ದಿನ ಭವಿಷ್ಯ 17-10-2026: ಶನಿವಾರದಂದು ಅತಿಗಂಡ ಯೋಗ.. ಯಾವ ರಾಶಿಗೆ ಏನು ಫಲ!
Today Horoscope 17th October 2026: 17 ಅಕ್ಟೋಬರ್ 2026ರಂದು ಅತಿಗಂಡ ಯೋಗ ಇರಲಿದ್ದು ಇಂದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Shanivara 17th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಶನಿವಾರದ ಈ ದಿನ ಮೂಲಾ ನಕ್ಷತ್ರ, ಅತಿಗಂಡ ಯೋಗ, ಗರಜ ಕರಣ ಇರಲಿದೆ.
ಮೇಷ ರಾಶಿ:
ಮೇಷ ರಾಶಿಯ ಜನರಿಗೆ ಇಂದು ಉದ್ಯೋಗದಲ್ಲಿ ತೃಪ್ತಿದಾಯಕ ವಾತಾವರಣ ಇರಲಿದೆ. ವೃತ್ತಿ- ವ್ಯವಹಾರದಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ. ಹಣಕಾಸಿನ ವ್ಯವಹಾರಗಳತ್ತ ಗಮನ ಹರಿಸಿ. ಪ್ರಮುಖ ವೈಯಕ್ತಿಕ ಸಮಸ್ಯೆಗಳು ಬಗೆಹರಿಯಲಿವೆ. ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ವೃಷಭ ರಾಶಿ:
ಅತಿಗಂಡ ಯೋಗವು ವೃಷಭ ರಾಶಿಯ ಜನರಿಗೆ ಶುಭಪ್ರದವಾಗಿದ್ದು, ಇಂದು ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸಲಾಗುತ್ತದೆ. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆದಾಯವನ್ನು ಗಳಿಸುವಿರಿ. ಕೆಲಸದಲ್ಲಿ ಒತ್ತಡ ಇರುತ್ತದೆ. ಆದರೂ, ಕುಟುಂಬಸ್ಥರ ಸಹಾಯದಿಂದ ಎಲ್ಲವೂ ಸುಗಮವಾಗಿ ಮುಂದುವರೆಯಲಿದೆ.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಮೇಲಧಿಕಾರಿಗಳೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ. ಇಂದು ಕೆಲಸದ ನಿಮಿತ್ತ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಇದಕ್ಕಾಗಿ ಮಾನಸಿಕವಾಗಿ ಸಿದ್ಧವಾಗಿರಿ. ವ್ಯವಾಹರದಲ್ಲಿ ಪ್ರಗತಿಯನ್ನು ಕಾಣುವಿರಿ. ಆಸ್ತಿ ವಿಚಾರಗಳು ನಿಧಾನವಾಗಿ ಇತ್ಯರ್ಥವಾಗಲಿವೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ಕೆಲಸದಲ್ಲಿ ಮೇಲಧಿಕಾರಿಗಳು ವಹಿಸಿದ ಜವಾಬ್ದಾರಿಯನ್ನು ಸುಗಮವಾಗಿ ನಿಭಾಯಿಸುವಿರಿ. ವ್ಯವಹಾರದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ದೀರ್ಘ ಸಮಯದ ಸಾಲಗಳು ತೀರಲಿವೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು. ಸಮಾಜದಲ್ಲಿ ನಿಮ್ಮ ಸ್ಥಾನಮಾನವೂ ಹೆಚ್ಚಾಗಲಿದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಕೆಲಸದಲ್ಲಿ ಇಂದು ಸ್ವಲ್ಪ ಒತ್ತಡ ಇರಬಹುದು. ವೈಯಕ್ತಿಕ ಸಮಸ್ಯೆಗಳು ನಿಮ್ಮನ್ನು ಮಾನಸಿಕವಾಗಿ ತೊಂದರೆಗೊಳಿಸಬಹುದು. ಕುಟುಂಬದೊಂದಿಗೆ ದೇವಾಲಯಕ್ಕೆ ತೆರಳುವುದು ಮನಸ್ಸಿಗೆ ಶಾಂತಿ ನೀಡಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗದ ಆಫರ್ ಬರಬಹುದು.
ಕನ್ಯಾ ರಾಶಿ:
ಕನ್ಯಾ ರಾಶಿಯವರು ಇಂದು ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳಿಂದ ಅಗತ್ಯ ಪ್ರೋತ್ಸಾಹವನ್ನು ಪಡೆಯಬಹದು. ಆದಾಯವು ತೃಪ್ತಿಕರವಾಗಿ ಮುಂದುವರೆಯಲಿದೆ. ನಿರುದ್ಯೋಗಿಗಳು ಅಪೇಕ್ಷಿತ ಕೊಡುಗೆಗಳನ್ನು ಪಡೆಯುವರು. ಕುಟುಂಬಸ್ಥರೊಂದಿಗೆ ದೈವಿಕ ದರ್ಶನಕ್ಕೆ ಯೋಜಿಸಬಹುದು.
ತುಲಾ ರಾಶಿ:
ತುಲಾ ರಾಶಿಯ ಉದ್ಯೋಗಿಗಳಿಗೆ ವೇತನ ಹೆಚ್ಚಳ ನಿರೀಕ್ಷೆ ಇದೆ. ವೃತಿ-ವ್ಯವಹಾರಗಳು ಪ್ರೋತ್ಸಾಹದಾಯಕವಾಗಿ ಮುಂದುವರೆಯಲಿವೆ. ಆತ್ಮೀಯ ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಮನೆಯಲ್ಲಿ ಅನುಕೂಲಕರ ವಾತಾವರಣ ಇರಲಿದ್ದು, ಮದುವೆ ಸಂಬಂಧಿತ ಮಾತುಕತೆಗಳಲ್ಲಿ ಸಕಾರಾತ್ಮಕತೆ ಇರಲಿದೆ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಉದ್ಯೋಗಿಗಳ ಬಗ್ಗೆ ಅಧಿಕಾರಿಗಳ ನಂಬಿಕೆ ಹೆಚ್ಚಾಗಲಿದೆ. ವೃತಿ ವ್ಯವಹಾರದಲ್ಲಿ ಕಡಿಮೆ ಪ್ರಯತ್ನದಿಂದಲೇ ಹೆಚ್ಚಿನ ಫಲ ಸಿಗಲಿದೆ. ಆದಾಯವೂ ಉತ್ತಮ ಪ್ರಮಾಣದಲ್ಲಿ ಇರಲಿದೆ. ಹೊಸ ವಾಹನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದು ದಿನ ತುಂಬಾ ಪ್ರಾಶಸ್ತ್ಯವಾಗಿದೆ.
ಧನು ರಾಶಿ:
ಧನು ರಾಶಿಯವರಿಗೆ ವ್ಯವಹಾರಗಳು ಅನುಕೂಲಕರವಾಗಿ ಪ್ರಗತಿ ಸಾಧಿಸಲಿವೆ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ಒಡಹುಟ್ಟಿದವರೊಂದಿಗೆ ಆಸ್ತಿ ವಿವಾದಗಳು ಬಗೆಹರಿಯಲಿವೆ. ಆದಾಯವು ಉತ್ತಮ ಪ್ರಮಾಣದಲ್ಲಿ ಇರಲಿದೆ.
ಮಕರ ರಾಶಿ:
ಮಕರ ರಾಶಿಯವರಿಗೆ ಇಂದು ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಹೊಸ ತಂತ್ರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸುವ ಬಗ್ಗೆ ಯೋಚಿಸಬಹುದು. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿಯನ್ನು ಕೇಳುವಿರಿ.
ಕುಂಭ ರಾಶಿ:
ಕುಂಭ ರಾಶಿಯ ಜನರಿಗೆ ಇಂದು ಇಡೀ ದಿನ ಅನುಕೂಲಕರವಾಗಿರುತ್ತದೆ. ವೃತ್ತಿ ವ್ಯವಹಾರಗಳು ಆಶಾದಾಯಕವಾಗಿ ಪ್ರಗತಿ ಸಾಧಿಸಲಿವೆ. ಕೆಲಸದಲ್ಲಿ ಉತ್ತಮ ಬೆಳವಣಿಗೆಗಳು ಇರಲಿವೆ. ವಿದೇಶಿ ವ್ಯವಹಾರಗಳು ಮೌಲ್ಯಯುತವಾಗಿರಲಿವೆ. ಸಂಬಂಧಿಕರಿಂದ ನಿರೀಕ್ಷಿತ ಶುಭ ಸುದ್ದಿ ಕೇಳುವಿರಿ.
ಮೀನ ರಾಶಿ:
ಮೀನ ರಾಶಿಯವರಿಗೆ ಕೆಲಸದಲ್ಲಿ ದಕ್ಷತೆ ಸಿಗಲಿದೆ. ವೃತ್ತಿ- ವ್ಯವಹಾರಗಳು ಸುಗಮವಾಗಿ ಮುಂದುವರೆಯಲಿವೆ. ಇಂದು ವೈಯಕ್ತಿಕಸ ಸಮಸ್ಯೆಗಳು ಬಗೆಹರಿಯಲಿವೆ. ನಿರುದ್ಯೋಗಿಗಳು ಶುಭ ಸಮಾಚಾರವನ್ನು ನಿರೀಕ್ಷಿಸಬಹುದು. ಸಂಗಾತಿಯೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.