ಐಡಿಬಿಐ ಖರೀದಿಗೆ ಐಡಿಬಿಐ ಹಣವೇ ಬಳಕೆಯಾಗುತ್ತಾ? ಫೇರ್‌ಫ್ಯಾಕ್ಸ್ ಡೀಲ್‌ನಲ್ಲಿ ಹೊಸ ವಿವಾದ!
Fairfax buying Idbi with idbis own money: ಐಡಿಬಿಐ ಬ್ಯಾಂಕ್ ಖರೀದಿಗೆ ಫೇರ್‌ಫ್ಯಾಕ್ಸ್ ಕಂಪನಿ ಮುಂದಾಗಿದೆ. ಬರೋಬ್ಬರಿ ₹52,878 ಕೋಟಿ ಮೊತ್ತಕ್ಕೆ ಐಡಿಬಿಐನ ಶೇ.60.72ರಷ್ಟು ಷೇರು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಈಗ ಈ ಡೀಲ್ ಸುತ್ತ ಹೊಸದೊಂದು ವಿವಾದ ಶುರುವಾಗಿದೆ. ಐಡಿಬಿಐ ಬ್ಯಾಂಕ್ ಖರೀದಿಸಲು ಫೇರ್‌ಫ್ಯಾಕ್ಸ್ ತನ್ನದೇ ಹಣ ಬಳಸುತ್ತಿದೆಯಾ? ಅಥವಾ ತಾನು ಖರೀದಿಸುತ್ತಿರುವ ಬ್ಯಾಂಕ್‌ನ ಹಣವನ್ನೇ ಬಳಸಿಕೊಳ್ಳುತ್ತಿದೆಯಾ? ಫೇರ್‌ಫ್ಯಾಕ್ಸ್‌ನ ಉನ್ನತ ಅಧಿಕಾರಿಗಳ ಹೇಳಿಕೆಗಳೇ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿವೆ. ಅಷ್ಟಕ್ಕೂ ಐಡಿಬಿಐ-ಫೇರ್‌ಫ್ಯಾಕ್ಸ್ ಡೀಲ್ ವಿವಾದ ಏನು..
ಐಡಿಬಿಐ ಬ್ಯಾಂಕ್ ಖರೀದಿಗೆ ಫೇರ್‌ಫ್ಯಾಕ್ಸ್ ಕಂಪನಿ ಮುಂದಾಗಿದೆ. ಬರೋಬ್ಬರಿ ₹52,878 ಕೋಟಿ ಮೊತ್ತಕ್ಕೆ ಐಡಿಬಿಐನ ಶೇ.60.72ರಷ್ಟು ಷೇರು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಈಗ ಈ ಡೀಲ್ ಸುತ್ತ ಹೊಸದೊಂದು ವಿವಾದ ಶುರುವಾಗಿದೆ. ಐಡಿಬಿಐ ಬ್ಯಾಂಕ್ ಖರೀದಿಸಲು ಫೇರ್‌ಫ್ಯಾಕ್ಸ್ ತನ್ನದೇ ಹಣ ಬಳಸುತ್ತಿದೆಯಾ? ಅಥವಾ ತಾನು ಖರೀದಿಸುತ್ತಿರುವ ಬ್ಯಾಂಕ್‌ನ ಹಣವನ್ನೇ ಬಳಸಿಕೊಳ್ಳುತ್ತಿದೆಯಾ? ಫೇರ್‌ಫ್ಯಾಕ್ಸ್‌ನ ಉನ್ನತ ಅಧಿಕಾರಿಗಳ ಹೇಳಿಕೆಗಳೇ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿವೆ. ಅಷ್ಟಕ್ಕೂ ಐಡಿಬಿಐ-ಫೇರ್‌ಫ್ಯಾಕ್ಸ್ ಡೀಲ್ ವಿವಾದ ಏನು..
ಭಾರತದ ಬ್ಯಾಕಿಂಗ್ ವಲಯದಲ್ಲಿ ಮಹತ್ವದ ಬೆಳವಣಿಗೆ ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ.. ಫೇರ್‌ಫ್ಯಾಕ್ಸ್ ಕಂಪನಿ ಐಡಿಬಿಐ ಬ್ಯಾಂಕ್‌ನ ಶೇ.60.72ರಷ್ಟು ಪಾಲನ್ನು ಖರೀದಿಸಲು ಮುಂದಾಗಿದೆ. ಸರ್ಕಾರ ಮತ್ತು ಎಲ್‌ಐಸಿ ಬಳಿಯಿರುವ ಷೇರುಗಳನ್ನು ಪ್ರತಿ ಷೇರಿಗೆ ₹81ರಂತೆ ಖರೀದಿಸಲು ಒಪ್ಪಂದವಾಗಿದೆ. ಒಟ್ಟು ಡೀಲ್ ಮೌಲ್ಯ ಬರೋಬ್ಬರಿ ₹52,878 ಕೋಟಿ. ಆದ್ರೆ ಈ ಖರೀದಿ ಪ್ರಕ್ರಿಯೆಯಲ್ಲೇ ಈಗ ಹೊಸ ಅನುಮಾನಗಳು ಹುಟ್ಟಿಕೊಂಡಿವೆ.
ಅಸಲಿಗೆ ಫೇರ್‌ಫ್ಯಾಕ್ಸ್ ತನ್ನ ಸ್ವಂತ ಹಣದಿಂದಲೇ ಐಡಿಬಿಐ ಖರೀದಿಸುತ್ತಿದೆಯಾ? ಅಥವಾ ಐಡಿಬಿಐನ ಹಣವನ್ನೇ ಬಳಸಿಕೊಂಡು ಬ್ಯಾಂಕ್ ಖರೀದಿಸುತ್ತಿದೆಯಾ? ಈ ಪ್ರಶ್ನೆಗೆ ಕಾರಣ ಅಕ್ಟೋಬರ್ 15ರಂದು ನಡೆದ ಹೂಡಿಕೆದಾರರ ಸಭೆ. ಸಭೆಯಲ್ಲಿ ಫೇರ್‌ಫ್ಯಾಕ್ಸ್ ಸಂಸ್ಥಾಪಕ ಪ್ರೇಮ್ ವಾಟ್ಸಾ ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.ಐಡಿಬಿಐ ಬ್ಯಾಂಕ್ ತನ್ನಲ್ಲಿರುವ ಹೆಚ್ಚುವರಿ ಬಂಡವಾಳ ಬಳಸಿ ಫೇರ್‌ಫ್ಯಾಕ್ಸ್‌ನ ವಿಮಾ ಕಂಪನಿಗಳ ಷೇರುಗಳನ್ನು ಖರೀದಿಸಲಿದೆ ಎಂದು ವಾಟ್ಸಾ ಹೇಳಿದ್ದಾರೆ. ಅಂದರೆ ಗೋ ಡಿಜಿಟ್ ಜನರಲ್, ಗೋ ಡಿಜಿಟ್ ಲೈಫ್ ಮತ್ತು ಐಐಎಫ್‌ಎಲ್ ಕ್ಯಾಪಿಟಲ್‌ನಲ್ಲಿರುವ ಪಾಲನ್ನು ಐಡಿಬಿಐ ಖರೀದಿಸಲಿದೆ.
ಇತ್ತ ಫೇರ್‌ಫ್ಯಾಕ್ಸ್ ಅಧ್ಯಕ್ಷ ಪೀಟರ್ ಕ್ಲಾರ್ಕ್ ನೀಡಿರುವ ಲೆಕ್ಕಾಚಾರ ಮತ್ತಷ್ಟು ಕುತೂಹಲ ಮೂಡಿಸಿದೆ. ಐಡಿಬಿಐ ಖರೀದಿಗೆ ಒಟ್ಟು 5.6 ಬಿಲಿಯನ್ ಡಾಲರ್ ಅಗತ್ಯವಿದೆ. ಈ ಪೈಕಿ ಗೋ ಡಿಜಿಟ್ ಮತ್ತು ಐಐಎಫ್‌ಎಲ್ ಕ್ಯಾಪಿಟಲ್ ಸೇರಿದಂತೆ ಮೂರು ಕಂಪನಿಗಳಿಂದಲೇ ಸುಮಾರು 3 ಬಿಲಿಯನ್ ಡಾಲರ್ ಹಣ ಬರಲಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ ಸುಮಾರು ₹28,300 ಕೋಟಿ. ಅಂದರೆ ಐಡಿಬಿಐ ಖರೀದಿ ಮೊತ್ತದ ಅರ್ಧಕ್ಕಿಂತಲೂ ಹೆಚ್ಚು ಹಣ ಫೇರ್‌ಫ್ಯಾಕ್ಸ್‌ನದೇ ಕಂಪನಿಗಳಿಂದ ಬರಲಿದೆ. ಆದರೆ ಈ ಕಂಪನಿಗಳಿಗೆ ಐಡಿಬಿಐ ಬ್ಯಾಂಕ್ ಹಣ ಪಾವತಿಸುತ್ತದೆ.
ಇಲ್ಲೇಅಸಲಿ ಪ್ರಶ್ನೆ ಶುರುವಾಗಿದೆ ಅದೇ ಏನಾಪ್ಪ ಅಂದ್ರೆ. ಫೇರ್‌ಫ್ಯಾಕ್ಸ್ ಖರೀದಿಸುವ ಬ್ಯಾಂಕ್‌ನಿಂದಲೇ ಹಣ ಪಡೆದು ತನ್ನ ಕಂಪನಿಗಳ ಷೇರುಗಳನ್ನು ಮಾರಾಟ ಮಾಡುತ್ತಿದೆಯಾ? ಬ್ಯಾಂಕಿನ ಹೆಚ್ಚುವರಿ ಬಂಡವಾಳವನ್ನು ಈ ರೀತಿ ಬಳಸುವುದು ಎಷ್ಟು ಸರಿ? ಗೋ ಡಿಜಿಟ್ ಲೈಫ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ. ಹೀಗಾಗಿ ಅದಕ್ಕೆ ಮಾರುಕಟ್ಟೆ ಬೆಲೆ ಕೂಡ ಇಲ್ಲ. ಹಾಗಾದರೆ ಅದರ ಮೌಲ್ಯವನ್ನು ನಿರ್ಧರಿಸುವವರು ಯಾರು? ಸ್ವತಂತ್ರ ಮೌಲ್ಯಮಾಪನ ನಡೆಯುತ್ತಿದೆಯಾ? ಎಂಬ ಪ್ರಶ್ನೆಗಳು ಎದ್ದಿವೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಐಡಿಬಿಐ ಬ್ಯಾಂಕ್‌ನ ಬಂಡವಾಳ. ಒಂದು ದಶಕದ ಹಿಂದೆ ಸಂಕಷ್ಟದಲ್ಲಿದ್ದ ಬ್ಯಾಂಕ್‌ಗೆ ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಒದಗಿಸಿದ್ದವು. ಫೇರ್‌ಫ್ಯಾಕ್ಸ್ ಅಧ್ಯಕ್ಷರೇ ಹೇಳಿರುವಂತೆ, 2016ರಿಂದ 2020ರ ಅವಧಿಯಲ್ಲಿ ಸರ್ಕಾರ ಮತ್ತು ಎಲ್‌ಐಸಿ ಸುಮಾರು 6.4 ಬಿಲಿಯನ್ ಡಾಲರ್ ಹಣಕಾಸಿನ ನೆರವು ನೀಡಿದ್ದವು. ಇದೀಗ ಐಡಿಬಿಐ ಬ್ಯಾಂಕ್ ಬಂಡವಾಳ ಸಮರ್ಪಕತೆ ಅನುಪಾತ ಶೇಕಡಾ 27.10ರಷ್ಟಿದೆ. ಅಂದರೆ ನಿಯಂತ್ರಕ ಕನಿಷ್ಠ ಮಿತಿಗಿಂತ ಎರಡು ಪಟ್ಟು ಹೆಚ್ಚಿದೆ. ಸಾರ್ವಜನಿಕ ಹಣದಿಂದ ಬಲಿಷ್ಠವಾಗಿರುವ ಬ್ಯಾಂಕ್‌ನ ಈ ಬಂಡವಾಳವನ್ನು ಫೇರ್‌ಫ್ಯಾಕ್ಸ್ ತನ್ನ ಕಂಪನಿಗಳ ಖರೀದಿಗೆ ಬಳಸಿಕೊಳ್ಳುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಫೇರ್‌ಫ್ಯಾಕ್ಸ್ ಪ್ರಕರಣ
ಈ ಯೋಜನೆಯು "ಭಾರತೀಯರ ಆರ್ಥಿಕ ಅಗತ್ಯಗಳಿಗೆ ಒಂದೇ ಕಡೆ ಪರಿಹಾರವನ್ನು ನೀಡುವ ಏಕೀಕೃತ ಹಣಕಾಸು ಸೇವೆಗಳ ಕಂಪನಿಯನ್ನು" ನಿರ್ಮಿಸುತ್ತದೆ ಎಂದು ಫೇರ್‌ಫ್ಯಾಕ್ಸ್ ಹೇಳುತ್ತದೆ. ಡಿಜಿಟ್ ಐಡಿಬಿಐ ಗ್ರಾಹಕರಿಗೆ ವಿಮೆಯನ್ನು ಮಾರಾಟ ಮಾಡಬಹುದು. ಕರೆಯಲ್ಲಿ, ಫೇರ್‌ಫ್ಯಾಕ್ಸ್ ವ್ಯವಹಾರಗಳನ್ನು ವಿಲೀನಗೊಳಿಸುವುದಿಲ್ಲ ಅಥವಾ ಮರುಬ್ರಾಂಡ್ ಮಾಡುವುದಿಲ್ಲ ಎಂದು ವಾಟ್ಸಾ ಹೇಳಿದರು: "ನಾವು ಎಂದಿಗೂ ಸಿನರ್ಜಿಗಳಲ್ಲಿ ನಂಬಿಕೆ ಇಟ್ಟಿಲ್ಲ" ಎಂದು ಅವರು ಹೇಳಿದರು.
ಈ ಮಾರಾಟದ ಬಗ್ಗೆ ಬಿಸಿನೆಸ್‌ವರ್ಲ್ಡ್ ಎತ್ತಿರುವ ಮೊದಲ ಪ್ರಶ್ನೆ ಇದಲ್ಲ. ಇದು ನಾಲ್ಕನೆಯದು.
ಆಗಸ್ಟ್ 13 ರ DIPAM ನ ಆಂತರಿಕ ಟಿಪ್ಪಣಿಯಲ್ಲಿ ಅಧಿಕಾರಿಗಳು ಫೇರ್‌ಫ್ಯಾಕ್ಸ್‌ನ ಬಿಡ್ ಅನ್ನು ತೆರೆದರು, ₹94.42 ಮೀಸಲು ಬೆಲೆಯನ್ನು ತ್ಯಜಿಸಿದರು ಮತ್ತು ನಂತರ ಮಾತ್ರ ಹೊಸ ಮೌಲ್ಯಮಾಪನಗಳನ್ನು ಆದೇಶಿಸಿದರು ಎಂದು ತೋರಿಸುತ್ತದೆ. ಅವು ₹75.99 ಕ್ಕೆ ಬಂದವು, ಇದು ಫೇರ್‌ಫ್ಯಾಕ್ಸ್‌ನ ₹81 ಕ್ಕಿಂತ ಕಡಿಮೆಯಾಗಿದೆ. ಸರ್ಕಾರವು ತನ್ನ ಕಾರ್ಯವಿಧಾನಗಳು ನಿಯಮಗಳಲ್ಲ, ಮಾರ್ಗಸೂಚಿಗಳಾಗಿವೆ ಮತ್ತು ಪ್ರಕ್ರಿಯೆಯು "ಡಬಲ್ ಬ್ಲೈಂಡ್" ಎಂದು ಹೇಳುತ್ತದೆ.
ಇನ್ನು ಈ ವ್ಯವಹಾರಕ್ಕೆ ಆರ್‌ಬಿಐ ನಿಯಮಗಳೂ ಅನ್ವಯವಾಗಲಿವೆ. ಬ್ಯಾಂಕ್ ಯಾವುದೇ ಒಂದು ಹಣಕಾಸು ಕಂಪನಿಯಲ್ಲಿ ತನ್ನ ಬಂಡವಾಳ ಮತ್ತು ಮೀಸಲುಗಳ ಶೇ.10ಕ್ಕಿಂತ ಹೆಚ್ಚು ಹೂಡಿಕೆ ಮಾಡುವಂತಿಲ್ಲ. ಎಲ್ಲಾ ಹಣಕಾಸು ಕಂಪನಿಗಳಲ್ಲಿನ ಒಟ್ಟು ಹೂಡಿಕೆ ಶೇ.20 ಮೀರಬಾರದು ಎಂಬ ನಿಯಮವಿದೆ. ಹೀಗಿರುವಾಗ ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ ಮೂರು ಕಂಪನಿಗಳ ಖರೀದಿ ಈ ನಿಯಮಗಳ ವ್ಯಾಪ್ತಿಗೆ ಹೇಗೆ ಬರುತ್ತದೆ? ಆರ್‌ಬಿಐ ಅನುಮತಿ ನೀಡಿದೆಯಾ? ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಮಾತ್ರವಲ್ಲದೇ ಮಾರಾಟ ಪ್ರಕ್ರಿಯೆಯ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗಿವೆ. ಸರ್ಕಾರದ ಆಂತರಿಕ ಟಿಪ್ಪಣಿಯ ಪ್ರಕಾರ, ಬಿಡ್ ಪ್ರಕ್ರಿಯೆಯಲ್ಲಿ ಮೀಸಲು ಬೆಲೆಯನ್ನು ಕೈಬಿಟ್ಟು ಹೊಸ ಮೌಲ್ಯಮಾಪನ ನಡೆಸಲಾಗಿತ್ತು. ಅಂತಿಮವಾಗಿ ಪ್ರತಿ ಷೇರಿಗೆ ₹81ರಂತೆ ಮಾರಾಟಕ್ಕೆ ನಿರ್ಧರಿಸಲಾಗಿದೆ. ಕ್ಯಾಬಿನೆಟ್ ಅನುಮೋದನೆಯ ದಿನದ ಮಾರುಕಟ್ಟೆ ಬೆಲೆಗಿಂತಲೂ ಇದು ಸುಮಾರು ಶೇ.10ರಷ್ಟು ಕಡಿಮೆ ಎನ್ನಲಾಗಿದೆ.ಮತ್ತೊಂದೆಡೆ, ಮಾರಾಟಗಾರರಾದ ಎಲ್‌ಐಸಿಯ ನಿರ್ದೇಶಕರೊಬ್ಬರು ಫೇರ್‌ಫ್ಯಾಕ್ಸ್ ನಿಯಂತ್ರಣದ ಕಂಪನಿಯ ಮಂಡಳಿಯಲ್ಲೂ ಇದ್ದರು ಎಂಬ ವಿಚಾರವೂ ಚರ್ಚೆಗೆ ಬಂದಿದೆ.
ಆದರೆ ಫೇರ್‌ಫ್ಯಾಕ್ಸ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಐಡಿಬಿಐ, ಗೋ ಡಿಜಿಟ್ ಮತ್ತು ಐಐಎಫ್‌ಎಲ್ ಕ್ಯಾಪಿಟಲ್ ಮೂಲಕ ಸಮಗ್ರ ಹಣಕಾಸು ಸೇವಾ ಸಂಸ್ಥೆ ನಿರ್ಮಿಸುವುದು ಉದ್ದೇಶ ಎಂದು ಹೇಳಿದೆ. ವಿಮಾ ಸೇವೆಗಳನ್ನು ಐಡಿಬಿಐ ಗ್ರಾಹಕರಿಗೆ ತಲುಪಿಸುವ ಮೂಲಕ ಬ್ಯಾಂಕ್‌ನ ಆದಾಯ ಹೆಚ್ಚಿಸಬಹುದು ಎಂಬುದು ಕಂಪನಿಯ ವಾದ ಆಗಿದೆ.. ಆದರೆ ಯಾವುದೇ ಅಂತಿಮ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ. ಈ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲು ಆರ್‌ಬಿಐ, ಸೆಬಿ ಮತ್ತು ವಿಮಾ ನಿಯಂತ್ರಕ ಐಆರ್‌ಡಿಎಐ ಸೇರಿದಂತೆ ಸಂಬಂಧಿತ ಸಂಸ್ಥೆಗಳ ಅನುಮತಿ ಅಗತ್ಯವಿದೆ.
ಒಟ್ಟಿನಲ್ಲಿ ಐಡಿಬಿಐ ಬ್ಯಾಂಕ್ ಖಾಸಗೀಕರಣದ ನಿರ್ಧಾರಕ್ಕಿಂತಲೂ ಈಗ ಅದರ ಹಣಕಾಸಿನ ವ್ಯವಹಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಬ್ಯಾಂಕ್ ಖರೀದಿಸುವವರು ಯಾರು? ಹಣ ಪಾವತಿಸುವವರು ಯಾರು? ಸಾರ್ವಜನಿಕ ಹಣದಿಂದ ಬಲಿಷ್ಠವಾದ ಬ್ಯಾಂಕ್‌ನ ಬಂಡವಾಳವನ್ನು ಹೇಗೆ ಬಳಸಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ. ಫೇರ್‌ಫ್ಯಾಕ್ಸ್ ಪಾಲಿಗೆ ಇದು ದೊಡ್ಡ ಹೂಡಿಕೆ ಅವಕಾಶವಾದರೆ, ಐಡಿಬಿಐನ ಅಲ್ಪಸಂಖ್ಯಾತ ಷೇರುದಾರರ ಪಾಲಿಗೆ ಇದು ಹಿತಾಸಕ್ತಿಯ ಪರೀಕ್ಷೆಯಾಗಿದೆ.