ದಿನ ಭವಿಷ್ಯ 26-09-2026: ಶನಿವಾರ ಹುಣ್ಣಿಮೆಯಂದು ಗಂಡ ಯೋಗ.. ಯಾರಿಗೆ ಶುಭ? ಯಾರಿಗೆ ಅಶುಭ?
Today Horoscope 26th September 2026: 26 ಸೆಪ್ಟೆಂಬರ್ 2026ರಂದು ಶನಿವಾರದ ದಿನ ಹುಣ್ಣಿಮೆ ಇರಲಿದ್ದು ಇಂದು ಗಂಡ ಯೋಗ ಇರಲಿದೆ. ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Shanivara 26th September 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ ಇರಲಿದ್ದು, ಇಂದು ಶನಿವಾರ ಪೂ.ಭಾ. ನಕ್ಷತ್ರ, ಗಂಡ ಯೋಗ, ವಿಷ್ಟಿ ಕರಣ ಇರಲಿದೆ. ಹುಣ್ಣಿಮೆಯ ದಿನ ಗಂಡ ಯೋಗವು ಯಾವ ರಾಶಿಯವರಿಗೆ ಹೇಗಿರಲಿದೆ. ಇಂದಿನ ರಾಶಿಫಲ ಯಾರಿಗೆ ಶುಭ? ಯಾರಿಗೆ ಅಶುಭ? ತಿಳಿಯಿರಿ.
ಮೇಷ ರಾಶಿ:
ಹುಣ್ಣಿಮೆಯಂದು ಗಂಡ ಯೋಗದ ಪ್ರಭಾವದಿಂದ ಮೇಷ ರಾಶಿಯ ಜನರಿಗೆ ವೃತ್ತಿ, ವ್ಯವಹಾರದಲ್ಲಿ ತೊಂದರೆಗಳನ್ನು ತಂದೊಡ್ಡಲಿದೆ. ಉದ್ಯೋಗ ಸ್ಥಳದಲ್ಲಿ ಪ್ರಮುಖ ಕೆಲಸಗಳನ್ನು ಪೂರೈಸಲು ಅಧಿಕ ಶ್ರಮ ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶುಭ ಸಮಾಚಾರವನ್ನು ಕೇಳುವ ಸೂಚನೆಗಳಿವೆ.
ವೃಷಭ ರಾಶಿ:
ಹುಣ್ಣಿಮೆ ದಿನ ಗಂಡ ಯೋಗದ ಪರಿಣಾಮ ವೃಷಭ ರಾಶಿಯ ಜನರಿಗೆ ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಸೃಷ್ಟಿಸಬಹುದು. ಇಂದು ವಿಶೇಷ ವ್ಯಕ್ತಿಯಿಂದ ನಿಮಗೆ ಸಹಾಯ ಸಿಗಬಹುದು. ಹಣಕಾಸಿನ ವಿಚಾರಗಳು ಫಲಪ್ರದವಾಗಿರಲಿದೆ. ವ್ಯವಹಾರದಲ್ಲಿ ಯಾವುದೇ ದಾಖಲೆಗಳಿಗೆ ಸಹಿ ಹಾಕುವಾಗ ಓದದೇ ಸಹಿ ಹಾಕುವ ತಪ್ಪನ್ನು ಮಾಡಬೇಡಿ.
ಮಿಥುನ ರಾಶಿ:
ಶನಿವಾರದಂದು ಗಂಡ ಯೋಗವು ಮಿಥುನ ರಾಶಿಯ ಜನರಿಗೆ ಉದ್ಯೋಗದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲಿದೆ. ಕಚೇರಿಯಲ್ಲಿ ತಲೆದೂರಿದ್ದ ಸಮಸ್ಯೆಗಳು ಇಂದು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿವೆ. ದೀರ್ಘ ಕಾಲದಿಂದ ಬೇರೆಡೆ ಸಿಲುಕಿದ್ದ ಹಣವನ್ನು ಮರಳಿ ಪಡೆಯುವ ಅವಕಾಶಗಳಿವೆ. ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವಿರಿ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಹುಣ್ಣಿಮೆಯಂದು ಗಂಡ ಯೋಗದ ಪ್ರಭಾವ ಫಲಪ್ರದವಾಗಿದ್ದು ನಿಮ್ಮ ಬಹುಕಾಲದ ಆಸೆಗಳು ಈಡೇರಲಿವೆ. ಕುಟುಂಬದಲ್ಲಿ ಧನಾತ್ಮಕ ವಾತಾವರಣ ಇರಲಿದ್ದು, ಶುಭ ಕಾರ್ಯಗಳ ಬಗ್ಗೆ ಸಮಾಲೋಚಿಸಬಹುದು. ವ್ಯವಹಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಿ.
ಸಿಂಹ ರಾಶಿ:
ಭಾದ್ರಪದ ಮಾಸದ ಹುಣ್ಣಿಮೆಯು ಸಿಂಹ ರಾಶಿಯ ಜನರಿಗೆ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಪ್ರಗತಿಯ ದಾರಿಯನ್ನು ತೆರೆಯಲಿದೆ. ಇಂದು ಮಕ್ಕಳಿಂದ ಸಿಹಿ ಸುದ್ದಿಯನ್ನು ನಿರೀಕ್ಷಿಸಬಹುದು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳಿವೆ. ಉದ್ಯೋಗದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ.
ಕನ್ಯಾ ರಾಶಿ:
ಹುಣ್ಣಿಮೆಯಂದು ಗಂಡ ಯೋಗವು ಕನ್ಯಾ ರಾಶಿಯ ಜನರಿಗೆ ಭಾಗ್ಯೋದಯದ ಸಮಯ ಎಂದು ಸಾಬೀತುಪಡಿಸಲಿದೆ. ವ್ಯವಹಾರದಲ್ಲಿ ಆರ್ಥಿಕ ಲಾಭಾಂಶವನ್ನು ಪಡೆಯುವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಹೆಚ್ಚಾಗಲಿದೆ. ಸಂಜೆ ಮನೆಯವರೊಂದಿಗೆ ವಿಹಾರಕ್ಕೆ ಯೋಜಿಸಬಹುದು.
ತುಲಾ ರಾಶಿ:
ಹುಣ್ಣಿಮೆಯಂದು ಗಂಡ ಯೋಗವು ತುಲಾ ರಾಶಿಯ ಜನರಿಗೆ ವಿಶೇಷ ಸಂದರ್ಭಗಳನ್ನು ತಂದೊಡ್ಡಲಿದೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮನ್ನಣೆ ಸಿಗಲಿದ್ದು ಹೊಸ ಜವಾಬ್ದಾರಿಗಳು ಹೆಗಲೇರಬಹುದು.
ವೃಶ್ಚಿಕ ರಾಶಿ:
ಹುಣ್ಣಿಮೆಯಂದು ಗಂಡ ಯೋಗವು ವೃಶ್ಚಿಕ ರಾಶಿಯ ಜನರಿಗೆ ಆಸ್ತಿ ವ್ಯವಹಾರಗಳಲ್ಲಿ ಉತ್ತಮ ಫಲಗಳನ್ನು ಪಡೆಯುವ ನಿರೀಕ್ಷೆ ಇದೆ. ಮಕ್ಕಳ ವಿಚಾರದಲ್ಲಿ ಶುಭ ಸಮಾಚಾರವನ್ನು ಕೇಳಬಹುದು. ಹೊಸ ಆಸ್ತಿ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಅತ್ಯುತ್ತಮವಾದ ಸಮಯವಾಗಿದೆ.
ಧನು ರಾಶಿ:
ಶನಿವಾರದಂದು ಗಂಡ ಯೋಗವು ಧನು ರಾಶಿಯವರಿಗೆ ಮಿಶ್ರ ಫಲಗಳನ್ನು ತರಲಿದೆ. ಹಳೆಯ ವಿವಾದಗಳಿಗೆ ಸಂಬಂಧಿಸಿದಂತೆ ವಿರೋಧಿಗಳ ವಿರುದ್ಧ ಜಯ ಸಾಧಿಸುವ ಸೂಚನೆಗಳಿದ್ದು, ಬೆಟ್ಟದಂತ ಸಮಸ್ಯೆಗಳು ಕೂಡ ಮಂಜಿನಂತೆ ಕರಗುವ ಲಕ್ಷಣಗಳಿವೆ. ನಿಮ್ಮ ಸುತ್ತಲಿನವರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ಮಕರ ರಾಶಿ:
ಗಂಡ ಯೋಗವು ಇಂದು ಮಕರ ರಾಶಿಯವರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದ್ದು, ಹಣಕಾಸಿನ ಪರಿಸ್ಥಿತಿಯನ್ನು ಬಲಗೊಳಿಸುತ್ತದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಬಗೆಹರಿಯಲಿದ್ದು, ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹೆಚ್ಚಾಗಲಿದೆ. ವ್ಯವಹಾರದಲ್ಲಿ ದೀರ್ಘ ಸಮಯದಿಂದ ಇದ್ದ ಒತ್ತಡಗಳು ಬಗೆಹರಿಯಲಿವೆ.
ಕುಂಭ ರಾಶಿ:
ಹುಣ್ಣಿಮೆಯ ದಿನ ಗಂಡ ಯೋಗವು ಕುಂಭ ರಾಶಿಯ ಜನರಿಗೆ ಸ್ನೇಹಿತರ ಜೊತೆಗೆ ಮೂಡಿದ್ದ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲಿದೆ. ಭಾವನಾತ್ಮಕವಾಗಿ ನಿಮ್ಮ ಪ್ರೀತಿಪಾತ್ರರಿಂದ ಬೆಂಬಲ ಸಹಕಾರವನ್ನು ಪಡೆಯುವಿರಿ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಬಲಗೊಳ್ಳಲಿದೆ.
ಮೀನ ರಾಶಿ:
ಶನಿವಾರದಂದು ಗಂಡ ಯೋಗವು ಕುಂಭ ರಾಶಿಯ ಜನರಿಗೆ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳಲ್ಲಿ ಪ್ರತಿಯನನು ತರಲಿದೆ. ಹಣಕಾಸಿನ ಸ್ಥಿತಿಯಲ್ಲಿ ಚೇತರಿಕೆಯನ್ನು ಕಾಣುವಿರಿ. ಸಮಾಜದಲ್ಲಿ ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುವಿರಿ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.