SOCIAL MEDIA

Newsletter

PARTNER SITES
Select Language Select State

ದೀಪಾವಳಿ ಹಬ್ಬಕ್ಕೂ ಮುನ್ನ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್.. ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

Deepavali offer Gold price falls down : ದೀಪಾವಳಿ ಹಬ್ಬಕ್ಕೂ ಮುನ್ನ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ..ಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯ ಹಾದಿಯತ್ತ ತಲುಪಿದೆ.

Written By Ramya. R. Gowda
Published: Oct 25, 2026, 12:56 PM IST | Updated: Oct 25, 2026, 01:03 PM IST
Join

Deepavali offer Gold price falls down : ದೀಪಾವಳಿ ಹಬ್ಬಕ್ಕೂ ಮುನ್ನ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ..! ಕಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯ ಹಾದಿಯಲ್ಲಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕು ಎಂದು ಕಾಯುತ್ತಿದ್ದ ಗ್ರಾಹಕರಿಗೆ ಇದು ಕೊಂಚ ನಿರಾಳತೆ ತಂದಿದೆ. ಹಾಗಾದರೆ, ಚಿನ್ನದ ಬೆಲೆ ಎಷ್ಟು ಕಡಿಮೆಯಾಗಿದೆ? ದರ ಇಳಿಕೆಗೆ ಕಾರಣವೇನು? ಈಗಲೇ ಚಿನ್ನ ಖರೀದಿಸುವುದು ಸೂಕ್ತವೇ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಬಂಗಾರದ ದರ ಇದೀಗ ಕೊಂಚ ತಗ್ಗಿದೆ. 2026ರ ಜನವರಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 1 ಲಕ್ಷದ 83 ಸಾವಿರ ರೂಪಾಯಿಗೆ ತಲುಪಿತ್ತು. ಇದೀಗ ಬೆಲೆ ಇಳಿಕೆಯಾಗಿರುವುದು ಆಭರಣ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಗ್ರಾಹಕರಿಗೆ ಸಮಾಧಾನ ತಂದಿದೆ. ಕ 10 ದಿನಗಳ ಚಿನ್ನದ ದರವನ್ನು ಗಮನಿಸಿದರೆ ಏರಿಳಿತ ಸ್ಪಷ್ಟವಾಗಿ ಕಾಣಿಸುತ್ತದೆ. ಅಕ್ಟೋಬರ್ 15ರಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 14,744 ರೂಪಾಯಿ ಇತ್ತು. ಅಕ್ಟೋಬರ್ 24ರಂದು ಅದು 14,258 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ, ಪ್ರತಿ ಗ್ರಾಂಗೆ 486 ರೂಪಾಯಿ ಕಡಿಮೆಯಾಗಿದೆ.

ಇನ್ನು, 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಳಿಕೆಯಾಗಿದೆ. ಅಕ್ಟೋಬರ್ 15ರಂದು ಪ್ರತಿ ಗ್ರಾಂಗೆ 13,515 ರೂಪಾಯಿ ಇದ್ದ ದರ, ಅಕ್ಟೋಬರ್ 24ರಂದು 13,070 ರೂಪಾಯಿಗೆ ತಗ್ಗಿದೆ. ಈ ಮೂಲಕ ಪ್ರತಿ ಗ್ರಾಂಗೆ 445 ರೂಪಾಯಿ ಇಳಿಕೆಯಾಗಿದೆ.

ಅಕ್ಟೋಬರ್‌ನಲ್ಲಿ ಚಿನ್ನದ ದರ ಎಷ್ಟು ಕುಸಿತ?

ಅಕ್ಟೋಬರ್ ತಿಂಗಳ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಇಳಿಕೆಯ ಪ್ರವೃತ್ತಿ ಕಂಡುಬಂದಿದೆ. ಅಕ್ಟೋಬರ್ 1ರಂದು ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 14,924 ರೂಪಾಯಿ ಇತ್ತು. ಅಕ್ಟೋಬರ್ 24ರ ವೇಳೆಗೆ ಅದು 14,258 ರೂಪಾಯಿಗೆ ಇಳಿದಿದೆ. ಅಂದರೆ, ಪ್ರತಿ ಗ್ರಾಂಗೆ 666 ರೂಪಾಯಿ ಕಡಿಮೆಯಾಗಿದೆ.

ಅದೇ ರೀತಿ, 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 13,680 ರೂಪಾಯಿಯಿಂದ 13,070 ರೂಪಾಯಿಗೆ ಇಳಿದಿದೆ. ಈ ಮೂಲಕ ಪ್ರತಿ ಗ್ರಾಂಗೆ 610 ರೂಪಾಯಿ ಕಡಿಮೆಯಾಗಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಅಮೆರಿಕದ ಡಾಲರ್ ಬಲವರ್ಧನೆ, ಫೆಡರಲ್ ರಿಸರ್ವ್‌ನ ಬಡ್ಡಿದರ ನೀತಿಯ ಬಗ್ಗೆ ನಿರೀಕ್ಷಿತ ಸುಳಿವು ಸಿಗದಿರುವುದು ಹಾಗೂ ಹೂಡಿಕೆದಾರರು ಲಾಭ ಗಳಿಸುವ ಉದ್ದೇಶದಿಂದ ಚಿನ್ನದ ಹೂಡಿಕೆಯನ್ನು ಮಾರಾಟ ಮಾಡುತ್ತಿರುವುದು ಬೆಲೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಇದನ್ನೇ ಪ್ರಾಫಿಟ್ ಬುಕ್ಕಿಂಗ್ ಎಂದು ಕರೆಯಲಾಗುತ್ತದೆ. ಜಾಗತಿಕ ಉದ್ವಿಗ್ನತೆ ಕೊಂಚ ತಗ್ಗಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಂಡಿದ್ದ ಕೆಲವು ಹೂಡಿಕೆದಾರರು ತಮ್ಮ ಹೂಡಿಕೆಯಿಂದ ಹೊರಬರುತ್ತಿರುವುದೂ ಬೆಲೆ ಇಳಿಕೆಗೆ ಕಾರಣವಾಗಿರಬಹುದು.

ದೀಪಾವಳಿಗೆ ಚಿನ್ನ ಖರೀದಿಸಬಹುದೇ?
ದೀಪಾವಳಿ ಮತ್ತು ಧನ್‌ತೇರಸ್ ಹಬ್ಬದ ಹಿನ್ನೆಲೆಯಲ್ಲಿ ಚಿನ್ನ ಖರೀದಿಸಲು ಗ್ರಾಹಕರು ಸಿದ್ಧತೆ ನಡೆಸುತ್ತಿದ್ದಾರೆ. ಮದುವೆ ಸೀಸನ್ ಕೂಡ ಆರಂಭವಾಗುತ್ತಿರುವುದರಿಂದ ಆಭರಣಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ. ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಖರೀದಿಸಲು ಕೊಂಚ ಅನುಕೂಲವಾಗಿದ್ದರೂ, ಮುಂದಿನ ದಿನಗಳಲ್ಲಿ ದರ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ.ಹೀಗಾಗಿ, ಚಿನ್ನ ಖರೀದಿಸುವ ಮುನ್ನ ಅಂದಿನ ಮಾರುಕಟ್ಟೆ ದರ, ಆಭರಣದ ಮೇಕಿಂಗ್ ಚಾರ್ಜ್, ಜಿಎಸ್‌ಟಿ ಮತ್ತು ಇತರ ಶುಲ್ಕಗಳನ್ನು ಪರಿಶೀಲಿಸುವುದು ಮುಖ್ಯ. ಬೆಲೆ ಮತ್ತಷ್ಟು ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಕಾಯಬೇಕೇ ಅಥವಾ ಈಗಲೇ ಖರೀದಿಸಬೇಕೇ ಎಂಬುದು ನಿಮ್ಮ ಅಗತ್ಯ ಮತ್ತು ಬಜೆಟ್‌ಗೆ ಅನುಗುಣವಾಗಿರಲಿ.


ಒಟ್ಟಿನಲ್ಲಿ, ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಬಂಗಾರ ಪ್ರಿಯರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ, ಬೆಲೆ ಮತ್ತೆ ಏರಿಕೆಯಾಗುತ್ತದೆಯೇ ಅಥವಾ ಇಳಿಕೆ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹಬ್ಬದ ಖರೀದಿಗೆ ಮುಂದಾಗುವವರು ದರವನ್ನು ಪರಿಶೀಲಿಸಿ, ತಮ್ಮ ಬಜೆಟ್‌ಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES