SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 28-11-2026: ಇಂದು ಪುನರ್ವಸು ನಕ್ಷತ್ರದಲ್ಲಿ ಶುಕ್ಲ ಯೋಗ, ಈ ರಾಶಿಯವರಿಗೆ ಉದ್ಯೋಗ ಪ್ರಾಪ್ತಿ

Today Horoscope 28th November 2026: 28 ನವೆಂಬರ್ 2026ರಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Nov 28, 2026, 08:34 IST | Updated: Nov 28, 2026, 08:36 IST
Join

Shanivara 28th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಶನಿವಾರದ ಈ ದಿನ ಪುನರ್ವಸು ನಕ್ಷತ್ರ, ಶುಕ್ಲ ಯೋಗ, ಕೌಲವ ಕರಣ ಇರಲಿದೆ.

ಮೇಷ ರಾಶಿ:
ಶನಿವಾರದಂದು ಶುಕ್ಲ ಯೋಗವು ಮೇಷ ರಾಶಿಯವರಿಗೆ ಅನಿರೀಕ್ಷಿತ ಸವಾಲುಗಳನ್ನು ತಂದೊಡ್ಡಲಿದೆ. ಸಾಮಾಜಿಕ ಹಾಗೂ ವೈಯಕ್ತಿಕ ಸಂಬಂಧಗಳಲ್ಲಿ ಕೆಲವು ಸಂಘರ್ಷಗಳು ಉಂಟಾಗಬಹುದು. ಪ್ರೀತಿಪಾತ್ರರ ಜೊತೆ ಸಂವಹನ ನಡೆಸುವಾಗ ಜಾಗರೂಕರಾಗಿರಿ. ಸಂಘರ್ಷದ ಸಮಯದಲ್ಲಿ ತಾಳ್ಮೆಯಿಂದ ವರ್ತಿಸಿ.

ವೃಷಭ ರಾಶಿ: 
ವೃಷಭ ರಾಶಿಯವರಿಗೆ ಇಂದು ಸವಾಲಿನ ದಿನವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಭಾವನೆಗಳಲ್ಲಿ ಏರಿಳಿತಗಳು ಕಂಡು ಬರಬಹುದು. ಅನಿಶ್ಚಿತತೆಯು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಇತರರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ, ವಿಚಾರ ವಿನಿಮಯ ಮಾಡಿಕೊಳ್ಳುವುದರಿಂದ ಮನಸ್ಸಿಗೆ ಸಮಾಧಾನ ಸಿಗಬಹುದು.

ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಇಂದು ಧನಾತ್ಮಕ ಶಕ್ತಿ ಹೆಚ್ಚಾಗಲಿದೆ. ಕೆಲಸಗಳಲ್ಲಿ ಉತ್ಸಾಹ ಹೆಚ್ಚಾಗಲಿದೆ. ಕೆಲವು ಸಂಬಂಧಗಳಲ್ಲಿ ಮಾಧುರ್ಯತೆ ಹೆಚ್ಚಾಗಲಿದೆ. ಪ್ರೀತಿಪಾತ್ರರೊಂದಿಗೆ ಇನ್ನಷ್ಟು ಬಲವಾದ ಬಂಧಗಳನ್ನು ರೂಪಿಸಿಕೊಳ್ಳುವ ಅವಕಾಶಗಳು ಸಿಗಲಿವೆ. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಒಳ್ಳೆಯದು.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಇಂದು ಅದ್ಭುತವಾದ ದಿನ. ನಿಮ್ಮ ಸುತ್ತಲೂ ಉಲ್ಬಣಗೊಳ್ಳುವ ಅಸುರಕ್ಷಿತ ಭಾವನೆ ನಿಮ್ಮನ್ನು ಕಾಡಬಹುದು. ಕೆಲವು ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಅನುಭವಿಸುವ ಸಾಧ್ಯತೆ ಇದೆ. ಶಾಂತಿಗಾಗಿ ಧ್ಯಾನ ಮಾಡುವುದು ಒಳ್ಳೆಯದು. ಕುಟುಂಬದೊಂದಿಗೆ ಸಂಭಾಷಣೆ ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ಸವಾಲಿನ ದಿನವಾಗಿರಲಿದೆ. ನಿಮ್ಮ ಸುತ್ತಲೂ ಸ್ವಲ್ಪ ಅನಿಶ್ಚಿತತೆ ನಿಮ್ಮನ್ನು ಬಾಧಿಸಬಹುದು. ಇಂದು ಪ್ರೀತಿಪಾತ್ರರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಸಣ್ಣ ವಿವರಗಳಿಗೆ ಗಮನ ಕೊಡುವುದು ದೊಡ್ಡ ಸಮಸ್ಯೆ ಇರಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು.

ಕನ್ಯಾ ರಾಶಿ:
ಶುಕ್ಲ ಯೋಗವು ಕನ್ಯಾ ರಾಶಿಯವರಿಗೆ ಅಷ್ಟು ಉತ್ತಮವಾಗಿಲ್ಲ. ಯಾವ ಕೆಲಸ ಮಾಡಬೇಕು ಎಂಬ ಬಗ್ಗೆ ಗೊಂದಲಗಳು ಹೆಚ್ಚಾಗಬಹುದು. ನಿಮ್ಮ ಸುತ್ತಲಿನ ಜನರೊಂದಿಗೆ ಭಾವನಾತ್ಮಕವಾಗಿರಬಹುದು. ಕೆಲವು ಹಣಕಾಸಿನ ವಿಚಾರಗಳು ಒತ್ತಡವನ್ನು ಹೆಚ್ಚಿಸಲಿವೆ. ಆದರೆ, ಭಯಪಡುವ ಅವಶ್ಯಕತೆ ಇಲ್ಲ.

ತುಲಾ ರಾಶಿ: 
ಶುಕ್ಲ ಯೋಗವು ತುಲಾ ರಾಶಿಯವರಿಗೆ ತುಂಬಾ ಸಕಾರಾತ್ಮಕವಾದ ದಿನವಾಗಿರುತ್ತದೆ. ಸಾಮಾಜಿಕ ಜೀವನದಲ್ಲಿ ವಿಶೇಷ ಫಲಗಳನ್ನು ಅನುಭವಿಸಬಹುದು. ಸಂಬಂಧಗಳಲ್ಲಿ ಸೌಹಾರ್ದಯುತ ಸಮಯ. ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶಗಳಿರಬಹುದು.

ವೃಶ್ಚಿಕ ರಾಶಿ:
ಪುನರ್ವಸು ನಕ್ಷತ್ರದಲ್ಲಿ ಶುಕ್ಲ ಯೋಗವು ವೃಶ್ಚಿಕ ರಾಶಿಯವರಿಗೆ ತುಂಬಾ ಒಳ್ಳೆಯ ಸಮಯ ಎಂದು ಸಾಬೀತುಪಡಿಸಲಿದೆ. ಇಂದು ನಿಮ್ಮ ಆತ್ಮಶಕ್ತಿ ಬಲಗೊಳ್ಳಲಿದೆ. ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಆಳ, ತಿಳುವಳಿಕೆ ಹೆಚ್ಚಾಗಲಿದೆ. ನಿಮ್ಮ ಸುತ್ತಮುತ್ತಲಿನ ವಾತಾವರಣ ಸಕಾರಾತ್ಮಕವಾಗಿರಲಿದೆ. ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.

ಧನು ರಾಶಿ:
ಧನು ರಾಶಿಯವರಿಗೆ ಇಂದು ಸವಾಲಿನ ದಿನವಾಗಿರುತ್ತದೆ. ನಿಮಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಇದು ಸರಿಯಾದ ಸಮಯ. ಕೆಲವು ನಿರಾಶಾದಾಯಕ ಸಂದರ್ಭಗಳು ಎದುರಾಗಬಹುದು. ಆದರೆ, ಇವು ತಾತ್ಕಾಲಿಕ ಹಂತ ಎಂಬುದನ್ನು ನೆನಪಿನಲ್ಲಿಡಿ. ಸಂಬಂಧಗಳಲ್ಲಿ ಗೊಂದಲಗಳು ಇರಬಹುದು.

ಮಕರ ರಾಶಿ:
ಮಕರ ರಾಶಿಯವರಿಗೆ ನಿಮ್ಮ ಜೀವನದಲ್ಲಿ ಇಂದು ಹೊಸ ಶಕ್ತಿ, ಸಕಾರಾತ್ಮಕತೆ ಇರಲಿದೆ. ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಂಬಂಧಗಳು ಬಲಗೊಳ್ಳಲಿವೆ. ಕೆಲಸದಲ್ಲಿ ಉತ್ಸಾಹ ಭರಿತವಾದ ದಿನವಾಗರಿಲಿದೆ. ದೀರ್ಘಕಾಲದ ವಿವಾದಗಳಿಂದ ಪರಿಹಾರ ನಿರೀಕ್ಷಿಸಬಹುದಾದ ದಿನ.

ಕುಂಭ ರಾಶಿ:
ಕುಂಭ ರಾಶಿಯ ಜನರಿಗೆ ಇಂದಿನ ದಿನ ಅಷ್ಟು ಅನುಕೂಲಕರವಾಗಿಲ್ಲ. ಈ ಸಮಯದಲ್ಲಿ ನೀವು ಸ್ವಲ್ಪ ಅಶಾಂತಿಯನ್ನು ಅನುಭವಿಸಬೇಕಾಗಬಹುದು. ಯಾವುದೇ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ತುಂಬಾ ಜಾಗರೂಕರಾಗಿರಿ. ಸಂಗಾತಿಯೊಂದಿಗೆ ಸಂವಹನದ ವೇಳೆ ತಾಳ್ಮೆ ಕಾಪಾಡಿಕೊಳ್ಳಿ.

ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ಅದ್ಭುತವಾದ ದಿನ. ಶುಕ್ಲ ಯೋಗದ ಪ್ರಭಾವದಿಂದ ವೈಯಕ್ತಿಕ ಜೀವನದಲ್ಲಿ ಹೊಸ ಶಕ್ತಿ ಪ್ರವಹಿಸಲಿದೆ. ನಿಮ್ಮ ಸಂಬಂಧಗಳು ಬಲಗೊಳ್ಳುತ್ತವೆ. ಕುಟುಂಬ ಸದಸ್ಯರಿಂದ ಅಗತ್ಯ ಸಹಕಾರ ಸಿಗಲಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES