• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಅಗ್ನಿಪರೀಕ್ಷೆ ಗೆದ್ದು ದೊಡ್ಮನೆಗೆ ಬಂದ ಲಿಖಿತ್‌ಗೆ ಶಾಕ್‌! ಬಿಗ್‌ ಬಾಸ್‌ನಿಂದ ಔಟ್‌.. ಸಿಕ್ಕ ಕ್ಯಾಶ್‌ ಪ್ರೈಜ್‌ ಎಷ್ಟು?

ಅಗ್ನಿಪರೀಕ್ಷೆ ಗೆದ್ದು ದೊಡ್ಮನೆಗೆ ಬಂದ ಲಿಖಿತ್‌ಗೆ ಶಾಕ್‌! ಬಿಗ್‌ ಬಾಸ್‌ನಿಂದ ಔಟ್‌.. ಸಿಕ್ಕ ಕ್ಯಾಶ್‌ ಪ್ರೈಜ್‌ ಎಷ್ಟು?

BBK 13 Likith Gondi : ಅಗ್ನಿಪರೀಕ್ಷೆ ಗೆದ್ದು ದೊಡ್ಮನೆಗೆ ಬಂದ ಲಿಖಿತ್‌ಗೋಂದಿಗೆ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಹಾಗಾದ್ರೆ ಅವರಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಗೊತ್ತಾ?

Written ByRamya. R. Gowda
Published: Oct 05, 2026, 10:09 AM IST|Updated: Oct 05, 2026, 10:21 AM IST
joinshare
ಅಗ್ನಿಪರೀಕ್ಷೆ ಗೆದ್ದು ದೊಡ್ಮನೆಗೆ ಬಂದ ಲಿಖಿತ್‌ಗೆ ಶಾಕ್‌! ಬಿಗ್‌ ಬಾಸ್‌ನಿಂದ ಔಟ್‌.. ಸಿಕ್ಕ ಕ್ಯಾಶ್‌ ಪ್ರೈಜ್‌ ಎಷ್ಟು?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬೆಂಗಳೂರಿಗರೇ ಬಿಗ್‌ ಅಲರ್ಟ್‌..! ಇಂದಿನಿಂದ 60 ದಿನ ರೇಸ್‌ ಕೋರ್ಸ್‌ ರಸ್ತೆ ಬಂದ್‌; ಪರ್ಯಾಯ ಮಾರ್ಗಗಳಿವು!

ಬೆಂಗಳೂರಿಗರೇ ಬಿಗ್‌ ಅಲರ್ಟ್‌..! ಇಂದಿನಿಂದ 60 ದಿನ ರೇಸ್‌ ಕೋರ್ಸ್‌ ರಸ್ತೆ ಬಂದ್‌; ಪರ್ಯಾಯ ಮಾರ್ಗಗಳಿವು!

2

ಅಗ್ನಿಪರೀಕ್ಷೆ ಗೆದ್ದು ದೊಡ್ಮನೆಗೆ ಬಂದ ಲಿಖಿತ್‌ಗೆ ಶಾಕ್‌! ಬಿಗ್‌ ಬಾಸ್‌ನಿಂದ ಔಟ್‌.. ಸಿಕ್ಕ ಕ್ಯಾಶ್‌ ಪ್ರೈಜ್‌ ಎಷ್ಟು?

3

ದಿನ ಭವಿಷ್ಯ 05-10-2026: ಸೋಮವಾರದಂದು ಶಿವ ಯೋಗ.. ಈ ರಾಶಿಯವರಿಗೆ ಪರಮೇಶ್ವರನ ಕೃಪೆ

4

ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ಮ್ಯೂಸಿಕ್‌ ಮಾಂತ್ರಿಕ ಎ. ಆರ್.‌ ರೆಹಮಾನ್..‌ ವಿಡಿಯೋ ವೈರಲ್

5

ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಚಾಣಕ್ಯರ ಈ 4 ಸರಳ ಸಲಹೆ ಪಾಲಿಸಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

BBK 13 Likith Gondi :ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಮನೆಯಲ್ಲಿ ಮತ್ತೊಂದು ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ.‘ಅಗ್ನಿಪರೀಕ್ಷೆ’ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಕಾಮನ್‌ ಮ್ಯಾನ್‌ ಲಿಖಿತ್‌ ಗೋಂದಿ ಇದೀಗ ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದಿದ್ದಾರೆ.ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್‌ ಆದ ಲಿಖಿತ್‌ ನೇರವಾಗಿ ಕಿಚ್ಚ ಸುದೀಪ್‌ ಅವರ ಮುಂದೆ ಬಂದಿದ್ದಾರೆ. ಅಷ್ಟಕ್ಕೂ ಬಿಗ್‌ ಬಾಸ್‌ನಿಂದ ಹೊರಬಂದ ಲಿಖಿತ್‌ಗೆ ಸಿಕ್ಕ ಕ್ಯಾಶ್‌ ಪ್ರೈಜ್‌ ಎಷ್ಟು? ಈ ಸ್ಟೋರಿಯಲ್ಲಿ ನೋಡೋಣ.

‘ಅಗ್ನಿಪರೀಕ್ಷೆ’ಯ ಕಠಿಣ ಸವಾಲುಗಳನ್ನು ಎದುರಿಸಿ ಗೆದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಲಿಖಿತ್‌ ಗೋಂದಿ ದೊಡ್ಮನೆಯಲ್ಲಿ ತಮ್ಮದೇ ಶೈಲಿಯ ಆಟ, ಚೇಷ್ಟೆ ಮತ್ತು ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದರು. ಮನೆಯ ಸದಸ್ಯರೊಂದಿಗೆ ಬೆರೆತು, ತಮ್ಮದೇ ರೀತಿಯಲ್ಲಿ ಮನರಂಜನೆ ನೀಡಿದ್ದ ಲಿಖಿತ್‌, ಇದೀಗ ಬಿಗ್‌ ಬಾಸ್‌ ಪಯಣಕ್ಕೆ ಗುಡ್‌ಬೈ ಹೇಳಿದ್ದಾರೆ. ಈ ವಾರದ ಎಲಿಮಿನೇಷನ್‌ ಪ್ರಕ್ರಿಯೆ ಮಾತ್ರ ಭಾರೀ ಸಸ್ಪೆನ್ಸ್‌ಗೆ ಕಾರಣವಾಗಿತ್ತು.ಮನೆಯ ಸದಸ್ಯರ ಲೆಕ್ಕಾಚಾರದ ಪ್ರಕಾರ ಯಶಸ್‌ ಎಲಿಮಿನೇಟ್‌ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಪ್ರೇಕ್ಷಕರ ವೋಟಿಂಗ್‌ನಲ್ಲಿ ಯಶಸ್‌ ಮೊದಲಿಗರಾಗಿ ಸೇಫ್‌ ಆದರು.

ಇನ್ನು ಡೇಂಜರ್‌ ಝೋನ್‌ನಲ್ಲಿದ್ದ ಮಂಜ ಮತ್ತು ಧನುಷ್‌ ಅವರನ್ನೂ ಕಿಚ್ಚ ಸುದೀಪ್‌ ಒಬ್ಬೊಬ್ಬರಾಗಿ ಸೇಫ್‌ ಮಾಡಿದರು.ಕೊನೆಗೆ ಸಂಗೀತಾ, ಕಿರಣ್‌ ಶಾಸ್ತ್ರಿ ಮತ್ತು ಲಿಖಿತ್‌ ಮಾತ್ರ ಉಳಿದುಕೊಂಡಿದ್ದರು.ಆಗ ಬಿಗ್‌ ಬಾಸ್‌ ಮನೆಯಲ್ಲಿ ಮತ್ತೊಂದು ಟ್ವಿಸ್ಟ್‌ ಎದುರಾಯ್ತು. ಕಮಾಂಡೋಸ್‌ ತಂಡ ಮನೆಗೆ ಎಂಟ್ರಿ ಕೊಟ್ಟು, ಈ ಮೂವರನ್ನೂ ಹೊರಗೆ ಕರೆದುಕೊಂಡು ಹೋಯ್ತು.ಆದ್ರೆ... ಹೊರಗೆ ಹೋದ ಸಂಗೀತಾ ಮತ್ತು ಕಿರಣ್‌ ಮತ್ತೆ ದೊಡ್ಮನೆಗೆ ವಾಪಸ್‌ ಆದರು. ಆದರೆ ಲಿಖಿತ್‌ ಮಾತ್ರ ಬಿಗ್‌ ಬಾಸ್‌ ಮನೆಗೆ ವಾಪಸ್‌ ಬರಲೇ ಇಲ್ಲ.
ಬದಲಾಗಿ ಲಿಖಿತ್‌ ನೇರವಾಗಿ ಕಿಚ್ಚ ಸುದೀಪ್‌ ಅವರಿದ್ದ ವೇದಿಕೆಗೆ ಎಂಟ್ರಿ ಕೊಟ್ಟರು.

ಈ ಮೂಲಕ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ಲಿಖಿತ್‌ ಗೋಂದಿ ಅವರ ಜರ್ನಿ ಅಂತ್ಯಗೊಂಡಿತು. ಆದ್ರೆ, ಎಲಿಮಿನೇಷನ್‌ ಬಳಿಕ ಲಿಖಿತ್‌ಗೆ ಸಿಕ್ಕ ಮತ್ತೊಂದು ಸರ್‌ಪ್ರೈಸ್‌ ಎಲ್ಲರ ಗಮನ ಸೆಳೆಯಿತು.ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿ ಹೊರಬಂದ ಲಿಖಿತ್‌ ಗೋಂದಿಗೆ ಕಾರ್ಯಕ್ರಮದ ಸ್ಪಾನ್ಸರ್ಸ್‌ ಕಡೆಯಿಂದ 3 ಲಕ್ಷದ 50 ಸಾವಿರ ರೂಪಾಯಿ ನಗದು ಬಹುಮಾನದ ಚೆಕ್‌ ನೀಡಲಾಯಿತು.ಅಂದರೆ, ಬಿಗ್‌ ಬಾಸ್‌ ಜರ್ನಿ ಮುಗಿದ್ರೂ ಲಿಖಿತ್‌ ಕೈ ಖಾಲಿಯಾಗಿ ಹೊರಬರಲಿಲ್ಲ.

ಎಮೋಷನಲ್‌ ಮೂಮೆಂಟ್
ಇನ್ನು ವೇದಿಕೆ ಮೇಲೆ ಕಿಚ್ಚ ಸುದೀಪ್‌ ಅವರೊಂದಿಗೆ ನಿಂತಿದ್ದ ಲಿಖಿತ್‌ ಅವರಿಗೆ ಮತ್ತೊಂದು ಭಾವುಕ ಕ್ಷಣ ಎದುರಾಯ್ತು. ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ಸುಂದರ ಕ್ಷಣಗಳು, ಸ್ನೇಹಿತರ ಜೊತೆಗಿನ ಬಾಂಧವ್ಯ ಹಾಗೂ ತಮ್ಮ ಜರ್ನಿಯ ಪ್ರಮುಖ ಘಟನೆಗಳನ್ನು ಒಳಗೊಂಡ ‘ಜರ್ನಿ ವಿಟಿ’ ಪ್ರಸಾರವಾಯ್ತು. ತಮ್ಮ ಬಿಗ್‌ ಬಾಸ್‌ ದಿನಗಳ ನೆನಪುಗಳನ್ನು ಪರದೆಯ ಮೇಲೆ ನೋಡಿದ ಲಿಖಿತ್‌ ಭಾವುಕರಾದರು. ವೇದಿಕೆಯಲ್ಲೇ ಕಣ್ಣೀರಿಟ್ಟರು.
ಆಗ ಕಿಚ್ಚ ಸುದೀಪ್‌ ಲಿಖಿತ್‌ ಅವರ ಬಳಿ ತೆರಳಿ, ಕಣ್ಣೀರು ಒರೆಸಿ, ಬೆನ್ನ ತಟ್ಟಿ ಸಾಂತ್ವನ ಹೇಳಿದರು.

ಅಗ್ನಿಪರೀಕ್ಷೆಯ ಸವಾಲು ಗೆದ್ದು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಲಿಖಿತ್‌ ಗೋಂದಿ, ಇದೀಗ ತಮ್ಮ ಜರ್ನಿಯನ್ನು ಮುಗಿಸಿದ್ದಾರೆ. ದೊಡ್ಮನೆಯ ಆಟಕ್ಕೆ ಅಂತ್ಯ ಹಾಡಿದ ಲಿಖಿತ್‌ಗೆ 3.50 ಲಕ್ಷ ರೂಪಾಯಿ ಕ್ಯಾಶ್‌ ಪ್ರೈಜ್‌ ಸಿಕ್ಕಿದೆ.ಆದ್ರೆ ಲಿಖಿತ್‌ ಎಲಿಮಿನೇಷನ್‌ ಮಾತ್ರ ಮನೆಯ ಸದಸ್ಯರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ್ದು, ಬಿಗ್‌ ಬಾಸ್‌ ಮನೆಯಲ್ಲಿ ಮುಂದಿನ ವಾರ ಹೋಗಬಹುದು ಎಂದು ಈಗಲೇ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

 

Add Zee News as a Preferred Source
TAGS:
Bigg Boss Kannada Season 13