Bigg Boss: 12 ಬಾರಿ ಗರ್ಲ್‌ಫ್ರೆಂಡ್‌ಗೆ ಚೀಟಿಂಗ್! ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಯ ಶಾಕಿಂಗ್ ರಹಸ್ಯ ಬಯಲು
Biggboss: ಗರ್ಲ್ ಫ್ರೆಂಡ್‌ಗೆ 12 ಬಾರಿ ಮೋದ ಮಾಡಿದ್ದೇನೆ ಎಂದು ಬಿಗ್‌ಬಾಸ್ ಸ್ಪರ್ಧಿ ಹೇಳಿದ್ದು, ಈಗ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ಅಪ್ಡೇಟ್ ಆಗುತ್ತಲೇ ಇರುತ್ತವೆ.. ಇಲ್ಲೊಬ್ಬ ಸ್ಪರ್ಧಿ ಬಿಗ್‌ಬಾಸ್ ಗರ್ಲ್‌ಫ್ರೆಂಡ್‌ಗೆ 12 ಬಾರಿ ಮೋಸ ಮಾಡಿದ್ದೇನೆ ಎಂದ ಬಿಗ್‌ಬಾಸ್ ಸ್ಪರ್ಧಿಯೊಬ್ಬ ಹೇಳಿದ್ದಾನೆ.
Bigg boss :ಬಿಗ್‌ಬಾಸ್ ಮನೆಯಲ್ಲಿ ದಿನಕ್ಕೊಂದು ರೋಚಕ ತಿರುವು ಸಿಗ್ತಿದೆ. ಇದೀಗ ಸ್ಪರ್ಧಿಯೊಬ್ಬರ ಶಾಕಿಂಗ್ ಕನ್ಫೆಷನ್ ಭಾರೀ ಸದ್ದು ಮಾಡ್ತಿದೆ. ತನ್ನ ಗರ್ಲ್‌ಫ್ರೆಂಡ್‌ಗೆ ಬರೋಬ್ಬರಿ 12 ಬಾರಿ ಮೋಸ ಮಾಡಿದ್ದೇನೆ ಎಂದು ರ‍್ಯಾಪರ್ ಒಬ್ಬರು ಬಾಯ್ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರ ತನ್ನ ಪ್ರೇಯಸಿಗೆ ಗೊತ್ತೇ ಇರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಹಾಗಾದ್ರೆ ಬಿಗ್‌ಬಾಸ್ ಮನೆಯಲ್ಲಿ ನಡೆದಿದ್ದೇನು? ಆ ಸ್ಪರ್ಧಿ ಯಾರು? ಈ ಕನ್ಫೆಷನ್‌ಗೆ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಬಿಗ್‌ಬಾಸ್ ಮನೆಯಲ್ಲಿ ನಡೆದ ಫ್ಯಾಮಿಲಿ ಟಾಸ್ಕ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ಪರ್ಧಿಗಳಿಗೆ ಅವರ ಕುಟುಂಬದವರು ಹಾಗೂ ಆಪ್ತರಿಂದ ವಿಶೇಷ ಆಡಿಯೊ ಸಂದೇಶಗಳನ್ನು ಕೇಳಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮನೆಯಲ್ಲಿದ್ದ ಸ್ಪರ್ಧಿಗಳು ಭಾವುಕರಾದ್ರು. ರ‍್ಯಾಪರ್ ಯುಂಗ್ ಡಿಎಸ್‌ಎ ಕೂಡ ತಮ್ಮ ಸಹೋದರ, ತಂದೆ ಹಾಗೂ ತಾಯಿಯ ಸಂದೇಶಗಳನ್ನು ಕೇಳಿ ಭಾವುಕರಾದರು.
ಆದ್ರೆ ತಮ್ಮ ಗರ್ಲ್‌ಫ್ರೆಂಡ್ ಸಮೀಕ್ಷಾ ಅವರಿಂದ ಯಾವುದೇ ಸಂದೇಶ ಬರದಿದ್ದಾಗ ಯುಂಗ್ ಡಿಎಸ್‌ಎಗೆ ನಿರಾಸೆಯಾಗಿದೆ. ಆಕೆ ತನ್ನಿಂದ ದೂರವಾಗಿದ್ದಾಳೆ ಎಂಬ ಆತಂಕವೂ ಅವರನ್ನು ಕಾಡಿದೆ.ಇನ್ನು ಟಾಸ್ಕ್ ಮುಗಿದ ಬಳಿಕ ಸ್ಕೌಟ್ ಜೊತೆ ಮಾತನಾಡುವಾಗ ಯುಂಗ್ ಡಿಎಸ್‌ಎ ಭಾವುಕರಾಗಿ ಕುಸಿದಿದ್ದಾರೆ. ಈ ವೇಳೆ ತಮ್ಮ ಸಂಬಂಧದ ಬಗ್ಗೆ ಯಾರೂ ನಿರೀಕ್ಷಿಸದ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ನಾನು ಸಮೀಕ್ಷಾಳನ್ನು ಕಳೆದುಕೊಂಡಿದ್ದೇನೆ. ಅವಳಿಗೆ ಹಲವು ಬಾರಿ, ಬೇರೆ ಬೇರೆ ಸಂದರ್ಭಗಳಲ್ಲಿ ಮೋಸ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನು ಕೇಳಿದ ಸ್ಕೌಟ್ ಕೂಡ ಅಚ್ಚರಿಗೊಂಡಿದ್ದಾರೆ. ಸಮೀಕ್ಷಾಗೆ ಈ ವಿಚಾರ ಮೊದಲೇ ಗೊತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಯುಂಗ್ ಡಿಎಸ್‌ಎ, ತಾನು ಮೋಸ ಮಾಡಿರುವ ವಿಚಾರ ಆಕೆಗೆ ತಿಳಿದಿರಲಿಲ್ಲ. ಬಿಗ್‌ಬಾಸ್ ಮನೆಗೆ ಬಂದ ಬಳಿಕವೇ ಈ ವಿಷಯ ಆಕೆಗೆ ಗೊತ್ತಾಗಿರಬಹುದು ಎಂದು ಹೇಳಿದ್ದಾರೆ.ಇದಕ್ಕೂ ಮೊದಲು ಮನೀಶ್ ಗೋಯೆಲ್ ಹಾಗೂ ಅಮ್ರಪಾಲಿ ದುಬೆ ಜೊತೆ ಮಾತನಾಡುವಾಗಲೂ ಯುಂಗ್ ಡಿಎಸ್‌ಎ ತಮ್ಮ ಗರ್ಲ್‌ಫ್ರೆಂಡ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ತಾನು ಮಾಡಿದ್ದ ಮೋಸದ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ಇದೀಗ ಸ್ಕೌಟ್ ಜೊತೆಗಿನ ಮಾತುಕತೆಯಲ್ಲಿ 12 ಬಾರಿ ಮೋಸ ಮಾಡಿರುವುದಾಗಿ ಹೇಳಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕುಟುಂಬದವರ ಸಂದೇಶಕ್ಕಾಗಿ ಕಾಯುತ್ತಿದ್ದ ಸ್ಪರ್ಧಿಗೆ ಗರ್ಲ್‌ಫ್ರೆಂಡ್‌ನಿಂದ ಸಂದೇಶ ಬಾರದಿರುವುದು, ಅವರ ಸಂಬಂಧದ ಭವಿಷ್ಯದ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯ ಫ್ಯಾಮಿಲಿ ಟಾಸ್ಕ್ ಯುಂಗ್ ಡಿಎಸ್‌ಎ ಅವರ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಬಹಿರಂಗಪಡಿಸಿದೆ. ಪ್ರೀತಿ, ವಿಶ್ವಾಸ, ದ್ರೋಹದ ಸುತ್ತ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಜೋರಾಗಿದೆ. ಸಮೀಕ್ಷಾ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಯುಂಗ್ ಡಿಎಸ್‌ಎ ಜೊತೆಗಿನ ಸಂಬಂಧ ಮುಂದುವರಿಸುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.