• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /Microsoft 365, Outlook ಸೇರಿ ಹಲವು ಆ್ಯಪ್‌ಗಳು ಸ್ಥಗಿತ: ಸೈಬರ್‌ ದಾಳಿ ಕಾರಣವೇ? ಕಂಪನಿ ಹೇಳಿದ್ದೇನು?

Microsoft 365, Outlook ಸೇರಿ ಹಲವು ಆ್ಯಪ್‌ಗಳು ಸ್ಥಗಿತ: ಸೈಬರ್‌ ದಾಳಿ ಕಾರಣವೇ? ಕಂಪನಿ ಹೇಳಿದ್ದೇನು?

ಮೈಕ್ರೋಸಾಫ್ಟ್‌ನ ಹಲವು ಪ್ರಮುಖ ಸೇವೆಗಳಲ್ಲಿ ಜಾಗತಿಕ ಮಟ್ಟದಲ್ಲಿ ವ್ಯತ್ಯಯ ಉಂಟಾಗಿದ್ದು, Outlook, Microsoft 365, Teams ಸೇರಿದಂತೆ ಹಲವು ಅಪ್ಲಿಕೇಶನ್‌ಗಳ ಬಳಕೆಯಲ್ಲಿ ತೊಂದರೆ ಕಾಣಿಸಿಕೊಂಡಿದೆ. ಈ ಸಮಸ್ಯೆಯಿಂದ ಇಮೇಲ್‌ ಕಳುಹಿಸುವುದು, ಸ್ವೀಕರಿಸುವುದು ಹಾಗೂ ಕೆಲವು ಆನ್‌ಲೈನ್‌ ಸೇವೆಗಳನ್ನ ಬಳಸುವುದು ಕಷ್ಟವಾಗಿದೆ.

Written ByPuttaraj K Alur
Published: Nov 13, 2026, 17:04 IST|Updated: Nov 13, 2026, 17:15 IST
joinshare
Microsoft 365, Outlook ಸೇರಿ ಹಲವು ಆ್ಯಪ್‌ಗಳು ಸ್ಥಗಿತ: ಸೈಬರ್‌ ದಾಳಿ ಕಾರಣವೇ? ಕಂಪನಿ ಹೇಳಿದ್ದೇನು?
Image Credit: Microsoft Global Outage

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Microsoft Global Outage: ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರು ಅವಲಂಬಿಸಿರುವ ಮೈಕ್ರೋಸಾಫ್ಟ್‌ನ ಹಲವು ಡಿಜಿಟಲ್ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. Microsoft 365, Outlook, Microsoft Teams, Copilot ಸೇರಿದಂತೆ ಹಲವು ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸದೆ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ವಿಶೇಷವಾಗಿ ಇಮೇಲ್‌ ತೆರೆಯುವುದು, ಸಂದೇಶ ಕಳುಹಿಸುವುದು ಮತ್ತು ಸ್ವೀಕರಿಸುವುದು ಸೇರಿದಂತೆ ದೈನಂದಿನ ಕೆಲಸಗಳಿಗೆ ಅಡಚಣೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಸರ್ವರ್‌ ದೋಷವೇ ಅಥವಾ ಸೈಬರ್‌ ದಾಳಿಯೇ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಮೈಕ್ರೋಸಾಫ್ಟ್ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಯಾವುದೇ ದುರುದ್ದೇಶಪೂರಿತ ಚಟುವಟಿಕೆ ಅಥವಾ ಸೈಬರ್‌ ದಾಳಿಯ ಸುಳಿವು ಸಿಕ್ಕಿಲ್ಲವೆಂದು ತಿಳಿಸಿದೆ.

ಯಾವೆಲ್ಲ ಸೇವೆಗಳಲ್ಲಿ ಸಮಸ್ಯೆ?

ನವೆಂಬರ್ 12ರಂದು ಆರಂಭವಾದ ಈ ತಾಂತ್ರಿಕ ವ್ಯತ್ಯಯ ಮುಂದಿನ ದಿನವೂ ಮುಂದುವರಿದಿದೆ. Outlook ಸೇವೆಯಲ್ಲಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಅನೇಕ ಬಳಕೆದಾರರಿಗೆ ತಮ್ಮ ಇನ್‌ಬಾಕ್ಸ್‌ ತೆರೆಯಲು ಸಾಧ್ಯವಾಗಿಲ್ಲ. ವೆಬ್‌ಸೈಟ್‌, ಮೊಬೈಲ್‌ ಅಪ್ಲಿಕೇಶನ್‌ ಹಾಗೂ ಇತರ ಸಾಧನಗಳ ಮೂಲಕ ಇಮೇಲ್‌ ಬಳಸುವಾಗಲೂ ತೊಂದರೆ ಎದುರಾಗಿದೆ. ಕೆಲವು ಇಮೇಲ್‌ಗಳು ತಡವಾಗಿ ತಲುಪಿರುವ ವರದಿಗಳೂ ಬಂದಿವೆ.

ಇದರೊಂದಿಗೆ Microsoft Teams ಮತ್ತು Copilot ಬಳಕೆಯಲ್ಲಿಯೂ ಅಡಚಣೆ ಕಾಣಿಸಿಕೊಂಡಿದೆ. Word, Excel, PowerPoint, SharePoint ಮತ್ತು OneDrive ಸೇರಿದಂತೆ Microsoft 365ಗೆ ಸಂಬಂಧಿಸಿದ ಇತರ ಸೇವೆಗಳ ಕೆಲವು ಕಾರ್ಯಗಳ ಮೇಲೂ ಪರಿಣಾಮ ಬೀರಿದೆ. ಆದರೆ ಎಲ್ಲಾ ಸೇವೆಗಳೂ ಸಂಪೂರ್ಣವಾಗಿ ಸ್ಥಗಿತಗೊಂಡಿರಲಿಲ್ಲ. ವಿಶೇಷವಾಗಿ Exchange Online ಮೇಲೆ ಅವಲಂಬಿತವಾಗಿರುವ ಇಮೇಲ್‌ ಸಂಬಂಧಿತ ಕಾರ್ಯಗಳಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗಿದೆ.

74 ದೇಶಗಳಲ್ಲಿ ಬಳಕೆದಾರರಿಗೆ ತೊಂದರೆ

ಸೇವೆಗಳಲ್ಲಿನ ಸಮಸ್ಯೆ ಕೆಲವೇ ಪ್ರದೇಶಗಳಿಗೆ ಸೀಮಿತವಾಗದೆ ಜಾಗತಿಕ ಮಟ್ಟಕ್ಕೆ ಹರಡಿದೆ. Downdetector ನೀಡಿದ ಮಾಹಿತಿಯ ಪ್ರಕಾರ, ಸುಮಾರು 74 ದೇಶಗಳು ಮತ್ತು ಪ್ರದೇಶಗಳಿಂದ ಬಳಕೆದಾರರು ಸಮಸ್ಯೆಗಳನ್ನ ವರದಿ ಮಾಡಿದ್ದಾರೆ. ಅಮೆರಿಕದಲ್ಲಿ Outlook ಸಮಸ್ಯೆಗಳ ಕುರಿತು ವರದಿಗಳು ಗರಿಷ್ಠ ಮಟ್ಟದಲ್ಲಿ 1.30 ಲಕ್ಷಕ್ಕೂ ಹೆಚ್ಚು ತಲುಪಿದ್ದವು. ಏಷ್ಯಾ-ಪೆಸಿಫಿಕ್ ಪ್ರದೇಶದ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನಲ್ಲಿಯೂ ಮೈಕ್ರೋಸಾಫ್ಟ್ ಸೇವೆಗಳ ವ್ಯತ್ಯಯ ವರದಿಯಾಗಿದೆ.

ಈ ಸಮಸ್ಯೆಯಿಂದ ಸಾಮಾನ್ಯ ಬಳಕೆದಾರರಷ್ಟೇ ಅಲ್ಲದೆ, ವಿವಿಧ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಇಮೇಲ್‌ ಹಾಗೂ ಆನ್‌ಲೈನ್‌ ಸಂವಹನ ವ್ಯವಸ್ಥೆಗಳಿಗೆ ಮೈಕ್ರೋಸಾಫ್ಟ್ ಸೇವೆಗಳನ್ನ ಅವಲಂಬಿಸಿರುವ ಸಂಸ್ಥೆಗಳು ಕೆಲಸ ನಿರ್ವಹಿಸುವಲ್ಲಿ ತೊಂದರೆ ಎದುರಿಸಿವೆ.

ಸೈಬರ್‌ ದಾಳಿಯೇ ಕಾರಣವೇ? ಮೈಕ್ರೋಸಾಫ್ಟ್ ಸ್ಪಷ್ಟನೆ ಏನು?

ಜಾಗತಿಕ ಮಟ್ಟದಲ್ಲಿ ಸೇವೆಗಳು ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಸೈಬರ್‌ ದಾಳಿಯ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿತ್ತು. ಆದರೆ ಮೈಕ್ರೋಸಾಫ್ಟ್ ಈ ಊಹಾಪೋಹಗಳಿಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಈ ಘಟನೆಗೆ ಯಾವುದೇ ದುರುದ್ದೇಶಪೂರಿತ ಚಟುವಟಿಕೆ ಕಾರಣವಾಗಿದೆ ಎಂಬ ಮಾಹಿತಿ ಇಲ್ಲವೆಂದು ಹೇಳಿದೆ. 

ಕಂಪನಿಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಹಲವು ಪ್ರದೇಶಗಳಲ್ಲಿನ ಮೂಲಸೌಕರ್ಯಗಳಲ್ಲಿ ಸರ್ವರ್‌ಗಳ ಮೇಲಿನ ಲೋಡ್‌ ಹೆಚ್ಚಾಗಿರುವುದು ಸಂಪರ್ಕ ದೋಷಗಳಿಗೆ ಕಾರಣವಾಗಿರಬಹುದು. ಕೆಲವು ಸರ್ವರ್‌ಗಳು ಅನಿರೀಕ್ಷಿತವಾಗಿ ಲಭ್ಯವಿಲ್ಲದಂತಾಗಿದ್ದು, ಅವುಗಳನ್ನ ಮರುಸ್ಥಾಪಿಸುವ ಕಾರ್ಯ ಆರಂಭಿಸಲಾಗಿದೆ. ಸಮಸ್ಯೆ ಕಾಣಿಸಿಕೊಂಡ ಸಮಯದಲ್ಲಿ ನೆಟ್‌ವರ್ಕ್‌ ಕಾನ್ಫಿಗರೇಷನ್‌ನಲ್ಲಿ ಮಾಡಲಾಗಿದ್ದ ಬದಲಾವಣೆಯನ್ನ ಹಿಂಪಡೆಯುವ ಪ್ರಯತ್ನವನ್ನೂ ಕಂಪನಿ ಕೈಗೊಂಡಿದೆ. ಆದರೆ ಈ ಬದಲಾವಣೆಯೇ ವ್ಯತ್ಯಯಕ್ಕೆ ನೇರ ಕಾರಣವೆಂದು ಮೈಕ್ರೋಸಾಫ್ಟ್ ಅಧಿಕೃತವಾಗಿ ದೃಢಪಡಿಸಿಲ್ಲ.

ಸೇವೆ ಪುನಃಸ್ಥಾಪನೆಗೆ ನಿರಂತರ ಪ್ರಯತ್ನ

ತೊಂದರೆಗೀಡಾದ ಸರ್ವರ್‌ಗಳನ್ನ ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಲು ಮೈಕ್ರೋಸಾಫ್ಟ್ ತಾಂತ್ರಿಕ ತಂಡಗಳು ಕ್ರಮ ಕೈಗೊಂಡಿವೆ. ಆರಂಭದಲ್ಲಿ ಕೆಲವು ಸರ್ವರ್‌ಗಳನ್ನ ಮರುಸ್ಥಾಪಿಸಿದರೂ, ಅವುಗಳಿಗೆ ಬಳಕೆದಾರರ ಸಂಪರ್ಕ ಮತ್ತು ಟ್ರಾಫಿಕ್ ಮರಳಿದ ಬಳಿಕ ಮತ್ತೆ ಪ್ರತಿಕ್ರಿಯಿಸದ ಸಮಸ್ಯೆ ಎದುರಾಗಿದೆ. ಇದರಿಂದ ಸೇವೆಗಳನ್ನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ತರುವುದು ವಿಳಂಬವಾಗಿದೆ.

ಸರ್ವರ್‌ಗಳ ಸ್ಥಿರತೆ ಹೆಚ್ಚಿಸಲು ಸಾಫ್ಟ್‌ವೇರ್ ಪ್ಯಾಚ್‌ಗಳನ್ನ ಅನ್ವಯಿಸುವುದು, ಟ್ರಾಫಿಕ್‌ ಅನ್ನ ಪರ್ಯಾಯ ಮಾರ್ಗಗಳಿಗೆ ವರ್ಗಾಯಿಸುವುದು ಮತ್ತು ಹೆಚ್ಚುವರಿ ಸಾಮರ್ಥ್ಯ ಒದಗಿಸುವ ಕ್ರಮಗಳನ್ನ ಕಂಪನಿ ಕೈಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಸುಧಾರಣೆ ಕಂಡುಬಂದಿದ್ದರೂ, ಎಲ್ಲಾ ಸೇವೆಗಳು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ವರದಿಗಳು ತಿಳಿಸಿವೆ.

ಒಟ್ನಲ್ಲಿ ಮೈಕ್ರೋಸಾಫ್ಟ್‌ನ ಜಾಗತಿಕ ಸೇವಾ ವ್ಯತ್ಯಯಕ್ಕೆ ಸೈಬರ್‌ ದಾಳಿಯೇ ಕಾರಣ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆ ಇಲ್ಲವೆಂದು ಕಂಪನಿ ಸ್ಪಷ್ಟಪಡಿಸಿದೆ. ಸರ್ವರ್‌ ಮತ್ತು ನೆಟ್‌ವರ್ಕ್‌ ಸಂಬಂಧಿತ ಸಮಸ್ಯೆಗಳನ್ನ ಸರಿಪಡಿಸಿ ಸೇವೆಗಳನ್ನ ಸಹಜ ಸ್ಥಿತಿಗೆ ತರಲು ಪ್ರಯತ್ನ ಮುಂದುವರಿದಿದೆ.

Add Zee News as a Preferred Source
TAGS:
Banking
Tech
Kannada News