ದಿನ ಭವಿಷ್ಯ 10 ನವೆಂಬರ್ 2026: ಇಂದು ಬಲಿಪಾಡ್ಯಮಿ, ಯಾರಿಗೆ ಉದ್ಯೋಗ, ಹಣಕಾಸಿನಲ್ಲಿ ಲಾಭ?
ನವೆಂಬರ್ 10ರ ರಾಶಿಭವಿಷ್ಯದ ಪ್ರಕಾರ, ಕರ್ಕಾಟಕ, ಕನ್ಯಾ, ವೃಷಭ, ತುಲಾ ಸೇರಿದಂತೆ ಹಲವು ರಾಶಿಯವರಿಗೆ ದಿನವು ಶುಭಕರವಾಗಿರಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು, ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ಹಾಗೂ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ಸಾಧ್ಯತೆಯಿದೆ. ಕೆಲವು ರಾಶಿಯವರು ಹಣಕಾಸಿನ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸಬೇಕು. ಕುಟುಂಬದ ಸಂತೋಷ, ಸಂಗಾತಿಯ ಬೆಂಬಲ ಮತ್ತು ಬಾಕಿ ಕೆಲಸಗಳ ಪೂರ್ಣಗೊಳ್ಳುವಿಕೆ ಇಂದಿನ ಭವಿಷ್ಯದ ಪ್ರಮುಖ ಅಂಶಗಳಾಗಿವೆ.
November 10 2026 Horoscope: ನವೆಂಬರ್ 10, 2026ರ ಮಂಗಳವಾರದಂದು ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ದಿನಭವಿಷ್ಯ ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿದೆ. ಕೆಲವು ರಾಶಿಯವರಿಗೆ ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ವಿಚಾರಗಳಲ್ಲಿ ಉತ್ತಮ ಅವಕಾಶಗಳು ಒದಗುವ ಸಾಧ್ಯತೆಯಿದ್ದರೆ, ಇನ್ನು ಕೆಲವರಿಗೆ ಕುಟುಂಬದ ಸಂತೋಷ ಹಾಗೂ ಸಂಬಂಧಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬರಬಹುದು. ವಿಶೇಷವಾಗಿ ಕರ್ಕಾಟಕ ಮತ್ತು ಕನ್ಯಾ ರಾಶಿಯವರಿಗೆ ದಿನವು ಸಂತೋಷದಾಯಕವಾಗಿರಲಿದೆ ಇಂದಿನ ರಾಶಿಭವಿಷ್ಯ ತಿಳಿಸುತ್ತದೆ.
ಇಂದು ಇಂದು ಬಲಿಪಾಡ್ಯಮಿ... ಕಾರ್ತಿಕ ಶುಕ್ಲ ಪಕ್ಷದ ಪ್ರತಿಪದ ತಿಥಿ ಇದ್ದು, ಗೋವರ್ಧನ ಪೂಜೆಯನ್ನ ಆಚರಿಸಲಾಗುತ್ತದೆ. ಪ್ರತಿಪದ ತಿಥಿ ಮಧ್ಯಾಹ್ನ 2:01ರವರೆಗೆ ಇರಲಿದೆ. ಶೋಭನ ಯೋಗ ಬೆಳಗಿನ ಜಾವ 3:10ರವರೆಗೆ ಇರಲಿದ್ದು, ವಿಶಾಖ ನಕ್ಷತ್ರ ಬೆಳಗ್ಗೆ 9:20ರವರೆಗೆ ಇರುತ್ತದೆ. ನಂತರ ಅನುರಾಧ ನಕ್ಷತ್ರ ಆರಂಭವಾಗಲಿದೆ. ಹಾಗಾದರೆ, ಮೇಷದಿಂದ ಮೀನದವರೆಗಿನ 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಎಂಬುದರ ಬಗ್ಗೆ ತಿಳಿಯಿರಿ...
ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಆತ್ಮವಿಶ್ವಾಸದಿಂದ ಕೂಡಿದ ದಿನವಾಗಿರಲಿದೆ. ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನಿರೀಕ್ಷಿತವಾಗಿ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿಯಲ್ಲಿಯೂ ಸುಧಾರಣೆ ಕಂಡುಬರಬಹುದು. ಸಹೋದರ-ಸಹೋದರಿಯರೊಂದಿಗೆ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯಬಹುದು. ವಿದೇಶ ಪ್ರವಾಸದ ಅವಕಾಶವೂ ಒದಗಬಹುದು. ಅನಗತ್ಯ ವಾದ-ವಿವಾದಗಳಿಂದ ದೂರವಿರುವುದು ಉತ್ತಮ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನಕ್ಕೆ ಸಮಯ ಮೀಸಲಿಡುವಂತೆ ಸಲಹೆ ನೀಡಲಾಗಿದೆ.
ಅದೃಷ್ಟದ ಬಣ್ಣ ಗುಲಾಬಿ, ಸಂಖ್ಯೆ 9.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಸಂತೋಷದ ಕ್ಷಣಗಳು ಎದುರಾಗಲಿವೆ. ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ತಾಯಿಯೊಂದಿಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಬಹುದು. ಕುಟುಂಬದೊಂದಿಗೆ ಸಂಜೆ ಉತ್ತಮವಾಗಿ ಕಳೆಯಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರಲಿದೆ. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು.
ಅದೃಷ್ಟದ ಬಣ್ಣ ನೀಲಿ, ಸಂಖ್ಯೆ 1.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ದಿನವು ಸಂತೋಷದಿಂದ ಕೂಡಿರಲಿದೆ. ಕುಟುಂಬದೊಂದಿಗೆ ಹೊರಗೆ ತೆರಳುವುದು ಅನುಕೂಲಕರವಾಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅನುಭವಿಗಳ ಸಲಹೆ ಪಡೆಯುವುದು ಉತ್ತಮ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವ ಸಾಧ್ಯತೆಯಿದೆ. ಮನೆಯಿಂದಲೇ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ಇದು ಅನುಕೂಲಕರ ದಿನ. ಗಾಯಕರು ತಮ್ಮ ಹಾಡಿನ ಮೂಲಕ ಯಶಸ್ಸು ಕಾಣಬಹುದು. ಯಾವುದೇ ಕೆಲಸದಲ್ಲೂ ಆತುರಪಡದೆ, ದೇವರ ಪೂಜೆಗೆ ಸಮಯ ನೀಡುವಂತೆ ಸೂಚಿಸಲಾಗಿದೆ.
ಅದೃಷ್ಟದ ಬಣ್ಣ ಕೆಂಪು, ಸಂಖ್ಯೆ 5.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಇಂದು ಹೊಸ ಸಂತೋಷಗಳು ಸಿಗುವ ಸಾಧ್ಯತೆಯಿದೆ. ರಾಜಕೀಯ ಕ್ಷೇತ್ರದಲ್ಲಿರುವವರ ಸಮಾಜಮುಖಿ ಕೆಲಸಗಳಿಗೆ ಮೆಚ್ಚುಗೆ ದೊರೆಯಬಹುದು. ಹಿರಿಯ ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ದೊರೆಯಬಹುದು. ಮಹಿಳೆಯರು ಸಂಗಾತಿಗಾಗಿ ವಿಶೇಷವಾಗಿ ಏನಾದರೂ ತಯಾರಿಸುವ ಮೂಲಕ ಸಂಬಂಧವನ್ನ ಮತ್ತಷ್ಟು ಉತ್ತಮಗೊಳಿಸಬಹುದು. ಕುಟುಂಬದ ವಾತಾವರಣ ಮತ್ತು ಆರೋಗ್ಯವೂ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ ನೇರಳೆ, ಸಂಖ್ಯೆ 3.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಾಗಿರಲಿದೆ. ಯಾವುದೇ ಕೆಲಸ ಮಾಡುವಾಗ ಮನಸ್ಸನ್ನ ಶಾಂತವಾಗಿಟ್ಟುಕೊಳ್ಳುವುದು ಅಗತ್ಯ. ಹಣಕಾಸಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಹಳೆಯ ವಿಚಾರವೊಂದು ಗೊಂದಲ ಉಂಟುಮಾಡಬಹುದು. ಸಂಗಾತಿಗೆ ಉಡುಗೊರೆ ನೀಡುವ ಮೂಲಕ ಸಂಬಂಧವನ್ನ ಸುಧಾರಿಸಬಹುದು. ಸ್ನೇಹಿತರ ಸಹಾಯದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು. ವ್ಯಾಪಾರ ವಿಸ್ತರಣೆಗೆ ಹೊಸ ಯೋಜನೆಗಳನ್ನ ರೂಪಿಸುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ ಬೂದು, ಸಂಖ್ಯೆ 3.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಶುಭದಿನವಾಗಿರಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಕ್ಕೆ ತಕ್ಕ ಯಶಸ್ಸು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಆರ್ಥಿಕ ಸ್ಥಿರತೆ ಇರಲಿದ್ದು, ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನ ಕಳೆಯಬಹುದು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಮ್ಮ ಕಾರ್ಯಕ್ಕಾಗಿ ಮೆಚ್ಚುಗೆ ದೊರೆಯಬಹುದು. ಪ್ರೇಮಿಗಳು ತಮ್ಮ ಸಂಬಂಧದ ವಿಚಾರವನ್ನ ಮನೆಯವರೊಂದಿಗೆ ಹಂಚಿಕೊಳ್ಳಲಿದ್ದು, ಕುಟುಂಬದ ಸದಸ್ಯರು ಅದನ್ನ ಪರಿಗಣಿಸುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ ಗೋಲ್ಡನ್, ಸಂಖ್ಯೆ 5.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ನಿರೀಕ್ಷೆಗಿಂತ ಹೆಚ್ಚಿನ ವ್ಯಾಪಾರ ಲಾಭ ದೊರೆಯುವ ಸಾಧ್ಯತೆಯಿದೆ. ಮನೆಯ ಕೆಲಸಗಳನ್ನ ಪೂರ್ಣಗೊಳಿಸಲು ಹಿರಿಯರ ಸಲಹೆ ಸಹಕಾರಿಯಾಗಲಿದೆ. ಪ್ರೇಮಿಗಳಿಗೆ ದಿನವು ಅನುಕೂಲಕರವಾಗಿರಲಿದೆ. ಸ್ವಲ್ಪ ಹೆಚ್ಚಿನ ಪರಿಶ್ರಮದಿಂದ ಆರ್ಥಿಕ ಲಾಭ ಪಡೆಯಬಹುದು. ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಪ್ರಮುಖ ಕಂಪನಿಯಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಕ್ರೀಡಾಪಟುಗಳಿಗೆ ಯಶಸ್ಸು ಸಿಗಬಹುದು.
ಅದೃಷ್ಟದ ಬಣ್ಣ ಕಂದು, ಸಂಖ್ಯೆ 9.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉದ್ಯೋಗದ ವಿಚಾರದಲ್ಲಿ ಉತ್ತಮ ಸುದ್ದಿ ಸಿಗುವ ಸಾಧ್ಯತೆಯಿದೆ. ಪ್ರಮುಖ ಕಂಪನಿಯಿಂದ ಕೆಲಸದ ಆಫರ್ ಬರಬಹುದು. ಹೊಸ ಕೌಶಲ್ಯ ಕಲಿಯುವ ಅವಕಾಶವೂ ದೊರೆಯಲಿದೆ. ಕುಟುಂಬದ ಸದಸ್ಯರಿಂದ ಉಪಯುಕ್ತ ಸಲಹೆ ಸಿಗಬಹುದು. ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ನಿರ್ಮಾಣವಾಗಬಹುದು. ವ್ಯಾಪಾರದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯವಿದ್ದರೂ, ಸಂಗಾತಿಯ ಬೆಂಬಲ ಕೆಲಸಗಳನ್ನ ಸುಲಭಗೊಳಿಸಲಿದೆ. ಆಸ್ತಿ ವ್ಯವಹಾರದಿಂದ ಲಾಭದ ಸೂಚನೆಯಿದೆ.
ಅದೃಷ್ಟದ ಬಣ್ಣ ಹಸಿರು, ಸಂಖ್ಯೆ 1.
ಧನು ರಾಶಿ: ಧನು ರಾಶಿಯವರು ಇಂದು ಉತ್ತಮ ಮನಸ್ಥಿತಿಯೊಂದಿಗೆ ದಿನ ಆರಂಭಿಸಲಿದ್ದಾರೆ. ಬಾಕಿ ಉಳಿದಿರುವ ಕೆಲಸಗಳನ್ನ ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಸಿವಿಲ್ ಎಂಜಿನಿಯರ್ಗಳಿಗೆ ದಿನ ಅನುಕೂಲಕರವಾಗಿರಲಿದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಚೇತರಿಕೆಯ ಅನುಭವವಾಗಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಹುದ್ದೆ ಸಿಗುವ ಅವಕಾಶವಿದೆ. ಕುಟುಂಬದ ಬೆಂಬಲ ಮುಂದುವರಿಯಲಿದ್ದು, ರಾಜಕೀಯ ಕ್ಷೇತ್ರದಲ್ಲಿರುವವರಿಗೂ ದಿನವು ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ ಕಿತ್ತಳೆ, ಸಂಖ್ಯೆ 7.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ವಿಶೇಷ ದಿನವಾಗಿರಲಿದೆ. ಕೆಲಸಗಳನ್ನ ಶಾಂತವಾಗಿ ನಿರ್ವಹಿಸಿದರೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬಹುದು. ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳನ್ನ ತಾಳ್ಮೆಯಿಂದ ತೆಗೆದುಕೊಳ್ಳುವುದು ಉತ್ತಮ. ವ್ಯಾಪಾರ ವಿಸ್ತರಣೆಗೆ ರೂಪಿಸಿರುವ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಹಿಂದಿನ ಪ್ರಯತ್ನಗಳಿಂದ ಉತ್ತಮ ಫಲಿತಾಂಶ ದೊರೆಯಬಹುದು. ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಸಿಗಲಿದೆ.
ಅದೃಷ್ಟದ ಬಣ್ಣ ಬೆಳ್ಳಿ, ಸಂಖ್ಯೆ 2.
ಕುಂಭ ರಾಶಿ: ಕುಂಭ ರಾಶಿಯವರಿಗೆ ಕುಟುಂಬದ ವಿಚಾರದಲ್ಲಿ ಸಂತೋಷದ ದಿನವಾಗಿರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇತರರೊಂದಿಗೆ ಚರ್ಚಿಸುವುದರಿಂದ ಅನುಕೂಲವಾಗಬಹುದು. ಬಾಕಿ ಉಳಿದ ಕೆಲಸಗಳನ್ನ ಹೊಸ ಪ್ರಯತ್ನದೊಂದಿಗೆ ಪೂರ್ಣಗೊಳಿಸಲು ಮುಂದಾಗಬೇಕು. ದಾಂಪತ್ಯ ಜೀವನದಲ್ಲಿ ಬಾಂಧವ್ಯ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಅನುಭವಿಗಳ ಸಲಹೆ ಸಿಗಬಹುದು. ಖಾಸಗಿ ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ ಬಿಳಿ, ಸಂಖ್ಯೆ 5.
ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಉತ್ತಮ ದಿನವಾಗಿರಲಿದೆ. ಹಿರಿಯರು ಅಥವಾ ಅನುಭವಿಗಳ ಸಲಹೆ ಪಡೆದು ಮುಂದುವರಿದರೆ ಯಶಸ್ಸು ಕಾಣಬಹುದು. ತಾಳ್ಮೆ ಮತ್ತು ಪರಿಶ್ರಮದಿಂದ ಬಾಕಿ ಕೆಲಸಗಳನ್ನ ಪೂರ್ಣಗೊಳಿಸುವ ಸಾಧ್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ದೊರೆಯಬಹುದು. ಅವುಗಳನ್ನ ಸಮರ್ಥವಾಗಿ ನಿಭಾಯಿಸುವ ನಿರೀಕ್ಷೆಯಿದೆ. ಮಹಿಳೆಯರು ಮನೆಕೆಲಸಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದಾರೆ. ಪ್ರೇಮಿಗಳು ಒಟ್ಟಿಗೆ ಸಿನಿಮಾ ವೀಕ್ಷಣೆ ಹಾಗೂ ಭೋಜನಕ್ಕೆ ತೆರಳಬಹುದು. ವಿದ್ಯಾರ್ಥಿಗಳು ಕಂಪ್ಯೂಟರ್ ಕೋರ್ಸ್ಗೆ ಸೇರುವ ಬಗ್ಗೆ ಯೋಚಿಸಲಿದ್ದಾರೆ.
ಅದೃಷ್ಟದ ಬಣ್ಣ ಹಳದಿ, ಸಂಖ್ಯೆ 4.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)