SOCIAL MEDIA

Newsletter

PARTNER SITES
Select Language Select State

BBK 13: ಬಿಗ್‌ಬಾಸ್‌ ಮನೆಗೆ ತಾಂಡವ್ ರಾಮ್ ರೀ ಎಂಟ್ರಿ!.. ಈ ಬಾರಿ ಒಳ್ಳೆತನ ನಿರೀಕ್ಷಿಸಬೇಡಿ ಎಂದಿದ್ಯಾಕೆ?

BBK 13 Thandav ram re entry : 3ನೇ ವಾರದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್ ರಾಮ್, 4ನೇ ವಾರದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

Written By Ramya. R. Gowda
Published: Oct 01, 2026, 04:06 PM IST | Updated: Oct 01, 2026, 04:17 PM IST
Join

BBK 13 Thandav ram re entry : 3ನೇ ವಾರದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್ ರಾಮ್, 4ನೇ ವಾರದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

 

 ಬಿಗ್‌ಬಾಸ್ ಮನೆಯಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್‌ ನೀಡಲಾಗಿದೆ 3ನೇ ವಾರದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್ ರಾಮ್, 4ನೇ ವಾರದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮನೆಯ ಕ್ಯಾಪ್ಟನ್ಸಿಯನ್ನೇ ಹೈಜಾಕ್ ಮಾಡಿ ಎಂಟ್ರಿ ಕೊಟ್ಟಿದ್ದಾರೆ. ಮನೆಯೊಳಗೆ ಕಾಲಿಡುತ್ತಿದ್ದಂತೆ,‘ನನ್ನಿಂದ ಒಳ್ಳೆತನ ನಿರೀಕ್ಷೆ ಮಾಡಬೇಡಿ’ ಅಂತ ಸಹಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

 

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ದಿನಕ್ಕೊಂದು ಟ್ವಿಸ್ಟ್‌.. ಕ್ಷಣಕ್ಕೊಂದು ಶಾಕ್‌..! ಮೂರನೇ ವಾರದಲ್ಲಿ ಮಿಡ್‌ವೀಕ್ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಮನೆಯಿಂದ ಹೊರಬಿದ್ದಿದ್ದ ನಟ ತಾಂಡವ್ ರಾಮ್, ಇದೀಗ ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

 

ತಾಂಡವ್ ಎಕ್ಸಿಟ್ ಆಗುವಾಗ ಸ್ನೇಹಿತ ಗಗನ್ ಚಿನ್ನಪ್ಪ, ಕಾವ್ಯಾ, ಸಂಗೀತಾ ಸೇರಿದಂತೆ ಹಲವು ಸ್ಪರ್ಧಿಗಳು ಕಣ್ಣೀರಿಟ್ಟಿದ್ದರು. ತಾಂಡವ್‌ನನ್ನು ಮನೆಯಿಂದ ಹೊರಗೆ ಕಳಿಸಬೇಡಿ ಅಂತ ಗಗನ್ ಕೂಡ ಬಿಗ್‌ಬಾಸ್ ಬಳಿ ಮನವಿ ಮಾಡಿಕೊಂಡಿದ್ದರು.

ಇನ್ನು ಕಿಚ್ಚನ ಪಂಚಾಯಿತಿಯಲ್ಲೂ ತಾಂಡವ್‌ಗೆ ಮನೆಯೊಳಗಿನ ವಿಡಿಯೋ ಟ್ರೇಲರ್ತೋ ತೋರಿಸಲಾಗಿತ್ತು. ಆದರೆ, ಟ್ರೇಲರ್ ಅರ್ಧಕ್ಕೆ ನಿಲ್ಲಿಸಿದ ಬಿಗ್‌ಬಾಸ್, ‘ನಿಮ್ಮ ಆಟ ಇನ್ನೂ ಮುಗಿದಿಲ್ಲ’ ಅಂತ ಹೇಳಿ ತಾಂಡವ್‌ರನ್ನು ಮತ್ತೆ ಮನೆಯೊಳಗೆ ಕಳುಹಿಸುವ ಸುಳಿವು ನೀಡಿದ್ದರು.ಆದ್ರೆ, ಇದೀಗ ಆ ಸುಳಿವು ನಿಜವಾಗಿದೆ. ಸುಮಾರು ಒಂದು ವಾರದ ಬಳಿಕ ತಾಂಡವ್ ರಾಮ್ ಮತ್ತೆ ಬಿಗ್‌ಬಾಸ್ ಮನೆಗೆ ರೀ-ಎಂಟ್ರಿ ಕೊಟ್ಟಿದ್ದಾರೆ.

ಆದ್ರೆ ಈ ಬಾರಿ ಎಂಟ್ರಿ ಮಾತ್ರ ಸಖತ್ ಡಿಫರೆಂಟ್‌ ಆಗಿದ್ದು,ತಾಂಡವ್ ರಾಮ್ ಸ್ಪರ್ಧಿಯಾಗಿ ಅಲ್ಲ, ‘ಹೈಜಾಕರ್’ ಆಗಿ ಮನೆ ಪ್ರವೇಶಿಸಿದ್ದಾರೆ.ಬಿಗ್‌ಬಾಸ್ ಘೋಷಣೆ ಮಾಡುತ್ತಿದ್ದಂತೆ ಮನೆಯ ಸ್ಪರ್ಧಿಗಳಲ್ಲಿ ಕುತೂಹಲ ಹೆಚ್ಚಾಗಿದೆ.‘ಒಬ್ಬ ಹೈಜಾಕರ್ ಮನೆಯ ಕ್ಯಾಪ್ಟನ್ಸಿಯನ್ನು ಹೈಜಾಕ್ ಮಾಡಲು ಬಂದಿದ್ದಾರೆ. ನಿಮ್ಮೆಲ್ಲರ ನೂತನ ಕ್ಯಾಪ್ಟನ್ ಆಗಿ ತಾಂಡವ್ ರಾಮ್ ಮನೆಯನ್ನು ಪ್ರವೇಶಿಸುತ್ತಿದ್ದಾರೆ’ ಎಂದು ಬಿಗ್‌ಬಾಸ್ ಘೋಷಿಸಿದ್ದಾರೆ.


ಕ್ಯಾಪ್ಟನ್ಸಿಯನ್ನೇ ಹೈಜಾಕ್ ಮಾಡಿಕೊಂಡು ಮನೆಗೆ ಎಂಟ್ರಿ ಕೊಟ್ಟ ತಾಂಡವ್, ಈ ಬಾರಿ ತಮ್ಮ ಆಟದ ಸ್ಟೈಲ್ ಬದಲಾಗಿದೆ ಅನ್ನೋ ಸೂಚನೆ ನೀಡಿದ್ದಾರೆ.

“ಯಾಕೋ ಡಲ್ ಆಗಿದ್ದೀರಾ ಮಚ್ಚಾ? ನಾನು ಬಂದಾಯ್ತು. ತುಂಬಾ ಒಳ್ಳೆತನ ತೋರಿಸಿ ನೋವು, ಪೆಟ್ಟು ತಿಂದಿದ್ದೇನೆ, ಅನುಭವಿಸಿದ್ದೇನೆ. ಇನ್ಮೇಲೆ ಆ ಒಳ್ಳೆತನವನ್ನು ನಾನು ಈ ಮನೆಯಲ್ಲಿ ಇರೋವರೆಗೂ ನನ್ನ ಹತ್ತಿರ ಎಕ್ಸ್‌ಪೆಕ್ಟ್ ಮಾಡಬೇಡಿ. ನ್ಯಾಯ, ನ್ಯಾಯ, ನಮ್ಮ ತಾಯಾಣೆ ನ್ಯಾಯ! ತಾಂಡವ್ ರಾಮ್ ಮಾತು ಕೇಳಿ ಮನೆಯೊಳಗೆ ಮತ್ತೆ ಹೊಸ ಲೆಕ್ಕಾಚಾರ ಶುರುವಾಗಿದೆ.

 ಇಷ್ಟು ದಿನ ತಾಂಡವ್‌ ಜೊತೆಗಿದ್ದವರು ಯಾರು? ವಿರೋಧಿಸಿದವರು ಯಾರು? ಕ್ಯಾಪ್ಟನ್ ಆಗಿ ತಾಂಡವ್ ತೆಗೆದುಕೊಳ್ಳುವ ಮೊದಲ ನಿರ್ಧಾರ ಏನು?ಮೂರನೇ ವಾರದ ಎಮರ್ಜೆನ್ಸಿ ಎಕ್ಸಿಟ್‌ನಿಂದ ನಾಲ್ಕನೇ ವಾರದ ಕ್ಯಾಪ್ಟನ್ಸಿ ಹೈಜಾಕ್‌ವರೆಗೆ..ತಾಂಡವ್ ರಾಮ್ ಅವರ ಈ ಕಮ್‌ಬ್ಯಾಕ್ ಬಿಗ್‌ಬಾಸ್ ಮನೆಯ ಆಟಕ್ಕೆ ಹೊಸ ತಿರುವು ನೀಡಿದೆ.

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES