Shukravara 25th September 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಶುಕ್ರವಾರದ ಈ ದಿನ ಶತಭಿಷಾ ನಕ್ಷತ್ರ, ಶೂಲ ಯೋಗ, ಗರಜ ಕರಣ ಇರಲಿದೆ.
ಮೇಷ ರಾಶಿ:
ಶುಕ್ರವಾರ ದಿನ ಮೇಷ ರಾಶಿಯ ಜನರಿಗೆ ಶುಭ ಫಲಿತಾಂಶಗೂ ಹೆಚ್ಚಾಗಲಿವೆ. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ ಸಾಧ್ಯತೆ ಇದೆ. ಕುಟುಂಬದಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಯುವ ಸೂಚನೆಗಳಿದ್ದು, ತಾಳ್ಮೆಯಿಂದ ವ್ಯವಹರಿಸುವುದು ಪ್ರಯೋಜನಕಾರಿ ಆಗಿದೆ.
ವೃಷಭ ರಾಶಿ:
ವೃಷಭ ರಾಶಿಯ ಜನರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನವಾಗಿರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಅಗತ್ಯ ಸಹಕಾರ ಸಿಗುವ ಸೂಚನೆಗಳಿವೆ.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಇಂದು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ನೀವು ಅಧ್ಯಕ್ಷತೆ ವಹಿಸಬೇಕಾಗಬಹುದು. ಈ ವೇಳೆ ಮಾತನಾಡುವಾಗ ಜಾಗರೂಕರಾಗಿರಿ. ಕುಟುಂಬದಲ್ಲಿ ಸಂತೋಷ ಇರಲಿದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ. ಆದರೆ, ನೀವು ಆಡುವ ಮಾತುಗಳ ಬಗ್ಗೆ ಜಾಗರೂಕರಾಗಿರಿ. ಇಲ್ಲವೇ, ಇರುವ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.
ಸಿಂಹ ರಾಶಿ:
ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ಫಲಿತಾಂಶಗಳು ಸಿಗುವ ಸೂಚನೆಗಳಿವೆ. ರವಿ ಆಶೀರ್ವಾದದಿಂದ ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲವನ್ನು ಪಡೆಯುವ ನಿರೀಕ್ಷೆ ಇದೆ. ನಿರುದ್ಯೋಗಿಗಳು ಕೆಲಸದ ಬಗ್ಗೆ ಶುಭ ಸಮಾಚಾರ ಕೇಳಬಹುದು.
ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಇಂದು ಸಂತೋಷದಾಯಕವಾದ ದಿನವಾಗಿದೆ. ಇಂದು ವೃತ್ತಿ, ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವಿರಿ. ರಾಜಕೀಯ ರಂಗದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಇದು ಶುಭಪ್ರದವಾದ ಸಮಯ.
ತುಲಾ ರಾಶಿ:
ಶುಕ್ರವಾರದ ದಿನ ಶೂಲ ಯೋಗವು ತುಲಾ ರಾಶಿಯ ಜನರಿಗೆ ಉತ್ತಮ ಫಲಗಳನ್ನು ನೀಡಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಮಕ್ಕಳಿಂದ ಶುಭ ಸಮಾಚಾರಗಳನ್ನು ಕೇಳುವ ನಿರೀಕ್ಷೆ ಇದೆ.
ವೃಶ್ಚಿಕ ರಾಶಿ:
ಶೂಲ ಯೋಗವು ಇಂದು ವೃಶ್ಚಿಕ ರಾಶಿಯ ಜನರಿಗೂ ಸಹ ಫಲಪ್ರದವಾಗಿರಲಿದೆ. ಇಂದು ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಲು ಬಿಡಬೇಡಿ. ಇಂದು ನೀವು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳು ಆರ್ಥಿಕವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಧನು ರಾಶಿ:
ಧನು ರಾಶಿಯ ಜನರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕೆಲವು ವಿಷಯಗಳು ಇಂದು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ಆದರೆ, ಪ್ರೀತಿ ಪಾತ್ರರೊಂದಿಗೆ ಆಹ್ಲಾದಕರ ಸಮಯ ಕಳೆಯುವುದರಿಂದ ನಿಮ್ಮ ಮನಸ್ಸಿನ ಸಂತೋಷ ಹೆಚ್ಚಾಗಲಿದೆ.
ಮಕರ ರಾಶಿ:
ಮಕರ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಪ್ರಗತಿಯ ಹೊಸ ಅವಕಾಶಗಳು ಸಿಗುವ ನಿರೀಕ್ಷೆ ಇದೆ. ಇಂದು ಶೂಲ ಯೋಗವು ನಿಮಗೆ ಶುಭ ಫಲಗಳನ್ನು ನೀಡುವ ನಿರೀಕ್ಷೆ ಇದೆ. ಉದ್ಯೋಗದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ವ್ಯವಾಹರದಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ.
ಕುಂಭ ರಾಶಿ:
ಕುಂಭ ರಾಶಿಯ ಜನರಿಗೆ ಇಂದು ಶಾಂತಿಯುತವಾಗಿ ಕೂಡಿದ ದಿನ. ವ್ಯವಹಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಯೋಚಿಸಿ ನಿರ್ಧರಿಸಿ. ಕೆಲವು ಅನಿರೀಕ್ಷಿತ ಖರ್ಚುಗಳು ನಿಮ್ಮ ಬಜೆಟ್ ಹಾಳುಮಾಡಬಹುದು.
ಮೀನ ರಾಶಿ:
ಮೀನ ರಾಶಿಯ ಜನರು ಇಂದು ವಾಹನ ಚಾಲನೆಯಲ್ಲಿ ಜಾಗರೂಕರಾಗಿರುವುದು ಅಗತ್ಯ. ಮನೆಯಲ್ಲಿ ಮಾತನಾಡುವಾಗ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಇಲ್ಲವೇ, ವಿಷಯಗಳು ಹದಗೆಡಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಗಳಿಸುವ ನಿರೀಕ್ಷೆ ಇದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.