ಸೌರವ್ಯೂಹದಲ್ಲಿ ಅತ್ಯಂತ ಪ್ರಕಾಶಮಾನವಾದ ಗ್ರಹ ಎನ್ನಲಾಗುವ ʼಶುಕ್ರ ಗ್ರಹʼವನ್ನು ಜ್ಯೋತಿಷ್ಯದಲ್ಲಿ ಪ್ರೀತಿ, ಸೌಂದರ್ಯ, ಸುಖ, ಸಂತೋಷ, ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಶುಭ ಸ್ಥಾನದಲ್ಲಿದ್ದಾಗ ಶುಕ್ರ ದೆಸೆ, ಶುಕ್ರ ಭುಕ್ತಿ, ಶುಕ್ರ ಮಹಾದಶದಂತಹ ಯೋಗಗಳು ಇದ್ದಾಗ ಆ ವ್ಯಕ್ತಿ ಜೀವನದಲ್ಲಿ ಪ್ರತಿ ಹಂತದಲ್ಲೂ ಕೀರ್ತಿ, ಯಶಸ್ಸು ಗಳಿಸುತ್ತಾನೆ. ಅವರಿಗೆ ಹಣಕಾಸಿನ ಕೊರತೆಯೇ ಇರುವುದಿಲ್ಲ. ಕೌಟುಂಬಿಕ ಜೀವನದಲ್ಲೂ ಕೂಡ ಸುಖ-ಸಂತೋಷ ತಾಂಡವವಾಡುತ್ತದೆ ಎಂದು ಹೇಳಲಾಗುತ್ತದೆ.
ಶುಕ್ರ ಸಂಚಾರ:
ಜ್ಯೋತಿಷ್ಯ ಶಾಸ್ತ್ರದಲ್ಲಿ ಧನಕಾರಕ ಎಂದು ಭಾವಿಸಲಾಗುವ ಶುಕ್ರ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ದ್ವಾದಶ ರಾಶಿಗಳ ಮೇಲೆ ಶುಭ ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೂ, ಶುಕ್ರನ ಯಾವ ಗ್ರಹ, ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂಬ ಆಧಾರದ ಮೇಲೆ ಕೆಲವು ರಾಶಿಯವರ ಅದೃಷ್ಟವೂ ಬದಲಾಗಲಿದೆ ಎನ್ನಲಾಗುತ್ತದೆ.
ಲಗ್ನದ ಮನೆಯಲ್ಲಿ ಶುಕ್ರ ಸಂಚಾರ:
ವೈದಿಕ ಜ್ಯೋತಿಷ್ಯದ ಪ್ರಕಾರ, ಧನಕಾರಕ ಶುಕ್ರ ಸ್ವ ರಾಶಿ, ಸ್ವ ನಕ್ಷತ್ರ, ಸ್ನೇಹದ ಮನೆ, ಲಗ್ನದ ಮನೆಯಲ್ಲಿ ಸಂಚರಿಸುವಾಗ ಇದು ರಾಶಿಗಳ ಮೇಲೆ ಪ್ರೇಮ ಜೀವನದಲ್ಲಿ ಸಕಾರಾತ್ಮಕ ಫಲಗಳನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಪ್ರೀತಿ, ಪ್ರೇಮ, ಮದುವೆಯಂತಹ ಪ್ರಯತ್ನಗಳು ಯಶಸ್ವಿ ಆಗುತ್ತವೆ ಎಂಬ ನಂಬಿಕೆಯೂ ಇದೆ.
ಸ್ವ ರಾಶಿಯಲ್ಲಿ ಶುಕ್ರ ಗೋಚಾರ:
ಸೆಪ್ಟೆಂಬರ್ 2026 ಆರಂಭದಲ್ಲಿ ತನ್ನದೇ ಆದ ತುಲಾ ರಾಶಿ ಪ್ರವೇಶಿಸಿರುವ ಶುಕ್ರನು ಜನವರಿ 2027ರವರೆಗೆ ಸ್ವ ಸ್ಥಾನದಲ್ಲಿ ಸಂಚರಿಸುವುದರಿಂದ ಈ ಅವಧಿಯಲ್ಲಿ ಕೆಲವು ರಾಶಿಯವರ ಪ್ರೇಮ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದ್ದು, ಅವಿವಾಹಿತರಿಗೆ ವಿವಾಹ ಯೋಗವೂ ಇದೆ. ಶುಕ್ರನ ವಿಶೇಷ ಅನುಗ್ರಹದಿಂದ ಕೆಲವರ ಅದೃಷ್ಟ ಖುಲಾಯಿಸಲಿದ್ದು ಧನಯೋಗವೂ ಪ್ರಾಪ್ತಿ ಆಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
2026ರ ಅಂತ್ಯದವರೆಗೂ ʼಆರುʼ ರಾಶಿಯವರಿಗೆ ಶುಕ್ರ ದಯೆ.. ಕೈ ಹಿಡಿಯಲಿದೆ ಅದೃಷ್ಟ, ವಿವಾಹ ಭಾಗ್ಯ, ಸಂಪತ್ತಿನ ಸುಯೋಗ:
ಮೇಷ ರಾಶಿ:
ಮೇಷ ರಾಶಿಯ ಜನರ ಏಳನೇ ಮನೆಯಲ್ಲಿ ಧನಕಾರಕ ಶುಕ್ರನ ಸಂಚಾರದಿಂದ ಈ ರಾಶಿಯ ಜನರಿಗೆ ನಿರೀಕ್ಷಿತ ಪ್ರೇಮ ವ್ಯವಹಾರಗಳಲ್ಲಿ ಶುಭ ಫಲಗಳು ಸಿಗಲಿವೆ. ಸಹೋದ್ಯೋಗಿಗಳೊಂದಿಗೆ, ಹತ್ತಿರದ ಸಂಬಂಧಿಕರ ಜೊತೆ ಪ್ರೀತಿಯಲ್ಲಿ ಬೀಳುವ ಸೂಚನೆಗಳಿವೆ. ದಂಪತಿಗಳಿಗೆ ಕುಟುಂಬಸ್ಥರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವ ಅವಕಾಶಗಳಿವೆ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳಲು ಯೋಜಿಸುತ್ತಿದ್ದವರಿಗೆ ಅನುಕೂಲಕರ ಸಮಯ. ಮದುವೆ ಮಾತುಕತೆಗಳಲ್ಲಿ ಇದ್ದ ಬಿರುಕು ದೂರವಾಗಲಿದ್ದು ವಿವಾಹ ಯೋಗವಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಭರ್ಜರಿ ಹಣದ ಸುರಿಮಳೆಯೇ ಸುರಿಯುವ ನಿರೀಕ್ಷೆ ಇದೆ.
ಮಿಥುನ ರಾಶಿ:
ಮಿಥುನ ರಾಶಿಯಿಂದ ಐದನೇ ಮನೆಯಲ್ಲಿ ಶುಕ್ರ ಸಂಚಾರ ಪ್ರಭಾವದಿಂದಾಗಿ ಈ ಜನರಿಗೆ ಜೀವನದಲ್ಲಿ ಪ್ರೀತಿಯ ಕೊರತೆಯೇ ಇರುವುದಿಲ್ಲ. ಪ್ರೇಮ ಜೀವನದಲ್ಲಿರುವವರಿಗೆ ಅತ್ಯುತ್ತಮವಾದ ಸಮಯ ಇದಾಗಿರಲಿದ್ದು ನಿಮ್ಮ ಪ್ರೀತಿ ಮನೆಯವರ ಒಪ್ಪಿಗೆ ಸಿಗಲಿದೆ. ಸಂಬಂಧಿಕರೊಂದಿಗೆ ಮೂಡಿದ್ದ ತಪ್ಪು ಭಿನ್ನಾಭಿಪ್ರಾಯಗಳು ಸುಗಮವಾಗಿ ಬಗೆಹರಿಯಲಿವೆ. ವೃತ್ತಿ ಬದುಕಿನಲ್ಲಿ ಪ್ರಗತಿಯ ಹಾದಿ ತೆರೆಯಲಿದ್ದು, ವ್ಯವಹಾರ ವಿಸ್ತರಣೆಗೆ ಯೋಚಿಸುತ್ತಿರುವವರಿಗೆ ಅನುಕೂಲಕರ ಸಮಯ ಇದಾಗಿರಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಯೋಜಿಸಬಹುದು.
ಕನ್ಯಾ ರಾಶಿ:
ಪ್ರಸ್ತುತ ಐಷಾರಾಮಿ ಜೀವನಕಾರಕ ಶುಕ್ರನು ಸ್ವ ಕ್ಷೇತ್ರದಲ್ಲಿ ಅನುಕೂಲಕರ ಸ್ಥಾನದಲ್ಲಿ ವಿರಾಜಮಾನನಾಗಿರುವುದರಿಂದ ಕನ್ಯಾ ರಾಶಿಯವರಿಗೆ ಅಷ್ಟ ದಿಕ್ಕುಗಳಿಂದಲೂ ಅದೃಷ್ಟ ಕೈ ಹಿಡಿಯಲಿದೆ. ಈ ಸಮಯದಲ್ಲಿ ಕುಟುಂಬದಲ್ಲಿ ಶಾಂತಿ, ಸೌಹಾರ್ದತೆ ಹೆಚ್ಚಾಗಲಿದೆ. ಕುಟುಂಬದಲ್ಲಿ ದೀರ್ಘ ಕಾಲದಿಂದ ಅಡೆತಡೆಯಾಗಿ ಮುಂದೂಡಲ್ಪಟ್ಟಿದ್ದ ಶುಭ ಕಾರ್ಯಗಳು ಯಶಸ್ವಿಯಾಗಿ ಜರುಗಲಿವೆ. ದಾಂಪತ್ಯ ಸುಖ ಹೆಚ್ಚಾಗಲಿದ್ದು, ಮಕ್ಕಳ ಬಗ್ಗೆ ಶುಭ ಸಮಾಚಾರವನ್ನು ನಿರೀಕ್ಷಿಸಬಹುದಾಗಿದೆ. ಈ ಸಮಯದಲ್ಲಿ ಸಾಕ್ಷಾತ್ ಲಕ್ಷ್ಮಿ ಅನುಗ್ರಹದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದ್ದು, ಒಳ್ಳೆಯ ಕುಟುಂಬದಿಂದ ಮಕ್ಕಳ ಮದುವೆಗೆ ಉತ್ತಮ ಪ್ರಸ್ತಾಪಗಳು ಬರಬಹುದು.
ತುಲಾ ರಾಶಿ:
ಸ್ವಾಮಿಯಾಧಿಪತಿ ಶುಕ್ರ ತನ್ನದೇ ಮನೆಯಲ್ಲಿ ವಿರಾಜಮಾನನಾಗಿರುವುದರಿಂದ ತುಲಾ ರಾಶಿಯ ಜನರಿಗೆ ಪ್ರೇಮ ಜೀವನದಲ್ಲಿ ಶುಭ ಫಲಗಳು ಹೆಚ್ಚಾಗಲಿವೆ. ಈ ಅವಧಿಯಲ್ಲಿ ಏಕಾಂಗಿಯಾಗಿರುವ ಜನರು ಸಹೋದ್ಯೋಗಿಗಳೊಂದಿಗೆ ಪ್ರೀತಿಯಲ್ಲಿ ಬೀಳುವ ನಿರೀಕ್ಷೆ ಇದೆ. ಈಗಾಗಲೇ ಪ್ರೀತಿಯಲ್ಲಿರುವವರಿಗೆ ಮನೆಯವರ ಸಮ್ಮತಿ ದೊರೆತು ವಿವಾಹ ಯೋಗವೂ ಇದೆ. ಕುಟುಂಬಸ್ಥರೊಂದಿಗೆ ಮೋಜಿನ ಪ್ರವಾಸಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಹಣದ ಸುರಿಮಳೆಯೇ ಸುರಿಯಲಿದ್ದು ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವ ನಿಮ್ಮ ಕನಸಿಗೆ ರೆಕ್ಕೆ ದೊರೆಯಲಿದೆ. ನೀವು ಮಾಡುವ ಹೊಸ ವ್ಯವಹಾರಗಳಿಗೆ ಕುಟುಂಬದವರ ಬೆಂಬಲ, ಸಹಕಾರ ಸಿಗಲಿದ್ದು ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವಿರಿ.
ಧನು ರಾಶಿ:
ಶುಕ್ರ ಸಂಚಾರದ ಪ್ರಭಾವದಿಂದ ಧನು ರಾಶಿಯ ಜನರಿಗೆ ಪ್ರೀತಿಯ ಜೀವನದಲ್ಲಿ ಸುಖ-ಸಂತೋಷವನ್ನು ಹೆಚ್ಚಿಸಲಿದೆ. ಈ ಅವಧಿಯಲ್ಲಿ ಜೀವನದ ಪ್ರತಿ ಆಯಾಮದಲ್ಲೂ ಧನಾತ್ಮಕತೆ ಹೆಚ್ಚಿಸಲಿದ್ದು, ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ವಿವಾಹ ವಿಚಾರಾಧಿಗಳಲ್ಲಿ ದೀರ್ಘ ಸಮಯದಿಂದ ಎದುರಾಗಿದ್ದ ಸಮಸ್ಯೆಗಳು ಬಗೆಹರಿಯಲಿದ್ದು, ಮನೆಯಲ್ಲಿ ಮದುವೆಯಂತಹ ಮಂಗಳ ಕಾರ್ಯಗಳು ಜರುಗುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ವೃತ್ತಿ ವ್ಯವಹಾರದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದ್ದು, ಮಕ್ಕಳ ವಿಚಾರದಲ್ಲೂ ಶುಭ ಸಮಾಚಾರಗಳನ್ನು ನಿರೀಕ್ಷಿಸಬಹುದು. ವೃತ್ತಿಪರರಿಗೆ ಪ್ರಮೋಷನ್ ನಿರೀಕ್ಷೆ ಇದೆ.
ಕುಂಭ ರಾಶಿ:
ಕುಂಭ ರಾಶಿಯ ಜನರಿಗೆ ಅದೃಷ್ಟದ ಮನೆಯಲ್ಲಿ ಶುಕ್ರ ಸಂಚಾರವು ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಅವಧಿಯು ವಿದೇಶದಲ್ಲಿ ವ್ಯಾಸಂಗ ಮಾಡಲು ಯೋಚಿಸುತ್ತಿರುವವರಿಗೆ ಅನುಕೂಲಕರ ಸಮಯ ಎಂದು ಸಾಬೀತುಪಡಿಸಲಿದೆ. ಮಕ್ಕಳ ಮದುವೆ ವಿಚಾರವಾಗಿ ಅಡೆತಡೆಗಳು ನಿವಾರಣೆ ಆಗಲಿದ್ದು ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಹೆಚ್ಚಾಗಲಿದ್ದು ಮಕ್ಕಳಿಂದ ನಿರೀಕ್ಷಿತ ಶುಭ ಸುದ್ದಿಗಳನ್ನು ಕೇಳುವಿರಿ. ಧನ ಯೋಗದ ಪ್ರಭಾವದಿಂದ ಸಂಪತ್ತಿನ ಸುರಿಮಳೆಯೇ ಸುರಿಯಲಿದ್ದು ಮನೆಗಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ. ವಾಹನ ಖರೀದಿ ಯೋಗವೂ ಇದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.