SOCIAL MEDIA

Newsletter

PARTNER SITES
Select Language Select State

BBK 13: ಟಾಸ್ಕ್‌ಗಾಗಿ ಕೆಲ ಸ್ಪರ್ಧಿಗಳ ಜೊತೆ ಆಸಿಯಾ ಸೀಕ್ರೆಟ್‌ ಬಾಂಧವ್ಯ, ಎಲ್ಲರ ಎದುರೇ ಬಯಲಾಯ್ತು Asiya ಮೈಂಡ್‌ ಗೇಮ್‌!

Asiya and thandav ram: ಬಿಗ್‌ಬಾಸ್‌ ಮನೆಯಲ್ಲಿ ಆಸಿಯಾ ಫಿರ್ದೋಸ್‌ ಕೇವಲ ಟಾಸ್ಕ್‌ಗಾಗಿ ಕೆಲ ಸ್ಪರ್ಧಿಗಳ ಜೊತೆ ಸ್ನೇಹ ಬೆಳೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Written By Ramya. R. Gowda
Published: Oct 02, 2026, 03:24 PM IST | Updated: Oct 02, 2026, 03:26 PM IST
Join

BBK 13: ಬಿಗ್‌ ಬಾಸ್‌ ಕನ್ನಡ ಸೀಸನ್‌-13ರ ನಾಲ್ಕನೇ ವಾರದ ಅಂತ್ಯಕ್ಕೆ ಬರ್ತಿದ್ದಂತೆ ದೊಡ್ಮನೆಯಲ್ಲಿ ಕಿತ್ತಾಟ ಜೋರಾಗಿದೆ. ಒಂದು ವಾರಕ್ಕೂ ಹೆಚ್ಚು ಕಾಲ ಬಿಗ್‌ ಬಾಸ್‌ ಮನೆಯಿಂದ ಹೊರಗಿದ್ದ ತಾಂಡವ್‌ ರಾಮ್‌, ಇದೀಗ ಕ್ಯಾಪ್ಟನ್‌ ಆಗಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಬರ್ತಿದ್ದಂತೆ ಒಂದಲ್ಲ.. ಎರಡಲ್ಲ.. ಹಲವು ಸ್ಪರ್ಧಿಗಳ ಮುಖವಾಡ ಕಳಚೋಕೆ ಮುಂದಾಗಿದ್ದಾರೆ. ಇದರ ನಡುವೆ ತಾಂಡವ್‌ ರಾಮ್‌ ಮತ್ತು ಆಸಿಯಾ ಫಿರ್ದೋಸ್‌ ನಡುವೆ ಮಾತಿನ ಸಮರವೇ ಶುರುವಾಗಿದೆ.

 

 ನಾಲ್ಕನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ ರದ್ದಾದ ಬೆನ್ನಲ್ಲೇ, ಹೊಸ ಕ್ಯಾಪ್ಟನ್‌ ಆಗಿ ತಾಂಡವ್‌ ರಾಮ್‌ ಆಯ್ಕೆಯಾಗಿದ್ದಾರೆ. ಮಾಡ್ರನ್‌ ಮಹಾಕವಿ ಮಂಜ ಮತ್ತು ಲಿಖಿತ್‌ ಗೊಂದಿ ಅವರ ಗೊಂದಲದ ನಿರ್ಧಾರದಿಂದ ಕ್ಯಾಪ್ಟನ್ಸಿ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಹೀಗಾಗಿ ಟಾಸ್ಕ್‌ ಆಡಿದವರಿಗೂ.. ಆಡದವರಿಗೂ ಬಿಗ್‌ ಬಾಸ್‌ ಬರೆ ಎಳೆದಿದ್ದರು. ಕೊನೆಗೆ ಕ್ಯಾಪ್ಟನ್ಸಿ ಟಾಸ್ಕ್‌ ಅನ್ನೇ ರದ್ದು ಮಾಡಿದ ಬಿಗ್‌ ಬಾಸ್‌, ತಾಂಡವ್‌ ರಾಮ್‌ ಅವರಿಗೆ ಕ್ಯಾಪ್ಟನ್‌ ಪಟ್ಟ ನೀಡಿದ್ದಾರೆ. ಕ್ಯಾಪ್ಟನ್‌ ಆಗಿ ಮನೆಗೆ ಕಾಲಿಟ್ಟ ತಾಂಡವ್‌ ರಾಮ್‌, ಬಂದ ತಕ್ಷಣವೇ ಫೈರ್‌ ಆಗಿದ್ದಾರೆ.

ಬಿಗ್‌ ಬಾಸ್‌ ನೀಡಿದ ಟಾಸ್ಕ್‌ನಲ್ಲಿ ಹಲವು ಸ್ಪರ್ಧಿಗಳ ವಿರುದ್ಧ ಗಂಭೀರ ಆರೋಪಗಳನ್ನೇ ಮಾಡಿದ್ದಾರೆ.ಜಗದೀಶ್‌ ಜಗ್ಗಿ ಅವರಿಗೆ "ಬೇರೆಯವರ ನೆರಳಿನಲ್ಲಿ ಬದುಕುತ್ತಿರುವವರು" ಎಂಬ ಬೋರ್ಡ್‌ ನೀಡಿದ್ದಾರೆ.ಇನ್ನು ಸೌಂದರ್ಯ ಶೆಟ್ಟಿ ಅವರಿಗೆ "ಮುಖವಾಡ ಧರಿಸಿದ ವ್ಯಕ್ತಿ" ಎಂಬ ಬೋರ್ಡ್‌ ನೀಡಿ, ತಮ್ಮ ಅವಕಾಶಗಳನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇಷ್ಟಕ್ಕೆ ತಾಂಡವ್‌ ರಾಮ್‌ ಸುಮ್ಮನಾಗಿಲ್ಲ ಆಸಿಯಾ ಫಿರ್ದೋಸ್‌ ಅವರ ಸ್ನೇಹದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಟಾಸ್ಕ್‌ಗಳಲ್ಲಿ ಸಹಾಯವಾಗುತ್ತಾರೆ ಎಂಬ ಕಾರಣಕ್ಕಾಗಿಯೇ ಕೆಲ ಸ್ಪರ್ಧಿಗಳ ಜೊತೆ ಆಸಿಯಾ ಬಾಂಧವ್ಯ ಬೆಳೆಸಿಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಆದ್ರೆ ತಾಂಡವ್‌ ರಾಮ್‌ ಅವರ ಈ ಆರೋಪಕ್ಕೆ ಆಸಿಯಾ ಫಿರ್ದೋಸ್‌ ಖಡಕ್‌ ಆಗಿಯೇ ತಿರುಗೇಟು ನೀಡಿದ್ದಾರೆ."ನಾನು ಇದನ್ನು ಶೇಕಡಾ ಒಂದರಷ್ಟೂ ಒಪ್ಪಿಕೊಳ್ಳುವುದಿಲ್ಲ. ನಾನು ಹೇಗಿದ್ದೀನೋ ಹಾಗೆಯೇ ಇಲ್ಲಿದ್ದೇನೆ. ನನ್ನ ವ್ಯಕ್ತಿತ್ವ ಏನೆಂದು ಇಲ್ಲಿ ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ."

ಸದ್ಯ ಆಸಿಯಾ ಮಾತಿಗೆ ತಾಂಡವ್‌ ರಾಮ್‌ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ?ಇಬ್ಬರ ನಡುವಿನ ಈ ಸಂಘರ್ಷ ಮುಂದೆ ಮತ್ತಷ್ಟು ಜೋರಾಗುತ್ತಾ? ದೊಡ್ಮನೆಯಲ್ಲಿ ಸ್ನೇಹವೇ ತಂತ್ರವಾ.. ಅಥವಾ ತಾಂಡವ್‌ ಮಾಡ್ತಿರೋ ಆರೋಪಗಳ ಹಿಂದೆ ಬೇರೆ ಲೆಕ್ಕಾಚಾರ ಇದೆಯಾ? ಬಿಗ್‌ ಬಾಸ್‌ ಮನೆಯೊಳಗಿನ ಈ ಹೊಸ ಸಂಘರ್ಷ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಒಟ್ನಲ್ಲಿ, ತಾಂಡವ್‌ ರಾಮ್‌ ಕ್ಯಾಪ್ಟನ್‌ ಆಗಿ ಎಂಟ್ರಿ ಕೊಟ್ಟ ಬೆನ್ನಲ್ಲೇ ದೊಡ್ಮನೆಯಲ್ಲಿ ಹೊಸ ಕಿತ್ತಾಟ ಶುರುವಾಗಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES