• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 19-09-2026: ಇಂದು ಮೂಲಾ ನಕ್ಷತ್ರದಲ್ಲಿ ಆಯುಷ್ಮಾನ್‌ ಯೋಗ.. ಈ ರಾಶಿಯವರಿಗೆ ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ!

ದಿನ ಭವಿಷ್ಯ 19-09-2026: ಇಂದು ಮೂಲಾ ನಕ್ಷತ್ರದಲ್ಲಿ ಆಯುಷ್ಮಾನ್‌ ಯೋಗ.. ಈ ರಾಶಿಯವರಿಗೆ ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ!

Today Horoscope 19th September 2026: 19 ಸೆಪ್ಟೆಂಬರ್ 2026ರ ಶನಿವಾರದ ದಿನ ಮೂಲಾ ನಕ್ಷತ್ರ ಇರಲಿದ್ದು ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written ByYashaswini V
Published: Sep 19, 2026, 07:48 AM IST|Updated: Sep 19, 2026, 07:51 AM IST
joinshare
ದಿನ ಭವಿಷ್ಯ 19-09-2026: ಇಂದು ಮೂಲಾ ನಕ್ಷತ್ರದಲ್ಲಿ ಆಯುಷ್ಮಾನ್‌ ಯೋಗ.. ಈ ರಾಶಿಯವರಿಗೆ ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Shanivara 19th September 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸದ ಶುಕ್ಲ ಪಕ್ಷದ ಇಂದು ಅಷ್ಟಮಿ ತಿಥಿ, ಶನಿವಾರದ ಈ ದಿನ ಮೂಲಾ ನಕ್ಷತ್ರ, ಆಯುಷ್ಮಾನ್‌ ಯೋಗ, ಬಾಲವ ಕರಣ ಇರಲಿದೆ.

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯ ಜನರಿಗೆ ಇಂದು ವೃತ್ತಿ ಜೀವನವು ಕಾರ್ಯನಿರತವಾಗಿರಲಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರವೇ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದಾಗ್ಯೂ, ಹಣಕಾಸಿನ ವಿಚಾರದಲ್ಲಿ ಇಂದಿನ ದಿನವು ಉತ್ತಮವಾಗಿರಲಿದೆ.

ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯ ಜನರು ಇಂದು ಹೊಸ ಉದ್ಯಮ ಆರಂಭಿಸಲು ಯೋಜಿಸಬಹುದು. ವ್ಯಾಪಾರದಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ. ವೃತ್ತಿ ಬದುಕಿನಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ನಿರುದ್ಯೋಗಿಗಳಿಗೆ ಹೊಸ ಹೊಸ ಅವಕಾಶಗಳು ಸಿಗಬಹುದು.

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರಿಗೆ ಸಾಮಾಜಿಕ ಸಂಪರ್ಕಗಳು ಹೊಸ ವ್ಯಾಪಾರ ಅವಕಾಶಗಳನ್ನು ಕಲ್ಪಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಇಂದು ನಿಮ್ಮ ವೃತ್ತಿ ಜೀವನದತ್ತ ಗಮನಹರಿಸಿ. ಸಾಮಾಜಿಕ ಚಟುವಟಿಕೆಗಳಲಿ ಸಕ್ರಿಯರಾಗಿರುತ್ತೀರಿ.

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರಿಗೆ ಇಂದು ಮೂಲಾ ನಕ್ಷತ್ರದಲ್ಲಿ ಆಯುಷ್ಮಾನ್‌ ಯೋಗವು ಅಷ್ಟು ಉತ್ತಮವಾಗಿಲ್ಲದ ಕಾರಣ ಯಾವುದೇ ದೊಡ್ಡ ವ್ಯವಹಾರಗಳಿಗೆ ಕೈ ಹಾಕದೆ ಇರುವುದು ಒಳ್ಳೆಯದು. ನಿರುದ್ಯೋಗಿಗಳು ಇಂಟರ್ವ್ಯೂಗಳಲ್ಲಿ ಸಾಮಾಧಾನಕರವಾಗಿ ಇರುವುದು ಒಳ್ಳೆಯದು. ಕೌಟುಂಬಿಕ ವಿವಾದಗಳಿಂದ ಪರಿಹಾರ ಪಡೆಯುವಿರಿ.

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರು ಇಂದು ಮಾಡುವ ಕೆಲಸಗಳಲ್ಲಿ ಏಕಾಗ್ರತೆಯಿಂದ ಇರುವುದು ಒಳ್ಳೆಯದು. ವ್ಯವಹಾರದಲ್ಲಿ ಚುರುಕಾಗಿದ್ದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ವೈಯಕ್ತಿಕ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ. ನೀವು ಮಾಡುವ ಕೆಲಸದಲ್ಲಿ ಕುಟುಂಬದವರ ಬೆಂಬಲ ಇರಲಿದೆ.

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರು ಇಂದು ವ್ಯಾಪಾರದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ. ಮಾಡುವ ಕೆಲಸದಲ್ಲಿ ಕುಟುಂಬಸ್ಥರ ಸಹಕಾರ ಬೆಂಬಲ ಇರಲಿದ್ದು, ಕೆಲಸಗಳನ್ನು ಆತ್ಮವಿಶ್ವಾಸದಿಂದ ಪೂರ್ಣಗೊಳಿಸುವಿರಿ. ನಿಮ್ಮ ಹಣಕಾಸಿನ ಪರಿಸ್ಥಿತಿಯು ಆಶಾದಾಯಕವಾಗಿ ಇರುತ್ತದೆ.

ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರಿಗೆ ಒಂದು ನಿರ್ದಿಷ್ಟ ನಿರ್ಧಾರವು ನಿಮ್ಮ ವ್ಯವಹಾರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ. ಆದರೆ, ಎಲ್ಲಾ ಆಯಾಮಗಳಲ್ಲೂ ಯೋಚಿಸಿ ಬುದ್ದಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವೃತ್ತಿಪರ ವಿಚಾರಗಳಲ್ಲಿ ವಿಶ್ವಾಸವನ್ನು ಕಾಪಾಡಿಕೊಳ್ಳಿ. ಕುಟುಂಬಸ್ಥರೊಂದಿಗೆ ಮುಕ್ತವಾಗಿ ಮಾತನಾಡಿ.

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯ ಜನರಿಗೆ ಇಂದು ವ್ಯವಹಾರಗಳು ಏರಿಳಿತಗಳಿಂದ ಕೂಡಿರಬಹುದು. ಯಾರೊಂದಿಗೂ ಸಮಾಲೋಚಿಸದೆ ಯಾವುದೇ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಉದ್ಯೋಗದಲ್ಲಿ ನಿಮ್ಮ ಕೆಲಸದ ಮೇಲೆ ಗಮನಹರಿಸಿ, ಅನಗತ್ಯ ವಾದ-ವಿವಾದಗಳನ್ನು ತಪ್ಪಿಸಿ. ಕುಟುಂಬ ಸಂಬಂಧಗಳಲ್ಲಿ ಸಂವಹನ ಹೆಚ್ಚಾಗಲಿದೆ.

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯ ಜನರಿಗೆ ಇಂದು ವ್ಯವಹಾರಗಳು ಏರಿಳಿತಗಳಿಂದ ಕೂಡಿರಬಹುದು. ನೀವಾಡುವ ಮಾತಿನ ಬಗ್ಗೆ ಜಾಗರೂಕರಾಗಿರಿ. ಕೆಲಸದಲ್ಲಿ ನಿಮ್ಮ ಮನಸ್ಸು ಚಂಚಲತೆಯಿಂದ ಕೂಡಿರಬಹುದು. ಸಾಧ್ಯವಾದಷ್ಟು ಶಾಂತವಾಗಿರುವುದನ್ನು ಪರಿಗಣಿಸಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಪರಿಹಾರ ಸಿಗಲಿದೆ.

ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರಿಗೆ ಶೀಘ್ರದಲ್ಲೇ ವ್ಯಾಪಾರ ಲಾಭಗಳು ಸಿಗುವ ನಿರೀಕ್ಷೆ ಇದೆ. ಹೊಸ ಸಂಪರ್ಕಗಳು ನಿಮ್ಮ ವ್ಯವಹಾರ ವಿಸ್ತರಣೆಗೆ ಸಹಕಾರಿ ಆಗಲಿದೆ. ಕೆಲಸದಲ್ಲಿ ನಿಮ್ಮ ಉತ್ಸಾಹ ಮುಂದುವರೆಯಲಿದೆ. ಕುಟುಂಬದಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಾಗಲಿದೆ. ಬಾಕಿ ಉಳಿದಿರುವ ಹಣಕಾಸಿನ ವಿಚಾರಗಳು ನಿಮ್ಮ ಪರವಾಗಿ ಪರಿಹರಿಸಲ್ಪಡುತ್ತವೆ.

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಬೇಕಾಗಬಹುದ. ವೃತ್ತಿ ಬದುಕಿನಲ್ಲಿ ಆತ್ಮವಿಶ್ವಾಸದಿಂದ ಮುಂದುವರೆಯಿರಿ. ನಿಮ್ಮ ಬಹುಕಾಲದ ಆಸೆಯೊಂದು ಈಡೇರುವ ಸುವರ್ಣ ಅವಧಿ ಇದಾಗಿರಲಿದೆ. ಯಾವುದೇ ಖರೀದಿಗಳನ್ನು ಮಾಡುವ ಮೊದಲು ನಿಮ್ಮ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಯೋಚಿಸಿ.

ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯ ಜನರು ಇಂದು ಹೊಸ ಜನರೊಂದಿಗೆ ಸಂಪರ್ಕ ಬೆಸೆಯಬಹುದು. ವ್ಯವಹಾರವು ಲಾಭದಾಯಕವಾಗಿರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳು ಸಿಗುವ ನಿರೀಕ್ಷೆ ಇದೆ. ಪ್ರೀತಿಪಾತ್ರರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ಬೇರೆಡೆ ಸಿಲುಕಿರುವ ಹಣ ಇಂದು ನಿಮ್ಮ ಕೈ ಸೇರುವ ನಿರೀಕ್ಷೆ ಇದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Horoscope Today
Astro Tips
Lucky Zodiac Signs