• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /IDBI ಬ್ಯಾಂಕ್‌ ಮಾರಾಟಕ್ಕೂ ಮುನ್ನ ಎರಡು ಆಸ್ತಿಗಳ ಮೌಲ್ಯ ₹2,122 ಕೋಟಿಗಳಷ್ಟು ಕಡಿತ: ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ ಫೇರ್‌ಫ್ಯಾಕ್ಸ್ ಒಪ್ಪಂದ

IDBI ಬ್ಯಾಂಕ್‌ ಮಾರಾಟಕ್ಕೂ ಮುನ್ನ ಎರಡು ಆಸ್ತಿಗಳ ಮೌಲ್ಯ ₹2,122 ಕೋಟಿಗಳಷ್ಟು ಕಡಿತ: ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ ಫೇರ್‌ಫ್ಯಾಕ್ಸ್ ಒಪ್ಪಂದ

ಕೆನಡಾದ Fairfax ಸಂಸ್ಥೆಗೆ ಐಡಿಬಿಐ ಬ್ಯಾಂಕ್ ಮಾರಾಟ ಮಾಡುವ ಪ್ರಕ್ರಿಯೆಗೂ ಮುನ್ನ, ಬ್ಯಾಂಕ್‌ನ ಎರಡು ಸ್ಥಿರಾಸ್ತಿಗಳ ಮೌಲ್ಯದಲ್ಲಿ ಬರೋಬ್ಬರಿ ₹2,122 ಕೋಟಿ ಕಡಿತ ಮಾಡಲಾಗಿದೆ. ಈ ಆಸ್ತಿಗಳು ಬ್ಯಾಂಕ್‌ನ ಸ್ವಾಧೀನದಲ್ಲೇ ಇದ್ದರೂ, ಕೆಲವು ಕಾನೂನು ಬೆಳವಣಿಗೆಗಳಿಂದಾಗಿ ಅವುಗಳನ್ನು ಮುಕ್ತವಾಗಿ ಮಾರಾಟ ಮಾಡಲು ನಿರ್ಬಂಧವಿರುವುದರಿಂದ ಈ ಮೌಲ್ಯ ಕಡಿತ ಮಾಡಲಾಗಿದೆ ಎನ್ನಲಾಗಿದೆ.

Written ByYashaswini V
Published: Nov 16, 2026, 12:16 IST|Updated: Nov 16, 2026, 12:20 IST
joinshare
IDBI ಬ್ಯಾಂಕ್‌ ಮಾರಾಟಕ್ಕೂ ಮುನ್ನ ಎರಡು ಆಸ್ತಿಗಳ ಮೌಲ್ಯ ₹2,122 ಕೋಟಿಗಳಷ್ಟು ಕಡಿತ: ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ ಫೇರ್‌ಫ್ಯಾಕ್ಸ್ ಒಪ್ಪಂದ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನವದೆಹಲಿ : ಐಡಿಬಿಐ ಬ್ಯಾಂಕ್‌ನ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ಬ್ಯಾಂಕ್‌ಗೆ ಸೇರಿದ 2 ಸ್ಥಿರಾಸ್ತಿಗಳ ಮೌಲ್ಯದಲ್ಲಿ ಬರೋಬ್ಬರಿ 2,122 ಕೋಟಿ ರೂ. ಕಡಿತ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಬಿಡಬ್ಲ್ಯೂ ಬಿಸಿನೆಸ್‌ ವರ್ಲ್ಡ್‌ ಪಾಲಕ್ ಶಾ ವರದಿ ಮಾಡಿದ್ದು, 2025-26ನೇ ಸಾಲಿನ ವಾರ್ಷಿಕ ಲೆಕ್ಕಪತ್ರದ ಟಿಪ್ಪಣಿಯಲ್ಲಿ ಬ್ಯಾಂಕ್‌ ಈ ಮಾಹಿತಿಯನ್ನು ಉಲ್ಲೇಖಿಸಿದೆ. ಆದರೆ, ಯಾವ ಎರಡು ಆಸ್ತಿಗಳ ಮೌಲ್ಯ ಕಡಿತ ಮಾಡಲಾಗಿದೆ ಮತ್ತು ಅದಕ್ಕೆ ಕಾರಣವಾದ ಕಾನೂನು ಬೆಳವಣಿಗೆಗಳೇನು ಎಂಬುದನ್ನು ಬ್ಯಾಂಕ್‌ ಬಹಿರಂಗಪಡಿಸಿಲ್ಲ.

ಕೆನಡಾ ಮೂಲದ ಫೇರ್‌ಫಾಕ್ಟ್‌ ಸಂಸ್ಥೆಗೆ ಐಡಿಬಿಐ ಬ್ಯಾಂಕ್‌ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರತಿ ಷೇರಿಗೆ 81ರೂ. ನಂತೆ ಬ್ಯಾಂಕ್‌ ಮಾರಟಕ್ಕೆ ಅನುಮೋದನೆ ನೀಡಲಾಗಿತ್ತು.

ಬ್ಯಾಂಕ್‌ ವಾರ್ಷಿಕ ಲೆಕ್ಕ ಪತ್ರದ ಪ್ರಕಾರ, ಕೆಲವು ಕಾನೂನು ಬೆಳವಣಿಗೆಗಳಿಂದಾಗಿ ಬ್ಯಾಂಕ್‌ನ 2 ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಸಾಮರ್ಥ್ಯಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಆಸ್ತಿಗಳು ಬ್ಯಾಂಕ್‌ನ ನಿರಂತರ ಸ್ವಾಧೀನ ಮತ್ತು ಮಾಲೀಕತ್ವದಲ್ಲಿಯೇ ಇದೆ, ಆದರೆ ಅವುಗಳನ್ನು ಮುಕ್ತವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಸ್ವತಂತ್ರ ಮೌಲ್ಯ ಮಾಪಕರ ಮೂಲಕ ಆಸ್ತಿಗಳ  ಮರು ಮೌಲ್ಯ ಮಾಪನ ನಡೆಸಲಾಗಿದ್ದು, ಒಟ್ಟು 2,122 ಕೋಟಿ ರೂ. ಮೌಲ್ಯ ಕಡಿತ ಮಾಡಲಾಗಿದೆ ಎನ್ನಲಾಗಿದೆ.

ಗಮನಾರ್ಹ ಸಂಗತಿಯೆಂದರೆ, ಈ ಪ್ರಕ್ರಿಯೆಯಲ್ಲಿ ಬ್ಯಾಂಕ್‌ನಿಂದ ಯಾವುದೇ ಹಣ ಹೊರ ಹೋಗಿಲ್ಲ. ಇದು ಆಸ್ತಿಗಳ ಲೆಕ್ಕ ಪತ್ರದ ಮೌಲ್ಯದಲ್ಲಿನ ಕಡಿತ ಮಾತ್ರ. ಆದರೆ, ಯಾವ ಆಸ್ತಿಗಳು? ಅವುಗಳ ಹಿಂದಿನ ಮೌಲ್ಯ ಎಷ್ಟು? ಕಾನೂನು ಸಮಸ್ಯೆ ಏನು? ಮತ್ತು ಮೌಲ್ಯ ಮಾಪನ ಮಾಡಿದವರು ಯಾರು? ಎಂಬ ವಿವರಗಳನ್ನು ಬ್ಯಾಂಕ್‌ ನೀಡಿಲ್ಲ.

ಒಂದು ವರ್ಷದೊಳಗೆ ಹಿಮ್ಮುಖ ಬದಲಾವಣೆ:
ಈ ಬೆಳವಣಿಗೆಯ ಮತ್ತೊಂದು ಅಂಶವೆಂದರೆ, ಇದೇ ಆಸ್ತಿಗಳ ಮೌಲ್ಯದಲ್ಲಿ ಈ ಹಿಂದೆ ಏರಿಕೆ ದಾಖಲಾಗಿತ್ತು ಎಂಬುದು. 2025ರಲ್ಲಿ ಮೌಲ್ಯಮಾಪಕರು ಐಡಿಬಿಐ ಬ್ಯಾಂಕ್‌ ಆಸ್ತಿಗಳನ್ನು ಪರಿಶೀಲಿಸಿದಾಗ, ಲೆಕ್ಕಪತ್ರದಲ್ಲಿದ್ದ ಮೌಲ್ಯಕ್ಕಿಂತ 2,855 ಕೋಟಿ ರೂ. ಮೌಲ್ಯ ಹೊಂದಿವೆ ಎಂದು ಅಂದಾಜಿಸಿದ್ದರು. ಅದರಂತೆ ಬ್ಯಾಂಕ್‌ ಆಸ್ತಿಗಳ ಮೌಲ್ಯ ಹೆಚ್ಚಿಸಿತ್ತು. ಆದರೆ 2026ರ ಮಾರ್ಚ್‌ ವೇಳೆಗೆ ಬ್ಯಾಂಕ್‌ನ ಭೂಮಿ ಮತ್ತು ಕಟ್ಟಡದ ಒಟ್ಟು ಮೌಲ್ಯ 11,383 ಕೋಟಿಯಿಂದ 8,881 ಕೋಟಿ ರೂ. ಗೆ ಇಳಿಕೆಯಾಗಿದೆ. ಈ ಇಳಿಕೆಯಲ್ಲಿ 2,122 ಕೋಟಿ ರೂ. ಕಡಿತವು ಪ್ರಮುಖ ಪಾಲು ಹೊಂದಿದೆ. ಈ ಎರಡು ಆಸ್ತಿಗಳು 2025ರಲ್ಲಿ ಮೌಲ್ಯ ಹೆಚ್ಚಳ ಕಂಡಿದ್ದ ಆಸ್ತಿಗಳ ಪಟ್ಟಿಯಲ್ಲಿದ್ದಾವೆಯೇ ಎಂಬುದನ್ನೂ ಬ್ಯಾಂಕ್‌ ಸ್ಪಷ್ಟಪಡಿಸಿಲ್ಲ.

ವಾರ್ಷಿಕ ವರದಿ ಹೇಳಿದ್ದೇನು? 
ವರದಿ ಪ್ರಕಾರ, 2025ರ ಮಾರ್ಚ್‌ ಅವಧಿಯಲ್ಲಿ ಈ ಮೌಲ್ಯ ಕಡಿತ ಸಂಭವಿಸಿದೆ. ಈ ಅವಧಿಯಲ್ಲಿ ಐಡಿಬಿಐ ಬ್ಯಾಂಕ್‌ ಮಾರಾಟ ಪ್ರಕ್ರಿಯೆಯೂ ನಿರ್ಣಾಯಕ ಹಂತ ತಲುಪಿತ್ತು. ಜನವರಿ 8ರಂದು ಅಂತಿಮ ಬಿಡ್‌ಗಳನ್ನು ಆಹ್ವಾನಿಸಲಾಗಿತ್ತು. ಫೆಬ್ರವರಿ 6ರಂದು ಬಿಡ್‌ಗಳನ್ನು ಸ್ವೀಕರಿಸಲಾಗಿತ್ತು. ಮಾರ್ಚ್‌ 12ರಂದು ಬಿಡ್‌ಗಳನ್ನು ತೆರೆಯಲಾಗಿತ್ತು. ಹೀಗಾಗಿ ಬ್ಯಾಂಕ್‌ನ ಆಸ್ತಿಗಳ ಮೌಲ್ಯ ಕಡಿತವು ಮಾರಾಟ ಪ್ರಕ್ರಿಯೆಯ ಅಂತಿಮ ಹಂತದೊಂದಿಗೆ ಹೊಂದಿಕೆಯಾಗಿರುವುದು ಹಲವು ಪ್ರಶ್ನಗಳನ್ನು ಹುಟ್ಟು ಹಾಕಿದೆ.

ಐಡಿಬಿಐ ಬ್ಯಾಂಕ್‌ ಮಾರಾಟದ ಬೆಲೆ ನ್ಯಾಯಸಮ್ಮತವಾಗಿದೆಯೇ ಂಬುದನ್ನು ನಿರ್ಧರಿಸಲು ಕೇಂದ್ರ ಸರ್ಕಾರ ಎರಡು ಸ್ವತಂತ್ರ ಮೌಲ್ಯ ಮಾಪನಗಳನ್ನು ಅವಲಂಬಿಸಿತ್ತು. ಇದನ್ನು ಬಿಡಿಒ ವ್ಯಾಲ್ಯೂಯೇಷನ್ ಅಡ್ವೈಸರಿ ಸಂಸ್ಥೆ ನಡೆಸಿತ್ತು.

DIPAM ಆ. 13ರಂದು ಸಿದ್ಧಪಡಿಸಿದ ಆಂತರಿಕ ಟಿಪ್ಪಣಿಯಲ್ಲಿ 2026ರ ಮಾರ್ಚ್‌ 31ರ ಲೆಕ್ಕಪತ್ರದ ಆಧಾರದ ಮೇಲೆ ಬಿಡಿಒ ನವೀಕರಿಸಿದ ಮೌಲ್ಯ ಮಾಪನ ವರದಿ ಸಲ್ಲಿಸಿದೆ ಎಂದು ಉಲ್ಲೇಖಿಸಲಾಗಿದೆ.  ಸ್ಥಿರಾಸ್ತಿ ಮೌಲ್ಯಮಾಪನದಲ್ಲಿ ಬ್ಯಾಂಕ್‌ ನೀಡಿದ ಮೌಲ್ಯವನ್ನು ಸರಿಪಡಿಸುವಂತೆ ಮೌಲ್ಯ ಮಾಪಕರಿಗೆ ಸೂಚಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಆದರೆ, ಈ ಸರಿಪಡಿಸುವಿಕೆ ಮೌಲ್ಯವನ್ನು ಹೆಚ್ಚಿಸುವುದಕ್ಕಾಗಿತೇ ಅಥವಾ ಕಡಿಮೆ ಮಾಡುವುದಕ್ಕಾಗಿತೇ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೇ. ಬಿಡಿಒ ಸಂಸ್ಥೆಯ ಸಂಪೂರ್ಣ ಮೌಲ್ಯ ಮಾಪನ ವರದಿಯನ್ನೂ ಸಾರ್ವಜನಿಕಗೊಳಿಸಿಲ್ಲ.

DIPAM ಕಾರ್ಯದರ್ಶಿ ಅರುಣೀಶ್‌ ಚಾವ್ಲಾ ಬಿಸಿನೆಸ್‌ ಸ್ಟ್ಯಾಂಡರ್ಡ್‌ಗೆ ನೀಡಿದ ಹೇಳಿಕೆಯಲ್ಲಿ ಐಡಿಬಿಐ ಬ್ಯಾಂಕ್‌ನ ಎರಡು ಪ್ರಮುಖ ಆಸ್ತಿಗಳ ಬಗ್ಗೆ ಪ್ರಸ್ತಾಪಿಸಿದ್ದರು.

ಮೊದಲನೆಯದಾಗಿ ಹೈದರಾಬಾದ್‌ ಆಸ್ತಿ. ಬ್ಯಾಂಕ್‌ನ ತರಬೇತಿ ಕೆಂದ್ರವಿರುವ ಈ ಜಾಗವನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದ್ದು, ಯಾವುದೇ ರೂಪದಲ್ಲಿಯೂ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾದ ಆಸ್ತಿಯಲ್ಲ ಎಂದು ಅವರು ಹೇಳಿದ್ದರು.

ಎರಡನೇಯದಾಗಿ  ಮುಂಬೈ ಆಸ್ತಿ. ಬ್ಯಾಂಕ್‌ನ ಪ್ರಧಾನ ಕಚೇರಿ ಇರುವ ಈ ಆಸ್ತಿ ಗುತ್ತಿಗೆ ಆಧಾರದಲ್ಲಿದೆ. ಹೀಗಾಗಿ ಅದರ ಗುತ್ತಿಗೆ ಹಕ್ಕಿನ ನ್ಯಾಯಸಮ್ಮತ ಮಾರುಕಟ್ಟೆ ಮೌಲ್ಯವಿದೆ ಎಂದು ಚಾವ್ಲಾ ವಿವರಿಸಿದ್ದಾರೆ.

ಆಸ್ತಿಗಳ ಮೌಲ್ಯ ಮಾಪನದ ವೇಳೆ ಹಕ್ಕು ಪತ್ರಗಳು ಭೂಮಿಗೆ ಸಂಬಂಧಿಸಿದ ಷರತ್ತುಗಳು ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮಾರುಕಟ್ಟೆ ದರದ ಆಧಾರದಲ್ಲಿ ಮೌಲ್ಯ ನಿರ್ಧರಿಸಲಾಗಿದೆ ಎಂದು ಚಾವ್ಲಾ ತಿಳಿಸಿದ್ದಾರೆ. ಆದರೆ, ಈ ಎರಡು ಆಸ್ತಿಗಳ ಪ್ರತ್ಯೇಕ ಮೌಲ್ಯವನ್ನು ಬಹಿರಂಗಪಡಿಸಿಲ್ಲ.

ಹೇದರಾಬಾದ್‌ ಆಸ್ತಿಯ ಕಾನೂನು ವಿವಾದವೇನು?
ಹಿಂದಿನ ನ್ಯಾಯಾಲಯದ ತೀರ್ಪುಗಳಲ್ಲಿ, ಮಾರುಕಟ್ಟೆ ಮೌಲ್ಯ ಪಾವತಿಸಿ ಮಂಜೂರು ಮಾಡಲಾದ ಭೂಮಿಯನ್ನು ಸರ್ಕಾರ ಮರಳಿ ವಶಪಡಿಸಿಕೊಳ್ಳಲು ಯಾವ ಕಾನೂನು ;ಅವಕಾಶ ನೀಡುತ್ತದೆ ಎಂಬುದನ್ನು ರಾಜ್ಯ ಸರ್ಕಾರ ತೋರಿಸಿಲ್ಲ ಎಂದು ನ್ಯಾಯಪೀಠ ಹೇಳಿರುವುದಾಗಿ ತಿಳಿದು ಬಂದಿದೆ.

ಅಲ್ಲದೇ, ಬ್ಯಾಂಕ್‌ಗೆ ಹೆಚ್ಚುವರಿ ಕಟ್ಟಡ ನಿರ್ಮಿಸಲು ಅನುಮತಿಯನ್ನು ತ್ವರಿತವಾಗಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿಯೂ ತಿಳಿಸಿದೆ.

ಈ ಹಿನ್ನಲೆಯಲ್ಲಿ 39 ವರ್ಷಗಳಿಂದ ಬದಲಾಗದ ಭೂಮಿಯ ಷರತ್ತುಗಳ ನಡುವೆ ಈಗ ಯಾವ ಹೊಸ ಕಾನೂನು ಬೆಳವಣಿಗೆಯಿಂದ ಆಸ್ತಿಯ ಮೌಲ್ಯ ಕಡಿತ ಮಾಡಲಾಗಿದೆ ಎಂಬ ಪ್ರಶ್ನೆ ಎದುರಾಗಿದೆ.

ಈ ವಿವಾದಕ್ಕೆ ಮತ್ತಷ್ಟು ಮಹತ್ವ ನೀಡಿರುವುದು ಹೈದರಾಬಾದ್‌ನ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಲ್ಲಿನ ಇತ್ತೀಚಿನ ಬೆಳವಣಿಗೆ. 2026ರ ಆ. 28ರಂದು ತೆಲಂಗಾಣ ಸರ್ಕಾರವು ರಾಯದುರ್ಗ ಪ್ರದೇಶದ 5.38 ಎಕರೆ ಜಮೀನನ್ನು ಹರಾಜು ಮಾಡಿದ್ದು, ಪ್ರತಿ ಎಕರೆಗೆ ದಾಖಲೆಯ 269 ಕೋಟಿ ರೂ. ಬೆಲೆ ದಿರೆತಿದೆ ಎಂದಿ ವರದಿ ತಿಳಿಸಿದೆ.

ಇದನ್ನು ಆಧರಿಸಿ ಮಾಜಿ ಕೇಂದ್ರ ಕಾರ್ಯದರ್ಶಿ ಇಎಎಸ್‌ ಶರ್ಮಾ ಮತ್ತು ಬ್ಯಾಂಕ್‌ ಅಧಿಕಾರಿಗಳ ಸಂಘಟನೆ AIBOA, ಐಡಿಬಿಐ ಬ್ಯಾಂಕ್‌ನ ಕ್ಯಾಂಪಸ್‌ ಮೌಲ್ಯ ಸುಮಾರು 13,450 ಕೋಟಿ ಇರಬಹುದು ಎಂದು ಲೆಕ್ಕ ಹಾಕಿದೆ.

ಆದರೆ, ಎರಡೂ ಜಮೀನುಗಳ ಸ್ವರೂಪ ಒಂದೇ ಅಲ್ಲ. ರಾಯದುರ್ಗದ ಜಮೀನು ಮುಕ್ತ ಹರಾಜಿನಲ್ಲಿ ಮಾರಾಟವಾಗಿದ್ದರೆ, ಐಡಿಬಿಐನ ಜಮೀನು ತರಬೇತಿ ಸಂಸ್ಥೆ ಸ್ಥಾಪನೆಗಾಗಿ ನಿರ್ದಿಷ್ಟ ಷರತ್ತುಗಳೊಂದಿಗೆ ಮಂಜೂರಾಗಿತ್ತು. ಹೀಗಾಗಿ ಎರಡಕ್ಕೂ ಒಂದೇ ಮಾರುಕಟ್ಟೆ ಮೌಲ್ಯ ಅನ್ವಯಿಸುವುದಿಲ್ಲ ಎಂಬುದನ್ನೂ ವರದಿ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರದ ವಾದವೇನು?
ಐಡಿಬಿಐ ಬ್ಯಾಂಕ್‌ ಮಾರಾಟ ಪ್ರಕ್ರಿಯೆಯಲ್ಲಿ ನಿಗದಿತ ನಿಯಮವನ್ನು ಪಾಲಿಸಲಾಗದೆ ಮತ್ತು ಎರಡು ಸ್ವತಂತ್ರ ಮೌಲ್ಯ ಮಾಪನಗಳ ಆಧಾರದಲ್ಲಿ ಮಾರಾಟದ ಬೆಲೆ ನಿರ್ಧರಿಸಲಾಗಿದೆ ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ.

ಕಾನೂನು ನಿರ್ಬಂಧಗಳಿಂದ ಆಸ್ತಿಯ ಬಳಕೆ ಅಥವಾ ಮಾರಾಟದ ಹಕ್ಕಿಗೆ ಮಿತಿ ಉಂಟಾದರೆ ಅದರ ಮೌಲ್ಯವನ್ನು ಕಡಿಮೆ ಮಾಡುವುದು ಸಹಜ ಪ್ರಕ್ರಿಯೆ ಎಂದು ವರದಿ ವಿಶ್ಲೆಷಿಸಿದೆ.

ಪ್ರತಿ ಷೇರಿಗೆ 81 ರೂ. ನಂತೆ ಫೇರ್‌ ಫ್ಯಾಕ್ಸ್‌ ಬ್ಯಾಂಕ್‌ ಖರೀದಿಸುವ ಪ್ರಸ್ತಾವನೆಯಿದ್ದು, ಬ್ಯಾಂಕ್‌ನ ಒಟ್ಟು ಮೌಲ್ಯ ಸುಮಾರು 87,100 ಕೋಟಿ ಎಂದು ಅಂದಾಜಿಸಲಾಗಿದೆ. ಬ್ಯಾಂಕ್‌ ಬಂಡವಾಳ ಮತ್ತು ಮೀಸಲು ನಿಧಿ ಸುಮಾರು 71,550 ಕೋಟಿ ಇದೆ.

ಇನ್ನು 2,122 ಕೋಟಿ ರೂ. ಮೌಲ್ಯ ಕಡಿತವು ಪ್ರತಿ ಷೇರಿಗೆ ಸರಿ ಸುಮಾರು 2 ರಷ್ಟಾಗುತ್ತದೆ. ಹೀಗಾಗಿ ಬ್ಯಾಂಕ್‌ ಮಾರಾಟದ ಬೆಲೆ ನಿರ್ಧಾರದಲ್ಲಿನ ಸಂಪೂರ್ಣ ವ್ಯತ್ಯಾಸಕ್ಕೆ ಈ ಒಂದು ಅಂಶವೇ ಕಾರಣವಲ್ಲ ಎಂದು ವರದಿ ಹೇಳಿದೆ.

ಬಿಡಲ್ಯೂ ವರದಿ ಪ್ರಕಾರ, ಬ್ಯಾಂಕ್‌ ಮತ್ತು ಕೇಂಧ್ರ ಸರ್ಕಾರ ಈ ಕೆಳಗಿನ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಬೇಕಿದೆ.
1.    2,122 ಕೋಟಿ ಮೌಲ್ಯ ಕಳೆದುಕೊಂಡಿರುವ ಆ ಎರಡು  ಆಸ್ತಿಗಳು ಯಾವುವು? 
2.    ಆಸ್ತಿಗಳ ಮೇಲೆ ಪರಿಣಾಮ ಬೀರಿದ ಕಾನೂನು ಬೆಳವಣಿಗೆಗಳೇನು?
3.    ಮೌಲ್ಯ ಕಡಿತಕ್ಕೂ ಮೊದಲು ಆಸ್ತಿಗಳ ಮೌಲ್ಯ ಎಷ್ಟಿತ್ತು?
4.    ಸ್ವತಂತ್ರ ಮೌಲ್ಯ ಮಾಪನ ನಡೆಸಿದವರ್ಯಾರ್ಯಾರು?
5.    ಬಿಡಿಒ ಸಂಸ್ಥೆ ಬ್ಯಾಂಕ್‌ ಕಡಿತಗೊಳಿಸಿದ ಮೌಲ್ಯವನ್ನೇ ಪರಿಗಣಿಸಿತೇ ?
6.    ಹೈದರಾಬಾದ್ ಕ್ಯಾಂಪಸ್ ಅನ್ನು ಯಾವುದೇ ರೂಪದಲ್ಲಿ ವರ್ಗಾಯಿಸಲು ಸಾಧ್ಯವಾಗದಿದ್ದರೆ, ಅದು ಖಾಸಗಿ ನಿಯಂತ್ರಿತ ಬ್ಯಾಂಕ್‌ಗೆ ಹೇಗೆ ಹೋಗುತ್ತದೆ?
7. ಸರ್ಕಾರವು ಮೌಲ್ಯಮಾಪನ ವರದಿಯನ್ನು ಮತ್ತು ಐಡಿಬಿಐನ ಪ್ರತಿಯೊಂದು ಆಸ್ತಿಗೆ ನಿಗದಿಪಡಿಸಿದ ಮೌಲ್ಯವನ್ನು ಪ್ರಕಟಿಸುತ್ತದೆಯೇ?

ಬ್ಯಾಂಕ್ ಆಸ್ತಿಗಳನ್ನು ಹೆಸರಿಸುವವರೆಗೆ ಮತ್ತು ಸರ್ಕಾರವು ಅವುಗಳ ಮೌಲ್ಯವನ್ನು ಹೇಗೆ ತೋರಿಸುತ್ತದೆ ಎಂಬುದನ್ನು ತೋರಿಸುವವರೆಗೆ, ಮಾರಾಟದ ಹೊರಗಿನ ಯಾರೂ ಅವುಗಳ ಮೌಲ್ಯವನ್ನು ಹೇಳಲು ಸಾಧ್ಯವಿಲ್ಲ ಎಂದು ವರದಿಯು ತೀರ್ಮಾನಿಸಿದೆ. ಕಾನೂನು ತೊಂದರೆ ಎಂದಾದರೂ ನಿವಾರಣೆಯಾದರೆ, ಲಾಭವು ಫೇರ್‌ಫ್ಯಾಕ್ಸ್ ನಿಯಂತ್ರಿಸುವ ಬ್ಯಾಂಕಿಗೆ ಸೇರುತ್ತದೆ ಎನ್ನಲಾಗಿದೆ.
 

Add Zee News as a Preferred Source
TAGS:
Banking
India