ದಿನ ಭವಿಷ್ಯ 07-10-2026: ಬುಧವಾರದಂದು ಮಘಾ ನಕ್ಷತ್ರದಲ್ಲಿ ಶುಭ ಯೋಗ.. ಈ ರಾಶಿಯವರಿಗೆ ಹಠಾತ್ ಧನ ಲಾಭ
Today Horoscope 07th October 2026: 07 ಅಕ್ಟೋಬರ್ 2026ರಂದು ಬುಧವಾರದಂದು ಮಘಾ ನಕ್ಷತ್ರದಲ್ಲಿ ಶುಭ ಯೋಗ ಇದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Budhvara 07th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಬುಧವಾರದ ಈ ದಿನ ಮಘಾ ನಕ್ಷತ್ರ, ಶುಭ ಯೋಗ, ಕೌಲವ ಕರಣ ಇರಲಿದೆ.
ಮೇಷ ರಾಶಿ:
ಮೇಷ ರಾಶಿಯವರಿಗೆ ಇಂದು ಕೆಲಸದ ಮಹತ್ವ ಗಮನಾರ್ಹವಾಗಿ ಹೆಚ್ಚಾಗಲಿದೆ. ವೃತ್ತಿ ವ್ಯವಹಾರಗಳು ಲಾಭದಾಯಕವಾಗಿರಲಿದ್ದು ಅನಿರೀಕ್ಷಿತ ಧನಲಾಭವು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲಿದೆ. ಹೊಸ ವಾಹನ ಖರೀದಿ ಯೋಗವೂ ಇದೆ. ವೈವಾಹಿಕ ಜೀವನದಲ್ಲಿ ಸುಖ-ಶಾಂತಿ ಹೆಚ್ಚಾಗಲಿದೆ.
ವೃಷಭ ರಾಶಿ:
ವೃಷಭ ರಾಶಿಯವರಿಗೆ ವೃತ್ತಿ ವ್ಯವಹಾರಗಳು ಆಶಾದಾಯಕವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ನೀವಿಂದು ಇಡೀ ದಿನ ಉತ್ಸಾಹದಿಂದ ಕೂಡಿರುವಿರಿ. ಪ್ರಮುಖ ವ್ಯವಹಾರಗಳಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ಸ್ನೇಹಿತರ ಸಮಸ್ಯೆಗಳ ಬಗ್ಗೆ ತಲೆ ಹಾಕದಿದ್ದರೆ ಒಳಿತು.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಇಂದು ಕೆಲಸದ ಕ್ಷೇತ್ರದಲ್ಲಿ ಅಧಿಕಾರಿಗಳಿಂದ ಅಗತ್ಯ ಬೆಂಬಲ ಸಿಗಲಿದೆ. ವ್ಯವಾಹರದಲ್ಲಿ ಲಾಭಾಂಶಗಳು ಹೆಚ್ಚಾಗಬಹುದು. ಇದರಿಂದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ. ಕುಟುಂಬದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಮಕ್ಕಳ ವಿಚಾರದಲ್ಲಿ ಶುಭ ಸಮಾಚಾರವನ್ನು ಕೇಳುವ ನಿರೀಕ್ಷೆ ಇದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಅಧಿಕಾರಿಗಳು ನಿಮ್ಮ ಮೇಲೆ ಅತಿಯಾಗಿ ಅವಲಂಬಿತರಾಗುವರು. ಜೀವನದಲ್ಲಿ ಹೊಸ ಹಾದಿಯಲ್ಲಿ ನಡೆಯಬೇಕಾಗಬಹುದು. ಇದಕ್ಕಾಗಿ ಮಾನಸಿಕವಾಗಿ ತಯಾರಾಗುವುದು ಒಳ್ಳೆಯದು. ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ನಿರೀಕ್ಷೆ ಇದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ವೃತ್ತಿಯಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಕೆಲಸಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸುವಿರಿ. ವ್ಯವಹಾರಗಳು ಸುಗಮವಾಗಿ ಪೂರ್ಣಗೊಳ್ಳುವಿರಿ. ಹೆಚ್ಚುವರಿ ಆದಾಯ ಗಳಿಸುವ ಅವಕಾಶಗಳನ್ನು ಪಡೆಯುವಿರಿ. ವ್ಯವಾಹರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ:
ಕನ್ಯಾ ರಾಶಿಯವರು ಇಂದು ಕೆಲಸದಲ್ಲಿ ಸ್ಥಿರತೆಯನ್ನು ಕಾಣುವರು. ವೇತನ, ಭತ್ಯೆಗಳು ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿ, ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಹಣಕಾಸಿ ಪರಿಸ್ಥಿತಿ ಸುಧಾರಿಸಲಿದೆ. ಅತಿಯಾದ ಔದಾರ್ಯ ಒಳ್ಳೆಯದಲ್ಲ ಎಂಬುದನ್ನು ನೆನಪಿನಲ್ಲಿಡಿ. ವಿವಾಹ ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ.
ತುಲಾ ರಾಶಿ:
ತುಲಾ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಬಹುದು. ವೃತ್ತಿಪರರು ನಿಗದಿತ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಬಹುದು. ವ್ಯವಹಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಆಸ್ತಿ ವಿವಾದಗಳು ಬಗೆಹರಿಯಲಿವೆ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ಇಂದಿನ ದಿನವು ಲಾಭದಾಯಕವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಹಣಕಾಸಿನ ಹರಿವು ನಿರೀಕ್ಷೆಗೂ ಮೀರಿ ಹೆಚ್ಚಾಗುವ ನಿರೀಕ್ಷೆ ಇದೆ. ಆಸ್ತಿ ವಿಚಾರದಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಪ್ರೀತಿಪಾತ್ರರೊಂದಿಗೆ ಭೋಜನಕೂಟದಲ್ಲಿ ಭಾಗವಹಿಸುವಿರಿ. ಉದ್ಯೋಗದಲ್ಲಿ ಶುಭ ಸಮಾಚಾರ ಸಿಗುವ ಲಕ್ಷಣಗಳಿವೆ.
ಧನು ರಾಶಿ:
ಧನು ರಾಶಿಯವರಿಗೆ ಇಂದು ಕೆಲಸದಲ್ಲಿ ನಿಮ್ಮ ಮಾತಿನ ಮೌಲ್ಯ ಹೆಚ್ಚಾಗಲಿದೆ. ವೃತ್ತಿಪರರಿಗೆ ಇಂದು ಕಾರ್ಯನಿರತವಾದ ದಿನ. ನಿಮ್ಮ ಆದಾಯವು ಹಲವು ವಿಧದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಹೊಸ ಮನೆ ಖರೀದಿಸಲು ಯೋಚಿಸುತ್ತಿರುವವರಿಗೆ ಅನುಕೂಲಕರವಾದ ಸಮಯ ಇದಾಗಿರಲಿದೆ. ಕುಟುಂಬದಲ್ಲಿ ಮದುವೆ ಮಾತುಕತೆಗಳು ನಡೆಯಬಹುದು.
ಮಕರ ರಾಶಿ:
ಮಕರ ರಾಶಿಯವರಿಗೆ ನಿಮ್ಮ ವೃತ್ತಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಕೆಲಸದಲ್ಲಿ ನಿಮ್ಮ ದಕ್ಷತೆಯನ್ನು ಗುರುತಿಸಲಾಗುವುದು. ವ್ಯವಹಾರದಲ್ಲಿ ಸಣ್ಣ ಲಾಭಾಂಶಗಳು ಕೂಡ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವ ನಿರೀಕ್ಷೆ ಇದೆ. ಕೆಲಸದ ನಿಮಿತ್ತ ಹಠಾತ್ ಪ್ರವಾಸ ಸಾಧ್ಯತೆ ಇದೆ.
ಕುಂಭ ರಾಶಿ:
ಕುಂಭ ರಾಶಿಯವರಿಗೆ ವೃತ್ತಿಯಲ್ಲಿ ಪ್ರಮುಖ ಬದಲಾವಣೆಗಳ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ಹಠಾತ್ ಧನಲಾಭವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿದೆ. ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಇಂದು ದಿನವು ಅನುಕೂಲಕರವಾಗಿರಲಿದೆ. ದೀರ್ಘಕಾಲದ ಒತ್ತಡದಿಂದ ಪರಿಹಾರ ಪಡೆಯುವ ಸೂಚನೆಗಳಿವೆ.
ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ಆದಾಯದ ಮೂಲಗಳು ಹೆಚ್ಚಾಗಲಿದ್ದು ಸಾಲಬಾಧೆಯಿಂದ ಪರಿಹಾರವನ್ನು ಪಡೆಯುವಿರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು. ವೃತ್ತಿಯಲ್ಲಿ ಪ್ರೋತ್ಸಾಹದಾಯಕವಾದ ವಾತಾವರಣ ಇರಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.