ಇಂದಿನ ಹನ್ನೆರಡು ರಾಶಿಗಳ ಫಲಾಫಲಗಳು: ನಿಮ್ಮ ರಾಶಿಗೆ ಅಕ್ಟೋಬರ್ 23 ಹೇಗಿರಲಿದೆ? ಇಲ್ಲಿದೆ ಸಂಪೂರ್ಣ ವಿವರ
ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 23, 2026 ರ ಇಂದಿನ ದಿನವು ಗ್ರಹಗಳ ಸಂಚಾರ ಮತ್ತು ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ ಎಲ್ಲಾ 12 ರಾಶಿಗಳ ಜನರಿಗೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಮೇಷದಿಂದ ಮೀನ ರಾಶಿಯವರೆಗಿನ ಪ್ರತಿಯೊಂದು ರಾಶಿಯವರಿಗೂ ಈ ದಿನವು ಮಿಶ್ರಫಲಗಳಿಂದ ಕೂಡಿರಲಿದೆ. ಯಾವ ರಾಶಿಯವರಿಗೆ ಇಂದು ಅನುಕೂಲಕರ ವಾತಾವರಣವಿದೆ ಮತ್ತು ಯಾರು ಎಚ್ಚರಿಕೆ ವಹಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 23, 2026 ರ ಇಂದಿನ ದಿನವು ಗ್ರಹಗಳ ಸಂಚಾರ ಮತ್ತು ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ ಎಲ್ಲಾ 12 ರಾಶಿಗಳ ಜನರಿಗೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಮೇಷದಿಂದ ಮೀನ ರಾಶಿಯವರೆಗಿನ ಪ್ರತಿಯೊಂದು ರಾಶಿಯವರಿಗೂ ಈ ದಿನವು ಮಿಶ್ರಫಲಗಳಿಂದ ಕೂಡಿರಲಿದೆ. ಯಾವ ರಾಶಿಯವರಿಗೆ ಇಂದು ಅನುಕೂಲಕರ ವಾತಾವರಣವಿದೆ ಮತ್ತು ಯಾರು ಎಚ್ಚರಿಕೆ ವಹಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಮೇಷದಿಂದ ಕರ್ಕಾಟಕ ರಾಶಿಯವರ ಫಲಫಲ:
ಮೇಷ ರಾಶಿ: ನೀವು ನಿರ್ದಿಷ್ಟ ಕೆಲಸವನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದರೆ ಅದು ಯಶಸ್ವಿಯಾಗುತ್ತದೆ. ಆದರೆ ಸಣ್ಣಪುಟ್ಟ ವಿಚಾರಗಳಿಗೆ ವಾದಗಳು ಎದುರಾಗಬಹುದು, ಆದ್ದರಿಂದ ಭಾವನೆಗಳನ್ನು ನಿಯಂತ್ರಿಸಿ. ಪ್ರೇಮ ವ್ಯವಹಾರಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ.
ಪರಿಹಾರ: ಬ್ರಾಹ್ಮಣರಿಗೆ ಹಣ್ಣುಗಳು ಮತ್ತು ದಾನ ನೀಡಿ. (ಅದೃಷ್ಟ ಬಣ್ಣ: ಬಿಳಿ, ಅದೃಷ್ಟ ಸಂಖ್ಯೆ: 6)
ವೃಷಭ ರಾಶಿ: ಕುಟುಂಬ ಸದಸ್ಯರ ಬೆಂಬಲದಿಂದ ಹಲವು ದಿನಗಳ ನಂತರ ನಿಮ್ಮ ಕೆಲಸದ ಹೊರೆ ಕಡಿಮೆಯಾಗಲಿದೆ. ಆದಾಯ ತೆರಿಗೆ ಮತ್ತು ಸಾಲದ ವಿಚಾರಗಳನ್ನು ತಕ್ಷಣ ಪರಿಹರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ಸಾಮರಸ್ಯವಿರುತ್ತದೆ.
ಪರಿಹಾರ: ಧಾರ್ಮಿಕ ಸ್ಥಳದಲ್ಲಿ ಸ್ವಲ್ಪ ಸಮಯ ಏಕಾಂಗಿಯಾಗಿ ಕುಳಿತು ದೇವರನ್ನು ಧ್ಯಾನಿಸಿ. (ಅದೃಷ್ಟ ಬಣ್ಣ: ಕೇಸರಿ, ಅದೃಷ್ಟ ಸಂಖ್ಯೆ: 3)
ಮಿಥುನ ರಾಶಿ: ವಿಶೇಷ ವ್ಯಕ್ತಿಯ ಸಹಾಯದಿಂದ ಪ್ರಮುಖ ಸಮಸ್ಯೆಯೊಂದು ಪರಿಹಾರವಾಗಲಿದೆ. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ನಡೆಸುವಿರಿ. ಮಕ್ಕಳ ಚಟುವಟಿಕೆಗಳ ಮೇಲೆ ಕಣ್ಣಿಡಿ.
ಪರಿಹಾರ: ಹೆತ್ತವರನ್ನು ಗೌರವಿಸಿ ಮತ್ತು ಅವರ ಆಶೀರ್ವಾದ ಪಡೆಯಿರಿ. (ಅದೃಷ್ಟ ಬಣ್ಣ: ಬಾದಾಮಿ, ಅದೃಷ್ಟ ಸಂಖ್ಯೆ: 2)
ಕರ್ಕಾಟಕ ರಾಶಿ: ವೈಯಕ್ತಿಕ ಕೆಲಸಗಳ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಿ, ಇದು ನಿಮಗೆ ಮನ್ನಣೆ ತರುತ್ತದೆ. ಮಹಿಳೆಯರು ಇತರರಿಂದ ಪ್ರಭಾವಿತರಾಗುವುದನ್ನು ತಪ್ಪಿಸಬೇಕು.
ಪರಿಹಾರ: ಶಿವ ದೇವಾಲಯಕ್ಕೆ ಭೇಟಿ ನೀಡಿ ಪರಿಮಳಯುಕ್ತ ನೀರಿನಿಂದ ಅಭಿಷೇಕ ಮಾಡಿ. (ಅದೃಷ್ಟ ಬಣ್ಣ: ನೀಲಿ, ಅದೃಷ್ಟ ಸಂಖ್ಯೆ: 8)
ಸಿಂಹದಿಂದ ವೃಶ್ಚಿಕ ರಾಶಿಯವರ ಫಲಫಲ:
ಸಿಂಹ ರಾಶಿ: ಯಾವುದೇ ಪ್ರಮುಖ ಯೋಜನೆ ಜಾರಿಗೆ ತರುವ ಮೊದಲು ಅನುಭವಿಗಳ ಸಲಹೆ ಪಡೆಯಿರಿ. ಭೂ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಕುಟುಂಬದಲ್ಲಿ ಸಾಮರಸ್ಯದ ಕೊರತೆ ಉದ್ವಿಗ್ನತೆಗೆ ಕಾರಣವಾಗಬಹುದು.
ಪರಿಹಾರ: ಅಗತ್ಯವಿರುವವರಿಗೆ ಹಣ್ಣುಗಳು ಮತ್ತು ಹಾಲು ದಾನ ಮಾಡಿ. (ಅದೃಷ್ಟ ಬಣ್ಣ: ಕ್ರೀಮ್, ಅದೃಷ್ಟ ಸಂಖ್ಯೆ: 1)
ಕನ್ಯಾ ರಾಶಿ: ವಿವಿಧ ಕೆಲಸಗಳಲ್ಲಿ ಬ್ಯುಸಿ ಇರುತ್ತೀರಿ. ಮಾತನಾಡುವಾಗ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಅಪಖ್ಯಾತಿ ಎದುರಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಆತುರದ ನಿರ್ಧಾರ ಬೇಡ.
ಪರಿಹಾರ: ಶ್ರೀ ಸೂಕ್ತ ಮತ್ತು ಪುರುಷ ಸೂಕ್ತವನ್ನು ಪಠಿಸಿ. (ಅದೃಷ್ಟ ಬಣ್ಣ: ಆಕಾಶ ನೀಲಿ, ಅದೃಷ್ಟ ಸಂಖ್ಯೆ: 5)
ತುಲಾ ರಾಶಿ: ಅತಿಥಿಗಳ ಆಗಮನದಿಂದ ದಿನವಿಡೀ ಬಿಡುವಿಲ್ಲದಿರುತ್ತದೆ. ಸಣ್ಣಪುಟ್ಟ ವಿಚಾರಗಳಿಗೆ ಅನುಮಾನಗಳಿಗೆ ಅವಕಾಶ ನೀಡಬೇಡಿ. ವ್ಯವಹಾರ ವಿಸ್ತರಣೆಯ ಯೋಜನೆ ಮನಸ್ಸಿಗೆ ಬರಲಿದೆ.
ಪರಿಹಾರ: ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. (ಅದೃಷ್ಟ ಬಣ್ಣ: ಗುಲಾಬಿ, ಅದೃಷ್ಟ ಸಂಖ್ಯೆ: 6)
ವೃಶ್ಚಿಕ ರಾಶಿ: ಇಂದು ಯಾವುದೇ ಪ್ರಯಾಣವನ್ನು ಮುಂದೂಡುವುದು ಉತ್ತಮ. ನಿಮ್ಮ ಕೋಪ ಮತ್ತು ಹಠಮಾರಿತನವು ಕುಟುಂಬ ಜೀವನದ ಮೇಲೆ ಪರಿಣಾಮ ಬೀರಬಹುದು. ಸಕಾರಾತ್ಮಕ ವ್ಯಕ್ತಿಗಳೊಂದಿಗೆ ಸಮಯ ಕಳೆಯಿರಿ.
ಪರಿಹಾರ: ಲಕ್ಷ್ಮಿ ನಾರಾಯಣನ ರೂಪವನ್ನು ಸ್ಮರಿಸಿ ಮಂತ್ರ ಪಠಿಸಿ. (ಅದೃಷ್ಟ ಬಣ್ಣ: ಕೆಂಪು, ಅದೃಷ್ಟ ಸಂಖ್ಯೆ: 3)
ಧನುಸ್ಸಿನಿಂದ ಮೀನ ರಾಶಿಯವರ ಫಲಫಲ:
ಧನು ರಾಶಿ: ಇದು ಸವಾಲಿನ ಸಮಯವಾಗಿದ್ದು, ಅನುಭವಿಗಳ ಸಹಾಯದಿಂದ ಹಾದಿ ಸುಲಭವಾಗುತ್ತದೆ. ಉದ್ಯಮಿ ಮಹಿಳೆಯರು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದೈನಂದಿನ ಜೀವನದಲ್ಲಿ ಯೋಗ-ಧ್ಯಾನ ಅಳವಡಿಸಿಕೊಳ್ಳಿ.
ಪರಿಹಾರ: ಶಿವ ಮತ್ತು ಪಾರ್ವತಿಯನ್ನು ಪೂಜಿಸಿ. (ಅದೃಷ್ಟ ಬಣ್ಣ: ಹಳದಿ, ಅದೃಷ್ಟ ಸಂಖ್ಯೆ: 5)
ಮಕರ ರಾಶಿ: ಪ್ರಭಾವಿ ವ್ಯಕ್ತಿಗಳೊಡನೆ ಒಡನಾಟದಿಂದ ಸಾಮಾಜಿಕ ವಲಯ ವಿಸ್ತರಿಸುತ್ತದೆ. ಪ್ರಯಾಣ ಮುಂದೂಡುವುದರಿಂದ ತೊಂದರೆ ತಪ್ಪುತ್ತದೆ. ಮಧುಮೇಹಿಗಳು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.
ಪರಿಹಾರ: ಬೆಳಿಗ್ಗೆ ಪ್ರಕೃತಿಯ ಸಾನಿಧ್ಯದಲ್ಲಿ ಸ್ವಲ್ಪ ಸಮಯ ಕಳೆಯಿರಿ. (ಅದೃಷ್ಟ ಬಣ್ಣ: ಕೇಸರಿ, ಅದೃಷ್ಟ ಸಂಖ್ಯೆ: 9)
ಕುಂಭ ರಾಶಿ: ಹೊಸ ಮಾಹಿತಿ ಪಡೆಯುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಅನಗತ್ಯ ಪ್ರದರ್ಶನ ಹಾಗೂ ಖರ್ಚುಗಳಿಗೆ ಕಡಿವಾಣ ಹಾಕಿ. ಕೆಲಸದಲ್ಲಿ ಅಜಾಗರೂಕತೆ ಹಾನಿಕಾರಕವಾಗಬಹುದು.
ಪರಿಹಾರ: ಬಡವರಿಗೆ ಹಣ್ಣು ಮತ್ತು ಹಾಲು ದಾನ ಮಾಡಿ. (ಅದೃಷ್ಟ ಬಣ್ಣ: ಹಸಿರು, ಅದೃಷ್ಟ ಸಂಖ್ಯೆ: 7)
ಮೀನ ರಾಶಿ: ಅತ್ತೆ-ಮಾವನೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಧಾರ್ಮಿಕ ಪ್ರವಾಸದ ಯೋಗವಿದೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಏಕಾಗ್ರತೆ ಮತ್ತು ಗಮನ ಅಗತ್ಯ.
ಪರಿಹಾರ: ನೀರನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ. (ಅದೃಷ್ಟ ಬಣ್ಣ: ಕಿತ್ತಳೆ, ಅದೃಷ್ಟ ಸಂಖ್ಯೆ: 3)
ಸೂಚನೆ: ಮೇಲೆ ನೀಡಲಾದ ಮಾಹಿತಿಯು ಸಾಮಾನ್ಯ ಜ್ಯೋತಿಷ್ಯ ನಂಬಿಕೆಗಳನ್ನು ಆಧರಿಸಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ವೈಯಕ್ತಿಕ ಜಾತಕವನ್ನು ಪರಿಶೀಲಿಸುವುದು ಸೂಕ್ತ. ಇದನ್ನು ಜೀ ನ್ಯೂಸ್ ಕನ್ನಡ ಧೃಡಿಕರಿಸುವುದಿಲ್ಲ