• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /Bigg Boss: 12 ಬಾರಿ ಗರ್ಲ್​ಫ್ರೆಂಡ್​ಗೆ ಚೀಟಿಂಗ್! ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಯ ಶಾಕಿಂಗ್ ರಹಸ್ಯ ಬಯಲು

Bigg Boss: 12 ಬಾರಿ ಗರ್ಲ್​ಫ್ರೆಂಡ್​ಗೆ ಚೀಟಿಂಗ್! ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಯ ಶಾಕಿಂಗ್ ರಹಸ್ಯ ಬಯಲು

Biggboss: ಗರ್ಲ್‌ ಫ್ರೆಂಡ್‌ಗೆ 12 ಬಾರಿ ಮೋದ ಮಾಡಿದ್ದೇನೆ ಎಂದು ಬಿಗ್‌ಬಾಸ್‌ ಸ್ಪರ್ಧಿ ಹೇಳಿದ್ದು, ಈಗ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಅಪ್ಡೇಟ್‌ ಆಗುತ್ತಲೇ ಇರುತ್ತವೆ.. ಇಲ್ಲೊಬ್ಬ ಸ್ಪರ್ಧಿ ಬಿಗ್‌ಬಾಸ್‌ ಗರ್ಲ್‌ಫ್ರೆಂಡ್‌ಗೆ 12 ಬಾರಿ ಮೋಸ ಮಾಡಿದ್ದೇನೆ ಎಂದ ಬಿಗ್‌ಬಾಸ್ ಸ್ಪರ್ಧಿಯೊಬ್ಬ ಹೇಳಿದ್ದಾನೆ.

Written ByRamya. R. Gowda
Published: Nov 06, 2026, 13:18 IST|Updated: Nov 06, 2026, 13:31 IST
joinshare
Bigg Boss: 12 ಬಾರಿ ಗರ್ಲ್​ಫ್ರೆಂಡ್​ಗೆ ಚೀಟಿಂಗ್! ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಯ ಶಾಕಿಂಗ್ ರಹಸ್ಯ ಬಯಲು

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg boss :ಬಿಗ್‌ಬಾಸ್ ಮನೆಯಲ್ಲಿ ದಿನಕ್ಕೊಂದು ರೋಚಕ ತಿರುವು ಸಿಗ್ತಿದೆ. ಇದೀಗ ಸ್ಪರ್ಧಿಯೊಬ್ಬರ ಶಾಕಿಂಗ್ ಕನ್ಫೆಷನ್ ಭಾರೀ ಸದ್ದು ಮಾಡ್ತಿದೆ. ತನ್ನ ಗರ್ಲ್‌ಫ್ರೆಂಡ್‌ಗೆ ಬರೋಬ್ಬರಿ 12 ಬಾರಿ ಮೋಸ ಮಾಡಿದ್ದೇನೆ ಎಂದು ರ‍್ಯಾಪರ್ ಒಬ್ಬರು ಬಾಯ್ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರ ತನ್ನ ಪ್ರೇಯಸಿಗೆ ಗೊತ್ತೇ ಇರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಹಾಗಾದ್ರೆ ಬಿಗ್‌ಬಾಸ್ ಮನೆಯಲ್ಲಿ ನಡೆದಿದ್ದೇನು? ಆ ಸ್ಪರ್ಧಿ ಯಾರು? ಈ ಕನ್ಫೆಷನ್‌ಗೆ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಬಿಗ್‌ಬಾಸ್ ಮನೆಯಲ್ಲಿ ನಡೆದ ಫ್ಯಾಮಿಲಿ ಟಾಸ್ಕ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ಪರ್ಧಿಗಳಿಗೆ ಅವರ ಕುಟುಂಬದವರು ಹಾಗೂ ಆಪ್ತರಿಂದ ವಿಶೇಷ ಆಡಿಯೊ ಸಂದೇಶಗಳನ್ನು ಕೇಳಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮನೆಯಲ್ಲಿದ್ದ ಸ್ಪರ್ಧಿಗಳು ಭಾವುಕರಾದ್ರು. ರ‍್ಯಾಪರ್ ಯುಂಗ್ ಡಿಎಸ್‌ಎ ಕೂಡ ತಮ್ಮ ಸಹೋದರ, ತಂದೆ ಹಾಗೂ ತಾಯಿಯ ಸಂದೇಶಗಳನ್ನು ಕೇಳಿ ಭಾವುಕರಾದರು.

ಆದ್ರೆ ತಮ್ಮ ಗರ್ಲ್‌ಫ್ರೆಂಡ್ ಸಮೀಕ್ಷಾ ಅವರಿಂದ ಯಾವುದೇ ಸಂದೇಶ ಬರದಿದ್ದಾಗ ಯುಂಗ್ ಡಿಎಸ್‌ಎಗೆ ನಿರಾಸೆಯಾಗಿದೆ. ಆಕೆ ತನ್ನಿಂದ ದೂರವಾಗಿದ್ದಾಳೆ ಎಂಬ ಆತಂಕವೂ ಅವರನ್ನು ಕಾಡಿದೆ.ಇನ್ನು ಟಾಸ್ಕ್ ಮುಗಿದ ಬಳಿಕ ಸ್ಕೌಟ್ ಜೊತೆ ಮಾತನಾಡುವಾಗ ಯುಂಗ್ ಡಿಎಸ್‌ಎ ಭಾವುಕರಾಗಿ ಕುಸಿದಿದ್ದಾರೆ. ಈ ವೇಳೆ ತಮ್ಮ ಸಂಬಂಧದ ಬಗ್ಗೆ ಯಾರೂ ನಿರೀಕ್ಷಿಸದ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ನಾನು ಸಮೀಕ್ಷಾಳನ್ನು ಕಳೆದುಕೊಂಡಿದ್ದೇನೆ. ಅವಳಿಗೆ ಹಲವು ಬಾರಿ, ಬೇರೆ ಬೇರೆ ಸಂದರ್ಭಗಳಲ್ಲಿ ಮೋಸ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.

ಇದನ್ನು ಕೇಳಿದ ಸ್ಕೌಟ್ ಕೂಡ ಅಚ್ಚರಿಗೊಂಡಿದ್ದಾರೆ. ಸಮೀಕ್ಷಾಗೆ ಈ ವಿಚಾರ ಮೊದಲೇ ಗೊತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಯುಂಗ್ ಡಿಎಸ್‌ಎ, ತಾನು ಮೋಸ ಮಾಡಿರುವ ವಿಚಾರ ಆಕೆಗೆ ತಿಳಿದಿರಲಿಲ್ಲ. ಬಿಗ್‌ಬಾಸ್ ಮನೆಗೆ ಬಂದ ಬಳಿಕವೇ ಈ ವಿಷಯ ಆಕೆಗೆ ಗೊತ್ತಾಗಿರಬಹುದು ಎಂದು ಹೇಳಿದ್ದಾರೆ.ಇದಕ್ಕೂ ಮೊದಲು ಮನೀಶ್ ಗೋಯೆಲ್ ಹಾಗೂ ಅಮ್ರಪಾಲಿ ದುಬೆ ಜೊತೆ ಮಾತನಾಡುವಾಗಲೂ ಯುಂಗ್ ಡಿಎಸ್‌ಎ ತಮ್ಮ ಗರ್ಲ್‌ಫ್ರೆಂಡ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ತಾನು ಮಾಡಿದ್ದ ಮೋಸದ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಇದೀಗ ಸ್ಕೌಟ್ ಜೊತೆಗಿನ ಮಾತುಕತೆಯಲ್ಲಿ 12 ಬಾರಿ ಮೋಸ ಮಾಡಿರುವುದಾಗಿ ಹೇಳಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕುಟುಂಬದವರ ಸಂದೇಶಕ್ಕಾಗಿ ಕಾಯುತ್ತಿದ್ದ ಸ್ಪರ್ಧಿಗೆ ಗರ್ಲ್‌ಫ್ರೆಂಡ್‌ನಿಂದ ಸಂದೇಶ ಬಾರದಿರುವುದು, ಅವರ ಸಂಬಂಧದ ಭವಿಷ್ಯದ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯ ಫ್ಯಾಮಿಲಿ ಟಾಸ್ಕ್ ಯುಂಗ್ ಡಿಎಸ್‌ಎ ಅವರ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಬಹಿರಂಗಪಡಿಸಿದೆ. ಪ್ರೀತಿ, ವಿಶ್ವಾಸ, ದ್ರೋಹದ ಸುತ್ತ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಜೋರಾಗಿದೆ. ಸಮೀಕ್ಷಾ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಯುಂಗ್ ಡಿಎಸ್‌ಎ ಜೊತೆಗಿನ ಸಂಬಂಧ ಮುಂದುವರಿಸುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

 

Add Zee News as a Preferred Source
TAGS:
Bigg Boss Kannada