SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 21-11-2026: ಉತ್ಥಾನ ದ್ವಾದಶಿ ದಿನ ರೇವತಿ ನಕ್ಷತ್ರದಲ್ಲಿ ಸಿದ್ಧಿ ಯೋಗ.. ಈ ರಾಶಿಯವರಿಗೆ ಅದೃಷ್ಟ

Today Horoscope 21st November 2026: 21 ನವೆಂಬರ್ 2026ರಂದು ಉತ್ಥಾನ ದ್ವಾದಶಿ ದಿನ ಸಿದ್ದಿ ಯೋಗ ಇರಲಿದ್ದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Nov 21, 2026, 05:15 IST | Updated: Nov 21, 2026, 05:15 IST
Join

Shanivara 21st November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶನಿವಾರದ ಈ ದಿನ ರೇವತಿ ನಕ್ಷತ್ರ, ಸಿದ್ಧಿ ಯೋಗ, ಬವ ಕರಣ ಇರಲಿದೆ. ಉತ್ಥಾನ ದ್ವಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಮೇಷ ರಾಶಿ:
ಉತ್ಥಾನ ದ್ವಾದಶಿಯಂದು ಸಿದ್ಧಿ ಯೋಗವು ಮೇಷ ರಾಶಿಯವರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಕೌಟುಂಬಿಕ ವಿವಾದಗಳಿಂದ ಪರಿಹಾರ ಸಿಗಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ವ್ಯವಹಾರ ಸಂಬಂಧಿತ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.

ವೃಷಭ ರಾಶಿ: 
ಉತ್ಥಾನ ದ್ವಾದಶಿಯ ದಿನ ರೇವತಿ ನಕ್ಷತ್ರವು ವೃಷಭ ರಾಶಿಯವರಿಗೆ ಅನುಕೂಲಕರವಾಗಿದ್ದು, ನೀವು ವ್ಯವಹಾರ ಸಂಬಂಧಿತ ಶುಭ ಸುದ್ದಿಗಳನ್ನು ಸ್ವೀಕರಿಸುವ ಸಾಧ್ಯತೆ ಇದೆ. ಪ್ರಮುಖ ಕೆಲಸಗಳಲ್ಲಿ ಕುಟುಂಬಸ್ಥರಿಂದ ಅಗತ್ಯ ಬೆಂಬಲ ಸಿಗಲಿದೆ. ಆರೋಗ್ಯವೂ ಸ್ಥಿರವಾಗಲಿದೆ.

ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಇಂದು ಪ್ರಯೋಜನಕಾರಿಯಾದ ದಿನ ಎಂದು ಸಾಬೀತುಪಡಿಸಲಿದೆ. ಆದಾಯದ ಹೊಸ ಮೂಲಗಳು ಹೊರಹೊಮ್ಮಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಬಹುದು. ಕುಟುಂಬಸ್ಥರೊಂದಿಗೆ ಮನರಂಜನಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಸಿಗಬಹುದು.

ಕರ್ಕಾಟಕ ರಾಶಿ:
ಉತ್ಥಾನ ದ್ವಾದಶಿಯಂದು ಕರ್ಕಾಟಕ ರಾಶಿಯ ಜನರಿಗೆ ಸುಖ ಸಂತೋಷಗಳು ಹೆಚ್ಚಾಗಲಿವೆ. ಇಂದು ಒಂದರ ಹಿಂದೆ ಒಂದರಂತೆ ಶುಭ ಸಮಾಚಾರಗಳನ್ನು ಸ್ವೀಕರಿಸುವಿರಿ. ಹೊಸ ವಾಹನ ಖರೀದಿಸಲು ಯೋಜಿಸುತ್ತಿರುವವರಿಗೆ ಅನುಕೂಲಕರ ಸಮಯ. ಕಾನೂನು ವಿಚಾರಗಳಲ್ಲಿ ಜಯ ನಿಮ್ಮದೇ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಉತ್ಥಾನ ದ್ವಾದಶಿ ದಿನ ತುಂಬಾ ಪ್ರಾಶಸ್ತ್ಯವಾಗಿದ್ದು ಪಾಲುದಾರಿಕೆ ವ್ಯವಹಾರಗಳಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ಹೊಸ ವ್ಯವಹಾರ ಆರಂಭಿಸಲು ಶುಬ ಸಮಯ. ಹೊಸ ಒಪ್ಪಂದಗಳಿಗೆ ಸಹಿ ಹಾಕಬೇಕಾಗಬಹುದು. ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ಯೋಜಿಸಬಹುದು.

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಸಿದ್ದಿ ಯೋಗವು ತುಂಬಾ ಫಲಪ್ರದವಾಗಿದೆ. ವ್ಯವಹಾರದಲ್ಲಿ ದೊಡ್ಡ ಆರ್ಡರ್‌ ಸ್ವೀಕರಿಸಬಹುದು. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವ ಸೂಚನೆಗಳಿವೆ. ಉದ್ಯೋಗ ಬದಲಾಯಿಸಲು ಯೋಚಿಸುತ್ತಿರುವವರಿಗೆ ಅನುಕೂಲಕರ ಸಮಯ.

ತುಲಾ ರಾಶಿ: 
ಉತ್ಥಾನ ದ್ವಾದಶಿಯ ಈ ದಿನ ತುಲಾ ರಾಶಿಯವರಿಗೆ ತುಂಬಾ ಮಹತ್ವದ್ದಾಗಿದೆ. ಇಂದು ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ. ವ್ಯವಹಾರಗಳು ಪ್ರಗತಿಯ ಹಾದಿಯಲ್ಲಿ ಸಾಗಲಿವೆ. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ಅವಧಿ ಎಂದು ಸಾಬೀತುಪಡಿಸಲಿದೆ.

ವೃಶ್ಚಿಕ ರಾಶಿ:
ಉತ್ಥಾನ ದ್ವಾದಶಿಯ ಈ ದಿನ ವೃಶ್ಚಿಕ ರಾಶಿಯವರಿಗೆ ನಿಮ್ಮ ತಂದೆಯ ವಿಶೇಷ ಆಶೀರ್ವಾದ ಸಿಗಲಿದ್ದು, ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಏಳ್ಗೆಯನ್ನು ಕಾಣುವಿರಿ. ಸಂಗಾತಿಯೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ. ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಒಳ್ಳೆಯ ಸುದ್ದಿಯನ್ನು ಕೇಳುವ ನಿರೀಕ್ಷೆ ಇದೆ.

ಧನು ರಾಶಿ:
ಉತ್ಥಾನ ದ್ವಾದಶಿಯ ಈ ದಿನ ಧನು ರಾಶಿಯ ಜನರಿಗೆ ಅನುಕೂಲಕರವಾಗಿದೆ. ಇಂದು ಪ್ರೇಮ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಸಹೋದರರೊಂದಿಗಿನ ತಪ್ಪು ತಿಳುವಳಿಕೆಗಳು ದೂರವಾಗುವ ಲಕ್ಷಣಗಳಿವೆ. ವ್ಯವಹಾರದಲ್ಲಿ ಎದುರಾಳಿಗಳು ನಿಮ್ಮ ಮುಂದೆ ಮಂಡಿಯೂರುವರು.

ಮಕರ ರಾಶಿ:
ಈ ವರ್ಷದ ಉತ್ಥಾನ ದ್ವಾದಶಿಯು ಮಕರ ರಾಶಿಯ ಜನರಿಗೆ ಅದ್ಭುತವಾಗಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇದು ಅನುಕೂಲಕರ ಸಮಯ ಎನ್ನಲಾಗುತ್ತಿದೆ. ತಾಳ್ಮೆಯಿಂದ ವ್ಯವಹರಿಸುವುದರಿಂದ ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯಗಳು ಸುಗಮವಾಗಿ ಬಗೆಹರಿಯಲಿವೆ.

ಕುಂಭ ರಾಶಿ:
ಕುಂಭ ರಾಶಿಯವರಿಗೆ ಇಂದಿನ ದಿನ ತುಂಬಾ ಸಂತೋಷದಾಯಕವಾಗಿರುತ್ತದೆ.ನೀವು ಮಾಡುವ ಕೆಲಸಗಳಲ್ಲಿ ಸಂಗಾತಿಯಿಂದ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿದೆ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಯೋಜಿಸಬಹುದು.

ಮೀನ ರಾಶಿ:
ಉತ್ಥಾನ ದ್ವಾದಶಿಯಂದು ಮೀನ ರಾಶಿಯವರಿಗೆ ದಿನವು ಅನುಕೂಲಕರವಾಗಿದೆ. ಉದ್ಯೋಗ ರಂಗದಲ್ಲಿ ಅನಗತ್ಯ ಕಿರಿಕಿರಿಗಳಿಂದ ಮುಕ್ತರಾಗುವಿರಿ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು ನಿಮ್ಮ ಕಾರ್ಯಕ್ಷಮತೆಗೆ ಎಲ್ಲರೂ ತಲೆಬಾಗುವರು. ವೈಯಕ್ತಿಕ ಜೀವನದಲ್ಲೂ ಸುಖ-ಸಮೃದ್ಧಿ ಹೆಚ್ಚಾಗಲಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES