ ಬಯಲಾದ ಈ ವಿಡಿಯೋ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಗಾನವಿ ಆಟ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES