• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಒಂದೇ ವರ್ಷ ಅಷ್ಟೇ.. ಊಟಕ್ಕೂ ಗತಿ ಇಲ್ಲ : ಜನ ಮೆಚ್ಚಿದ್ದ ಸ್ಟಾರ್ ನಟಿಯ ಬದುಕು ಇಂದು ಬೀದಿಪಾಲು

ಒಂದೇ ವರ್ಷ ಅಷ್ಟೇ.. ಊಟಕ್ಕೂ ಗತಿ ಇಲ್ಲ : ಜನ ಮೆಚ್ಚಿದ್ದ ಸ್ಟಾರ್ ನಟಿಯ ಬದುಕು ಇಂದು ಬೀದಿಪಾಲು

ಸಾಲು ಸಾಲು ಜನಪ್ರಿಯ ಪಾತ್ರಗಳ ಮೂಲಕ ಒಂದು ಕಾಲದಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಹುಬೇಡಿಕೆ ಹೊಂದಿದ್ದ, ಹಿರಿಯ ನಟಿಯೊಬ್ಬರು ಇಂದು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೈಯಲ್ಲಿ ಕೆಲಸವಿಲ್ಲದೆ ಕಂಗೆಟ್ಟಿರುವ ಅವರು, ಜೀವನ ನಡೆಸಲು ಹಣವಿಲ್ಲ ಎಂದು ಸಂದರ್ಶನವೊಂದರಲ್ಲಿ ನೋವು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೆಲಸಕ್ಕಾಗಿ ಅಲೆದರೂ ಯಾರೂ ಅವಕಾಶ ನೀಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.. ಯಾರು ಆ ನಟಿ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್‌ ವರದಿ..

Written ByKrishna NK
Published: Oct 20, 2026, 02:37 PM IST|Updated: Oct 20, 2026, 02:39 PM IST
joinshare
ಒಂದೇ ವರ್ಷ ಅಷ್ಟೇ.. ಊಟಕ್ಕೂ ಗತಿ ಇಲ್ಲ : ಜನ ಮೆಚ್ಚಿದ್ದ ಸ್ಟಾರ್ ನಟಿಯ ಬದುಕು ಇಂದು ಬೀದಿಪಾಲು
Image Credit: anita kanwal

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದನೆ: ಅ. 26ಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ!

ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದನೆ: ಅ. 26ಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ!

2

ಕಾರು ಮಕ್ಕಳ ಆಟಿಕೆಯಲ್ಲ, ರಸ್ತೆ ಆಟದ ಮೈದಾನವಲ್ಲ! ಕರ್ನಾಟಕ ಹೈಕೋರ್ಟ್

3

ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ.. 9 ಜನರಿಗೆ ಗಾಯ, ಆತಂಕ!

4

ಜೀ ಕನ್ನಡ ನ್ಯೂಸ್ ಬಿಗ್ ಇಂಪ್ಯಾಕ್ಟ್ : ಸಂಚಾರಕ್ಕೆ ಮುಕ್ತವಾಯ್ತು ಹೊಸಪೇಟೆ-ಹಂಪಿ ರೈಲ್ವೆ ಮೇಲ್ಸೇತುವೆ

5

ಕನ್ನಡಿಗರ ಕ್ಷಮೆ ಕೇಳಿದ ಖ್ಯಾತ ಗಾಯಕ ಸೋನು ನಿಗಮ್: ವಿವಾದಕ್ಕೆ ತೆರೆ ಎಳೆದ ಕರವೇ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Actress Anita Kanwar : ಒಂದು ಕಾಲದಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿದ್ದ ಹಿರಿಯ ಬಾಲಿವುಡ್ ನಟಿ ಅನಿತಾ ಕನ್ವಾಲ್ (Anita Kanwar) ಇಂದು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. 'ಬನೇಗಿ ಅಪ್ನಿ ಬಾತ್', 'ಶಾಂತಿ' ಮತ್ತು 'ಸಸುರಾಲ್ ಗೆಂಡಾ ಫೂಲ್' ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಇವರ ಬಳಿ ಈಗ ಜೀವನ ನಡೆಸಲು ಉಳಿದಿರುವುದು ಕೇವಲ ಒಂದು ವರ್ಷಕ್ಕೆ ಸಾಕಾಗುವಷ್ಟು ಹಣ ಮಾತ್ರ. ವೃದ್ಧಾಪ್ಯದಲ್ಲಿ ಕೈಯಲ್ಲಿ ಕೆಲಸವಿಲ್ಲದೆ, ಮುಂದೇನು ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದಾರೆ..

ಉಳಿತಾಯದ ಹಣ ಖಾಲಿ, ಕೆಲಸ ಸಿಗದೆ ಪರದಾಟ
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಕಠಿಣ ಪರಿಸ್ಥಿತಿಯ ಬಗ್ಗೆ ಕಣ್ಣೀರು ಹಾಕಿರುವ ನಟಿ ಅನಿತಾ ಕನ್ವಾಲ್, ತಮ್ಮ ಬಳಿ ಇದ್ದ ಹಣವೆಲ್ಲ ಈಗಾಗಲೇ ಖರ್ಚಾಗಿ ಹೋಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ಒಂದು ವರ್ಷಕ್ಕೆ ಉಳಿಸಿದ್ದ ಹಣವೂ ಸಂಪೂರ್ಣ ಖಾಲಿಯಾಗಲಿದೆ. ಆದರೆ ಕೈಯಲ್ಲಿ ಯಾವುದೇ ಕೆಲಸವಿಲ್ಲದಿರುವುದು ತಲೆನೋವಾಗಿ ಪರಿಣಮಿಸಿದೆ. ಮಾನಸಿಕ ನೆಮ್ಮದಿಗಾಗಿ ಕೆಲಸ ಮಾಡಲು ಬಯಸಿ ಚಿತ್ರರಂಗದ ಹಲವರನ್ನು ಸಂಪರ್ಕಿಸಿದ್ದರೂ, ಯಾರೂ ಕೆಲಸ ಕೊಡುತ್ತಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ. ಮಕ್ಕಳಿದ್ದರೂ ಅವರಿಂದ ಹಣ ಪಡೆಯಲು ಇಷ್ಟಪಡದ ಅವರು, ಸ್ವಾವಲಂಬನೆಯ ಬದುಕು ನಡೆಸಲು ನನಗೆ ಖಂಡಿತಾ ಕೆಲಸ ಬೇಕು ಎಂದು ಹೇಳಿದ್ದಾರೆ.

ಯುವ ಪೀಳಿಗೆಗೆ ನನ್ನ ಪರಿಚಯವೇ ಇಲ್ಲ
ಚಿತ್ರರಂಗದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರೂ ಇಂದಿನ ಯುವ ಕಲಾವಿದರು ಮತ್ತು ಕಾಸ್ಟಿಂಗ್ ನಿರ್ದೇಶಕರಿಗೆ ತನ್ನ ಹಳೆಯ ಕೆಲಸಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ಆಡಿಷನ್‌ಗಳಿಗೆ ಅಲೆದರೂ, ನಿರ್ದೇಶಕರನ್ನು ಭೇಟಿಯಾದರೂ ಯೋಗ್ಯವಾದ ಪಾತ್ರಗಳು ಸಿಗುತ್ತಿಲ್ಲ. ಯುವ ತಲೆಮಾರಿಗೆ ತನ್ನ ಗುರುತು ಸಿಗದ ಕಾರಣ ಸಣ್ಣಪುಟ್ಟ ಪಾತ್ರಗಳನ್ನೇ ಹುಡುಕಬೇಕಾದ ದುಸ್ಥಿತಿ ಬಂದಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಶಾರುಖ್ ಖಾನ್ ಚಿತ್ರದ ದೃಶ್ಯಗಳೇ ಕಟ್
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ನಟಿಸಿದ್ದ 'ಕಭಿ ಹಾನ್ ಕಭಿ ನಾ' (Kabhi Haan Kabhi Naa) ಚಿತ್ರದ ಅನುಭವವನ್ನು ಅನಿತಾ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ದೀಪಕ್ ತಿಜೋರಿ ತಾಯಿಯ ಪಾತ್ರದಲ್ಲಿ ಅವರು ಅಭಿನಯಿಸಿದ್ದರು. ಆದರೆ, 'ದೀವಾನಾ' ಚಿತ್ರದ ಯಶಸ್ಸಿನ ಬಳಿಕ ಶಾರುಖ್ ಅವರ ಬೈಕ್ ದೃಶ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ನಟಿ ಅನಿತಾ ಅವರ ಮುಖ್ಯ ದೃಶ್ಯಗಳನ್ನೇ ಎಡಿಟಿಂಗ್‌ನಲ್ಲಿ ಕತ್ತರಿಸಲಾಗಿತ್ತು. ಇದು ತಮಗೆ ತುಂಬಾನೇ ಬೇಸರ ತರಿಸಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇನ್ನು 2003ರಲ್ಲಿ ಬಿಡುಗಡೆಯಾದ ಹಿಟ್ ಸಿನಿಮಾ 'ಗಂಗಾಜಲ್' (Gangaajal) ಚಿತ್ರದ ನಿರ್ಮಾಪಕ-ನಿರ್ದೇಶಕ ಪ್ರಕಾಶ್ ಝಾ ಅವರ ಪ್ರಾಮಾಣಿಕತೆಯನ್ನು ನಟಿ ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಚಿತ್ರವು ಭರ್ಜರಿ ಯಶಸ್ಸು ಕಂಡ ಬಳಿಕ, ಪ್ರಕಾಶ್ ಝಾ ಅವರು ತಮ್ಮ ಕಚೇರಿಯಿಂದ ಕರೆ ಮಾಡಿ ಹೆಚ್ಚುವರಿ ಚೆಕ್ ನೀಡಿ ಸಂಭಾವನೆಯನ್ನು ಹೆಚ್ಚಿಸಿ ಸಹಾಯ ಮಾಡಿದ್ದರು. ಸಿನಿಮಾ ಹಿಟ್ ಆದಾಗ ಕಲಾವಿದರಿಗೆ ಈ ರೀತಿಯಾಗಿ ಹೆಚ್ಚುವರಿ ಸಂಭಾವನೆ ನೀಡುವ ನಿರ್ಮಾಪಕರು ಸಿಗುವುದು ಅಪರೂಪ ಎಂದು ಆ ದಿನಗಳನ್ನು ನೆನೆದರು.. ಪ್ರಸ್ತುತ ನಟಿ ಅವಕಾಶಗಳಿಗಾಗಿ ಕಾಯುತ್ತಿದ್ದು, ಆರ್ಥಿಕ ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ..

Add Zee News as a Preferred Source
TAGS:
Cinema