• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 23-09-2026: ಬುಧವಾರದಂದು ಸುಕರ್ಮ ಯೋಗ.. ಈ ರಾಶಿಯವರಿಗೆ ಸಕಲವೂ ಕೈಗೂಡುವ ಸುವರ್ಣ ಸಮಯ

ದಿನ ಭವಿಷ್ಯ 23-09-2026: ಬುಧವಾರದಂದು ಸುಕರ್ಮ ಯೋಗ.. ಈ ರಾಶಿಯವರಿಗೆ ಸಕಲವೂ ಕೈಗೂಡುವ ಸುವರ್ಣ ಸಮಯ

Today Horoscope 23rd September 2026: 19 ಸೆಪ್ಟೆಂಬರ್ 2026 ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written ByYashaswini V
Published: Sep 23, 2026, 09:42 AM IST|Updated: Sep 23, 2026, 09:49 AM IST
joinshare
ದಿನ ಭವಿಷ್ಯ 23-09-2026: ಬುಧವಾರದಂದು ಸುಕರ್ಮ ಯೋಗ.. ಈ ರಾಶಿಯವರಿಗೆ ಸಕಲವೂ ಕೈಗೂಡುವ ಸುವರ್ಣ ಸಮಯ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Budhvara 23rd September 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಬುಧವಾರದ ಈ ದಿನ ಶ್ರವಣ ನಕ್ಷತ್ರ, ಸುಕರ್ಮ ಯೋಗ, ಬವ ಕರಣ ಇರಲಿದೆ.

ಮೇಷ ರಾಶಿ:
ಸುಕರ್ಮ ಯೋಗವು ಇಂದು ಮೇಷ ರಾಶಿಯ ಜನರಿಗೆ ಅನುಕೂಲಕರ ಸಮಯವನ್ನು ಹೊತ್ತು ತರಲಿದೆ. ಇಂದಿನ ದಿನ ವೃತ್ತಿ-ವ್ಯವಹಾರಗಳು ನೀವು ಯೋಜಿಸಿದಂತೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ದೀರ್ಘಾವಧಿಯ ನಿಮ್ಮ ಆಸೆಗಳು ಈಡೇರುವ ಸುವರ್ಣ ಅವಧಿ ಇದಾಗಿರಲಿದೆ.

ವೃಷಭ ರಾಶಿ: 
ವೃಷಭ ರಾಶಿಯವರಿಗೆ ಇಂದು ಕಳೆದುಕೊಂಡ ಹಣವನ್ನು ಮರಳಿ ಪಡೆಯುವ ಅವಕಾಶಗಳು ಸಿಗಬಹುದು. ವ್ಯವಹಾರ ವಿಸ್ತರಣೆಗೆ ಸಮಯವು ಅನುಕೂಲಕರವಾಗಿರಲಿದೆ. ಆದರೆ, ಅಪರಿಚರನ್ನು ನಂಬುವ ತಪ್ಪು ನಿಮಗೆ ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಹುಷಾರಾಗಿರಿ.

ಮಿಥುನ ರಾಶಿ: 
ಸುಕರ್ಮ ಯೋಗವು ಮಿಥುನ ರಾಶಿಯ ಜನರಿಗೆ ಇಂದು ಶುಭ ಫಲಗಳನ್ನು ಹೆಚ್ಚಿಸಲಿದೆ. ಆದಾಯದ ಮೂಲಗಳು ಹೆಚ್ಚಾಗುವ ನಿರೀಕ್ಷೆ ಇದ್ದು ಹಣಕಾಸಿನ ಸಮಸ್ಯೆಗಳಿಂದ ಹೊರಬರುವ ನಿರೀಕ್ಷೆ ಇದೆ. ಹೂಡಿಕೆ ಮಾಡುವ ಮೊದಲು ಸಂಬಂಧಿತ ಕ್ಷೇತ್ರ ತಜ್ಞರಿಂದ ಸಲಹೆ ಪಡೆಯುವುದು ಪ್ರಯೋಜನಕಾರಿ ಆಗಿದೆ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಶುಭ ಯೋಗದ ಪ್ರಭಾವದಿಂದ ನೀವಂದುಕೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಹೊಸ ಆದಾಯವನ್ನು ಗಳಿಸುವ ಅವಕಾಶಗಳನ್ನು ಪಡೆಯುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯಗಳ ಬಗ್ಗೆ ಸಮಾಲೋಚಿಸಲು ಅನುಕೂಲಕರ ಅವಧಿ.

ಸಿಂಹ ರಾಶಿ:
ಸಿಂಹ ರಾಶಿಯ ಜನರಿಗೆ ಇಂದು ಹಲವು ಆಯಾಮಗಳಲ್ಲಿ ಸಮಯ ಅನುಕೂಲಕರವಾಗಿದೆ. ಇಂದು ನೀವು ಕೈಗೊಳ್ಳುವ ಪ್ರತಿ ಕೆಲಸದಲ್ಲೂ ಅದೃಷ್ಟ ಕೈ ಹಿಡಿಯಲಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಇಂದು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕುಟುಂಬದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ.

ಕನ್ಯಾ ರಾಶಿ:
ಬುಧವಾರದ ದಿನ ಸುಕರ್ಮ ಯೋಗವು ಕನ್ಯಾ ರಾಶಿಯ ಜನರ ಜೀವನದಲ್ಲಿ ಭಾಗ್ಯೋದಯವನ್ನು ತರಲಿದೆ. ಇಂದು ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವ ನಿರೀಕ್ಷೆ ಇದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ ಇದೆ. ವ್ಯವಹಾರಸ್ಥರಿಗೂ ಧನಾಭಿವೃದ್ಧಿ ಆಗಲಿದೆ.

ತುಲಾ ರಾಶಿ: 
ಸುಕರ್ಮ ಯೋಗವು ತುಲಾ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಈ ದಿನ ಆದಾಯ ಉತ್ತಮವಾಗಿದ್ದರೂ ಕೂಡ ಖರ್ಚುಗಳು ಅಧಿಕವಾಗುವುದರಿಂದ ನೀವಂದುಕೊಂಡಂತೆ ಉಳಿತಾಯ ಮಾಡಲು ಕಷ್ಟವಾಗಬಹುದು. ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದವರ ಬೆಂಬಲ, ಸಹಕಾರ ಸಿಗಲಿದೆ.

ವೃಶ್ಚಿಕ ರಾಶಿ:
ಸುಕರ್ಮ ಯೋಗವು ಇಂದು ವೃಶ್ಚಿಕ ರಾಶಿಯ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು ಮಾಡುವ ಪ್ರತಿ ಕೆಲಸದಲ್ಲೂ ಜಯ ನಿಮ್ಮದಾಗಲಿದೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ನಿಮ್ಮ ಎದುರಾಳಿಗಳೇ ಸಲಾಂ ಎನ್ನಬಹುದು. ಕೌಟುಂಬಿಕ ಜೀವನವು ಆಹ್ಲಾದಕರವಾಗಿರುತ್ತದೆ. ಸಂಗಾತಿಯೊಂದಿಗೆ ಸುಮಧುರ ಕ್ಷಣಗಳನ್ನು ಕಳೆಯುವಿರಿ.

ಧನು ರಾಶಿ:
ಬುಧವಾರದ ದಿನ ಸುಕರ್ಮ ಯೋಗದ ಪ್ರಭಾವದಿಂದಾಗಿ ಧನು ರಾಶಿಯ ಜನರು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಲಿವೆ. ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ನಿಮ್ಮ ಪ್ರತಿಭೆಗೆ ಮನ್ನಣೆ ಸಿಗುವ ಸೂಚನೆಗಳಿವೆ.

ಮಕರ ರಾಶಿ:
ಸುಕರ್ಮ ಯೋಗವು ಮಕರ ರಾಶಿಯ ವ್ಯವಾಹರಸ್ಥರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಈ ಅವಧಿಯಲ್ಲಿ ನೀವು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ವೃತ್ತಿಪರರಿಗೆ ನಿಮ್ಮ ಕೆಲಸಕ್ಕೆ ಗೌರವ ಸಿಗಲಿದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗಬಹುದು.

ಕುಂಭ ರಾಶಿ:
ಬುಧವಾರದಂದು ಸುಕರ್ಮ ಯೋಗವು ಕುಂಭ ರಾಶಿಯ ಜನರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಈ ದಿನ ನೀವು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಹಣಕಾಸಿನ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಬಗೆಹರಿಯಲಿವೆ. ಆದರೂ, ಹೊಸ ವ್ಯವಹಾರಗಳಿಗೆ ಕೈ ಹಾಕದಿದ್ದರೆ ಒಳಿತು.

ಮೀನ ರಾಶಿ:
ಸುಕರ್ಮ ಯೋಗದ ಫಲವಾಗಿ ಮೀನ ರಾಶಿಯ ಜನರು ಇಂದು ಮಾಡುವ ಪ್ರತಿ ಕೆಲಸದಲ್ಲೂ ಜಯ ಸಾಧಿಸುವಿರಿ. ಧನಾಭಿವೃದ್ಧಿ ಆಗುವುದರಿಂದ ಸಾಲದ ಸುಳಿಯಿಂದ ಹೊರಬರುವ ನಿಮ್ಮ ಕನಸು ನನಸಾಗಲಿದೆ. ಸಮಾಜದಲ್ಲೂ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷ ಇಮ್ಮಡಿಗೊಳ್ಳಲಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Horoscope Today
Lucky Zodiac Signs
Astro Tips