• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /8th Pay Commission ಜಾರಿಗೂ ಮೊದಲೇ ಸರ್ಕಾರಿ ನೌಕರರಿಗೆ ಜಾಕ್‌ಪಾಟ್!‌ CGHS ಕುರಿತು ಬಿಗ್‌ ಅಪ್‌ಡೇಟ್‌

8th Pay Commission ಜಾರಿಗೂ ಮೊದಲೇ ಸರ್ಕಾರಿ ನೌಕರರಿಗೆ ಜಾಕ್‌ಪಾಟ್!‌ CGHS ಕುರಿತು ಬಿಗ್‌ ಅಪ್‌ಡೇಟ್‌

8ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರಿಗೆ ಇರುವ Central Government Health Scheme ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಕೇಂದ್ರ ಸರ್ಕಾರದ ನೌಕರರಿಗೆ ಆಗುವ ಮಹತ್ವದ ಅನುಕೂಲಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

Written ByYashaswini V
Published: Sep 19, 2026, 10:20 AM IST|Updated: Sep 19, 2026, 10:25 AM IST
joinshare
8th Pay Commission ಜಾರಿಗೂ ಮೊದಲೇ ಸರ್ಕಾರಿ ನೌಕರರಿಗೆ ಜಾಕ್‌ಪಾಟ್!‌ CGHS ಕುರಿತು ಬಿಗ್‌ ಅಪ್‌ಡೇಟ್‌

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

8th Pay Commission News: 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಲು ದಿನಗಣನೆ ಶುರುವಾಗಿದೆ. ಇದರ ನಡುವೆಯೇ  ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಿಗೆ Central Government Health Scheme (CGHS) ವಿಷಯದಲ್ಲಿ ಸಿಹಿ ಸುದ್ದಿಯೊಂದು ಲಭಿಸಿದೆ. ಕೇಂದ್ರ ಸರ್ಕಾರಿ ನೌಕರರ CGHS ನವೀಕರಣ ಮಾಡಿ 5 ಕಿಲೋ ಮೀಟರ್ CGHS ಅವಶ್ಯಕತೆಯನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಹೊರ ರಾಜ್ಯದ ನೌಕರರು ಈಗ ಒಂದು ಬಾರಿಯ ಆಯ್ಕೆಯನ್ನು ಪಡೆಯುವಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

8ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಆಯೋಗವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬೇಡಿಕೆಗಳನ್ನು ಕೇಳಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆಯು ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯ (CGHS) ನಿಯಮಗಳಲ್ಲಿ ಐತಿಹಾಸಿಕ ಬದಲಾವಣೆ ಮಾಡುವಂತೆ ಕೇಳಿಕೊಂಡಿದೆ. ಇದನ್ನು 8ನೇ ವೇತನ ಆಯೋಗವು ಪುರಸ್ಕರಿಸಿದೆ. CGHS ವಿಷಯದಲ್ಲಿ ಈವರೆಗೆ ಇದ್ದ 5 ಕಿಲೋ ಮೀಟರ್ ಭೌಗೋಳಿಕ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ ಎಂದು ತಿಳಿದುಬಂದಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ EHS ವಿಭಾಗವು ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ (OM ಸಂಖ್ಯೆ Z.16025/227/2026/CGHS-III/EHS) ಕೇಂದ್ರ ಸರ್ಕಾರಿ ನೌಕರರು ಈಗ ದೇಶದ ಯಾವುದೇ ರಾಜ್ಯದಲ್ಲಿ ವಾಸ ಮಾಡುತ್ತಿದ್ದರೂ Central Government Health Scheme ವ್ಯಾಪ್ತಿಗೆ ಬರುವ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ಹೊಸ ಸರ್ಕಾರಿ ನಿಯಮವು ತಕ್ಷಣದಿಂದ ಜಾರಿಗೆ ಬರುತ್ತದೆ.

ಈವರೆಗೆ ಇದ್ದ 5 ಕಿಲೋ ಮೀಟರ್ ನಿಯಮ ಏನಿತ್ತು? 
2018ರ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯ ವೆಲ್ನೆಸ್ ಸೆಂಟರ್‌ನ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಉದ್ಯೋಗಿಗಳಿಗೆ ಮಾತ್ರ CGHS ಪ್ರಯೋಜನಗಳು ಸಿಗುತ್ತಿದ್ದವು.  5 ಕಿಲೋ ಮೀಟರ್ ಗಿಂತ ದೂರ ವಾಸ ಮಾಡುತ್ತಿದ್ದ ಕೇಂದ್ರ ಸರ್ಕಾರಿ ನೌಕರರು CGHS ಪ್ರಯೋಜನಗಳಿಂದ ವಂಚಿತರಾಗುತ್ತಿದ್ದರು. 5 ಕಿಲೋ ಮೀಟರ್ ದೂರದ ಹೊರಗೆ ನಿಯೋಜನೆಗೊಂಡ ಉದ್ಯೋಗಿಗಳು CS(MA) ನಿಯಮಗಳು, 1944ರ ಅಡಿಯಲ್ಲಿ ವೈದ್ಯಕೀಯ ಬಿಲ್ ಮರುಪಾವತಿ ಪಡೆಯಬೇಕಾಗಿತ್ತು.

5 ಕಿಲೋ ಮೀಟರ್ ನಿರ್ಬಂಧದಿಂದಾಗಿ ದೂರದ ಪ್ರದೇಶಗಳಲ್ಲಿ ಅಥವಾ CGHS ಅಲ್ಲದ ನಗರಗಳಲ್ಲಿ ನಿಯುಕ್ತರಾಗಿದ್ದ ನೌಕರರು ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಪಡೆಯಲು ಹಲವು ರೀತಿಯ ಅಡೆತಡೆಗಳನ್ನು ಎದುರಿಸುತ್ತಿದ್ದರು. ನೌಕರರ ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರವು ಈ ಹಳೆಯ ದೂರ ಮಾನದಂಡವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಅದರಿಂದಾಗಿ ಈಗ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ನಿಟ್ಟುಸಿರು ಬಿಡುವಂತಾಗಿದೆ.

CGHS ಪ್ರಯೋಜನ ಪಡೆಯುವುದು ಹೇಗೆ?
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ EHS ವಿಭಾಗ ಹೊರಡಿಸಿರುವ ಹೊಸ ಅಧಿಕೃತ ಆದೇಶದ ಪ್ರಕಾರ CGHS ಪ್ರದೇಶದ ಹೊರಗೆ ಉಳಿದುಕೊಂಡ ಕಾರಣ CS(MA) ನಿಯಮಗಳು 1944ರ ಅಡಿಯಲ್ಲಿ ವೈದ್ಯಕೀಯ ಸೌಲಭ್ಯವನ್ನು ಪಡೆಯುತ್ತಿರುವ ಸೇವೆ ಸಲ್ಲಿಸುವ ಕೇಂದ್ರ ನೌಕರರಿಗೆ ಈಗ ಒಂದು ಬಾರಿಯ ಆಯ್ಕೆಯನ್ನು ನೀಡಲಾಗುತ್ತದೆ. ಈ ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ ನೌಕರರು CGHS ಫಲಾನುಭವಿಗಳಾಗಬಹುದು. ಆದರೆ ಒಂದು ಷರತ್ತು ಇರುತ್ತದೆ. ಅವರು ತಮ್ಮ ವೇತನ ಮ್ಯಾಟ್ರಿಕ್ಸ್ ಆಧಾರದ ಮೇಲೆ ಮಾಸಿಕ CGHS ಚಂದಾದಾರಿಕೆಯನ್ನು ಪಾವತಿಸಬೇಕಾಗುತ್ತದೆ.

ಹೊಸ ನಿಯಮದ ಪ್ರಮುಖ ಅಂಶಗಳು ಏನು?
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ EHS ವಿಭಾಗ ಹೊರಡಿಸಿರುವ ಹೊಸ ಅಧಿಕೃತ ಆದೇಶವು CGHS ಸೌಲಭ್ಯ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಿದೆ. ಅವುಗಳ ವಿವರ ಈ ಕೆಳಗಿನಂತೆ ಇವೆ.

1 ಒಂದು ಬಾರಿಯ ಅವಕಾಶ: CGHS ಆಯ್ಕೆಯು ಒಮ್ಮೆ ಮಾತ್ರ ಲಭ್ಯವಿದೆ. ಒಮ್ಮೆ ಸಲ್ಲಿಸಿದ ಆಯ್ಕೆಯನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ನಂತರ ಅದನ್ನು ಬದಲಾಯಿಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.

2 ಸಂಪೂರ್ಣ ಕುಟುಂಬಕ್ಕೆ ಅನ್ವಯ: ಪ್ರಾಥಮಿಕ ಉದ್ಯೋಗಿ ಅಥವಾ ನೌಕರ CGHS ಆಯ್ಕೆ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರವು ಅವರ ಇಡೀ ಕುಟುಂಬ ಮತ್ತು ಅವಲಂಬಿತರಿಗೆ ಸಮಾನವಾಗಿ ಅನ್ವಯಿಸಲ್ಪಡುತ್ತದೆ. ಕುಟುಂಬವನ್ನು CGHS ಮತ್ತು CS(MA) ಸದಸ್ಯರಾಗಿ ವಿಭಜಿಸಲು ನಿಯಮಗಳು ಅನುಮತಿ ನೀಡುವುದಿಲ್ಲ.

3 ನಿಯಮಿತ ಕೊಡುಗೆ ಅಗತ್ಯ: CGHS ಆಯ್ಕೆ ಮಾಡಿಕೊಳ್ಳುವ ಉದ್ಯೋಗಿಯು ಅವನ/ಅವಳ ನಿಯೋಜನೆಯ ಸ್ಥಳ ಅಥವಾ ವಾಸಸ್ಥಳಗಳು ಯಾವುದೇ ಇದ್ದರೂ ಪ್ರತಿ ತಿಂಗಳು ತಮ್ಮ ಪಾಲಿನ ನಿಗದಿತ CGHS ಕೊಡುಗೆಯನ್ನು ಪಾವತಿ ಮಾಡಲೇಬೇಕಾಗುತ್ತದೆ.

4 ಎರಡು ಪ್ರಯೋಜನಗಳು ಸಿಗುವುದಿಲ್ಲ: ಉದ್ಯೋಗಿ ಅಥವಾ ಅವರ ಕುಟುಂಬವು ಏಕಕಾಲದಲ್ಲಿ CGHS ಮತ್ತು CS(MA) ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಹೊಸ ನಿಯಮ ಅದಕ್ಕೆ ಅನುಮತಿಸುವುದಿಲ್ಲ.

5 ಲಿಖಿತ ಒಪ್ಪಂದ: ಉದ್ಯೋಗಿ ಅಥವಾ ನೌಕರ CGHS ಮತ್ತು CS(MA) ಎರಡೂ ಯೋಜನೆಗಳಿಂದ ಡಬಲ್ ಪ್ರಯೋಜನ ಪಡೆಯುತ್ತಿಲ್ಲ ಎಂದು ಹೇಳುವ ಲಿಖಿತ ಒಪ್ಪಂದವನ್ನು ನೀಡಬೇಕು. ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿ ನೀಡಿದರೆ ನಿಯಮಾನುಸಾರ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಈಗಾಗಲೇ ನೀಡಲಾಗಿರುವ ಪ್ರಯೋಜನಗಳನ್ನು ವಾಪಸ್ ಪಡೆದುಕೊಳ್ಳಲಾಗುತ್ತದೆ.

6 ಆಯ್ಕೆ ಮಾಡಿಕೊಳ್ಳದಿದ್ದರೆ ಹಳೆಯ ನಿಯಮವೇ ಜಾರಿ: ಹೊಸದಾಗಿ ಬಂದಿರುವ CGHS ಆಯ್ಕೆ ಮಾಡಿಕೊಳ್ಳದಿದ್ದರೆ ನೌಕರರು ಇಲ್ಲಿಯವರೆಗೆ ಇದ್ದ CS(MA) ನಿಯಮಗಳು 1944ರ ಅಡಿಯಲ್ಲಿ ಮುಂದುವರಿಯುತ್ತಾರೆ.

ಯಾವ ಉದ್ಯೋಗಿಗಳಿಗೆ CGHS ಕಡ್ಡಾಯ?
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ EHS ವಿಭಾಗ ಹೊರಡಿಸಿರುವ ಹೊಸ ಅಧಿಕೃತ ಆದೇಶದ ಪ್ರಕಾರ CGHS ವ್ಯಾಪ್ತಿಯ ಪ್ರದೇಶಗಳಲ್ಲಿ (CGHS ಕ್ಷೇಮ ಕೇಂದ್ರಗಳು ಇರುವ ಜಿಲ್ಲಾ ಕೇಂದ್ರದಂತಹ) ವಾಸಿಸುವ ಅಥವಾ ಕೆಲಸ ಮಾಡುವ ಕೇಂದ್ರ ಸರ್ಕಾರಿ ನೌಕರರು CGHS ಗೆ ಸೇರುವುದು ಕಡ್ಡಾಯ. CS(MA) ನಿಯಮಗಳ ಪರವಾಗಿ ಅಂತಹ ಉದ್ಯೋಗಿಗಳು CGHS ನಿಂದ ಹೊರಗುಳಿಯಲು ಅವಕಾಶ ಇರುವುದಿಲ್ಲ. 8ನೇ ವೇತನ ಆಯೋಗ ರಚನೆ ಮತ್ತು ಅದರ ಶಿಫಾರಸುಗಳ ಅನುಷ್ಠಾನಕ್ಕೂ ಮುನ್ನ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಲಕ್ಷಾಂತರ ನೌಕರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
 

Add Zee News as a Preferred Source
TAGS:
Pay Commission
Sarkari Naukri
Central Government Schemes
Personal Finance