SOCIAL MEDIA

Newsletter

PARTNER SITES
Select Language Select State

BBK13: "ಆಸಿಯಾ ಡ್ರಾಮಾ ಮಾಡೋದೆ ಜಾಸ್ತಿ ಪ್ರತಿ ಬಾರಿ ವಿಕ್ಟಿಮ್‌ ಕಾರ್ಡ್‌ ಪ್ಲೇ ಮಾಡ್ತಾರೆ"

BBK13: "ಆಸಿಯಾ ಡ್ರಾಮಾ ಮಾಡೋದೆ ಜಾಸ್ತಿ ಪ್ರತಿ ಬಾರಿ ವಿಕ್ಟಿಮ್‌ ಕಾರ್ಡ್‌ ಪ್ಲೇ ಮಾಡ್ತಾರೆ ಎಂಬ ಬಿಗ್‌ಬಾಸ್‌ನ ಸ್ಪರ್ಧಿಯೊಬ್ಬರು ಹೇಳಿದ್ದಾರೆ.

Written By Ramya. R. Gowda
Published: Sep 29, 2026, 10:04 AM IST | Updated: Sep 29, 2026, 10:14 AM IST
Join

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮೂರನೇ ವಾರವೇ ನಟಿ ವೈಷ್ಣವಿ ಕೌಂಡಿನ್ಯ ಅವರ ಜರ್ನಿ ಅಂತ್ಯವಾಗಿದೆ. ಮನೆಯಿಂದ ಹೊರಬಂದ ಬಳಿಕ ವಿಜಯ ಕರ್ನಾಟಕ ವೆಬ್‌ಗೆ ನೀಡಿದ ಸಂದರ್ಶನದಲ್ಲಿ ವೈಷ್ಣವಿ, ಬಿಗ್‌ಬಾಸ್ ಮನೆಯೊಳಗಿನ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಆಸಿಯಾ ಫಿರ್ದೋಸ್ ವಿರುದ್ಧ ವೈಷ್ಣವಿ ಮಾಡಿರುವ ಕಾಮೆಂಟ್‌ಗಳು ಈಗ ಗಮನ ಸೆಳೆದಿವೆ.
 

"ಆಸಿಯಾ ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ತಾರೆ.. ಬಿಗ್ ಟೈಮ್ ಡ್ರಾಮಾ ಮಾಡ್ತಾರೆ" ಎಂದು ವೈಷ್ಣವಿ ಹೇಳಿದ್ದಾರೆ.


ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವ ಮುನ್ನವೇ ಒಂದು ಲೆಕ್ಕಾಚಾರ... ಆದ್ರೆ ಮನೆಯೊಳಗೆ ಹೋದ ಬಳಿಕ ಮತ್ತೊಂದು ಆಟ! ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೂರನೇ ವಾರವೇ ನಟಿ ವೈಷ್ಣವಿ ಕೌಂಡಿನ್ಯ ಎಲಿಮಿನೇಟ್ ಆಗಿದ್ದಾರೆ.ಫಿಸಿಕಲ್ ಟಾಸ್ಕ್‌ಗಳಲ್ಲಿ ಭಾಗವಹಿಸಿಲ್ಲ ಅನ್ನೋ ಕಾರಣಕ್ಕೆ ವೈಷ್ಣವಿ ಈಸಿ ಟಾರ್ಗೆಟ್ ಆಗಿದ್ದರು ಎಂಬ ಮಾತು ಕೇಳಿಬಂದಿತ್ತು. ಆದ್ರೆ, ತಮ್ಮ ಮೇಲೆ ಆರೋಪ ಬಂದಾಗಲೆಲ್ಲಾ ವೈಷ್ಣವಿ ಧ್ವನಿ ಎತ್ತಿದ್ದರು.
 

ಇದೀಗ ಮನೆಯಿಂದ ಹೊರಬಂದ ಬಳಿಕ ನೀಡಿರುವ ಸಂದರ್ಶನದಲ್ಲಿ ಬಿಗ್‌ಬಾಸ್ ಮನೆಯ ಆಟದ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ವೈಷ್ಣವಿ ಕೌಂಡಿನ್ಯ
"ಈಸಿ ಟಾರ್ಗೆಟ್ ಅಂತೂ ಖಂಡಿತವಾಗ್ಲೂ ಮಾಡಿದರು. ನಾನು ಫಿಸಿಕಲ್ ಟಾಸ್ಕ್ ಆಡೇ ಇಲ್ಲ. ಆದರೆ ನಾನು ಆಡಿದೀನಿ, ಗುದ್ದಾಡಿದ್ದೀನಿ, ಕಚ್ಚಾಡಿದ್ದೀನಿ."ಇನ್ನು ವೈಷ್ಣವಿ ಹೆಚ್ಚು ಮಾತನಾಡಿರುವುದು ಆಸಿಯಾ ಫಿರ್ದೋಸ್ ವಿಚಾರದ ಬಗ್ಗೆ. ಸ್ವಿಮ್ಮಿಂಗ್‌ ಪೂಲ್‌ಗೆ ಟೈರ್ ಹಾಕುವ ಟಾಸ್ಕ್ ವೇಳೆ ವೈಷ್ಣವಿ ಮತ್ತು ಆಸಿಯಾ ನಡುವೆ ಮಾತಿನ ಚಕಮಕಿ ನಡೆದಿತ್ತು.ಈ ವೇಳೆ ಆಸಿಯಾ ಅತ್ತಿದ್ದ ವಿಚಾರವೂ ಚರ್ಚೆಗೆ ಕಾರಣವಾಗಿತ್ತು.ಈ ಘಟನೆ ಬಗ್ಗೆ ಮಾತನಾಡಿರುವ ವೈಷ್ಣವಿ,ಆಸಿಯಾ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.


"ಮೇಜರ್ ಆಗಿ ಆಸಿಯಾ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದರು. ಸಡನ್ ಆಗಿ ಅತ್ತು ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿಕೊಂಡು ಡ್ರಾಮಾ ಮಾಡಿದರು. ಬಿಗ್ ಟೈಮ್ ಡ್ರಾಮಾ ಅಂಡ್ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದರು."


ಆಸಿಯಾ ಕ್ರೌನ್ ಇಟ್ಟುಕೊಂಡು ಟಾಸ್ಕ್‌ನಲ್ಲಿ ಭಾಗವಹಿಸುವ ರೀತಿಯ ಬಗ್ಗೆಯೂ ವೈಷ್ಣವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಾಸ್ಕ್‌ನಲ್ಲಿ ಸಂಪೂರ್ಣವಾಗಿ ಭಾಗವಹಿಸದೇ, ಕೇವಲ ಡಿಫೆಂಡರ್ ಅಥವಾ ಪ್ರೊಟೆಕ್ಟರ್ ಆಗಿರುತ್ತೇನೆ ಎನ್ನುವುದು ತಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. "ಅಷ್ಟೇ ಆಡೋದು ಅಂದ್ರೆ ನಾವೇನು ಕಡ್ಲೆ ಪುರಿ ತಿನ್ನೋಕೆ ಬಂದಿದ್ದೀವಾ?" ಎಂದು ವೈಷ್ಣವಿ ಪ್ರಶ್ನಿಸಿದ್ದಾರೆ.

ಇನ್ನು ಪೈಪ್ ಜೋಡಿಸುವ ಟಾಸ್ಕ್‌ನಲ್ಲಿ ಆಸಿಯಾ ಅತ್ತ ವಿಚಾರದ ಬಗ್ಗೆಯೂ ವೈಷ್ಣವಿ ಪ್ರತಿಕ್ರಿಯಿಸಿದ್ದಾರೆ. ಆಸಿಯಾಗೆ ನಿಜವಾಗಿಯೂ ಅಳು ಬಂದಿರಬಹುದು. ಆದರೆ ಪ್ರತಿಬಾರಿಯೂ ವಿಕ್ಟಿಮ್ ಕಾರ್ಡ್ ಬಳಸುತ್ತಿದ್ದಾರೆ ಅನ್ನೋ ಭಾವನೆ ತಮ್ಮಲ್ಲಿ ಮೂಡಿದೆ ಎಂದು ವೈಷ್ಣವಿ ಹೇಳಿದ್ದಾರೆ."ನಿಜವಾಗ್ಲೂ ಅಳು ಬಂದಿರಬಹುದು. ಆದರೆ ಅದರ ಹಿಂದೆ ಏನೇನು ಅತ್ತಿದ್ದಾರೋ ಅದು ಜೆನ್ಯೂನ್ ಅಂತ ಅನಿಸಲಿಲ್ಲ. ಪ್ರತಿ ಸಲ ವಿಕ್ಟಿಮ್ ಕಾರ್ಡ್ ಅಂತಾನೆ ಅನ್ನಿಸಿಕೊಳ್ಳೋದು."

ಒಟ್ನಲ್ಲಿ...ಬಿಗ್‌ಬಾಸ್ ಮನೆಯಲ್ಲಿ ಮೂರೇ ವಾರಗಳ ಜರ್ನಿ ಮುಗಿಸಿರುವ ವೈಷ್ಣವಿ ಕೌಂಡಿನ್ಯ, ಹೊರಬಂದ ಬಳಿಕ ತಮ್ಮ ಮನಸ್ಸಿನಲ್ಲಿದ್ದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸದ್ಯ ವೈಷ್ಣವಿ ಮಾಡಿರುವ ಈ ಕಾಮೆಂಟ್‌ಗಳು ಬಿಗ್‌ಬಾಸ್ ಪ್ರೇಕ್ಷಕರಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES