SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 24-09-2026: ಗುರುವಾರದಂದು ಧೃತಿ ಯೋಗ.. ಈ ರಾಶಿಯವರಿಗೆ ಲಕ್‌ ಚೇಂಜ್

Today Horoscope 24th September 2026: 24 ಸೆಪ್ಟೆಂಬರ್ 2026ರ ಗುರುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Sep 24, 2026, 08:46 AM IST | Updated: Sep 24, 2026, 08:48 AM IST
Join

Guruvara 24th September 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಗುರುವಾರದ ಈ ದಿನ ಧನಿಷ್ಠಾ ನಕ್ಷತ್ರ, ಧೃತಿ ಯೋಗ, ಕೌಲವ ಕರಣ ಇರಲಿದೆ.

ಮೇಷ ರಾಶಿ:
ಮೇಷ ರಾಶಿಯವರಿಗೆ ಧೃತಿ ಯೋಗವು ಶುಭಪ್ರದವಾಗಿದ್ದು ಇಂದು ನೀವು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಕೈ ಹಿಡಿಯಲಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಕೀರ್ತಿ, ಮನ್ನಣೆ ದೊರೆಯಲಿದ್ದು ದೊಡ್ಡ ಜವಾಬ್ದಾರಿ ಹೆಗಲೇರುವ ನಿರೀಕ್ಷೆ ಇದೆ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ.

ವೃಷಭ ರಾಶಿ: 
ವೃಷಭ ರಾಶಿಯ ಜನರಿಗೆ ಇಂದು ಎಲ್ಲಾ ಆಯಾಮಗಳಲ್ಲೂ ದಿನ ಅತ್ಯುತ್ತಮವಾಗಿರಲಿದ್ದು ಶುಭ ಫಲಗಳು ಹೆಚ್ಚಾಗಲಿವೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿವೆ. ವ್ಯವಹಾರದಲ್ಲಿ ದೊಡ್ಡ ಆರ್ಡರ್‌ ಒಂದು ಕೈ ಸೇರುವ ನಿರೀಕ್ಷೆ ಇದೆ. ಇಂದು ಯಾವುದೇ ವಿಚಾರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನಿರೀಕ್ಷಿಸಬಹುದಾಗಿದೆ.

ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಇಂದು ಧೃತಿ ಯೋಗವು ವಿಶೇಷವಾಗಿ ಲಾಭದಾಯಕವಾಗಿರಲಿದೆ. ಕೆಲಸದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯಬಹುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ನಿರೀಕ್ಷೆಗಳಿವೆ. ಹಣಕಾಸಿನ ಪರಿಸ್ಥಿತಿಯೂ ಸಹ ಮೊದಲಿಗಿಂತ ಸುಧಾರಿಸಲಿದೆ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಧೃತಿ ಯೋಗದ ಪ್ರಭಾವದಿಂದ ಪ್ರತಿ ಹೆಜ್ಜೆಗೂ ಉತ್ತಮ ಫಲಿತಾಂಶ ಸಿಗಲಿದೆ. ಹಣಕಾಸಿನ ಪರಿಸ್ಥಿತಿಯು ಸುಧಾರಿಸಲಿದ್ದು ಬಾಕಿ ಉಳಿದಿದ್ದ ಕೆಲಸಗಳಲ್ಲಿ ಜಯ ಸಾಧಿಸುವ ಅವಕಾಶಗಳನ್ನು ಪಡೆಯುವಿರಿ. ನಿಮ್ಮ ಮಾತೇ ಬಂಡವಾಳವಾಗಿದ್ದು ಮಾತಿನಿಂದಲೇ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸುವಿರಿ.

ಸಿಂಹ ರಾಶಿ:
ಧನಿಷ್ಠಾ ನಕ್ಷತ್ರದಲ್ಲಿ ಧೃತಿ ಯೋಗದ ಪ್ರಭಾವದಿಂದ ಇಂದು ಸಿಂಹ ರಾಶಿಯ ಜನರು ಹಲವು ಆಯಾಮಗಳಿಂದ ಉತ್ತಮ ಫಲಿತಾಂಶವನ್ನು ಪಡೆಯುವ ನಿರೀಕ್ಷೆ ಇದೆ. ಕೈ ಹಾಕಿದ ಪ್ರತಿ ಕೆಲಸದಲ್ಲೂ ನಿರೀಕ್ಷಿತ ಜಯ ಸಾಧಿಸುವಿರಿ. ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

ಕನ್ಯಾ ರಾಶಿ:
ಧೃತಿ ಯೋಗವು ಗುರುವಾರ ಕನ್ಯಾ ರಾಶಿಯ ಜನರಿಗೆ ಶುಭ ಫಲಗಳನ್ನು ನೀಡಲಿದೆ. ಇಂದು ಹೊಸ ಜನರನ್ನು ಭೇಟಿ ಆಗುವ ನಿರೀಕ್ಷೆ ಇದ್ದು ಭವಿಷ್ಯದಲ್ಲಿ ಅವರಿಂದ ದೊಡ್ಡ ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಹೊಸ ಹೊಸ ಅವಕಾಶಗಳು ಸಿಗಬಹುದು.

ತುಲಾ ರಾಶಿ: 
ಧೃತಿ ಯೋಗವು ತುಲಾ ರಾಶಿಯ ಜನರಿಗೆ ಶುಭ, ಅಶುಭ ಎರಡೂ ಫಲಗಳನ್ನು ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಇಂದು ಸಣ್ಣ ಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು. ತಾಳ್ಮೆಯಿಂದ ಕೆಲಸ ಮಾಡುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಆಸ್ತಿ ಸಂಬಂಧಿತ ವ್ಯಾಜ್ಯಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ.

ವೃಶ್ಚಿಕ ರಾಶಿ:
ಗುರುವಾರ ಧನಿಷ್ಠಾ ನಕ್ಷತ್ರದಲ್ಲಿ ಬಂದಿರುವ ಧೃತಿ ಯೋಗದ ಪ್ರಭಾವದಿಂದ ವೃಶ್ಚಿಕ ರಾಶಿಯ ಜನರು ಪ್ರತಿ ಹೆಜ್ಜೆಗೂ ಯಶಸ್ಸನ್ನು ಪಡೆಯುವರು. ಇಂದು ಅದೃಷ್ಟದ ಸಂಪೂರ್ಣ ಬೆಂಬಲ ಈ ಜನರಿಗಿದ್ದು ಎಲ್ಲಾ ಯೋಜಿತ ಕೆಲಸಗಳಲ್ಲೂ ಯಶಸ್ಸು ಕಾಣುವರು. ದೀರ್ಘ ಸಮಯದ ನಿಮ್ಮ ಯೋಜನೆಗಳು ಪ್ರಗತಿಯ ಹಾದಿ ಹಿಡಿಯಲಿದ್ದು, ಬಂಪರ್‌ ಧನಲಾಭವನ್ನು ನಿರೀಕ್ಷಿಸಬಹುದಾಗಿದೆ.

ಧನು ರಾಶಿ:
ಧೃತಿ ಯೋಗವು ಧನು ರಾಶಿಯ ಜನರಿಗೆ ಅನುಕೂಲಕರವಾಗಿದ್ದು ಕೆಲಸದಲ್ಲಿ ತಲೆದೂರಿದ್ದ ಸಮಸ್ಯೆಗಳಿಗೆ ಪರಿಹಾರವನ್ನು ಕಾಣುವಿರಿ. ಕುಟುಂಬದಲ್ಲಿ ಶಾಂತಿಯುತವಾದ ವಾತಾವರಣ ಇರಲಿದೆ. ಬಾಕಿ ಉಳಿದಿರುವ ಕೆಲಸಗಳೆಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದ್ದು, ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ.

ಮಕರ ರಾಶಿ:
ಗುರುವಾರದಂದು ಧೃತಿ ಯೋಗವು ಮಕರ ರಾಶಿಯವರಿಗೆ ಗುರುವಿನ ವಿಶೇಷ ಆಶೀರ್ವಾದವನ್ನು ನೀಡಲಿದೆ. ಇಂದು ನಿರುದ್ಯೋಗಿಗಳಿಗೆ ಉತ್ತಮ ಕಂಪನಿಯಿಂದ ಉದ್ಯೋಗಾವಕಾಶ ಸಿಗಬಹುದು. ದೀರ್ಘಕಾಲದ ನಿಮ್ಮ ಆಸೆಗಳು ಈಡೇರುವ ನಿರೀಕ್ಷೆ ಇದೆ. ವ್ಯವಹಾರದಲ್ಲಿ ಬೆಳವಣಿಗೆಯನ್ನು ಕಾಣಬಹುದು.

ಕುಂಭ ರಾಶಿ:
ಕುಂಭ ರಾಶಿಯ ಜನರಿಗೆ ಇಂದು ಉತ್ತಮ ಫಲಿತಾಂಶಗಳು ಸಿಗಲಿವೆ. ಧೃತಿ ಯೋಗವು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವ ನಿರೀಕ್ಷೆ ಇದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನೀವಿಂದು ಅನುಭವಿಸುವಿರಿ. ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಬೆಂಬಲ, ಸಹಕಾರ ಸಿಗಲಿದೆ.

ಮೀನ ರಾಶಿ:
ಮೀನ ರಾಶಿಯ ಜನರಿಗೆ ಧನಿಷ್ಠಾ ನಕ್ಷತ್ರದಲ್ಲಿ ಧೃತಿ ಯೋಗವು ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಇಂದು ಈ ರಾಶಿಯವರ ಜೀವನದ ದಿಕ್ಕೇ ಬದಲಾಗಲಿದ್ದು, ಕೈಗೊಳ್ಳುವ ಪ್ರಯಾಣವು ಲಾಭದಾಯಕವಾಗಿರಲಿದೆ. ಆದಾಯದ ಮೂಲಗಳು ಸುಧಾರಿಸಲಿದ್ದು, ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗಲಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES