SOCIAL MEDIA

Newsletter

PARTNER SITES
Select Language Select State

ಅಕ್ಕಿನೇನಿ ಸೊಸೆ ಶೋಭಿತಾ ಧೂಳಿಪಾಲ ಬಗ್ಗೆ ಯಾರಿಗೂ ಗೊತ್ತಿಲ್ಲದ 7 ಸತ್ಯಗಳು

Sobhita Dhulipala: ಮಾಡೆಲಿಂಗ್‌ನಿಂದ ಹಾಲಿವುಡ್‌ವರೆಗೆ ಬೆಳೆದು ನಿಂತಿರುವ ಈ ನಟಿಯ ಬದುಕಿನಲ್ಲಿ ಹಲವು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಹಾಗಾದ್ರೆ ಶೋಭಿತಾ ಅವರ ಬಗ್ಗೆ ನಿಮಗೆ ಗೊತ್ತಿರದ 7 ವಿಶೇಷ ವಿಚಾರಗಳು ಯಾವುವು? ನೋಡೋಣ ಈ ಸ್ಟೋರಿ.

Written By Ramya. R. Gowda
Published: Nov 27, 2026, 19:19 IST | Updated: Nov 27, 2026, 19:35 IST
Join

Sobhita Dhulipala: ಟಾಲಿವುಡ್‌ನ ಅಕ್ಕಿನೇನಿ ಕುಟುಂಬದ ಸೊಸೆಯಾದ ಬಳಿಕ ನಟಿ ಶೋಭಿತಾ ಧುಲಿಪಾಲ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ನಾಗ ಚೈತನ್ಯ ಜೊತೆಗಿನ ಮದುವೆಯ ಬಳಿಕ ಸದಾ ಸುದ್ದಿಯಲ್ಲಿರುವ ಶೋಭಿತಾ, ಮದುವೆಗೂ ಮೊದಲೇ ತಮ್ಮದೇ ಆದ ಪ್ರತಿಭೆಯಿಂದ ದೇಶಾದ್ಯಂತ ಗುರುತಿಸಿಕೊಂಡಿದ್ದರು. ಮಾಡೆಲಿಂಗ್‌ನಿಂದ ಹಾಲಿವುಡ್‌ವರೆಗೆ ಬೆಳೆದು ನಿಂತಿರುವ ಈ ನಟಿಯ ಬದುಕಿನಲ್ಲಿ ಹಲವು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಹಾಗಾದ್ರೆ ಶೋಭಿತಾ ಅವರ ಬಗ್ಗೆ ನಿಮಗೆ ಗೊತ್ತಿರದ 7 ವಿಶೇಷ ವಿಚಾರಗಳು ಯಾವುವು? ನೋಡೋಣ ಈ ಸ್ಟೋರಿ.

ಟಾಲಿವುಡ್‌ನ ಅಕ್ಕಿನೇನಿ ಕುಟುಂಬದ ಸೊಸೆಯಾದ ಬಳಿಕ ನಟಿ ಶೋಭಿತಾ ಧುಲಿಪಾಲ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ನಾಗ ಚೈತನ್ಯ ಜೊತೆಗಿನ ಮದುವೆ ಬಳಿಕ ಶೋಭಿತಾ ಹೆಸರು ಸಖತ್ ಸೌಂಡ್ ಮಾಡ್ತಿದೆ. ಆದ್ರೆ, ಅಕ್ಕಿನೇನಿ ಕುಟುಂಬದ ಸೊಸೆಯಾಗುವ ಮೊದಲೇ ಶೋಭಿತಾ ತಮ್ಮದೇ ಆದ ಪ್ರತಿಭೆಯಿಂದ ದೇಶಾದ್ಯಂತ ಗುರುತಿಸಿಕೊಂಡಿದ್ದರು. ಮಾಡೆಲಿಂಗ್‌ನಿಂದ ಆರಂಭವಾದ ಇವರ ಜರ್ನಿ ಬಾಲಿವುಡ್‌, ಟಾಲಿವುಡ್‌ ಮಾತ್ರವಲ್ಲದೆ ಹಾಲಿವುಡ್‌ವರೆಗೂ ಸಾಗಿದೆ. ಅಷ್ಟಕ್ಕೂ ಶೋಭಿತಾ ಅವರ ಸೌಂದರ್ಯದ ಹಿಂದಿರುವ ಪ್ರತಿಭೆಗಳೇನು? ಯಾರಿಗೂ ಅಷ್ಟಾಗಿ ಗೊತ್ತಿಲ್ಲದ ಇವರ ಆಸಕ್ತಿಗಳೇನು? ಬನ್ನಿ, ಶೋಭಿತಾ ಬದುಕಿನ 7 ಇಂಟರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ.

ವೈಜಾಗ್‌ನಲ್ಲಿ ಹುಟ್ಟಿದ ಪ್ರತಿಭೆ: ಶೋಭಿತಾ ಧುಲಿಪಾಲ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಜನಿಸಿದವರು. ಅಲ್ಲಿಯೇ ಶಾಲಾ ಶಿಕ್ಷಣ ಮುಗಿಸಿದ ಅವರು, ಮುಂಬೈನ ಎಚ್‌ಆರ್ ಕಾಲೇಜು ಮತ್ತು ಪುಣೆಯ ಸಿಂಬಯೋಸಿಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಕೇವಲ ಸೌಂದರ್ಯ ಮಾತ್ರವಲ್ಲ, ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ.

ಮಿಸ್ ಇಂಡಿಯಾ ರನ್ನರ್ ಅಪ್: ಶೋಭಿತಾ ಅವರ ವೃತ್ತಿಜೀವನಕ್ಕೆ ಮಾಡೆಲಿಂಗ್ ವೇದಿಕೆ ಮುನ್ನುಡಿ ಬರೆಯಿತು. 2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದರು. ಬಳಿಕ ಮಿಸ್ ಅರ್ಥ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಗಮನ ಸೆಳೆದರು.

ಮೇಡ್ ಇನ್ ಹೆವನ್‌ನಿಂದ ಖ್ಯಾತಿ: 2016ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶೋಭಿತಾ, 2019ರಲ್ಲಿ ಬಿಡುಗಡೆಯಾದ 'ಮೇಡ್ ಇನ್ ಹೆವನ್' ವೆಬ್ ಸರಣಿಯ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ತಾರಾ ಖನ್ನಾ ಪಾತ್ರದ ಮೂಲಕ ತಮ್ಮ ನಟನಾ ಸಾಮರ್ಥ್ಯ ಸಾಬೀತುಪಡಿಸಿದರು.

ಹಾಲಿವುಡ್‌ನಲ್ಲೂ ಮಿಂಚು: ಭಾರತೀಯ ಚಿತ್ರರಂಗಕ್ಕೆ ಸೀಮಿತವಾಗದ ಶೋಭಿತಾ, ದೇವ್ ಪಟೇಲ್ ನಿರ್ದೇಶನದ 'ಮಂಕಿ ಮ್ಯಾನ್' ಚಿತ್ರದ ಮೂಲಕ ಹಾಲಿವುಡ್‌ಗೆ ಕಾಲಿಟ್ಟರು. 2024ರಲ್ಲಿ ಬಿಡುಗಡೆಯಾದ ಈ ಸಿನಿಮಾ ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲಾಯಿತು.

ಪುಸ್ತಕಗಳೇ ಬೆಸ್ಟ್ ಫ್ರೆಂಡ್: ಬಿಡುವಿನ ಸಮಯದಲ್ಲಿ ಶೋಭಿತಾ ಪುಸ್ತಕ ಓದುವುದನ್ನು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ, ಕವಿತೆಗಳನ್ನು ಬರೆಯುವ ಹವ್ಯಾಸವೂ ಇವರಿಗಿದೆ. ಕೆಲವೊಮ್ಮೆ ತಮ್ಮ ಕವಿತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳುತ್ತಾರೆ.

ಫೋಟೋಗ್ರಫಿ ಮೇಲೆ ಆಸಕ್ತಿ: ನಟನೆ ಹೊರತುಪಡಿಸಿ ಛಾಯಾಗ್ರಹಣದಲ್ಲೂ ಶೋಭಿತಾಗೆ ವಿಶೇಷ ಆಸಕ್ತಿ ಇದೆ. ಹಳೆಯ ಮಾದರಿಯ ಕ್ಯಾಮೆರಾಗಳಲ್ಲಿ ಫೋಟೋ ತೆಗೆಯುವುದು, ಪ್ರಯಾಣದ ಸುಂದರ ಕ್ಷಣಗಳನ್ನು ಸೆರೆಹಿಡಿಯುವುದು ಇವರ ಹವ್ಯಾಸ.

ಕ್ಲಾಸಿಕಲ್ ಡ್ಯಾನ್ಸರ್: ಶೋಭಿತಾ ಬಾಲ್ಯದಲ್ಲೇ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಕಲಿತಿದ್ದಾರೆ. ಈ ಶಾಸ್ತ್ರೀಯ ನೃತ್ಯದ ಹಿನ್ನೆಲೆ ಅವರ ದೇಹಭಾಷೆ ಮತ್ತು ಅಭಿನಯಕ್ಕೆ ವಿಶೇಷ ಮೆರುಗು ನೀಡಿದೆ.

ಒಟ್ನಲ್ಲಿ, ಶೋಭಿತಾ ಧುಲಿಪಾಲ ಅಂದರೆ ಕೇವಲ ಗ್ಲಾಮರ್ ಗೊಂಬೆಯಲ್ಲ. ವಿದ್ಯಾಭ್ಯಾಸ, ಮಾಡೆಲಿಂಗ್, ನಟನೆ, ಕವಿತೆ, ಫೋಟೋಗ್ರಫಿ ಹಾಗೂ ಶಾಸ್ತ್ರೀಯ ನೃತ್ಯ ಹೀಗೆ ಹಲವು ಪ್ರತಿಭೆಗಳ ಸಂಗಮ. ಅಕ್ಕಿನೇನಿ ಕುಟುಂಬದ ಸೊಸೆಯಾಗಿ ಗುರುತಿಸಿಕೊಂಡಿದ್ದರೂ, ತಮ್ಮದೇ ಆದ ಪ್ರತಿಭೆಯಿಂದ ಗುರುತಿಸಿಕೊಂಡಿರುವ ಶೋಭಿತಾ ಅವರ ಈ ಏಳು ಸಂಗತಿಗಳು ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ. 

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES