• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಇನ್ಮುಂದೆ WhatsApp‌ನಲ್ಲೇ PF ಬ್ಯಾಲೆನ್ಸ್ ಚೆಕ್ ಮಾಡಿ! EPFOನಿಂದ ಹೊಸ ಸೇವೆ ಆರಂಭ

ಇನ್ಮುಂದೆ WhatsApp‌ನಲ್ಲೇ PF ಬ್ಯಾಲೆನ್ಸ್ ಚೆಕ್ ಮಾಡಿ! EPFOನಿಂದ ಹೊಸ ಸೇವೆ ಆರಂಭ

EPFO ವಾಟ್ಸಾಪ್ ಸೇವೆ ಆರಂಭ: ಇನ್ನು ಪಿಎಫ್ ಬ್ಯಾಲೆನ್ಸ್, ಕೊನೆಯ ಐದು ವಹಿವಾಟುಗಳ ಮಾಹಿತಿ ಹಾಗೂ ಪಾಸ್‌ಬುಕ್‌ ಪಡೆಯಲು EPFO ಕಚೇರಿಗೆ ಹೋಗಬೇಕಿಲ್ಲ. +91 8796441800 ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಈ ಸೇವೆಗಳನ್ನ ಪಡೆಯಬಹುದು. ಜೊತೆಗೆ ₹1,000 ಅಥವಾ ಅದಕ್ಕಿಂತ ಕಡಿಮೆ ಬಾಕಿ ಇರುವ ಅರ್ಹ ನಿಷ್ಕ್ರಿಯ ಪಿಎಫ್ ಖಾತೆಗಳ ಹಣವನ್ನ ಸ್ವಯಂಚಾಲಿತವಾಗಿ ಪಾವತಿಸುವ ವ್ಯವಸ್ಥೆಯನ್ನೂ EPFO ಜಾರಿಗೆ ತಂದಿದೆ.

Written ByPuttaraj K Alur
Published: Nov 02, 2026, 01:06 PM IST|Updated: Nov 02, 2026, 01:32 PM IST
joinshare
ಇನ್ಮುಂದೆ WhatsApp‌ನಲ್ಲೇ PF ಬ್ಯಾಲೆನ್ಸ್ ಚೆಕ್ ಮಾಡಿ! EPFOನಿಂದ ಹೊಸ ಸೇವೆ ಆರಂಭ
Image Credit: EPFO WhatsApp Service

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
Viral Video: ʼಮದುವೆಯಾಗದಿದ್ರೆ ಕೈ ಕೊಯ್ದುಕೊಂಡು ಸಾಯುತ್ತೇನೆʼ; ಲವರ್ ಮನೆ ಮೇಲ್ಛಾವಣಿ ಏರಿದ ಯುವತಿಯಿಂದ ಹೈಡ್ರಾಮಾ!

Viral Video: ʼಮದುವೆಯಾಗದಿದ್ರೆ ಕೈ ಕೊಯ್ದುಕೊಂಡು ಸಾಯುತ್ತೇನೆʼ; ಲವರ್ ಮನೆ ಮೇಲ್ಛಾವಣಿ ಏರಿದ ಯುವತಿಯಿಂದ ಹೈಡ್ರಾಮಾ!

2

ಅಗ್ರಿಗೋಲ್ಡ್ ವಂಚನೆ: ಹಣ ಪಡೆಯಲು ಆನೇಕಲ್ ಠಾಣೆ ಮುಂದೆ ಮುಗಿಬಿದ್ದ ಹೂಡಕೆದಾರರು!

3

ಮೈಸೂರಿನಲ್ಲಿ ಪರಿಸರ ಸ್ನೇಹಿ ದೀಪಾವಳಿ: ಪಟಾಕಿ ಬಳಕೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

4

ನಾಲ್ಕನೇ ದಿನವೂಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ... ಭಕ್ತಾಧಿಗಳಿಗೆ ವಸತಿ ವ್ಯವಸ್ಥೆ.. 3 ದಿನಕ್ಕೆ 5 ಕೋಟಿ ರೂ. ಆದಾಯ!

5

ಇನ್ಮುಂದೆ WhatsApp‌ನಲ್ಲೇ PF ಬ್ಯಾಲೆನ್ಸ್ ಚೆಕ್ ಮಾಡಿ! EPFOನಿಂದ ಹೊಸ ಸೇವೆ ಆರಂಭ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

EPFO WhatsApp Service: ಉದ್ಯೋಗಿಗಳ ಭವಿಷ್ಯ ನಿಧಿ (PF) ಖಾತೆ ಹೊಂದಿರುವವರಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮಹತ್ವದ ಸೌಲಭ್ಯವೊಂದನ್ನ ಪರಿಚಯಿಸಿದೆ. ಇನ್ಮುಂದೆ ಚಂದಾದಾರರು ತಮ್ಮ ಪಿಎಫ್ ಖಾತೆಯಲ್ಲಿರುವ ಹಣದ ಮೊತ್ತವನ್ನ ಪರಿಶೀಲಿಸಲು, ಪಾಸ್‌ಬುಕ್ ಪಡೆಯಲು ಹಾಗೂ ಇತ್ತೀಚಿನ ಐದು ವಹಿವಾಟುಗಳ ವಿವರಗಳನ್ನ ತಿಳಿದುಕೊಳ್ಳಲು ವಾಟ್ಸಾಪ್ ಬಳಸಬಹುದು. ಇದಕ್ಕಾಗಿ ಇಪಿಎಫ್‌ಒ ಅಧಿಕೃತ ವಾಟ್ಸಾಪ್ ಸಂಖ್ಯೆ +91 8796441800ಯನ್ನ ಸಂಪರ್ಕಿಸಬೇಕಿದೆ.

ನವೆಂಬರ್ 1ರಂದು ನವದೆಹಲಿಯಲ್ಲಿ ನಡೆದ ಇಪಿಎಫ್‌ಒನ 74ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಈ ಹೊಸ ಸೇವೆಯನ್ನ ಉದ್ಘಾಟಿಸಿದರು. ಸದಸ್ಯರು ತಮ್ಮ ದಿನನಿತ್ಯದ ಪಿಎಫ್ ಖಾತೆ ಮಾಹಿತಿಯನ್ನ ಸುಲಭವಾಗಿ ಪಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಸಣ್ಣಪುಟ್ಟ ಸೇವೆಗಳಿಗಾಗಿ ಇಪಿಎಫ್‌ಒ ಕಚೇರಿಗೆ ಭೇಟಿ ನೀಡುವ ಅಥವಾ ಆನ್‌ಲೈನ್ ಪೋರ್ಟಲ್‌ನಲ್ಲಿ ಹಲವು ಹಂತಗಳನ್ನ ಅನುಸರಿಸುವ ಅಗತ್ಯ ಕಡಿಮೆಯಾಗಲಿದೆ.

WhatsApp ಮೂಲಕ ಯಾವೆಲ್ಲ ಸೇವೆ ಪಡೆಯಬಹುದು?

ಹೊಸ ವ್ಯವಸ್ಥೆಯಡಿ ಇಪಿಎಫ್‌ಒ ಸದಸ್ಯರು ಪ್ರಮುಖವಾಗಿ ಮೂರು ರೀತಿಯ ಖಾತೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

PF ಬ್ಯಾಲೆನ್ಸ್ ಪರಿಶೀಲನೆ: ತಮ್ಮ ಭವಿಷ್ಯ ನಿಧಿ ಖಾತೆಯಲ್ಲಿ ಪ್ರಸ್ತುತ ಎಷ್ಟು ಹಣವಿದೆ ಎಂಬುದನ್ನ ವಾಟ್ಸಾಪ್ ಮೂಲಕವೇ ತಿಳಿದುಕೊಳ್ಳಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಇಪಿಎಫ್‌ಒ ಕಚೇರಿಗೆ ಹೋಗುವ ಅಗತ್ಯವಿಲ್ಲ.

ಇತ್ತೀಚಿನ ಐದು ವಹಿವಾಟುಗಳ ವಿವರ: ಪಿಎಫ್ ಖಾತೆಯಲ್ಲಿ ನಡೆದಿರುವ ಕೊನೆಯ ಐದು ವಹಿವಾಟುಗಳ ಮಾಹಿತಿಯನ್ನ ವೀಕ್ಷಿಸಬಹುದು. ಇದರಿಂದ ಖಾತೆಗೆ ಜಮೆಯಾಗಿರುವ ಕೊಡುಗೆಗಳು ಸೇರಿದಂತೆ ಇತ್ತೀಚಿನ ಹಣಕಾಸಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗಲಿದೆ.

EPF ಪಾಸ್‌ಬುಕ್ ಡೌನ್‌ಲೋಡ್: ಸದಸ್ಯರು ತಮ್ಮ ಪಿಎಫ್ ಪಾಸ್‌ಬುಕ್‌ ಅನ್ನ ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು. ಇದರಲ್ಲಿ ಖಾತೆಯ ವಿವರಗಳು ಹಾಗೂ ಉದ್ಯೋಗದಾತರು ಮತ್ತು ಉದ್ಯೋಗಿಗಳ ಕೊಡುಗೆಗಳ ಮಾಹಿತಿಯನ್ನ ಪರಿಶೀಲಿಸಬಹುದು. ಇದರ ಜೊತೆಗೆ ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆ (PMVBRY)ಗೆ ಸಂಬಂಧಿಸಿದ ಅರ್ಹತೆ ಮತ್ತು ಇತರ ಅವಶ್ಯಕತೆಗಳ ಕುರಿತು ಸದಸ್ಯರಿಗೆ ವೈಯಕ್ತಿಕ ಮಾರ್ಗದರ್ಶನ ಹಾಗೂ ಸಹಾಯವನ್ನೂ ಈ ವೇದಿಕೆ ಒದಗಿಸಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

WhatsAppನಲ್ಲಿ PF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಈ ಹೊಸ ಸೇವೆಯನ್ನ ಬಳಸಲು ಸದಸ್ಯರು ಕೆಲವು ಸರಳ ಹಂತಗಳನ್ನ ಅನುಸರಿಸಬೇಕು.

* ಮೊದಲು ನಿಮ್ಮ ಮೊಬೈಲ್‌ನಲ್ಲಿ EPFO ಅಧಿಕೃತ ವಾಟ್ಸಾಪ್ ಸಂಖ್ಯೆ +91 8796441800ಯನ್ನ ಸೇವ್ ಮಾಡಿಕೊಳ್ಳಿ.
* ವಾಟ್ಸಾಪ್ ತೆರೆಯಿರಿ ಮತ್ತು ಆ ಸಂಖ್ಯೆಗೆ 'Hi' ಎಂದು ಸಂದೇಶ ಕಳುಹಿಸಿ.
* ನಂತರ ಚಾಟ್‌ನಲ್ಲಿ ಕಾಣಿಸುವ ಸೂಚನೆಗಳನ್ನ ಅನುಸರಿಸಿ.
* ಲಭ್ಯವಿರುವ ಆಯ್ಕೆಗಳಲ್ಲಿ PF ಬ್ಯಾಲೆನ್ಸ್ ಪರಿಶೀಲನೆ, ಇತ್ತೀಚಿನ ಐದು ವಹಿವಾಟುಗಳ ಮಾಹಿತಿ ಅಥವಾ ಪಾಸ್‌ಬುಕ್ ಡೌನ್‌ಲೋಡ್ ಸೇವೆಯನ್ನ ಆಯ್ಕೆಮಾಡಿ.
* ಆಯ್ಕೆ ಮಾಡಿದ ಸೇವೆಗೆ ಸಂಬಂಧಿಸಿದ ಸೂಚನೆಗಳನ್ನ ಪಾಲಿಸಿ ಅಗತ್ಯ ಮಾಹಿತಿಯನ್ನ ಪಡೆದುಕೊಳ್ಳಿ.

ಇಪಿಎಫ್‌ಒ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿಯೂ ಈ ಸೌಲಭ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸದಸ್ಯರು ಅಲ್ಲಿ ಪ್ರಕಟಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ವಾಟ್ಸಾಪ್ ಸೇವೆಯನ್ನ ಆರಂಭಿಸಬಹುದು.

ನಕಲಿ ಸಂಖ್ಯೆಗಳ ಬಗ್ಗೆ ಎಚ್ಚರಿಕೆ

ವಾಟ್ಸಾಪ್ ಮೂಲಕ ಪಿಎಫ್ ಮಾಹಿತಿ ಪಡೆಯುವಾಗ ಸುರಕ್ಷತೆಯ ಬಗ್ಗೆಯೂ ಸದಸ್ಯರು ಗಮನಹರಿಸಬೇಕು. ಇಪಿಎಫ್‌ಒ ಪ್ರಕಟಿಸಿರುವ ಅಧಿಕೃತ ಸಂಖ್ಯೆಯನ್ನೇ ಬಳಸಬೇಕು. ಅಪರಿಚಿತ ಅಥವಾ ಪರಿಶೀಲಿಸದ ಸಂಪರ್ಕಗಳಿಗೆ ಯುಎಎನ್ ಪಾಸ್‌ವರ್ಡ್, ಒಟಿಪಿ ಹಾಗೂ ಬ್ಯಾಂಕ್ ಖಾತೆಯ ರಹಸ್ಯ ಮಾಹಿತಿಯನ್ನ ಹಂಚಿಕೊಳ್ಳಬಾರದು. ಅಧಿಕೃತ ಪ್ರಕಟಣೆಯಲ್ಲಿ ನೀಡಿರುವ ಕ್ಯೂಆರ್ ಕೋಡ್ ಅಥವಾ ಸಂಪರ್ಕ ಮಾರ್ಗಗಳನ್ನೇ ಬಳಸುವಂತೆ ಸೂಚಿಸಲಾಗಿದೆ.

₹1,000ವರೆಗಿನ ನಿಷ್ಕ್ರಿಯ PF ಖಾತೆಗಳಿಗೆ ಸ್ವಯಂಚಾಲಿತ ಹಣ ಪಾವತಿ

ವಾಟ್ಸಾಪ್ ಸೇವೆಯ ಜೊತೆಗೆ ಇಪಿಎಫ್‌ಒ ಮತ್ತೊಂದು ಮಹತ್ವದ ಸೌಲಭ್ಯವನ್ನೂ ಆರಂಭಿಸಿದೆ. ₹1,000 ಅಥವಾ ಅದಕ್ಕಿಂತ ಕಡಿಮೆ ಬಾಕಿ ಮೊತ್ತ ಹೊಂದಿರುವ ಅರ್ಹ ನಿಷ್ಕ್ರಿಯ ಪಿಎಫ್ ಖಾತೆಗಳ ಹಣವನ್ನ ಸ್ವಯಂಚಾಲಿತವಾಗಿ ಪಾವತಿಸುವ ವ್ಯವಸ್ಥೆ ಇದಾಗಿದೆ. ಆಧಾರ್ ದೃಢೀಕರಣ ಹೊಂದಿರುವ ನಿಷ್ಕ್ರಿಯ ಖಾತೆಗಳಲ್ಲಿ ₹1,000ವರೆಗಿನ ಮೊತ್ತ ಬಾಕಿಯಿದ್ದರೆ, ಅದನ್ನ ಪಡೆಯಲು ಸದಸ್ಯರು ಪ್ರತ್ಯೇಕವಾಗಿ ಕ್ಲೇಮ್ ಸಲ್ಲಿಸುವ ಅಗತ್ಯವಿಲ್ಲ. ನಿಗದಿತ ಗುರುತು ದೃಢೀಕರಣ ಮತ್ತು ಬ್ಯಾಂಕ್ ಖಾತೆಯ ಪರಿಶೀಲನೆ ಪೂರ್ಣಗೊಂಡ ಬಳಿಕ ಇಪಿಎಫ್‌ಒ ಸ್ವಯಂಚಾಲಿತವಾಗಿ ಹಣ ಪಾವತಿ ಪ್ರಕ್ರಿಯೆ ಆರಂಭಿಸಲಿದೆ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಕಾರ್ಮಿಕ ಸಚಿವಾಲಯದ ಅಂದಾಜಿನ ಪ್ರಕಾರ, ಈ ಹೊಸ ಉಪಕ್ರಮದಿಂದ ಸುಮಾರು ಒಂದು ಲಕ್ಷ ಖಾತೆಗಳಿಗೆ ಅನುಕೂಲವಾಗಲಿದ್ದು, ಒಟ್ಟು ₹5 ಕೋಟಿ ಮೊತ್ತವನ್ನ ಫಲಾನುಭವಿಗಳಿಗೆ ಪಾವತಿಸುವ ನಿರೀಕ್ಷೆಯಿದೆ.

74 ವರ್ಷ ಪೂರೈಸಿದ EPFO: ₹32 ಲಕ್ಷ ಕೋಟಿ ನಿಧಿ

ಇಪಿಎಫ್‌ಒ ತನ್ನ 74 ವರ್ಷಗಳ ಸೇವೆಯನ್ನ ಪೂರ್ಣಗೊಳಿಸಿದ್ದು, ಪ್ರಸ್ತುತ ಎಂಟು ಕೋಟಿಗೂ ಹೆಚ್ಚು ಸದಸ್ಯರ ಕೊಡುಗೆಗಳ ಮೂಲಕ ಸುಮಾರು ₹32 ಲಕ್ಷ ಕೋಟಿ ನಿಧಿಯನ್ನ ಸಂಗ್ರಹಿಸಿದೆ ಎಂದು ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ದೇಶದ ಉದ್ಯೋಗಿಗಳಿಗೆ ವಿಶ್ವಾಸಾರ್ಹ ಸಂಸ್ಥೆಯಾಗಿ ಇಪಿಎಫ್‌ಒ ಬೆಳೆದಿದೆ ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಒಟ್ಟು ಏಳು ಪ್ರಕಟಣೆಗಳನ್ನ ಬಿಡುಗಡೆ ಮಾಡಲಾಗಿದೆ. ಜ್ಞಾನ ಸೃಷ್ಟಿ, ಸಾಂಸ್ಥಿಕ ಕಲಿಕೆ, ಕಾನೂನಿನ ಅರಿವು ಮತ್ತು ಸದಸ್ಯರಿಗೆ ಅನುಕೂಲಕರವಾದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಿಗೆ ಈ ಪ್ರಕಟಣೆಗಳು ಒತ್ತು ನೀಡಿವೆ.

ಅಂಕಿಅಂಶಗಳ ಪ್ರಕಾರ, ಇಪಿಎಫ್‌ಒ ಸುಮಾರು 85 ಲಕ್ಷ ಪಿಂಚಣಿದಾರರಿಗೆ ಸೇವೆ ಒದಗಿಸುತ್ತಿದೆ. ಅಕ್ಟೋಬರ್ 2026ರಲ್ಲಿ ಸಂಸ್ಥೆಯ ಸರಾಸರಿ ಕ್ಲೇಮ್ ಇತ್ಯರ್ಥದ ಸಮಯ 2.57 ದಿನಗಳಿಗೆ ಇಳಿದಿದೆ. ಇಪಿಎಫ್‌ಒ ತನ್ನ 75ನೇ ವರ್ಷದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ, ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಸಂಸ್ಥೆಯ ಕಾರ್ಯವಿಧಾನಗಳನ್ನ ಸುಧಾರಿಸಬೇಕು ಮತ್ತು ಕಾರ್ಮಿಕರಿಗೆ ಅನುಕೂಲವಾಗುವ ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಟ್ನಲ್ಲಿ ವಾಟ್ಸಾಪ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ, ಪಾಸ್‌ಬುಕ್ ಪಡೆಯುವ ಸೌಲಭ್ಯ ಹಾಗೂ ₹1,000ವರೆಗಿನ ಅರ್ಹ ನಿಷ್ಕ್ರಿಯ ಖಾತೆಗಳ ಸ್ವಯಂಚಾಲಿತ ಇತ್ಯರ್ಥ ಸೇರಿದಂತೆ ಹಲವು ಕ್ರಮಗಳನ್ನ ಇಪಿಎಫ್‌ಒ ಹೊಸದಾಗಿ ಪರಿಚಯಿಸಿದೆ.

Add Zee News as a Preferred Source
TAGS:
Business
Kannada News