Gold Rate Drop: ದೀಪಾವಳಿ ಬಳಿಕ ಸತತವಾಗಿ ಇಳಿಕೆ ಆಗುತ್ತಿರುವ ಚಿನ್ನದ ಬೆಲೆ ಸತತ ಆರನೇ ದಿನವೂ ಇಳಿಮುಖವಾಗಿದೆ. ನವೆಂಬರ್ 5 ರ ನಂತರದ ಸರಣಿಯಲ್ಲಿ ಇದೀಗ ಇಂದು (ನ. 18) ಚಿನ್ನದ ಬೆಲೆ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ಹತ್ತು ಗ್ರಾಂ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಶೇ. 2.04 ರಷ್ಟು ಕುಸಿತ ಕಂಡಿದ್ದು, ಚಿನ್ನಾಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ 2.76% ನಷ್ಟು ಪಾತಾಳಕ್ಕೆ ಕುಸಿದಿದೆ ಎನ್ನಲಾಗುತ್ತಿದೆ.
ಇಂದಿನ 24K ಚಿನ್ನದ ಬೆಲೆ:
ಹೌದು, ದೇಶ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ (99.9% ಶುದ್ಧತೆ) ಅಪರಂಜಿ ಬಂಗಾರ ಪ್ರತಿ 10 ಗ್ರಾಂಗೆ ಮಂಗಳವಾರ 1,36,040 ರೂ.ಗಳಿಂದ 2,780 ರೂ. ಅಥವಾ ಶೇ. 2.04 ರಷ್ಟು ಇಳಿಕೆ ಆಗಿದ್ದು, ಇಂದಿನ 24K ಚಿನ್ನದ ಬೆಲೆ 1,33,260 ರೂ.ಗಳಿಗೆ ಇಳಿದಿದೆ.
24 ಕ್ಯಾರೆಟ್ ಚಿನ್ನದ 10 ಗ್ರಾಂ ಖರೀದಿದಾರರಿಗೆ, ತೆರಿಗೆ ಮತ್ತು ಶುಲ್ಕಗಳನ್ನು ಪಾವತಿಸುವ ಮೊದಲು ಬೆಲೆ 1,33,260 ರೂ. ಇರಲಿದ್ದು, ಮಂಗಳವಾರಕ್ಕಿಂತ 2,780 ರೂ. ಕಡಿಮೆಯಾಗಿದೆ. ತೆರಿಗೆ ಶುಲ್ಕಗಳನ್ನು ಸೇರಿಸಿದರೆ ಇದರ ದರ ಇನ್ನೂ ಹೆಚ್ಚಾಗಲಿದೆ. 20 ಗ್ರಾಂ ಖರೀದಿಗೆ 2,72,080 ರೂ.ಗಳಿಂದ 2,66,520 ರೂ.ಗಳು ಮತ್ತು 50 ಗ್ರಾಂ ಖರೀದಿಗೆ 6,80,200 ರೂ.ಗಳಿಂದ 6,66,300 ರೂ.ಗಳಿಗೆ ಇಳಿದಿದೆ.
ಇಂದಿನ 22K ಚಿನ್ನದ ಬೆಲೆ:
ಇದೇ ವೇಳೆ ಆಭರಣ ತಯಾರಿಕೆಗಾಗಿ ಬಳಸುವ 22 ಕ್ಯಾರೆಟ್ (91.6% ಶುದ್ಧತೆ) ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,22,150 ರೂ.ಗಳಿಗೆ ಇಳಿಮುಖವಾಗಿದೆ. ಗಮನಾರ್ಹವಾಗಿ
ಮಂಗಳವಾರ (ನ. 17) 1,24,700 ರೂ.ಗಳಷ್ಟಿದ್ದ 22K ಬಂಗಾರ ಪ್ರತಿ ಹತ್ತು ಗ್ರಾಂಗಳಿಗೆ 2,550 ರೂ.ಗಳಷ್ಟು ಇಳಿಕೆ ಕಂಡಿದ್ದು 1,22,150 ರೂ.ಗಳಿಗೆ ತಲುಪಿದೆ.
ಇಂದಿನ 18K ಚಿನ್ನದ ಬೆಲೆ:
18 ಕ್ಯಾರೆಟ್ (75% ಶುದ್ಧತೆ) ಚಿನ್ನದ ಬೆಲೆ 1,02,030 ರೂ.ಗಳಿಂದ 2,090 ರೂ.ಗಳಿಗೆ ಇಳಿದಿದ್ದು, 99,940 ರೂ.ಗಳಿಗೆ ಮಾರಾಟವಾಗುತ್ತಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ:
ದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ:
24K ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹2,790 ಇಳಿಕೆ ಕಂಡಿದ್ದು ₹1,36,200 ಗಳಿಂದ ₹1,33,410ಗೆ ಕುಸಿದಿದೆ. ಇದೇ ವೇಳೆ 22K ಚಿನ್ನದ ಬೆಲೆಯಲ್ಲಿ ₹2,550 ಇಳಿಮುಖವಾಗಿದ್ದು ಮಂಗಳವಾರ ₹1,24,850 ಗಳಿಗೆ ಮಾರಾಟವಾಗುತ್ತಿದ್ದ ಹತ್ತು ಗ್ರಾಂ ಚಿನ್ನ ಇಂದು ₹1,22,300ಕ್ಕೆ ಲಭ್ಯವಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ:
ಐಟಿ ಹಬ್ ಬೆಂಗಳೂರಿನಲ್ಲಿ 24K ಚಿನ್ನ ಪ್ರತಿ ಹತ್ತು ಗ್ರಾಂಗೆ ₹2,780 ಗಳಷ್ಟು ಇಳಿಕೆ ಆಗಿದ್ದು ₹1,33,260 ಗಳಿಗೆ ಲಭ್ಯವಿದೆ.
22K ಚಿನ್ನದ ಬೆಲೆಯಲ್ಲಿ ₹2,550 ಕುಸಿತ ಕಂಡಿದ್ದು ಇಂದು ಪ್ರತಿ ಹತ್ತು ಗ್ರಾಂ ಬಂಗಾರ ₹1,22,150 ಕ್ಕೆ ಮಾರಾಟವಾಗುತ್ತಿದೆ.
ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ:
ಚೆನ್ನೈನಲ್ಲಿ ಇಂದು 24K ಚಿನ್ನ ಪ್ರತಿ ಹತ್ತು ಗ್ರಾಂಗೆ ₹2,780 ಕಡಿಮೆ ಆಗಿದ್ದು ₹1,33,260 ಕ್ಕೆ ಮಾರಾಟವಾಗುತ್ತಿದೆ. ಇದೇ ವೇಳೆ, 22K ಬಂಗಾರ ಪ್ರತಿ ಹತ್ತು ಗ್ರಾಂಗೆ ₹2,550 ಇಳಿಕೆ ಆಗಿ ₹1,22,150 ಕ್ಕೆ ಮಾರಾಟ ಮಾಡಲಾಗುತ್ತಿದೆ.
ಮುಂಬೈ:
ಮುಂಬೈ ನಗರದಲ್ಲಿ 24K ಚಿನ್ನ ಪ್ರತಿ ಹತ್ತು ಗ್ರಾಂಗೆ ₹2,780 ಗಳಷ್ಟು ಇಳಿಕೆ ಆಗಿದ್ದು ₹1,33,260 ಕ್ಕೆ ಲಭ್ಯವಿದೆ. 22K ಚಿನ್ನದ ಬೆಲೆಯಲ್ಲಿ ₹2,550 ಕುಸಿತ ಕಂಡಿದ್ದು ಇಂದು ಪ್ರತಿ ಹತ್ತು ಗ್ರಾಂ ಬಂಗಾರ ₹1,22,150 ಕ್ಕೆ ಮಾರಾಟ ಮಾಡಲಾಗುತ್ತಿದೆ.
ಹೈದರಾಬಾದ್:
ಹೈದರಾಬಾದ್‌ನಲ್ಲಿ ಇಂದು 24K ಚಿನ್ನ ಪ್ರತಿ ಹತ್ತು ಗ್ರಾಂಗೆ ₹2,780 ಕಡಿಮೆ ಆಗಿದ್ದು ₹1,33,260 ಕ್ಕೆ ಮಾರಾಟವಾಗುತ್ತಿದೆ. ಇದೇ ವೇಳೆ, 22K ಬಂಗಾರ ಪ್ರತಿ ಹತ್ತು ಗ್ರಾಂಗೆ ₹2,550 ಇಳಿಕೆ ಆಗಿ ₹1,22,150 ಕ್ಕೆ ಮಾರಾಟವಾಗುತ್ತಿದೆ.
ಕೇರಳ:
ಕೇರಳದಲ್ಲಿ 24K ಚಿನ್ನ ಪ್ರತಿ ಹತ್ತು ಗ್ರಾಂಗೆ ₹2,780 ಗಳಷ್ಟು ಇಳಿಕೆ ಆಗಿದ್ದು ₹1,33,260 ಗಳಿಗೆ ಮಾರಾಟ ಮಾಡಲಾಗುತ್ತಿದ್ದರೆ, 22K ಚಿನ್ನದ ಬೆಲೆಯಲ್ಲಿ ₹2,550 ಕುಸಿತ ಕಂಡಿದ್ದು ಇಂದು ಪ್ರತಿ ಹತ್ತು ಗ್ರಾಂ ಬಂಗಾರ ₹1,22,150 ಕ್ಕೆ ಲಭ್ಯವಿದೆ.
ಕೋಲ್ಕತ್ತಾ:
ಕೋಲ್ಕತ್ತಾದಲ್ಲೂ 24K ಚಿನ್ನ ಪ್ರತಿ ಹತ್ತು ಗ್ರಾಂಗೆ ₹2,780 ಗಳಷ್ಟು ಇಳಿಕೆ ಆಗಿದ್ದು ₹1,33,260 ಗಳಿಗೆ ಲಭ್ಯವಿದ್ದರೆ, 22K ಚಿನ್ನದ ಬೆಲೆಯಲ್ಲಿ ₹2,550 ಕುಸಿತ ಕಂಡಿದ್ದು ಇಂದು ಪ್ರತಿ ಹತ್ತು ಗ್ರಾಂ ಬಂಗಾರ ₹1,22,150 ಕ್ಕೆ ಮಾರಾಟವಾಗುತ್ತಿದೆ.
ಭಾರತದಲ್ಲಿ ಬಂಗಾರ:
ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಅದರೊಂದಿಗೆ ಮಹಿಳೆಯರು ಭಾವನಾತ್ಮಕ ಬಂಧನವನ್ನು ಹೊಂದಿರುತ್ತಾರೆ. ನಿಸ್ಸಂದೇಹವಾಗಿ ಚಿನ್ನವೂ ಕೂಡ ಒಂದು ಆಸ್ತಿ ಇದ್ದಂತೆ ಎಂಬುದನ್ನೂ ಕೂಡ ಇಲ್ಲಿ ಕಡೆಗಣಿಸುವಂತಿಲ್ಲ. ಭಾರತದಲ್ಲಿ ಚಿನ್ನದ ಬೆಲೆಗಳು ಅಂತರರಾಷ್ಟ್ರೀಯ ಬೆಲೆಗಳು ಮತ್ತು ರೂಪಾಯಿಗೆ ಸಂಬಂಧಿಸಿವೆ.