ಸೂರ್ಯ ಗೋಚಾರ: ನವೆಂಬರ್ 16ರಿಂದ ಪ್ರಜ್ವಲಿಸಲಿದೆ 8 ರಾಶಿಯವರ ಭವಿಷ್ಯ, ಅದೃಷ್ಟವೇ ಬದಲು
ವೈದಿಕ ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶದೊಂದಿಗೆ 8 ರಾಶಿಯವರಿಗೆ ಅದೃಷ್ಟ ಹೆಗಲೇರಲಿದೆ ಎನ್ನಲಾಗುತ್ತಿದೆ.
ಹಿಂದೂ ಪಂಚಾಂಗದ ಪ್ರಕಾರ, ನವೆಂಬರ್ 16, 2026ರಂದು ಗ್ರಹಗಳ ಅಧಿಪತಿ, ಆತ್ಮದ ಅಂಶನಾದ ಸೂರ್ಯ ಗ್ರಹವು ಕಮಾಂಡರ್ ಗ್ರಹ ಮಂಗಳನ ಅಧಿಪತ್ಯದ ವೃಶ್ಚಿಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಕಾರ್ತಿಕ ಮಾಸದಲ್ಲಿ ಕುಜನ ರಾಶಿಯಲ್ಲಿ ರವಿ ಉಪಸ್ಥಿತಿಯು ತುಂಬಾ ಶುಭಪ್ರದವಾಗಿದೆ.
ಸೂರ್ಯ ಸಂಚಾರದಿಂದ ಬದಲಾಗಲಿದೆ 8 ರಾಶಿಯವರ ಲಕ್:
ವೈದಿಕ ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಯಲ್ಲಿ ಸೂರ್ಯ ಪಥ ಸಂಚಲನದ ಪ್ರಭಾವ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಎಲ್ಲಾ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಆದರೂ, ಈ ಅವಧಿಯಲ್ಲಿ 8 ರಾಶಿಯವರ ಅದೃಷ್ಟವೇ ಬದಲಾಗಲಿದ್ದು, ಜೀವನದಲ್ಲಿ ಭಾಗ್ಯೋದಯವಾಗುವ ಸಮಯ ಎನ್ನಲಾಗುತ್ತಿದೆ. ಸೂರ್ಯ ಗೋಚಾರದೊಂದಿಗೆ ಈ ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳು ಹೆಚ್ಚಾಗಲಿದ್ದು, ಜೀವನದ ಪ್ರತಿ ಆಯಾಮದಲ್ಲೂ ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂದು ಹೇಳಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ..
ವೃಷಭ ರಾಶಿ:
ನವೆಂಬರ್ 16ರಂದು ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶದೊಂದಿಗೆ ವೃಷಭ ರಾಶಿಯ ಜನರಿಗೆ ಅನಿರೀಕ್ಷಿತ ಧನಾಗಮನ ಲಕ್ಷಣಗಳಿವೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಅದ್ಭುತ ಆದಾಯವನ್ನು ಗಳಿಸುವ ನಿರೀಕ್ಷೆ ಇದೆ. ಉದ್ಯೋಗಸ್ಥರಿಗೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸುವ ಸೂಚನೆಗಳಿವೆ.
ಮಿಥುನ ರಾಶಿ:
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶವು ಮಿಥುನ ರಾಶಿಯ ಜನರಿಗೆ ಭಾಗ್ಯೋದಯದ ಸಮಯ ಎಂದು ಸಾಬೀತುಪಡಿಸಲಿದೆ. ಈ ಅವಧಿಯಲ್ಲಿ ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದ್ದು, ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸದ ಆಫರ್ ಬರಬಹುದು. ವಿದೇಶ ವ್ಯವಹಾರದಿಂದ ಹಣದ ಹರಿವು ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೂ ಇದು ಅನುಕೂಲಕರ ಸಮಯವಾಗಿದೆ.
ಕನ್ಯಾ ರಾಶಿ:
ಸೂರ್ಯ ರಾಶಿ ಪರಿವರ್ತನೆಯು ಕನ್ಯಾ ರಾಶಿಯ ಜನರಿಗೆ ವೃತ್ತಿಯಲ್ಲಿ ಪ್ರಗತಿಯ ಅವಕಾಶಗಳನ್ನು ತರಲಿದೆ. ಉದ್ಯಮಿಗಳಿಗೆ ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಅವಕಾಶಗಳು ಸಿಗಬಹುದು. ವಿದೇಶ ವ್ಯವಹಾರಗಳು ಅನುಕೂಲಕರವಾಗಿದ್ದು ಹಣದ ಸುರಿಮಳೆಯೇ ಸುರಿಯಲಿದೆ. ಹೊಸ ಭೂಮಿ, ಸ್ವಂತ ಮನೆ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಅದೃಷ್ಟದ ಸಮಯ.
ತುಲಾ ರಾಶಿ:
ಸೂರ್ಯ ಪಥ ಸಂಚಲನವು ತುಲಾ ರಾಶಿಯವರಿಗೆ ಎಲ್ಲಾ ಆಯಾಮಗಳಲ್ಲೂ ಶುಭಪ್ರದವಾಗಿದೆ. ಈ ಸಮಯದಲ್ಲಿ ನಿಮ್ಮ ಸಂಪತ್ತಿನಲ್ಲಿ ಭಾರೀ ಏಳ್ಗೆಯನ್ನು ಕಾಣುವ ಸೂಚನೆಗಳಿವೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪ್ರಗತಿಯ ಹಾದಿ ಹಿಡಿಯಲಿದ್ದು, ಹಣಕಾಸಿನ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಅಗತ್ಯ ಸಹಕಾರ ಸಿಗಲಿದ್ದು, ಕೆಲಸದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಸೂಚನೆಗಳಿವೆ.
ವೃಶ್ಚಿಕ ರಾಶಿ:
ಸ್ವ ರಾಶಿಯಲ್ಲಿ ಸೂರ್ಯ ಸಂಚಾರವು ವೃಶ್ಚಿಕ ರಾಶಿಯ ಜನರಿಗೆ ವ್ಯಕ್ತಿತ್ವದಲ್ಲಿ ಸುಧಾರಣೆಯನ್ನು ತರಲಿದ್ದು, ಇವರ ಅದೃಷ್ಟ ಕಂಗೊಳಿಸಲಿದೆ. ಪ್ರತಿ ಹೆಜ್ಜೆಯಲ್ಲೂ ನಾಯಕತ್ವದ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಿಮ್ಮ ಕಾರ್ಯಕ್ಷಮತೆಗೆ ಸೂಕ್ತ ಮನ್ನಣೆ ಸಿಗಲಿದ್ದು, ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿಯನ್ನು ಕಾಣುವ ಸೂಚನೆಗಳಿವೆ. ಲಕ್ಷ್ಮಿ ಅನುಗ್ರಹದಿಂದ ಸಂಪತ್ತಿನ ಸುರಿಮಳೆಯೇ ಸುರಿಯಲಿದ್ದು, ಕುಟುಂಬದಲ್ಲೂ ಸುಖ ಸೌಕರ್ಯಗಳು ಹೆಚ್ಚಾಗಲಿವೆ.
ಮಕರ ರಾಶಿ:
ಸೂರ್ಯ ಗೋಚಾರ ಫಲವಾಗಿ ಮಕರ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿದ್ದರೆ, ಸ್ವಂತ ವ್ಯವಹಾರ ಮಾಡುವವರಿಗೆ ಪ್ರಗತಿಗಾಗಿ ಹಲವು ಅವಕಾಶಗಳು ಸಿಗುವ ಲಕ್ಷಣಗಳಿವೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವ ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯ ಎಂದು ಸಾಬೀತುಪಡಿಸಲಿದೆ. ಕುಟುಂಬದಲ್ಲಿ ದೀರ್ಘ ಸಮಯದಿಂದ ಇದ್ದ ಒತ್ತಡದ ವಾತಾವರಣ ಕಡಿಮ ಆಗಲಿದೆ.
ಕುಂಭ ರಾಶಿ:
ಸೂರ್ಯ ರಾಶಿ ಪರಿವರ್ತನೆಯು ಕುಂಭ ರಾಶಿಯ ಜನರಿಗೆ ಆರ್ಥಿಕವಾಗಿ ತುಂಬಾ ಅನುಕೂಲಕರ ಸಮಯ ಎಂದು ಸಾಬೀತುಪಡಿಸಲಿದೆ. ಈ ಅವಧಿಯಲ್ಲಿ ಆದಾಯದ ಹೊಸ ಮೂಲಗಳು ಸೃಷ್ಟಿ ಆಗಲಿದ್ದು, ಹಣಕಾಸಿನ ಮುಗ್ಗಟ್ಟಿನಿಂದ ಹೊರ ಬರುವಿರಿ. ಕಳೆದು ಹೋಗಿದ್ದ ಅತ್ಯಮೂಲ್ಯವಾದ ನಿಮ್ಮ ವಸ್ತುವೊಂದು ಮರಳಿ ಕೈ ಸೇರುವ ನಿರೀಕ್ಷೆ ಇದೆ. ಮಕ್ಕಳಿಂದ ಶುಭ ಸಮಾಚಾರವನ್ನು ನಿರೀಕ್ಷಿಸಬಹುದು.
ಮೀನ ರಾಶಿ:
ಸೂರ್ಯ ರಾಶಿ ಬದಲಾವಣೆಯಿಂದ ಮೀನ ರಾಶಿಯವರಿಗೆ ಅಷ್ಟ ದಿಕ್ಕುಗಳಿಂದಲೂ ಅದೃಷ್ಟ ಒಲಿದು ಬರಲಿದ್ದು, ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇದು ತುಂಬಾ ಅನುಕೂಲಕರ ಸಮಯ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿದ್ದು, ವೇತನದಲ್ಲೂ ಭಾರೀ ಏರಿಕೆಯನ್ನು ಕಾಣಬಹುದು. ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಪಡೆಯುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.