• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕೆರಿಯರ್
  • /AI ಕಲಿಕೆಯಿಂದ ಮಕ್ಕಳ ಬುದ್ಧಿವಂತಿ ಹೆಚ್ಚುತ್ತಾ ಅಥವಾ ಯೋಚಿಸುವ ಶಕ್ತಿಯನ್ನೇ ಕಸಿದುಕೊಳ್ಳುತ್ತಾ?

AI ಕಲಿಕೆಯಿಂದ ಮಕ್ಕಳ ಬುದ್ಧಿವಂತಿ ಹೆಚ್ಚುತ್ತಾ ಅಥವಾ ಯೋಚಿಸುವ ಶಕ್ತಿಯನ್ನೇ ಕಸಿದುಕೊಳ್ಳುತ್ತಾ?

ಇವತ್ತಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಬಾಯಲ್ಲೂ ಒಂದೇ ಮಾತು ಅದೇ AI ಹಿಂದೆಲ್ಲಾ ಮಕ್ಕಳು ಹೋಮ್‌ವರ್ಕ್ ಮಾಡಲು ಪುಸ್ತಕ ಹುಡುಕುತ್ತಿದ್ದರು, ಅಪ್ಪ-ಅಮ್ಮನ ಹತ್ತಿರ ಬಂದು ಡೌಟ್ ಕೇಳುತ್ತಿದ್ದರು.

Written ByChetana Devarmani
Published: Nov 28, 2026, 15:38 IST|Updated: Nov 28, 2026, 15:41 IST
joinshare
AI ಕಲಿಕೆಯಿಂದ ಮಕ್ಕಳ ಬುದ್ಧಿವಂತಿ ಹೆಚ್ಚುತ್ತಾ ಅಥವಾ ಯೋಚಿಸುವ ಶಕ್ತಿಯನ್ನೇ ಕಸಿದುಕೊಳ್ಳುತ್ತಾ?

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ!  ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

2

ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು? ಪ್ಲಾಟ್‌ಫಾರಂ ಡೋರ್ ಹೊರತುಪಡಿಸಿ ಇರುವ ಪರ್ಯಾಯಗಳೇನು?

3

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ತೇಜಸ್ವಿ ಸೂರ್ಯ ಆಗ್ರಹ!

4

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

5

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಇವತ್ತಿನ ಡಿಜಿಟಲ್ ಯುಗದಲ್ಲಿ ಸಣ್ಣ ಮಕ್ಕಳ ಕೈಯಲ್ಲೂ AI ಅಂದರೆ ಕೃತಕ ಬುದ್ಧಿಮತ್ತೆ ಬಂದು ಕೂತಿದೆ. ಮಕ್ಕಳ ಕಲಿಕೆಯನ್ನು ಸುಲಭ ಮಾಡುತ್ತಿರುವ ಈ ತಂತ್ರಜ್ಞಾನ, ಅವರ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆಯೇ ಅಥವಾ ಸೃಜನಶೀಲತೆಗೆ ಪೆಟ್ಟು ನೀಡುತ್ತದೆಯೇ? ಚಿಕ್ಕ ವಯಸ್ಸಿನಲ್ಲಿ AI ಶಿಕ್ಷಣದ ಸಾಧಕ-ಬಾಧಕಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಇವತ್ತಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಬಾಯಲ್ಲೂ ಒಂದೇ ಮಾತು ಅದೇ AI ಹಿಂದೆಲ್ಲಾ ಮಕ್ಕಳು ಹೋಮ್‌ವರ್ಕ್ ಮಾಡಲು ಪುಸ್ತಕ ಹುಡುಕುತ್ತಿದ್ದರು, ಅಪ್ಪ-ಅಮ್ಮನ ಹತ್ತಿರ ಬಂದು ಡೌಟ್ ಕೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳು ಒಂದು ಪ್ರಶ್ನೆ ಕೇಳಿದರೆ ಸಾಕು, AI ಸೆಕೆಂಡ್‌ಗಳಲ್ಲಿ ಉತ್ತರ ಕೊಡುತ್ತೆ, ಪ್ರಬಂಧ ಬರೆದುಕೊಡುತ್ತೆ, ಚಿತ್ರವನ್ನೂ ಬಿಡಿಸಿಕೊಡುತ್ತೆ ಹಾಗಾದ್ರೆ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಈ AI ಕಲಿಸುವುದರಿಂದ ಅವರ ಬುದ್ಧಿವಂತಿಕೆ ನಿಜವಾಗ್ಲೂ ಹೆಚ್ಚುತ್ತಾ? ಇದರಿಂದಾಗುವ ಸಾಧಕ- ಬಾಧಕಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಮಕ್ಕಳಿಗೆ AI ಕಲಿಸುವುದರಿಂದ ಆಗುವ ಲಾಭವೇನು?

ಶಾಲೆಯಲ್ಲಿ ಶಿಕ್ಷಕರು ಹೇಳಿದ್ದು ಅರ್ಥವಾಗದಿದ್ದರೆ, AI ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಉದಾಹರಣೆಗಳ ಸಮೇತ ಪಾಠವನ್ನು ವಿವರಿಸುತ್ತದೆ. ಇದರಿಂದ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚುತ್ತದೆ.

ಮುಂದಿನ ದಿನಗಳಲ್ಲಿ AI ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ಈ ತಂತ್ರಜ್ಞಾನವನ್ನು ಸರಿಯಾಗಿ ಬಳಸಲು ಕಲಿತರೆ, ಮಕ್ಕಳು ಭವಿಷ್ಯದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ.

ಮಕ್ಕಳು ತಮ್ಮಲ್ಲಿರುವ ಕಲ್ಪನೆಗಳಿಗೆ AI ಮೂಲಕ ರೂಪ ಕೊಡಬಹುದು. ಹೊಸ ಭಾಷೆ ಕಲಿಯಲು, ಕೋಡಿಂಗ್ ಕಲಿಯಲು ಇದು ಬೆಸ್ಟ್ ಟೂಲ್.

ಎಐ ಕಲಿಕೆಯಿಂದಾಗುವ ದುರುಪಯೋಗಗಳೇನು?

1. AI ಎಲ್ಲವನ್ನೂ ರೆಡಿಮೇಡ್ ಆಗಿ ಕೊಡುವುದರಿಂದ, ಮಕ್ಕಳು ತಮ್ಮ ತಲೆಗೆ ಕೆಲಸ ಕೊಡುವುದನ್ನೇ ನಿಲ್ಲಿಸಬಹುದು. ಹೋಮ್‌ವರ್ಕ್‌ಗಳನ್ನು ತಾವೇ ಯೋಚಿಸಿ ಬರೆಯುವ ಬದಲು AI ಇಂದ ಕಾಪಿ-ಪೇಸ್ಟ್ ಮಾಡುವ ಸೋಮಾರಿತನ ಬೆಳೆಯುವ ಅಪಾಯವಿದೆ.

2. ಒಂದು ಕಥೆ ಬರೆಯುವುದು ಅಥವಾ ಚಿತ್ರ ಬಿಡಿಸುವುದು ಮಕ್ಕಳ ಮೆದುಳಿಗೆ ಕಸರತ್ತು ನೀಡುತ್ತದೆ. ಆದರೆ ಅದನ್ನೆಲ್ಲಾ AI ಮಾಡಿಕೊಟ್ಟರೆ ಮಕ್ಕಳ ಸ್ವಂತ ಪ್ರತಿಭೆ ಕಮರಿಹೋಗಬಹುದು.

3. AI ಬಳಸಲು ಮಕ್ಕಳು ಮೊಬೈಲ್ ಅಥವಾ ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಇದು ಅವರ ಕಣ್ಣು ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಪೋಷಕರು ಏನು ಮಾಡಬೇಕು?

• AI ಅನ್ನು ಮಕ್ಕಳ ಹೋಮ್‌ವರ್ಕ್ ಮಾಡುವ ಯಂತ್ರವಾಗಿ ಬಳಸದೆ, ಅವರಿಗೆ ಪಾಠ ಅರ್ಥಮಾಡಿಸುವ 'ಟ್ಯೂಟರ್' ರೀತಿ ಬಳಸಲು ಹೇಳಿಕೊಡಿ.
• ಮಕ್ಕಳು AI ನಲ್ಲಿ ಏನು ಹುಡುಕುತ್ತಿದ್ದಾರೆ, ಎಷ್ಟು ಹೊತ್ತು ಬಳಸುತ್ತಿದ್ದಾರೆ ಎಂಬುದರ ಮೇಲೆ ಪೋಷಕರು ಕಣ್ಣಿಟ್ಟಿರಬೇಕು.
• ಎಷ್ಟೇ ತಂತ್ರಜ್ಞಾನ ಬಂದರೂ ಮಕ್ಕಳಿಗೆ ಪುಸ್ತಕ ಓದುವ ಮತ್ತು ಕೈಯಲ್ಲಿ ಬರೆಯುವ ಅಭ್ಯಾಸವನ್ನು ತಪ್ಪಿಸಬೇಡಿ.

ಒಟ್ಟಿನಲ್ಲಿ, AI ಮಕ್ಕಳ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆಯೋ ಇಲ್ಲವೋ ಎಂಬುದು ನಾವು ಅದನ್ನು ಮಕ್ಕಳಿಗೆ ಹೇಗೆ ಪರಿಚಯಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ಮಿತಿಯಲ್ಲಿದ್ದರೆ AI ಖಂಡಿತವಾಗಿಯೂ ಮಕ್ಕಳ ಭವಿಷ್ಯಕ್ಕೆ ವರದಾನವಾಗಲಿದೆ.
 

Add Zee News as a Preferred Source
TAGS:
Education