SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 29-09-2026: ಅಂಗಾರಕ ಸಂಕಷ್ಟಿಯಂದು ಹರ್ಷಣ ಯೋಗ.. ಈ ರಾಶಿಯವರಿಗೆ ಅದೃಷ್ಟ

Today Horoscope 29th September 2026: 29 ಸೆಪ್ಟೆಂಬರ್ 2026ರ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಇರಲಿದ್ದು, ಇದನ್ನು ಅಂಗಾರಕ ಸಂಕಷ್ಟಿ ಎಂತಲೂ ಕರೆಯಲಾಗುತ್ತದೆ. ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Sep 29, 2026, 09:47 AM IST | Updated: Sep 29, 2026, 09:49 AM IST
Join

Mangalvara 29th September 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಮಂಗಳವಾರದ ಈ ದಿನ ಅಶ್ವಿನಿ ನಕ್ಷತ್ರ, ಹರ್ಷಣ ಯೋಗ, ಬವ ಕರಣ ಇರಲಿದೆ. ಅಂಗಾರಕ ಸಂಕಷ್ಟಿಯು ಯಾವ ರಾಶಿಯವರಿಗೆ ಅನುಕೂಲಕರವಾಗಿದೆ ಎಂದು ತಿಳಿಯಿರಿ.

ಮೇಷ ರಾಶಿ:
ಅಂಗಾರಕ ಸಂಕಷ್ಟ ಚತುರ್ಥಿಯಂದು ಹರ್ಷಣ ಯೋಗವು ಮೇಷ ರಾಶಿಯ ಜನರಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರ ಪರಿಸ್ಥಿತಿಯನ್ನು ತರಲಿದೆ. ಈ ದಿನ ವ್ಯವಹಾರವು ಉತ್ಸಾಹಭರಿತವಾಗಿರಲಿದ್ದು ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ವೈಯಕ್ತಿಕ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.

ವೃಷಭ ರಾಶಿ: 
ಹರ್ಷಣ ಯೋಗವು ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲಿದೆ. ಇಂದು ಅಧಿಕಾರಿಗಳಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗಲಿದೆ. ವ್ಯವಹಾರವು ಲಾಭದಾಯಕವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಅಪೇಕ್ಷಿತ ಫಲಗಳನ್ನು ನಿರೀಕ್ಷಿಸಬಹುದು. ಕುಟುಂಬದಲ್ಲಿ ಒತ್ತಡದ ವಾತಾವರಣ ಕಡಿಮೆ ಆಗಲಿದೆ.

ಮಿಥುನ ರಾಶಿ: 
ಸಂಕಷ್ಟಹರ ಚತುರ್ಥಿಯ ದಿನ ಹರ್ಷಣ ಯೋಗವು ಮಿಥುನ ರಾಶಿಯ ಉದ್ಯೋಗಿಗಳಿಗೆ ಕೆಲಸದಲ್ಲಿ ಪ್ರೋತ್ಸಾಹ ಸಿಗಲಿದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. ವ್ಯವಹಾರದಲ್ಲಿ ಆದಾಯ ಹೆಚ್ಚಳ ಸಾಧ್ಯತೆ ಇದೆ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ. ಮದುವೆ ಪ್ರಯತ್ನಗಳಲ್ಲಿ ಅಪೇಕ್ಷಿತ ಪ್ರತಿಕ್ರಿಯೆ ಸಿಗಲಿದೆ.

ಕರ್ಕಾಟಕ ರಾಶಿ:
ಹರ್ಷಣ ಯೋಗವು ಕರ್ಕಾಟಕ ರಾಶಿಯ ಜನರಿಗೆ ವೃತ್ತಿ, ವ್ಯವಹಾರದಲ್ಲಿ ಕೆಲಸದ ಹೊರೆಯನ್ನು ಕಡಿಮೆ ಮಾಡಲಿವೆ. ವೃತ್ತಿಪರ ಬದುಕು ಹೆಚ್ಚಾಗಿ ಉತ್ಸಾಹಭರಿತವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಸ್ನೇಹಿತರಿಂದ ಹಣಕಾಸಿನ ಸಹಾಯ ಸಿಗಬಹುದು.

ಸಿಂಹ ರಾಶಿ:
ಹರ್ಷಣ ಯೋಗವು ಸಿಂಹ ರಾಶಿಯ ಜನರಿಗೆ ಆಹ್ಲಾದಕರವಾಗಿದ್ದು ಕಂಪನಿ ಕೆಲಸಗಳ ನಿಮಿತ್ತ ದೂರದೂರಿಗೆ ಪ್ರಯಾಣಿಸಬೇಕಾಗಬಹುದು. ಉದ್ಯೋಗದಲ್ಲಿ ನಿಮ್ಮ ಆದ್ಯತೆ ಹೆಚ್ಚಾಗಲಿದೆ. ಹಠಾತ್‌ ಧನಲಾಭ ಸಾಧ್ಯತೆ ಇದೆ. ವೃತ್ತಿ-ವ್ಯವಹಾರದಲ್ಲಿ ಪ್ರಮುಖ ಬದಲಾವಣೆಗಳ ಸಾಧ್ಯತೆ ಇದೆ.

ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಉದ್ಯೋಗದಲ್ಲಿ ಶುಭ ಸುದ್ದಿ ನಿರೀಕ್ಷೆ ಇದೆ. ಅಧಿಕಾರಿಗಳು ವೇತನ, ಭತ್ಯೆ ಬಗ್ಗೆ ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದಲ್ಲಿ ಮಕ್ಕಳ ವಿಚಾರವಾಗಿ ಉತ್ತಮ ಬೆಳವಣಿಗೆ ಸಾಧ್ಯತೆ ಇದೆ. ಆದಾಯದ ಮೂಲಗಳು ಹೆಚ್ಚಾಗುವ ನಿರೀಕ್ಷೆ ಇದೆ.

ತುಲಾ ರಾಶಿ: 
ತುಲಾ ರಾಶಿಯ ನಿರುದ್ಯೋಗಿಗಳಿಗೆ ಇಂದು ಶುಭ ಸಮಾಚಾರ ಸಿಗುವ ನಿರೀಕ್ಷೆ ಇದೆ. ವಿದೇಶ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಬಗೆಹರಿಯಲಿವೆ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ. ವ್ಯವಹಾರದಲ್ಲಿ ನಿರೀಕ್ಷಿತ ಆರ್ಥಿಕ ಫಲಿತಾಂಶಗಳನ್ನು ಪಡೆಯಬಹುದು. ವೈಯಕ್ತಿಕ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಸಂಕಷ್ಟಹರ ಚತುರ್ಥಿಯ ದಿನ ಹರ್ಷಣ ಯೋಗವು ವೃತ್ತಿ, ವ್ಯವಹಾರದಲ್ಲಿ ಲಾಭದಾಯಕವಾಗಿರಲಿದೆ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳಿವೆ. ಮೊದಲಿಗೆ ಹೋಲಿಸಿದರೆ ಹಣಕಾಸಿನ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿದ್ದ ಹಣ ಕೈ ಸೇರಲಿದೆ. ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ.

ಧನು ರಾಶಿ:
ಧನು ರಾಶಿಯ ಜನರಿಗೆ ಉದ್ಯೋಗದಲ್ಲಿ ಕಾರ್ಯಕ್ಷಮತೆ ಸುಧಾರಿಸಲಿದೆ. ವೃತ್ತಿ-ವ್ಯವಹಾರದಲ್ಲಿ ಲಾಭದ ವಿಷಯದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ನಿಮ್ಮ ಒಡಹುಟ್ಟಿದವರೊಂದಿಗಿನ ವಿವಾದ ಬಗೆಹರಿಯುತ್ತದೆ.

ಮಕರ ರಾಶಿ:
ಮಕರ ರಾಶಿಯ ಜನರಿಗೆ ಉದ್ಯೋಗದಲ್ಲಿ ಜವಾಬ್ದಾರಿಗಳು ಕೆಲಸಗಳಲ್ಲಿ ಹೆಚ್ಚಾಗಲಿದೆ. ವ್ಯವಹಾರಗಳು ಲಾಭದಾಯಕವಾಗಿ ಮುಂದುವರೆಯುತ್ತದೆ. ಪ್ರಮುಖ ಕೆಲಸಗಳು ತೃಪ್ತಿಕರವಾಗಿ ಪೂರ್ಣಗೊಳ್ಳುತ್ತದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯವು ಕಳವಳಿಕಾರಿ ಆಗಿರಲಿದೆ. ಕೈಗೊಂಡ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಕುಂಭ ರಾಶಿ:
ಕುಂಭ ರಾಶಿಯ ಜನರಿಗೆ ವ್ಯಾಪಾರ ಚಟುವಟಿಕೆಗಳು, ವಹಿವಾಟುಗಳು ಲಾಭದಾಯಕವಾಗಿರಲಿವೆ. ನ್ಯಾಯಾಲಯ ಪ್ರಕರಣಗಳು ನಿಮ್ಮ ಪರವಾಗಿರಲಿವೆ. ವೃತ್ತಿ ಬದುಕಿನಲ್ಲಿ ಬೇಡಿಕೆಗಳು ಹೆಚ್ಚಾಗಲಿವೆ. ಕೆಲಸದಲ್ಲಿ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ನಿರೀಕ್ಷೆ ಇದೆ.

ಮೀನ ರಾಶಿ:
ಮೀನ ರಾಶಿಯವರಿಗೆ ಹರ್ಷಣ ಯೋಗವು ಹಣಕಾಸಿನ ವಿಷಯಗಳಲ್ಲಿ ಅನುಕೂಲಕರ ಸಮಯವನ್ನು ತರಲಿದೆ. ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವೃತ್ತಿಯಲ್ಲಿ ಒತ್ತಡ ಕಡಿಮೆ ಆಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ, ಸ್ಥಾನಮಾನಗಳು ಹೆಚ್ಚಾಗಲಿವೆ. ಬರಬೇಕಾದ ಹಣ ಕೈ ಸೇರಲಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES