BBK:13 ಬಿಗ್‌ಬಾಸ್‌ಗೆ ಎಂಟ್ರಿಯಾಗ್ತಿದ್ದಂತೆ ಈ ಎರಡು ಪ್ರಬಲ ಸ್ಪರ್ಧಿಗಳನ್ನೇ ಫ್ಲೈಟ್ ಹತ್ತಿಸಿದ ಗಾನವಿ!!
BBK 13 Wild card entry ganavi : ಬಿಗ್ ಬಾಸ್ ಮನೆಯಲ್ಲಿ ಗಾನವಿ ಗೌಡ ಘಾಟಿ ಆಟ ಆರಂಭ ಮಾಡಿ ಮೊದಲ ದಿನವೇ ಹಳೆಯ ಈ ಎರಡು ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ..
BBK 13 Wild card entry ganavi : ಯಶಸ್-ಕಿರಣ್‌ಗೆ ಗಾನವಿ ಮಾಸ್ ಡೋಸ್! ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ದಿನದಿಂದ ದಿನಕ್ಕೆ ರೋಚಕವಾಗ್ತಿದೆ.. ಇದೀಗ ಬಿಗ್ ಬಾಸ್ ಮನೆಗೆ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯ ಗ್ರ್ಯಾಂಡ್ ಎಂಟ್ರಿಯಾಗಿದೆ.ಅದು ಬೇರೆ ಯಾರೂ ಅಲ್ಲ.. ʻಘಾಟಿ ಗಾನವಿʼ ಎಂದೇ ಗುರುತಿಸಿಕೊಂಡಿರುವ ನಟಿ ಗಾನವಿ ಗೌಡ.
ಮನೆಗೆ ಕಾಲಿಟ್ಟ ಮೊದಲ ದಿನವೇ ಗಾನವಿ ಗೌಡ ತಮ್ಮ ಖಡಕ್ ಮಾತು, ದಿಟ್ಟ ನಡೆ ಮೂಲಕ ಸದ್ದು ಮಾಡಿದ್ದಾರೆ. ಅಷ್ಟೇ ಅಲ್ಲ.. ಹಳೆಯ ಸ್ಪರ್ಧಿಗಳಿಗೂ ತಮ್ಮ ಪವರ್ ತೋರಿಸಿದ್ದಾರೆ. ಹಾಗಾದ್ರೆ ಗಾನವಿ ಎಂಟ್ರಿ ಹೇಗಿತ್ತು? ಮನೆಗೆ ಕಾಲಿಟ್ಟ ಕೂಡಲೇ ಏನೆಲ್ಲಾ ಆಟ ಶುರುವಾಗಿದೆ? ನೋಡೋಣ ಈ ಸ್ಟೋರಿ..
ಬಿಗ್ ಬಾಸ್ ಮನೆಗೆ ʻಘಾಟಿʼ ಎಂಟ್ರಿ!
ಬಿಗ್ ಬಾಸ್ ಕನ್ನಡ ಸೀಸನ್ 13ರ ಅಖಾಡಕ್ಕೆ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ನಟಿ ಗಾನವಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ನೇರ ಮಾತು.. ದಿಟ್ಟ ನಡೆ.. ಖಡಕ್ ನಿರ್ಧಾರ.. ಇವೇ ಗಾನವಿ ಗೌಡ ಅವರ ಪ್ಲಸ್ ಪಾಯಿಂಟ್‌ಗಳು. ಮನೆಗೆ ಕಾಲಿಟ್ಟ ಮೊದಲ ದಿನವೇ ತಮ್ಮ ಖಡಕ್ ಆಟದ ಝಲಕ್ ತೋರಿಸಿರುವ ಗಾನವಿ, ಬಿಗ್ ಬಾಸ್ ಮನೆಯ ಹಳೆಯ ಸಮೀಕರಣಗಳನ್ನೇ ಬದಲಿಸುವ ಸೂಚನೆ ನೀಡಿದ್ದಾರೆ.
ಎಂಟ್ರಿಗೂ ಮುನ್ನವೇ ಫೋನ್ ಟಾಸ್ಕ್!
ಮನೆಗೆ ಪ್ರವೇಶಿಸುವ ಮುನ್ನವೇ ಗಾನವಿ ಗೌಡಗೆ ಬಿಗ್ ಬಾಸ್ ಕೊಟ್ಟಿದ್ದು ವಿಶೇಷ ಟಾಸ್ಕ್.ಫೋನ್ ಕಾಲ್ ಮೂಲಕ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನೇರ ಪ್ರಶ್ನೆಗಳನ್ನ ಕೇಳಿದ ಗಾನವಿ, ತಮ್ಮ ಎಂಟ್ರಿಗೂ ಮುನ್ನವೇ ಆಟದ ಕಾವು ಹೆಚ್ಚಿಸಿದ್ದಾರೆ. ʻನನ್ನ ಕನಸುಗಳನ್ನ ನನಸು ಮಾಡಿಕೊಳ್ಳಲು ಬಂದಿದ್ದೇನೆ.. ಬಿಗ್ ಬಾಸ್ ನನಗೆ ಅಲ್ಟಿಮೇಟ್ ಮೈಲ್ಸ್‌ಸ್ಟೋನ್ʼ ಎಂದು ಹೇಳಿಕೊಂಡಿರುವ ಗಾನವಿ, ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲೇ ಮನೆ ಪ್ರವೇಶಿಸಿದ್ದಾರೆ.
ಯಶಸ್-ಕಿರಣ್‌ಗೆ ಗಾನವಿ ಶಾಕ್!
ಮನೆಗೆ ಕಾಲಿಟ್ಟ ಬೆನ್ನಲ್ಲೇ ಗಾನವಿ ಗೌಡ ತೆಗೆದುಕೊಂಡ ಕೆಲವು ನಿರ್ಧಾರಗಳು ಹಳೆಯ ಸ್ಪರ್ಧಿಗಳಿಗೆ ಶಾಕ್ ನೀಡಿವೆ. ವಿಶೇಷವಾಗಿ ಯಶಸ್ ಹಾಗೂ ಕಿರಣ್ ಶಾಸ್ತ್ರಿ ವಿರುದ್ಧ ಗಾನವಿ ಖಡಕ್ ನಿರ್ಧಾರ ಕೈಗೊಂಡಿದ್ದಾರೆ. ಇವರಿಬ್ಬರನ್ನೂ ಮನೆಯಿಂದ ಹೊರಗಿಡುವ ನಿರ್ಧಾರಕ್ಕೆ ಗಾನವಿ ಮುಂದಾಗಿದ್ದು, ಪರಿಣಾಮವಾಗಿ ಯಶಸ್ ಹಾಗೂ ಕಿರಣ್ ಶಾಸ್ತ್ರಿಗೆ ಮತ್ತೆ ಫ್ಲೈಟ್ ಏರುವಂತಹ ಪರಿಸ್ಥಿತಿ ಎದುರಾಗಿದೆ.
ಇನ್ನು ಗಾನವಿ ಗೌಡ ಅವರ ಹಿನ್ನೆಲೆ ನೋಡೋದಾದ್ರೆ.. ಚಿಕ್ಕಮಗಳೂರು ಮೂಲದ ಗಾನವಿ, 18 ಜನರ ತುಂಬು ಕುಟುಂಬದಿಂದ ಬಂದವರು. ಗಾನವಿ ಅವರ ತಾಯಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಫೈನಲ್ ಇಯರ್ ಲಾ ವ್ಯಾಸಂಗ ಮಾಡುತ್ತಿರುವ ಗಾನವಿ, ಕಿರುತೆರೆ ಹಾಗೂ ಚಿತ್ರರಂಗದಲ್ಲೂ ಅಭಿನಯಿಸಿದ್ದಾರೆ.
ʻಘಾಟಿ ಗಾನವಿʼ ಹೆಸರು ಬಂದಿದ್ದೇಗೆ?
ಜೀ ಕನ್ನಡದಲ್ಲಿ ಪ್ರಸಾರವಾದ ʻಹಳ್ಳಿ ಪವರ್ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಗಾನವಿ, ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು. ಅವರ ದಿಟ್ಟ ಸ್ವಭಾವ ಮತ್ತು ನೇರ ನಡೆ ಗಮನಿಸಿದ್ದ ಆಂಕರ್ ಅಕುಲ್ ಬಾಲಾಜಿ, ಗಾನವಿಗೆ ʻಘಾಟಿ ಗಾನವಿʼ ಎಂಬ ಹೆಸರು ನೀಡಿದ್ದರು. ಇದೀಗ ಅದೇ ಘಾಟಿ ಗಾನವಿ ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ದಿನವೇ ಫೋನ್ ಟಾಸ್ಕ್ ನೀಡಲಾಗಿದ್ದು,ಎಂಟ್ರಿ ಕೊಟ್ಟ ಕೂಡಲೇ ಖಡಕ್ ನಿರ್ಧಾರ ಕೈಗೊಂಡಿದ್ದಾರೆ. ಹಳೆಯ ಸ್ಪರ್ಧಿಗಳಿಗೆ ನೇರ ಸವಾಲ್ ಎಸೆದಿದ್ದಾರೆ. ಹೀಗಾಗಿ ಬಿಗ್ ಬಾಸ್ ಸೀಸನ್ 13ರಲ್ಲಿ ಗಾನವಿ ಗೌಡ ಎಂಟ್ರಿ ಕೇವಲ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಉಳಿಯುತ್ತಾ?ಅಥವಾ ಮನೆಯ ಆಟದ ದಿಕ್ಕನ್ನೇ ಬದಲಿಸುವಂತಹ ದೊಡ್ಡ ತಿರುವು ಕೊಡ್ತಾರಾ?ಗಾನವಿ ಅವರ ಆಟ ಮುಂದಿನ ದಿನಗಳಲ್ಲಿ ಹೇಗೆ ಸಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಸದ್ಯ ಕಲರ್ಸ್ ಕನ್ನಡ ಬಿಟ್ಟ ಪ್ರೋಮೋದಲ್ಲಿ ʻಘಾಟಿ ಗಾನವಿʼ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ತೋರಿಸಿದ ಪವರ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.