• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /‘ಹೆಬ್ಬುಲಿ ಕಟ್‌’ ಬಳಿಕ ‘ಗಂಜ್‌ ಸರ್ಕಲ್‌’ಗೆ ಸಜ್ಜಾದ ಭೀಮರಾವ್‌: ಮಾಸ್‌ ಕಥೆಗೆ ವಿನಯ್‌ ಕುಮಾರ್‌ ಜಿ.ಬಿ ಬಂಡವಾಳ!

‘ಹೆಬ್ಬುಲಿ ಕಟ್‌’ ಬಳಿಕ ‘ಗಂಜ್‌ ಸರ್ಕಲ್‌’ಗೆ ಸಜ್ಜಾದ ಭೀಮರಾವ್‌: ಮಾಸ್‌ ಕಥೆಗೆ ವಿನಯ್‌ ಕುಮಾರ್‌ ಜಿ.ಬಿ ಬಂಡವಾಳ!

ಗಂಜ್‌ ಸರ್ಕಲ್‌’ ಕಥೆಯು ‘ಹಸಿವು’ ಎಂಬ ಮೂಲಭೂತ ಹಾಗೂ ಭಾವನಾತ್ಮಕ ಅಂಶದ ಸುತ್ತ ಸಾಗಲಿದೆ. ‘ಹೆಬ್ಬುಲಿ ಕಟ್‌’ ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರಿಯಲಿದ್ದು, ಸ್ಯಾಂಡಲ್‌ವುಡ್‌ನ ಪರಿಚಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Reported ByManjunath NaragundEdited ByManjunath Naragund
Published: Oct 05, 2026, 02:24 PM IST|Updated: Oct 05, 2026, 02:28 PM IST
joinshare
‘ಹೆಬ್ಬುಲಿ ಕಟ್‌’ ಬಳಿಕ ‘ಗಂಜ್‌ ಸರ್ಕಲ್‌’ಗೆ ಸಜ್ಜಾದ ಭೀಮರಾವ್‌: ಮಾಸ್‌ ಕಥೆಗೆ ವಿನಯ್‌ ಕುಮಾರ್‌ ಜಿ.ಬಿ ಬಂಡವಾಳ!
Image Credit: Gunj Circle

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಜಾಸೇವೆ ಆಂದೋಲನ: ಸಚಿವ ಮಧು ಬಂಗಾರಪ್ಪ

ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಜಾಸೇವೆ ಆಂದೋಲನ: ಸಚಿವ ಮಧು ಬಂಗಾರಪ್ಪ

2

ಕಾರವಾರದಲ್ಲಿ ಮಂಗಳೂರು-ಮಡಗಾಂವ್ ಪ್ಯಾಸೆಂಜ‌ರ್ ರೈಲು ಸೇವೆ ಕಡಿತ

3

ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ; ಮನ್ಮುಲ್ ಪ್ರಭಾವಿ ಆರೋಪಿ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಬಂಧನ.!

4

ಸಾವು ಬದುಕಿನ ನಡುವೆ ಹೋರಾಡಿದ ಕಾಳಿಂಗ ಸರ್ಪ ರಕ್ಷಣೆ

5

‘ಹೆಬ್ಬುಲಿ ಕಟ್‌’ ಬಳಿಕ ‘ಗಂಜ್‌ ಸರ್ಕಲ್‌’ಗೆ ಸಜ್ಜಾದ ಭೀಮರಾವ್‌: ಮಾಸ್‌ ಕಥೆಗೆ ವಿನಯ್‌ ಕುಮಾರ್‌ ಜಿ.ಬಿ ಬಂಡವಾಳ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಸಮಾಜದಲ್ಲಿರುವ ಅಸ್ಪೃಶ್ಯತೆಯಂತಹ ಸೂಕ್ಷ್ಮ ಹಾಗೂ ಗಂಭೀರ ವಿಷಯವನ್ನು ಕಮರ್ಷಿಯಲ್‌ ಚೌಕಟ್ಟಿನಲ್ಲಿ ಕಟ್ಟಿಕೊಟ್ಟು ಗಮನ ಸೆಳೆದಿದ್ದ ‘ಹೆಬ್ಬುಲಿ ಕಟ್‌’ ಚಿತ್ರದ ನಿರ್ದೇಶಕ ಭೀಮರಾವ್‌ ಪಿ., ಈಗ ತಮ್ಮ ಎರಡನೇ ಹೆಜ್ಜೆಗೆ ಅಣಿಯಾಗಿದ್ದಾರೆ. ತಮ್ಮ ನೂತನ ಚಿತ್ರಕ್ಕೆ ‘ಗಂಜ್‌ ಸರ್ಕಲ್‌’ ಎಂಬ ಆಕರ್ಷಕ ಶೀರ್ಷಿಕೆ ಇಟ್ಟಿದ್ದು, ಇದರ ಟೈಟಲ್‌ ಬಿಡುಗಡೆಗೊಂಡಿದೆ.

ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿಯವರಾದ ಭೀಮರಾವ್‌, ಈ ಬಾರಿ ಮಾಸ್‌ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಕಥೆ ಹೆಣೆದಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಕಥಾಹಂದರವು ರಾಯಚೂರು ಭಾಗದ ಹಿನ್ನೆಲೆಯಲ್ಲೇ ಸಾಗಲಿದ್ದು, ಸಂಭಾಷಣೆಗಳಲ್ಲೂ ಅದೇ ಸೊಗಡಿನ ಕನ್ನಡವನ್ನು ಬಳಸಲಾಗುತ್ತಿದೆ. ಚಿತ್ರದ ಪ್ರಿಪ್ರೊಡಕ್ಷನ್‌ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ.

ಮಾಸ್‌ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವ ಕಥೆ:

ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಭೀಮರಾವ್‌, "ಮೊದಲ ಸಿನಿಮಾದ ಯಶಸ್ಸಿನ ಬಳಿಕ, ನಾನು ಹೇಳಲು ಬಯಸುವ ವಿಚಾರಗಳನ್ನು ಮಾಸ್‌ ಪ್ರೇಕ್ಷಕರಿಗೆ ಹೇಗೆ ತಲುಪಿಸಬೇಕು ಎಂಬುದರ ಕಡೆಗೆ ಹೆಚ್ಚು ಗಮನಹರಿಸಿದೆ. ಮನರಂಜನೆಯ ಅಂಶಗಳನ್ನು ಸಮತೋಲನದಲ್ಲಿಟ್ಟುಕೊಂಡು ಈ ಕಥೆ ಸಿದ್ಧಪಡಿಸಿದ್ದೇನೆ. ಇದು ಮೊದಲ ಚಿತ್ರದಿಂದ ಕಲಿತ ಪಾಠ ಎನ್ನುವುದಕ್ಕಿಂತ ಹೆಚ್ಚಾಗಿ, ‘ಹೆಬ್ಬುಲಿ ಕಟ್‌’ಗೆ ನಾನು ಊಹಿಸಿದ್ದಕ್ಕಿಂತ ಹೆಚ್ಚಿನ ಪ್ರಶಂಸೆ ಹಾಗೂ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾ ನನಗೆ ಅತ್ಯಂತ ತೃಪ್ತಿ ತಂದಿದೆ. ಮೊದಲ ಸಿನಿಮಾ ಬಿಡುಗಡೆಯಾದ ಬಳಿಕ ಹಲವರು ಕಥೆ ಕೇಳಿಕೊಂಡು ಬಂದಿದ್ದರು. ನನ್ನ ಹೊಸ ಚಿತ್ರದ ನಿರ್ಮಾಪಕರು ಕೂಡ ‘ಹೆಬ್ಬುಲಿ ಕಟ್‌’ ನೋಡಿ ಮೆಚ್ಚಿಕೊಂಡವರೇ ಆಗಿದ್ದಾರೆ" ಎಂದು ಹಂಚಿಕೊಂಡಿದ್ದಾರೆ.

ವಿನಯ್‌ ಕುಮಾರ್‌ ಜಿ.ಬಿ ನಿರ್ಮಾಣ:

ಸಮಾಜಮುಖಿ ಕಾರ್ಯಗಳು ಹಾಗೂ ರಾಜಕಾರಣದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ, ‘ಇನ್‌ಸೈಟ್ಸ್‌ ಐಎಎಸ್‌’ನ ಸಂಸ್ಥಾಪಕರಾದ ವಿನಯ್‌ ಕುಮಾರ್‌ ಜಿ.ಬಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಭೀಮರಾವ್‌ ಅವರ ಕಥೆಯ ಮೇಲಿನ ನಂಬಿಕೆಯಿಂದ ಅವರು ಚಿತ್ರರಂಗ ಪ್ರವೇಶಿಸಿದ್ದಾರೆ.

ಹಸಿವಿನ ಸುತ್ತ ಸಾಗುವ ಕಥಾಹಂದರ:

ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ‘ಗಂಜ್‌ ಸರ್ಕಲ್‌’ ಕಥೆಯು ‘ಹಸಿವು’ ಎಂಬ ಮೂಲಭೂತ ಹಾಗೂ ಭಾವನಾತ್ಮಕ ಅಂಶದ ಸುತ್ತ ಸಾಗಲಿದೆ. ‘ಹೆಬ್ಬುಲಿ ಕಟ್‌’ ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರಿಯಲಿದ್ದು, ಸ್ಯಾಂಡಲ್‌ವುಡ್‌ನ ಪರಿಚಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಉಳಿದ ತಾರಾಗಣ ಹಾಗೂ ಇತರ ವಿವರಗಳನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.

Add Zee News as a Preferred Source
TAGS:
Sandalwood